Tuesday, December 24, 2024
HomeHOMEಅಮಿತಾಭ್ ಬಚ್ಚನ್ ಅವರ ಜೀವನ ಚರಿತ್ರೆ . Amitabh Bachchan Biography In kannada

ಅಮಿತಾಭ್ ಬಚ್ಚನ್ ಅವರ ಜೀವನ ಚರಿತ್ರೆ . Amitabh Bachchan Biography In kannada

ಅಮಿತಾಭ್ ಬಚ್ಚನ್ ಅವರ ಜೀವನಚರಿತ್ರೆ Amitabh Bachchan Biography In kannada


ಅಮಿತಾಬ್ ಬಚ್ಚನ್ ಅಮಿತಾಭ್ ಬಚ್ಚನ್ ಅವರು ಬಾಲಿವುಡ್ ಕನಿಷ್ಠ ನಾಲ್ಕು ದಶಕಗಳಿಂದ ಇದ್ದು 

 ಅಮಿತಾಬ್ ಬಚ್ಚನ್ ಅವರು ಬಾಲಿವುಡ್ ನಲ್ಲಿ ನೂರಾರು ಸಿನಿಮಾಗಳು ಮಾಡಿದ್ದಾರೆ , ದೇಶದ ಜನ ಅವರಿಗೆ ಈ ಶತಮಾನದ ಮಹಾನಾಯಕ ಎಂದು ಕರೆಯುತ್ತಾರೆ ಮತ್ತು ಅಭಿಮಾನದಿಂದ ಬಿಗ್ ಬಿ ಎಂದು ಕರೆಯುತ್ತಾರೆ. 

ನಾಯಕ ಅಮಿತಾಭ್ ಬಚ್ಚನ್ ಅವ್ರು ರಾಜನೀತಿಯಲ್ಲಿ ಸಾಕಷ್ಟು ತನ್ನ ಅಸ್ತಿತ್ವವನ್ನು  ಗುರುತಿಸಿದ್ದಾರೆ ಇವರು ರಾಜೀವ್ ಗಾಂಧಿಯ ಹತ್ತಿರವಾದ ಸ್ನೇಹಿತ ಅಮಿತಾಭ್ ಬಚ್ಚನ್ ಅವರು ಕಾಂಗ್ರೆಸ್ ಪಾರ್ಟಿಯನ್ನು ಸೇರಿದ್ದರು ಅವರು ಇದರಿಂದ ಚುನಾವಣೆಗೆ ನಿಂತಿದ್ದರು ಇನ್ನೆಷ್ಟು ಎನ್ಎಚ್ ಎಂಎಚ್ ಬಹುಗುಣ ಅವರಿಗೆ ದೊಡ್ಡ ಮತಗಳ ಅಂತರದಿಂದ ಸೋಲಿಸಿದ್ದರು ಆದರೆ ಅಮಿತಾಬ್ ಬಚ್ಚನ್ ಅವರು ಕೇವಲ ಮೂರು ವರ್ಷದಲ್ಲಿ ರಾಜಕಾರಣವನ್ನು ಬಿಟ್ಟು ಸಾಮಾನ್ಯ ಜೀವನಕ್ಕೆ ಕಾಲಿಟ್ಟರು. 

ಅಮಿತಾಭ್ ಬಚ್ಚನ್ ಜನ್ಮಭೂಮಿ (Birthplace of Amitabh Bachchan)

 ಅಮಿತಾಭ್ ಬಚ್ಚನ್ ಅವರ ಜನನ ಉತ್ತರಪ್ರದೇಶದ ಜಿಲ್ಲೆಯಲ್ಲಿ ಆಗಿತ್ತು ಅವರ ತಂದೆ ಹೆಸರು ಹರಿವಂಶ ರಾಯ್ ಬಚ್ಚನ್ ಇದು ಅವರ ತಾಯಿ ಹೆಸರು ತೇಜಿ ಬಚ್ಚನ್ ಇತ್ತು ಅವರ ತಂದೆ ಹಿಂದಿ ಲೋಕದ ತುಂಬಾ ದೊಡ್ಡ ಕವಿಯಾಗಿದ್ದರು ಅಮಿತಾಭ್ ಬಚ್ಚನ್ ಅವರಿಗೆ ಒಬ್ಬ ಸಹೋದರ ಇದು ಅವರ ಹೆಸರು ಅಜಿತಾಭ್ ಬಚ್ಚನ್ ಅಮಿತಾಭ್ ಬಚ್ಚನ್ ಅವರ ಹೆಸರು ಮೊದಲಿಗೆ ಇಂಕ್ಲಾಬ್ ಇಟ್ಟಿದ್ದರಂತೆ ಅವರ ತಂದೆಯ ಸ್ನೇಹಿತ ಸುಮಿತ್ರನಂದನ್ ಪಂತ್ ಅವರ ಹೇಳಿಕೆಯ ಮೇರೆಗೆ ಅಮಿತಾಬ್ ಇಂದು ಅವರ ಹೆಸರು ಮರುನಾಮಕರಣ ಮಾಡಲಾಯಿತು

ಶಿಕ್ಷಣ (Education)

ಅಮಿತಾಭ್ ಬಚ್ಚನ್ ಶೇರ್ವುಡ್ ನೈನಿತಾಲ್ ನ ಸ್ಟೂಡೆಂಟ್ ಆಗಿದ್ದರು ಬಳಿಕ ಡೆಲ್ಲಿ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯದ ರುಮಿನಲ್ ಕಾಲೇಜಿಂದ ಮುಂದಿನ ಅದನ್ನು ಪೂರ್ಣಗೊಳಿಸಿದರು ಓದಿನಲ್ಲಿ ರ್ಯಾಂಕ್ ಸ್ಟೂಡೆಂಟ್ ಆಗಿದ್ದರು ಜತೆಗೆ ಒಳ್ಳೆಸ್ ಅಭಾವದ ಹುಡುಗನೆಂದು ಸ್ಕೂಲ್ ಕಾಲೇಜಿನಲ್ಲಿ ಗುರುತಿಸುತ್ತಿದ್ದರು ಎಲ್ಲ ಗುಣಗಳು ಅವರ ತಂದೆಯಿಂದಲೇ ಬಂದಿತ್ತು ಎಂದು ಹೇಳಲಾಗುತ್ತೆ

ಮದುವೆ (Marriage)

ಅಮಿತಾಭ್ ಬಚ್ಚನ್ ಅವರ ಮದುವೆ ಜಯಾ ಬಚ್ಚನ್ ಅವರ ಜೊತೆಗೆ ಆಗಿದ್ದು ಇವರಿಗೆ ಅಭಿಷೇಕ್ ಬಚ್ಚನ್ ಎಂದು ಒಬ್ಬ ಮಗ ಶ್ವೇತ ನಂದ ಎಂದು ಪುತ್ರಿ ಇದ್ದಾಳೆ ಬಾಲಿವುಡ್ ನಟಿ ಅಮಿತಾಭ್ ಬಚ್ಚನ್ ಅವರ ಎಂದು ತುಂಬಾ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು ಈ ಚರ್ಚೆಗಳು ಆಗಾಗ ನಡೆಯುತ್ತಿರುತ್ತದೆ

ವೃತ್ತಿ (Career)


ಅಮಿತಾಭ್ ಬಚ್ಚನ್ ಅವರ ವೃತ್ತಿ ಸಿನಿಮಾಗಳಲ್ಲಿ ವಾಯ್ಸ್ ನೆರಿಟರ್ ಆಗಿ ‘ಭುವನ್ ಸೋಮ್’ ಸಿನಿಮಾ ಇಂದ ಶುರುವಾಯಿತು ಆದರೆ ನಟನಾಗಿ ಗುರುತಿಸಿಕೊಂಡಿದ್ದು ಮಾತ್ರ ಸಾತ್ ಹಿಂದೂಸ್ತಾನಿ  ಸಿನಿಮಾದಿಂದ ಬಳಿಕ ಅಮಿತಾಭ್ ಬಚ್ಚನ್ ಅವರು ಹಲವಾರು ಸಿನಿಮಾಗಳನ್ನು ಮಾಡಿದರೂ ಅದರಲ್ಲಿ ಫ್ಲಾಪ್ ಆಗಿದ್ದ ಸಿನಿಮಾಗಳೇ ಹೆಚ್ಚು

ಅಮಿತಾಭ್ ಬಚ್ಚನ್ ಅವರಿಗೆ ಟರ್ನಿಂಗ್ ಪಾಯಿಂಟ್ ಆಗಿದ್ದ ಸಿನಿಮಾ ಮಾತ್ರ ಜಂಜೀರ್ ಸಿನಿಮಾದ ಬಳಿಕ ಸಿನಿಮಾಗಳು  ಹಿಟ್ ಮೇಲೆ ಹಿಟ್ ಆದವು ಇದರ ಜೊತೆಗೆ ಅಮಿತಾಭ್ ಬಚ್ಚನ್ ಅವರಿಗೆ  ಫ್ಯಾನ್ ಫಾಲೋವಿಂಗ್  ಹೆಚ್ಚಾಯಿತು.

ಮತ್ತು ಸಿನಿಮಾಗಳಲ್ಲಿ ಅವರ ಛಾಪನ್ನು ಮೂಡಿಸಲು ಶುರುಮಾಡಿದರು

 

ಹಿಟ್ ಸಿನಿಮಾಗಳು (Hit movies)

ಸಾತ್ ಹಿಂದುಸ್ತಾನಿ ಆನಂದ್ ಜಂಜೀರ್ ಅಭಿಮಾನ್ ಸೌದಾಗರ್ ಚುಪಕೆ ಚೂಪಾಕೆ ದಿವಾರ್ ಶೋಲೆ ಕಬಿ ಕಬಿ ಅಮರ್ ಅಕ್ಬರ್ ಅಂತೋನಿ ತ್ರಿಶೂಲ್ ಡಾನ್ ಮುಖಂಡರು ಕಾ ಸಿಕಂದರ್ ಮಿಸ್ಟರ್ ನಟವರ್ ಲಾಲ್ ಲಾವರಿಸ್ ಸಿಲ್ಸಿಲ ಕಾಲಿಯಾ ಸತೇ ಪೆ ಸತ್ತಾ, ನಮಕ್ ಹಲಾಲ್ ಶಕ್ತಿ ಕೂಲಿ ಶರಾಬಿ ಬ್ಲಾಕ್, ಮರ್ದ, 

ಅಭಿಮನ್,ಪಾ, ಭೂತನಾಥ್, ಚೈನೀಸ್ ಕಮ್, ಸರ್ಕಾರ್,ಸಮಯ, ಬ್ಲಾಕ್ ,ಬಾಗ್ಬನ್, ಮೊಹಬ್ಬತೀನ್,ಗಾಡ್ ವಿಟ್ನೆಸ್, ಅಗ್ನಿಪಥ್,ಶಹನ್ಶಾ,ಇನಸಾನ್ , ಶರಾಬಿ, ಕೂಲಿ,ಶಕ್ತಿ,ಕಾಲಿಯಾ, ಸಿಲ್ಸಿಲಾ, ಮರ್ದ , ನಾಮಕ ಹಾಲಾಲ್ ಸಟೆ ಪೆ ಸತ್ತಾ, ಕಾಲಿಯ ಲಾವರಿಸ್, ಮಿಸ್ಟರ್ ನಾಟವರ್ ಲಾಲ್,ದಾನ ತ್ರಿಶೂಲ್, ಅಮರ್ ಅಕ್ಬರ್ ಅಂತನಿ,ಕಾಭಿ ಕಾಭಿ,ದಿವಾರ್ ಚುಪಕೆ ಚುಪಕೆ, ಸೌದಾಗರ್, ಅಭಿಮಾನ್ ಜನಜೀರ್, ಆನಂದ್ , ಸಾತ್ ಹಿಂದೂಸ್ತಾನಿ,  ಸಿಕಂದರ್ ಕಾ ಮೂಕಂದರ್ ,

ಈ ಮುಂತಾದ ಸಿನಿಮಾಗಳಿಂದ ಅಮಿತಾಭ್ ಬಚ್ಚನ್ ಅವರಿಗೆ ಇಸ್ವಿಯ ಮಹಾನಾಯಕ ಎಂದು ಕರೆಯುತ್ತಾರೆ

ಪುರಸ್ಕಾರಗಳು ಅಮಿತಾಭ್ ಬಚ್ಚನ್ ಅವರಿಗೆ ಮೂರು ಬಾರಿ ಸರ್ವ ಶ್ರೇಷ್ಠ ನಟ ರಾಷ್ಟ್ರೀಯ ಸಿನಿಮಾ ಅವರ್ಡ್ ದೊರಕಿದೆ ಇದಲ್ಲದೆ 14 ಬಾರಿ ಫಿಲಂ ಫೇರ್ ಅವಾರ್ಡ್ ಸಹ ಬಂದಿದೆ ಸಿನಿಮಾಗಳ ಜೊತೆಗೆ ಅವರು ಉತ್ತಮ ಗಾಯಕ , ನಿರ್ಮಾಪಕ ಮತ್ತು ಟಿವಿ ನಿರೂಪಕ ಆಗಿಯೂ ಕಾರ್ಯನಿರ್ವಹಿಸಿದ್ದಾರೆ ಭಾರತ ಸರ್ಕಾರ ಅಮಿತಾಬ್ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಸನ್ಮಾನವನ್ನು ಕೊಟ್ಟು ಸನ್ಮಾನಿಸಿದೆ.


ಅಮಿತಾಭ್ ಬಚ್ಚನ್ ಅವರ ಬಗ್ಗೆ ರೋಚಕ ವಿಷಯಗಳು (interesting facts about Amitabh Bachchan)

 

ಅಮಿತಾಭ್ ಬಚ್ಚನ್ ಅವರಿಗೆ ಈ ಇಸವಿಯ ಮಹನಯಕ ಎಂದು ಕರೆಯಲಾಗುತ್ತೆ. ಅವರು ಹಿಂದಿ ಫಿಲ್ಮ್ ನ ಅತಿ ದೊಡ್ಡ ಸೂಪರ್ ಸ್ಟಾರ್ ಆಗಿಯೂ ಗುರುತಿಸಿಕೊಂಡಿದ್ದಾರೆ.

ಅಸಲಿಗೆ ಜಂಜೀರ್ ಸಿನಿಮಾಇಂದ ಅಮಿತಾಬ್ ಬಚ್ಚನ್ ಅವರಿಗೆ ಜನ ಗುರುತು ಹಿಡಿಯಲು ಶುರುವಾಯಿತು.

ಈ ಸಿನಿಮಾ ಅನೇಕ ನಟರಿಗೆ ಆಫರ್ ಆಗಿತ್ತಂತೆ ಅದರಲ್ಲಿ ಪ್ರಸಿದ್ಧ ನಟ ರಾಜ್ಕುಮಾರ್ ಅವರಿಗೂ ಈ ಸಿನಿಮಾ ಆಫರ್ ಆಗಿತ್ತು ಆದರೆ ರಾಜ್ಕುಮಾರ್ ಅವರು ಈ ಸಿನಿಮಾವನ್ನು ಶುಲ್ಲಕ ಕಾರಣಕ್ಕಾಗಿ ನಿರಾಕರಿಸಿದರಂತೆ.

