Saturday, December 14, 2024
Homeತಾಜಾ ಸುದ್ದಿKadalekai Parishe 2024 | ಮಲ್ಲೇಶ್ವರಂ ಕಡ್ಲೆಕಾಯಿ ಪರಿಷೆ 2024, ನವೆಂಬರ್ 15 ರಿಂದ ನವಂಬರ್...

Kadalekai Parishe 2024 | ಮಲ್ಲೇಶ್ವರಂ ಕಡ್ಲೆಕಾಯಿ ಪರಿಷೆ 2024, ನವೆಂಬರ್ 15 ರಿಂದ ನವಂಬರ್ 18 ವರೆಗೆ ನಡೆಯಲಿದೆ ಕಡಲೆಕಾಯಿ ಪರಿಷೆ.

Kadalekai Parishe 2024 | ಕಡ್ಲೆಕಾಯಿ ಪರಿಷೆ 2024

ಕಡಲೆಕಾಯಿ ಪರಿಷೆ ಬೆಂಗಳೂರು ನಗರದ ಪ್ರಸಿದ್ಧ ಹಬ್ಬ. ಇದು ನವೆಂಬರ್ ತಿಂಗಳಲ್ಲಿ ನಡೆಯುತ್ತದೆ. ಈ ಹಬ್ಬವನ್ನು ಕಡಲೆಕಾಯಿ ಬೆಳೆದ ರೈತರು ಮತ್ತು ಸ್ಥಳೀಯರು ಸೇರಿ ದೊಡ್ಡ ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬದ ಮುಖ್ಯ ಉದ್ದೇಶ ಕಡಲೆಕಾಯಿಯನ್ನು ಮಾರಾಟ ಮಾಡುವುದು ಮತ್ತು ದೇವರಿಗೆ ಅರ್ಪಿಸುವುದು.

ಪರಿಷೆಯ ದಿನಗಳಲ್ಲಿ, ರಸ್ತೆಗಳು ವಿವಿಧ ರೀತಿಯ ಕಡಲೆಕಾಯಿಗಳಿಂದ ತುಂಬಿರುತ್ತವೆ. ಇದು ಕೇವಲ ವ್ಯಾಪಾರ ಮಾತ್ರವಲ್ಲ, ವಿವಿಧ ತಳಿಯ ಕಡಲೆಕಾಯಿ ನೋಡಲು ಸಿಗುವ ಮತ್ತು ಖರೆದಿ ಮಾಡಬಹುದಾದ ಸಾಂಸ್ಕೃತಿಕ ಉತ್ಸವವಾಗಿದೆ. ಇದು ನಮ್ಮ ಸಂಸ್ಕೃತಿಯ, ರೈತ ಜೀವನದ ಮಹತ್ವವನ್ನು ತೋರಿಸುತ್ತದೆ.

ಮಲ್ಲೇಶ್ವರಂ ಕಡ್ಲೆ ಕಾಯಿ ಪರಿಷೆ ನವೆಂಬರ್ 15 ರಿಂದ ನವಂಬರ್ 18 ರ ತನಕ
ಕಾಡು ಮಲ್ಲೇಶ್ವರಂ ಅಲ್ಲಿ ಸ್ವಾಮಿಯ ಜಾತ್ರೆಯ ಪ್ರಯುಕ್ತ ಮಲ್ಲೇಶ್ವರಂ ಅಲ್ಲಿ ನಡೆಯುವ ಕಡ್ಲೆ ಕಾಯಿ ಪರಿಷೆಯು ನವೆಂಬರ್ 15 ರಿಂದ 18ರ ತನಕ ನಡೆಯುತ್ತದೆ.
ಇಲ್ಲಿ ಯಾರು ಬೇಕಾದರೂ ಕಡ್ಲೆಕಾಯಿಯ ವ್ಯಾಪಾರ ಮಾಡಬಹುದಾಗಿದೆ.


ವರ್ಷಕ್ಕೆ ಒಮ್ಮೆ ನಡೆಯುವ ಈ ಹಬ್ಬದಲ್ಲಿ ಪ್ಲಾಸ್ಟಿಕ್ ಅನ್ನು ಬಳಸದೆ, ಕಡ್ಲೆಕಾಯಿ ತುಂಬಲು ಕೈ ಚೀಲಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ.
ಇಲ್ಲಿನ ಬಳಗದ ಅಧ್ಯಕ್ಷರು ಬಿ. ಕೆ ಶಿವರಾಂ 40,000 ಕಾಗದದ ಚೀಲವನ್ನು ಮಾರಾಟಗಾರರಿಗೆ ವಿತರಿಸಲು ಮುಂದಾಗಿದ್ದಾರೆ,
ಇದಲ್ಲದೆ, ಹಳೆಯ ಸೀರೆಗಳು ಮತ್ತು ಇತರ ವಸ್ತುಗಳನ್ನು ಬಳಸಿ ಸುಮಾರು 6,000 ಬಟ್ಟೆ ಚೀಲಗಳನ್ನು ಸಿದ್ಧಪಡಿಸಿದೆ. “ಈ ಚೀಲಗಳನ್ನು ಮಾರಾಟಗಾರರಿಗೆ ವಿತರಿಸಲಾಗುವುದು.
ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಕರ್ನಾಟಕದಾದ್ಯಂತ ಹಾಗೂ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕಡಲೆ ರೈತರು ಮೇಳದಲ್ಲಿ ಭಾಗವಹಿಸಿದ್ದಾರೆ.

Kadalekai Parishe Bangalore 2024
“ಹುಣ್ಣಿಮೆ ಹಾಡು” ಕಾರ್ಯಕ್ರಮದಡಿ ಪ್ರತಿ ಹುಣ್ಣಿಮೆಯಂದು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಬಳಗವು ಪರಿಷೆಯ ಜೊತೆಗೆ 200ನೇ ಹಬ್ಬವನ್ನು ಆಚರಿಸುತ್ತಿದ್ದಾರೆ.
ಸಾರ್ವಜನಿಕರು ಇದನ್ನು ಸದುಪಯೋಗ ಪಡೆದುಕೊಳ್ಳಬಹುದು.

ಕಡಲೆಕಾಯಿ ಪರಿಷೆ – ಹಬ್ಬದ ಶ್ರೇಷ್ಟತೆ

ಕಡಲೆಕಾಯಿ ಪರಿಷೆ ಕೇವಲ ಹಬ್ಬವಲ್ಲ, ಇದು ನಮ್ಮ ಪರಂಪರೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಪ್ರತಿಬಿಂಬ. ರೈತರಿಗೆ ಸಮರ್ಪಣೆ, ಸಮುದಾಯದ ಒಗ್ಗಟ್ಟಿನ ಉತ್ಸವ, ಮತ್ತು ಸಂತಸದ ಹಬ್ಬ ಎಂದು ಇದು ಪ್ರಸಿದ್ಧವಾಗಿದೆ. ಇದರ ಮೂಲಕ ನಮ್ಮ ಪಾರಂಪರಿಕ ಜೀವನಶೈಲಿಯನ್ನು ಉಳಿಸಿಕೊಂಡು, ಮುಂದಿನ ಪೀಳಿಗೆಗಳಿಗೆ ದಾರಿಯೊಡ್ಡುವುದು ನಮ್ಮ ಹೊಣೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments