Home HOME Duniya Vijay ! ನೆಟ್ಟಿಗರ ಮನಗೆದ್ದ ಕರಿ ಚಿರತೆ ದುನಿಯಾ ವಿಜಯ್ ! ವೈರಲ್ ಆಯ್ತು ವಿಕಲಂಗ ಅಭಿಮಾನಿಯ ಜೊತೆಗಿನ video.

Duniya Vijay ! ನೆಟ್ಟಿಗರ ಮನಗೆದ್ದ ಕರಿ ಚಿರತೆ ದುನಿಯಾ ವಿಜಯ್ ! ವೈರಲ್ ಆಯ್ತು ವಿಕಲಂಗ ಅಭಿಮಾನಿಯ ಜೊತೆಗಿನ video.

0
Duniya Vijay ! ನೆಟ್ಟಿಗರ ಮನಗೆದ್ದ ಕರಿ ಚಿರತೆ ದುನಿಯಾ ವಿಜಯ್ ! ವೈರಲ್ ಆಯ್ತು ವಿಕಲಂಗ ಅಭಿಮಾನಿಯ ಜೊತೆಗಿನ video.

ನಾವು ಇರುವ ಜಮಾನದಲ್ಲಿ, ಅದೆಷ್ಟೊ ಜನ , ಕಷ್ಟದಲ್ಲಿದ್ದವರು, ಬಡವರು, ಹೊಟ್ಟೆ ಪಾಡಿಗೆ , ದಿನಗಲಿ ಕೆಲಸ ಮಾಡುವವರು, ಇದ್ದಾರೆ. ಇದರ ಜೊತೆಗೆ ಅದೆಷ್ಟೊ ಕೋಟಿ ಕೋಟಿ ಆಸ್ತಿ, ಅಂತಸ್ತು, ಮಾಡಿದ್ದವರು ಸಹ ನಮ್ಮ ನಿಮ್ಮ ಮಧ್ಯೆ ಇದ್ದಾರೆ. ಅವರವರು ತಮ್ಮ ತಮ್ಮ ಪಾಡಿಗೆ, ಇರ್ತಾರೆ ಬಿಡಿ..

 ಆದರೆ ನಿಜವಾಗಿಯೂ ನಮ್ಮ ನಾಗರಿಕ ಸಮಾಜದಲ್ಲಿ, ಹಿಂದಗಡೆ ಉಳ್ಕೊಂಡಿರುವವರು ಯಾರೆಂದು ನೋಡಿದರೆ, ಅದು, ವಿಕಲಂಗರು, ವಿಕಲಚತನರು . ಅಂಥವರ ಜೊತೆ ನಮ್ಮ ಸಮಾಜದ ಸ್ನೇಹ ಪ್ರೀತಿ ತುಂಬಾ ಕಡಿಮೆ ಇರತ್ತೆ ಅಂದ್ರು ತಪ್ಪಿಲ್ಲ..

ನಮ್ಮ ಸಮಾಜದಲ್ಲಿ ನಿಜವಾದ ಬಡವರು ಯಾರು ಅಂತ ನೋಡಿದ್ರು ಅದು ಕೈ ಕಾಲು ಸರಿ ಇಲ್ಲದವರು ಮತ್ತು ಅಂಗವಿಕಲರು ವಿಕಲಚತನರು ಮಾತ್ರಾ. ಈಗಿನ ಕಾಲದಲ್ಲಿ, ಈ ತರಹದ ವ್ಯಕ್ತಿಗಳ ಜೋತೆ ಒಂದು 5 ನಿಮಿಷ ಮಾತಾಡಿ ಅವರ ಕಷ್ಟ ಸುಖ ಕೇಳುವುದಕ್ಕೂ ಯಾರ ಹತ್ತಿರವೂ ಸಮಯವಿಲ್ಲ ಬಿಡಿ.

ಹೌದೂ, ನಾನು ಈ ಮಾತನ್ನ ಯಾಕೆ ಹೇಳ್ತಾ ಇದೀನಿ ಅಂದ್ರೆ, ಅದಕ್ಕೆ ಒಂದು ಕಾರಣವೂ ಇದೆ, ಅದೇನೆಂದರೆ ಇತ್ತೀಚೆಗಷ್ಟೇ, ನಟ Sandalwood Salaga , ದುನಿಯಾ ವಿಜಯ್ (Duniya Vijay), ಅವರ ಒಂದು ವಿಡಿಯೋ ತುಂಬ ನೆ ವೈರಲ್ ಆಗಿದೆ.

 ಅದರಲ್ಲಿ, ಒಬ್ಬ ವಿಕಲಂಗ ವ್ಯಕ್ತಿ, ಅಂದರೆ ಅರ್ಧ ದೇಹದ ಶಕ್ತಿ ಕಳೆದುಕೊಂಡಿರುವ ವಿಕಾಲಂಗ ವ್ಯಕ್ತಿ, ದುನಿಯಾ ವಿಜಯ್ ಅವರಿಗೆ ನೋಡೋಕೆ ಅವರ ನಿವಾಸಕ್ಕೆ ಹೋಗಿರ್ತಾನೆ, ಆಗ ನಟ ದುನಿಯಾ ವಿಜಯ್ ಅವರು ಆ ಅಂಗವಿಕಲ ವ್ಯಕ್ತಿಯ ಜೊತೆ ರಸ್ತೆಯಲ್ಲೇ ಕುತ್ಕೊಂಡು ಒಂದಿಷ್ಟು ಹೊತ್ತು ಮಾತನಾಡುತ್ತಾ ಕಾಲ ಕಳಿತಾರೆ.