70 ಮತ್ತು 80 ರ ದಶಕದ ಫಿಲ್ಮಿ ಸಿನ್ಸ್ ಗಳ ಮೇಲೆ ಅಮಿತಾಭ್ ಅವರದ್ದೇ ಅಧಿಪತ್ಯವಿತ್ತು. ಇದೆ ಕಾರಣಕ್ಕಾಗಿ ಪ್ರೆಂಚ್ ನಿರ್ದೇಶಕ ಫ್ರಾನ್ಸ್ವ ತೃಫೋ ಅವರಿಗೆ ವನ್ ಮ್ಯಾನ್ ಇಂಡಸ್ಟ್ರಿಯ ಬಿರುದು ಸಹ ಕೊಟ್ಟಿದ್ದರು.

ಅಮಿತಾಭ್ ಅವರ ಸಿನಿಮಾ ವೃತ್ತಿಯಲ್ಲಿ ಅನೇಕ ಪುರಸ್ಕಾರಗಳು ದೊರಕಿವೆ .ಅದರಲ್ಲೂ ಸರ್ವಶ್ರೇಷ್ಠ ನಾಯಕನಟನಾಗಿ 3 ಬಾರಿ ಫಿಲ್ಮ್ ಅವಾರ್ಡ್ ಗಳು ಸೇರಿಕೊಂಡಿವೆ.

ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಸಮಾರಂಭಗಳಲ್ಲೂ  ಅನೇಕ ಅವಾರ್ಡ್ ಗಳಿಂದ ಸನ್ಮಾನಿಸಲಾಗಿದೆ. ಮತ್ತು ಅವರಿಗೆ 14 ಬಾರಿ ಫಿಲ್ಮ್ ಫೇರ್ ಅವಾರ್ಡ್ ಸಹ ದೊರಕಿದೆ. ಅವರಿಗೆ ಫಿಲ್ಮ್ ಫೇರ್ ಗಳಲ್ಲಿ ಅತಿ ಹೆಚ್ಚು 39 ಬಾರಿ ಸನ್ಮಾನಿಸಲಾಗಿದೆ.

 ಸಿನಿಮಾಗಳಲ್ಲಿ ಹೇಳಿದ ಡೈಲಾಗ್ ಗಳು ಇವತ್ತಿಗೂ ಜನರ ಮನದಲ್ಲಿ ಹಾಗೆಯೇ ಉಳಿದುಕೊಂಡಿದೆ. ಅವರ ಸೂಪರ್ ಹಿಟ್ ಸಿನಿಮಾಗಳ ಡೈಲಾಗ್ ಗಳು ಇಂದಿಗೂ ಮುಖ್ಯ ಪತ್ರವನ್ನು ನಿಭಾಯಿಸುತ್ತಿದೆ. 

ಅಮಿತಾಭ್ ಬಚ್ಚನ್ ಅವರಗೆ ಭಾರತ ಸರ್ಕಾರದಿಂದ 1984 ರಲ್ಲಿ ಪದ್ಮಶ್ರೀ , 2001 ರಲ್ಲಿ ಪದ್ಮಭೂಷಣ ಮತ್ತು 2015 ರಲ್ಲಿ ಪದ್ಮವಿಭೂಷಣ ನಂತಹ ಪುರಸ್ಕಾರಗಳು ದೊರಕಿವೆ.

ಸಿನಿಮಾ ವೃತ್ತಿಯ ಮೊದಲನೆಯ ಹಂತದಲ್ಲಿ ಬಚ್ಚನ್ ಅವರಿಗೆ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಯಿತು.

ಬಚ್ಚನ್ ಅವರ ಎಲ್ಲ ಸಿನಿಮಾಗಳು ಪ್ಲಾಪ್ ಆಗ್ತಾ ಹೋದವು , ನಿರಾಸೆಯಿಂದ ಅಮಿತಾಬ್ ಮನೆ ದಾರಿಯನ್ನು ಹಿಡಿಯಲು ಯೋಚಿಸಿದ್ದರು, ಆಗಲೇ ನೋಡಿ ಜಂಜೀರ್ ಎನ್ನುವ ಸಿನಿಮಾ ಅಮಿತಾಬ್ ಬಚ್ಚನ್ ಅವರಿಗೆ ಟರ್ನಿಂಗ್ ಪಾಯಿಂಟ್ ಆಗಿ ಬಿಡ್ತು. ಮತ್ತು ಇಂಡಸ್ಟ್ರಿಯಲ್ಲಿ  ಆಂಗ್ರಿಮ್ಯಾನ್ ನಾ ಉದಾಯವಾಯಿತು .


ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲೂ ಒಳ್ಳೆ ಸ್ನೇಹ ಸಂಬಂಧ


ಇಲ್ಲಿ ಇಂಟರೆಸ್ಟಿಂಗ್ ವಿಷಯವೊಂದು ಹೇಳಲು ಬಯಸುತ್ತೇವೆ ಅಮಿತಾಬ್ ಬಚ್ಚನ್ ಅವರು ಕನ್ನಡ ಸಿನಿಮಾದಲ್ಲೂ ಪಾತ್ರ ನಿಭಾಯಿಸಿದ್ದಾರೆ . ಕನ್ನಡದ ರಮ್ಯಾ ಮತ್ತು ಸಮೀರ್ ದತ್ತಾನಿ ಅಭಿನಯದ ಅಮೃತ ಧಾರೆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರು ಗೆಸ್ಟ್ ರೋಲ್ ಒಂದನ್ನ ಮಾಡಿದ್ರು. ಅಮಿತಾಬ್ ಬಚ್ಚನ್ ಅವರು ಕನ್ನಡ ಇಂಡಸ್ಟ್ರಿಯ ನಟರನ್ನು ಹತ್ತಿರದ ಪರಿಚಯವಿದೆ. ಡಾ. ರಾಜ್ಕುಮಾರ್ , ವಿಷ್ಣುವರ್ಧನ್, ಅಂಬರೀಷ್ ಅವರಜೊತೆಗೂ ಅಮಿತಾಬ್ ಅವರ ಒಳ್ಳೆ ಸ್ನೇಹ ಸಂಭಂಧವಿತ್ತು.


ಧ್ವನಿ ಸರಿಯಿಲ್ಲ ಎಂದು ತಿರಸ್ಕಾರ


ಇವತ್ತು ಅಮಿತಾಭ್ ಬಚ್ಚನ್ ಅವರ ಧ್ವನಿಯನ್ನು ಸಂಪೂರ್ಣ ಜಗತ್ತಿಗೆ ಪರಿಚಯವಿದೆ. ಆದ್ರೆ ಒಂದು ಸಮಯ ಹೀಗೂ ಇತ್ತು , ಅಮಿತಾಬ್ ಬಚ್ಚನ್ ಅವರು ರೇಡಿಯೋ ಜಾಕಿ ಆಗಲು ಸಂದರ್ಶನ ಕೊಟ್ಟಾಗ ಅವರ ಧ್ವನಿ ಚನ್ನಾಗಿಲ್ಲ ಎಂದು ಅವರಿಗೆ ರೇಡಿಯೋ ನಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಬಳಿಕ ಕೆಲವು ಡೈರೆಕ್ಟರ್, ಪ್ರೊಡ್ಯೂಸರ್ ಗಳು ಸಹ ಅಮಿತಾಬ್ ಬಚ್ಚನ್ ಅವರ ಧ್ವನಿ ಚನ್ನಾಗಿಲ್ಲ ಎಂದು ಸಿನಿಮಾ ಗಳಲ್ಲಿ ಅವಕಾಶ ಕೊಟ್ಟಿರಲಿಲ್ಲ. ಆದರೆ ಕೆಲವು ಸಮಯಗಳ ನಂತರ ಅವರ ಧ್ವನಿಯೇ ಅವರ ಶಕ್ತಿಯಾಗಿ ಬಂತು, ಅವರ ದಟ್ಟವಾದ ದ್ವನಿ ಬೇರೆಯವರ ಧ್ವನಿ ಕಿಂತಲು ವಿಶೇಷವಾಗಿತ್ತು. ಇದ ಕಾರಣಕ್ಕಾಗಿಯೇ ಅವರಿಗೆ ಅನೇಕ ನಿರ್ದೇಶಕರು ಸಿನಿಮಾಗಳಲ್ಲಿ ಅವರ ಧ್ವನಿ ಕೊಡುವಂತೆ ಬೇಡಿಕೆಇಟ್ಟರು. ಅನೇಕ ಪ್ರೋಗ್ರಾಮ್ ಗಳು ಹೋಸ್ಟ್ ಮಾಡಿದ್ದಾರೆ ಬಚ್ಚನ್.

ಅಮಿತಾಬ್ ಕರಿಯರ್ ನಾ ಕೆಟ್ಟ ಸಮಯ


ಅಮಿತಾಬ್ ಅವರ ಸಿನಿಮಾ ಗಳು ಒಳ್ಳೆ ಕಲೆಕ್ಷನ್ ಮಾಡುತ್ತಿದ್ದವು ಅಚಾನಕ್ಕಾಗಿ ಜುಲೈ 26 1982

 ಕ್ಕೆ ಕೂಲಿ ಸಿನಿಮಾದ ಫೈಟ್ ಶೂಟಿಂಟ್ ಸಮಯದಲ್ಲಿ ಅಮಿತಾಬ್ ಗಾಯಗೊಂಡರು.

 ಕೂಲಿ ಸಿನಿಮಾದ ಆಕ್ಷನ್ ದೃಶದಲ್ಲಿ ನಟ ಪುನೀತ್ ಇಸ್ಸಾರ್ ಅವರಿಗೆ ಪಂಚ್ ಮಾಡಿ , ಮೇಜ್ ಗೆ ಢಿಕ್ಕಿ ಹೊಡೆದು ನೆಲಕ್ಕೆ ಬೀಳುವ ಸಿನ್ ಇತ್ತು

ಆದರೆ ಅವರು ನೇಜ್ ನತ್ತ ಎಗರಿದಾಗ ಮೇಜ್ ನಾ ಮೂಲೆ ಅವರ ಹೊಟ್ಟೆಗೆ ತಾಗಿದ ಕಾರಣ ಸಾಕಷ್ಟು ರಕ್ತಸ್ರಾವ ಆಗಿತ್ತು ಆಗ ಅವರಿಗೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು ಅಮಿತಾಬ್ ಸಾವು ಬದುಕಿನ ನಡುವೆ ಉಸಿರಾಡುತ್ತಿದ್ದರು, ಆದರೆ ಜನರ ಪ್ರಾರ್ಥನೆ ಫಲಿಸಿತ್ತು ಅಮಿತಾಬ್ ಗುಣಮುಖರಾಗಿ ಶೂಟಿಂಗ್ ಗು ಮರಳಿದರು.


ರಾಜಕೀಯದಲ್ಲಿ ಪ್ರವೇಶ


ಕೂಲಿ ಸಿನಿಮಾದ ಘಟನೆಯ ಬಳಿಕ ಸ್ವತಃ ಅಮಿತಾಬ್ ಬಚ್ಚನ್ ನಾನ್ ಇದೀಗ ಸಿನಿಮಾಗಳು ಮಾಡಕಗಲ್ಲ ಎಂದು ಅವರು ರಾಜಕೀಯದಲ್ಲಿ ಕಾಲಿಟ್ಟರು. ಅವರು 8ನೆ ಲೋಕಸಭಾ ಚುನಾವಣೆಯಲ್ಲಿ ತನ್ನ ಗೃಹಕ್ಷೇತ್ರ ಉತ್ತರಪ್ರದೇಶದ ಇಲಾಹಾಬಾದ್ ಜಿಲ್ಲೆಯಿಂದ ಚುನಾವಣೆಗೆ ನಿಂತರು. ಆಗ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎಚ್ ಎನ್ ಬಹುಗುಣ ಅವರಿಗೆ ದೊಡ್ಡ ಮತಗಳ ಅಂತರದಿಂದ ಸೋಲಿಸಿದ್ದರು. ರಾಜಕೀಯದಲ್ಲಿ ಅಮಿತಾಬ್ ಹೆಚ್ಚು ಕಾಲ ಉಳಿಯಲಿಲ್ಲ ಕೇವಲ 3 ವರ್ಷಗಳಲ್ಲೇ ರಾಜಕೀಯ ಜೀವನ ಬಿಟ್ಟು ಸಿನಿಮಾ ಲೋಕಕ್ಕೆ ಮರಳಿ ಬಂದರು.

ಅಮಿತಾಬ್ ಬಚ್ಚನ್ ಅವರ ಎಬಿಸಿಎಲ್ ಕಂಪನಿ ಆರ್ಥಿಕ ಸಂಕದಲ್ಲಿಇದ್ದಾಗ ಅವರ ಸ್ನೇಹಿತ ರಾಜಕೀಯ ತಜ್ಞ ಅಮರ್ ಸಿಂಗ್ ಅವರು ಅಮಿತಾಬ್ ಗೆ ಸಾಕಷ್ಟು ಸಹಾಯ ಮಾಡಿದ್ದರು.

ಬಳಿಕ ಅಮಿತಾಬ್ ಬಚ್ಚನ್ ಅವರು ಅಮರ್ ಸಿಂಗ್ ಅವರ ಸಮಾಜವಾದಿ ಪಾರ್ಟಿಗೆ ಸಪೋರ್ಟ್ ಸಹ ಮಾಡಿದ್ದರು. ಅಮಿತಾಬ್ ಬಚ್ಚನ್ ಅವರ ಪತ್ನಿ ಸಮಾಜವಾದಿ ಪಾರ್ಟಿಗೆ ಸೇರಿದ್ದರು. ಅಮಿತಾಬ್ ಸಮಾಜವಾದಿ ಪಾರ್ಟಿಗಾಗಿ ಅನೇಕ ಜಾಹೀರಾತುಗಳು , ಮತ್ತು ಅಭಿಯಾನವನ್ನು ನಡೆಸಿದ್ದರು. 

ರಾಜಕೀಯದಿಂದ ಸಿನಿಮಾ ಕ್ಷೇತ್ರಕ್ಕೆ  ಕಮ್ ಬ್ಯಾಕ್ ಮಾಡಿದಾಗ ‘ಶಂಶಾಹ್’ ಹಿಟ್ ಆಯಿತು ಬಳಿಕ ಅಗ್ನಿಪತ್ ನಲ್ಲಿ ಮಾಡಿರುವ ಪಾತ್ರ ಸಾಕಷ್ಟು ಹಿಟ್ ಆಯಿತು. ಬಳಿಕ ಬಂದಂತ ಕೆಲವು ಸಿನಿಮಾಗಳು ಅಷ್ಟೊಂದು ಛಾಪು ಮುಡಿಸಿರಲಿಲ್ಲ.