ಸ್ವಲ್ಪ ಸಮಯದ ನಂತರ ಆ ವ್ಯಕ್ತಿ ದುನಿಯಾ ವಿಜಯ್ ಬಳಿ ಫೋಟೋ ತೆಗಿಯೋಕೆ ರಿಕ್ವೆಸ್ಟ್ ಮಾಡಿರುತ್ತಾನೆ. ಆಗ ದುನಿಯಾ ವಿಜಯ್ ಅವರು ಆ ಅಂಗವಿಕಲ ವ್ಯಕ್ತಿಯನ್ನ ಸ್ವತಃ ತಾವೇ ಚಿಕ್ಕ ಮಗು ಥರ, ಎತ್ಕೊಂಡು ಫೋಟೋ ತೆಗಿಸಿಕೊಳ್ಳುತ್ತಾರೆ. ಮತ್ತು ಅಷ್ಟೆ ನಿಧಾನವಾಗಿ ಕೆಳಗೆ ಇಳಿಸುತ್ತಾರೆ..

 ಇದೇ ವೀಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದುನಿಯಾ ವಿಜಯ್ ಅವರ ವ್ಯಕ್ತಿತ್ವವ ಎಷ್ಟು ಮಗು ಮನಸಿನದ್ದು ಎಂದು ತೋರಿಸುತ್ತಿದೆ..

ಇನ್ನು ದುನಿಯಾ ವಿಜಯ್ ಅವರು ಕಾಣೋಕೆ ಎಷ್ಟು ರಫ್ ಅಂಡ್ ಟಫ್ ಇದ್ದಾರೆ ಅಷ್ಟೆ ಅವರು ಮೃದು ಸ್ವಭಾವದವರು ಎಂಬುವುದು ಸಹ ಮತ್ತೊಮ್ಮೆ ಸಾಬೀತಾಗಿದೆ. ಜೊತೆಗೆ ಅಭಿಮಾನಿಗಳನ್ನ ಅದೆಷ್ಟು ಪ್ರೀತಿಸ್ತಾರೆ ಎಂಬುವುದು ಸಹ ಈ ವೀಡಿಯೊ ಮೂಲಕ ಸ್ಪಷ್ಟವಾಗಿದೆ. 

ಇಂತಹ ಸ್ಟಾರ್ ನಟ ಒಬ್ಬ ಸಾಮನ್ಯ ಅಭಿಮಾನಿಯ ಜೊತೆ ಇಷ್ಟೊಂದು ಕಾಳಜಿ ಇಂದ ವರ್ತಿಸಿದ್ದು ಬಹುಶಃ  ಇವರೆ ಮೊದಲನೆ ವ್ಯಕ್ತಿ ಅನಿಸುತ್ತೆ..

 ಇನ್ನು ಈ ವೀಡಿಯೊ ಸುಮರು ಎರೆಡು ವರ್ಷಗಳ ಹಳೆಯದಾಗಿದೆ , ಮತ್ತು ಈ ವೀಡಿಯೊವನ್ನು ಒಬ್ಬಾ ವ್ಯಕ್ತಿ ದುನಿಯಾ ವಿಜಿ ಅವರಿಗೆ ಗೊತ್ತಿಲ್ಲದೆ ದೂರದಿಂದ Record ಮಾಡಿದ್ದಾರೆ ಎಂಬುವುದು ತಿಳಿದು ಬಂದಿದೆ.

ಈ ಅಂಗವಿಕಲ ಅಭಿಮಾನಿಗೆ ನಟ ದುನಿಯಾ ವಿಜಯ್ ತೋರಿಸಿದ ಕಾಳಜಿಗೆ, ಅಭಿಮಾನಿಯ ಜೊತೆ ನಡೆದುಕೊಂಡ ರೀತಿ ನೆಟ್ಟಿಗಾರ ಮನ ಗೆಲ್ಲುವಂತೆ ಮಾಡಿದೆ,

ಸೋಷಿಯಲ್ ಮೀಡಿಯದಲ್ಲಿ ದುನಿಯಾ ವಿಜಯ್ ಅವರ ಈ ವೀಡಿಯೊ ಗೆ ಮಿಲಿಯನ್ ಗಟ್ಟಲೆ, View’s ಮತ್ತು ಲಕ್ಷ ಗಟ್ಟಲೆ Likes ಬಂದಿದೆ.

ಮತ್ತು ಮನ ಗೆದ್ದ ಸಲಗನಿಗೆ ಜನ ಧನ್ಯವಾದಗಳನ್ನಾ ತಿಳಿಸುತಿದ್ದಾರೆ.

Advertisement

LEAVE A REPLY

Please enter your comment!
Please enter your name here