ಸಿನಿಮಾಗಳಲ್ಲಿ ಮತ್ತೊಮ್ಮೆ ಕಮ್ ಬ್ಯಾಕ್


2000 ರಲ್ಲಿ ರಿಲೀಸ್ ಆದ  ಮೋಹಬತ್ತೆ ಸಿನಿಮಾ ಅವರ ಮುಳುಗುತ್ತಿದ್ದ ಸಿನಿಮಾ ಕರಿಯರನ್ನ ಮೇಲೆತ್ತಲು ಕಾರಣವಾಯಿತು. ಬಳಿಕ ಬಂದಂತಹ ಅನೇಕ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ್ದವು. ಪ್ರೇಕ್ಷಕರು ಸಹ ಈ ಎಲ್ಲ ಸಿನಿಮಗಳನ್ನ ಮೆಚ್ಚಿಕೊಂಡರು.

2005 ರಲ್ಲಿ ಬಂದಂತಹ ಬ್ಲಾಕ್ ಸಿನಿಮಾದಲ್ಲಿ ಅಮಿತಾಬ್ ಅವರ ನಟನೆಗೆ ರಾಷ್ಟ್ರಿಯ ಫಿಲ್ಮ್ ಪುರಸ್ಕಾರದಿಂದ ಸನ್ಮಾನಿಸಲಾಯಿತು.

ಪಾ ಫಿಲ್ಮಲ್ಲಿ ಅಮಿತಾಬ್ ಬಚ್ಚನ್ ಅವರು ತನ್ನ ಮಗನಾದ ಅಭಿಷೇಕ್ ಬಚ್ಚನ್ ಅವರ ಮಗನ ಪತ್ರ ನಿಭಾಯಿಸಿದ್ದರು. ಈ ಸಿನಿಮಾವನ್ನು ಪ್ರೇಕ್ಷಕರು ಸಾಕಷ್ಟು ಮೆಚ್ಚಿಕೊಂಡರು, ಬಳಿಕ  ಈ ಪಾತ್ರಕ್ಕಾಗಿ ಅಮಿತಾಬ್ ಅವರಿಗೆ ಮತ್ತೊಮ್ಮೆ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಲಾಯಿತು. 

ಅಮಿತಾಬ್ ಬಚ್ಚನ್ ಅವರು ಗುಜರಾತ್ ರಾಜ್ಯದ ಪ್ರವಾಸೋದ್ಯಮ ಬ್ರಾಂಡ್ ಅಂಬಾಸಿಡರ್ ಆಗಿಯೂ ಇದ್ದಾರೆ.

ಅಮಿತಾಬ್ ಟಿವಿ ಜಗತ್ತಿನ ದಿಗ್ಗಜ ನಟ, ನಿರೂಪಕ, ಅವರು ಹೋಸ್ಟ್ ಮಾಡುತ್ತಿರುವ ಕೆಬಿಸಿ ಶೋ ಸಾಕಷ್ಟು ಪಾಪುಲರ್ ಶೋ ಗಳಲ್ಲಿ ಒಂದು.

ಈ ಶೋ ಎಲ್ಲ ಟಿ ಆರ್ ಪಿ ಗಳ ರೆಕಾರ್ಡ್ ಮುರಿದು ಹಾಕಿತ್ತು, ಈ ಶೋ ಮೂಲಕ ಅನೇಕ ಜನ ಕೋಟ್ಯಾಧಿಪತಿಯಾದರು.

ಸಾಮಾಜಿಕ ಕಾರ್ಯಗಳಲ್ಲಿ ಮೇಲುಕೈ


 ಅಮಿತಾಬ್ ಬಚ್ಚನ್ ಅವರು ಜನರಿಗೆ ಸಹಾಯ ಮಾಡಲು ಮುಂದಾಗುತ್ತಾರೆ , ಈಗಲೂ ಸಹ ಅನೇಕ ಟ್ರಸ್ಟ್ ಗಳನ್ನ ನಡೆಸುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲೂ ಅವರು ಮುಂದಿರುತ್ತಾರೆ.

ಸಾಲದಲ್ಲಿ ಮುಳುಗಿದ ಆಂಧ್ರಪ್ರದೇಶದ 40 ರೈತರಿಗೆ 11 ಲಕ್ಷ ರೂಪಾಯಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಇದಲ್ಲದೆ ಮಹಾರಾಷ್ಟ್ರದ ವಿಧರ್ಭದ ರೈತರು ಕಷ್ಟದಲ್ಲಿದ್ದಾಗ 30 ಲಕ್ಷ ರೂಪಾಯಿ ಆರ್ಥಿಕ ಸಹಾಯ ಮಾಡಿದ್ದಾರೆ.  ಇಷ್ಟಲ್ಲದೆ ಇಂತಹ ಅನೇಕ ಸಂದರ್ಭಗಳಲ್ಲಿ ಅಮಿತಾಬ್ ಬಚ್ಚನ್ ತನ್ನ ವಿಶಾಲವಾದ ಹೃದಾಯದಿಂದ ಸಹಾಯ ಹಸ್ತ ಚಾಚಿದ್ದಾರೆ. 

2000 ರ ಜೂನ್ ನಲ್ಲಿ ಲಂಡನ್ ನಾ ವೈಡಮ್ ತುಸಾದ್ ಸಂಗ್ರಹಾಲಯದಲ್ಲಿ ಅಮಿತಾಬ್ ಬಚ್ಚನ್ ಅವರ ವ್ಯಾಕ್ಸ್ ಇಂದ ಮಾಡಿರುವ ಮೂರ್ತಿಯನ್ನು ಸ್ಥಾಪಿಸಿದ್ದರು. ಆಗ ಇವರು ಏಷಿಯಾದ ಮೊದಲನೇ ವ್ಯಕ್ತಿಯಾಗಿದ್ದರು.

ಅಮಿತಾಬ್ ಅವರ ಮೇಲೆ ಅನೇಕ ಪುಸ್ತಕಗಳನ್ನು ಸಹ ಬರೆಯಲಾಗಿದೆ.

199ರಲ್ಲಿ ಅಮಿತಾಬ್ ಬಚ್ಚನ್ ದ ಲಿಜೆನ್ಡ್ , 

2004 ರಲ್ಲಿ ಟು ಬಿ ಆರ್ ನಾಟ್ ಟು ಬಿ: 

 2006 ರಲ್ಲಿ ಎ ಬಿ ದ ಲಿಜೆನ್ಡ್ (ಎ ಫೋಟೋಗ್ರಾಫರ್ಸ್  ಟ್ರಿಬ್ಯುಟ್ )

2006 ರಲ್ಲಿ ಅಮಿತಾಬ್ ಬಚ್ಚನ್ ಏಕ್ ಜೀವಿತ್ ಕಿವಂದತಿ

2006 ರಲ್ಲಿ ಅಮಿತಾಬ್ ದ ಮೇಕಿಂಗ್ ಆಫ್ ಸೂಪರ್ಸ್ಟಾರ್

2007 ರಲ್ಲಿ ಲುಕಿಂಗ್ ಫಾರ್ ದ ಬಿಗ್ ಬಿ ಬಾಲಿವುಡ್ , ಮತ್ತು ಬಚ್ಚನ್ ಅಂಡ್ ಮಿ 

2009 ರಲ್ಲಿ ಬಚ್ಚನಾಲಿಯ ಪ್ರಕಾಶಿತಗೊಂಡವು.  


ಅಮಿತಾಬ್ ಬಚ್ಚನ್ ಅವರ ಬಗ್ಗೆ ಇತರೆ ವಿಷಯಗಳು 


ಅಮಿತಾಬ್ ಶುದ್ಧ ಸಸ್ಯಾಹಾರಿ ಇದ್ದು 2012 ರಲ್ಲಿ ಪೇಟ ಇಂಡಿಯಾ ಸಂಸ್ಥೆಯ ವತಿಂದ ಅವರಿಗೆ ಹಾಸ್ಟೆಸ್ ವೆಜಿಟೇರಿಯನ್ ಎನ್ನುವ ಬಿರುದು ಕೊಟ್ಟರು.ಪೇಟ ಏಷಿಯಾ ಮೂಲಕ ನಡೆಸಲಾಗಿದ್ದ ಒಂದು ಕಾಂಟೆಸ್ಟ್ ಪೋಲ್ ನಲ್ಲಿ ಏಷಿಯಾದ ಸೆಕ್ಸಿಸ್ಟ್ ವೆಜಿಟೇರಿಯನ್ ನಾ ಟೈಟಲ್ ಸಹ ಅವರ ಪಾಲಾಗಿತ್ತು. 


ಟೆಕ್ನಲಜಿಯ ಈ ಕಾಲದಲ್ಲಿ ಬಚ್ಚನ್ ಸಾಕಷ್ಟು ಆಕ್ಟಿವ್ ಆಗಿರುತ್ತಾರೆ.


ಈಗಿನ ಕಾಲ ಶೋಷಲ್ ಮೀಡಿಯಾ ಕಾಲ ಹೌದು, ಯಾವದೇ ವಿಷಯವಿರಲಿ ಪ್ರತಿ ವಿಷಯ ನೋಡು ನೋಡುತ್ತಲೇ ಇಂಟರ್ನೆಟ್ ಮೇಲೆ ಅಪ್ಲೋಡ್ ಆಗ್ತವೆ ವೈರಲ್ ಆಗ್ತವೆ. ಇಂಥಬಸಮಯದಲ್ಲಿ ನಮ್ಮ ಬಿಗ್ ಬಿ ಹಿಂದುಳಿತ್ತಾರ ? 

ಅವರು ಸಹ ಫೇಸ್ಬುಕ್ ಟ್ವಿಟರ್ ಗಳ ಸಾಕಷ್ಟು ಬಳಕೆ ಮಾಡುತ್ತಾರೆ. ಇದ ಕಾರಣಕ್ಕಾಗಿ ಅವರ ಶೋಷಲ್ ಮೀಡಿಯಾ ಗಳ ಮೇಲೆ ಲಕ್ಷಾಂತರ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಅವರು ಅವರ ಬಗ್ಗೆ ಪ್ರತಿ ಒಂದು ವಿಷಯನ ಶೋಷಲ್ ಮೀಡಿಯಾ ಮೇಲೆ ಹಂಚಿಕೊಳ್ಳುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments