Thursday, April 3, 2025
HomeದೇಶSoujanya Case ! ಗೌಡರ ಬೆಂಬಲಿಗರಿಂದ ಜೀವ ಬೆದರಿಕೆ.? ! Soujanya Case Sameer MD...

Soujanya Case ! ಗೌಡರ ಬೆಂಬಲಿಗರಿಂದ ಜೀವ ಬೆದರಿಕೆ.? ! Soujanya Case Sameer MD Video ! Dharmastala Soujanya Case | Dhootha

Soujanya Case ! ಗೌಡರ ಬೆಂಬಲಿಗರಿಂದ ಜೀವ ಬೆದರಿಕೆ.? ! Sowjanya Case Sameer MD Video ! Dharmastala Soujanya Case | Dhootha

  • ಸೌಜನ್ಯ ಪ್ರಕರಣ soujanya case, ಯೂಟ್ಯೂಬರ್ ಧೂತ Sameer MD ಅರೆಸ್ಟ್..!?
  • ನ್ಯಾಯ ಕೇಳೋದ್ರಲ್ಲಿ ಜಾತಿ ಧರ್ಮ ಎಲ್ಲಿಂದ ಬಂತು..!?
  • ನನ್ ಮನೆಗೆ ಹುಡ್ಕೊಂಡು ಬರ್ತಿದ್ದಾರೆ..!?
  • ಗೌಡ್ರ ಕುಟುಂಬದ ಬೆಂಬಲಿಗರಿಂದ ಸಮೀರ್ ಗೆ, ಬೆದರಿಕೆ ಕರೆಗಳು..!?

 ಸೌಜನ್ಯ…ಈ ಹೆಸರು ಕೇಳಿದರೆ ಸಾಕು, ಕನ್ನಡಿಗರಿಗೆ ಥಟ್ ಆಂತ ಕಣ್ಣಮುಂದೆ ಬರೋದೇ ಧರ್ಮಸ್ಥಳದಲ್ಲಿ ಕೊಲೆಯಾದ ಅಮಾಯಕ ಹೆಣ್ಣುಮಗಳು ಸೌಜನ್ಯಳ ಭೀಕರ ಭೀಭತ್ಸ ಕೊಲೆ ಪ್ರಕರಣ.        ಅಕ್ಟೋಬರ್ 2012 ರಲ್ಲಿ ಧರ್ಮಸ್ಥಳದಲ್ಲಿ , ನಡೆದ ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣ (soujanya Case) ಯಾರಿಗೆ ನೆನಪಿಲ್ಲ ಹೇಳಿ..?
ಒಬ್ಬ ಅಮಾಯಕ ಕಾಲೇಜ್ ವಿಧ್ಯಾರ್ಥಿನಿ, ಸೌಜನ್ಯಾಳನ್ನ , ಧರ್ಮಸ್ಥಳದನಂತಹ ಪುಣ್ಯಕ್ಷೇತ್ರದಲ್ಲಿ, ಕೆಲವು ಮನುಷ್ಯ ರೂಪದ , ರಾಕ್ಷಸರು, ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಹ ಕೃತ್ಯ ನಡೆಸಿ, ಅವಳನ್ನ ಕೊಲೆ ಮಾಡಿದರು.

ಸೌಜನ್ಯ ಕೇಸ್

ಸೌಜನ್ಯಳ ಸಾವಿನ ಬಳಿಕ ಅನೇಕ ಕಾನೂನು ಪ್ರಕ್ರಿಯೆಗಳು ನಡೆದವು ಆದರೆ ನ್ಯಾಯ ಅಂತೂ ಸಿಗಲಿಲ್ಲ.
ಸುಮಾರು 12 ವರ್ಷಗಳು ಕಳೆದರೂ, ಸೌಜನ್ಯಳ, ಸಾವಿಗೆ ಇಂದಿಗೂ, ನ್ಯಾಯ ಸಿಕ್ಕಿಲ್ಲ.
ಆದರೆ ಯಾವುದಾದ್ರೂ ಒಂದು ಕೊಲೆ ಪ್ರಕರಣವನ್ನ ಇಷ್ಟು ವರ್ಷಗಳಾದರೂ ಜನ ನೆನಪಿಟ್ಟುಕೊಂಡು. ವರ್ಷಾನುಗಟ್ಟಲೆ ನ್ಯಾಯಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ ಅಂದ್ರೆ ಬಹುಶಃ ಕೇವಲ ಸೌಜನ್ಯ ಪ್ರಕರಣವೇ ಆಗಿರಬಹುದು.
ಅಂದ್ರೆ, ಈ ಕೇಸ್ ಎಷ್ಟು ಹೈ ಪ್ರೊಫೈಲ್ ಕೇಸ್ ಆಗಿರಬಹುದು ಎಂದು ಅರ್ಥವಾಗತ್ತೆ.

soujanya case letest updates


ಆದರೆ ಇಂತಹ ಹೈ ಪ್ರೊಫೈಲ್ ಕೇಸ್ ಗೆ, ನಮ್ಮ ಕಾನೂನು ಸುವ್ಯವಸ್ಥೆಯಲ್ಲಿ , ಹೇಗೆಲ್ಲಾ ಅನ್ಯಾಯ, ಆಗಿದೆ , ಆಗ್ತಾ ಇದೆ , ಅಂತ ಧೂತ ಸಮೀರ್ ಎಂ ಡಿ ಈ ಯೂಟ್ಯೂಬ್ ಚಾನಲ್ ನಲ್ಲಿ ನೋಡಿರಬಹುದು..
ಹೌದು ಇದ್ದಿಕ್ ಇದ್ದಂಗೆ ರಾಜ್ಯದಲ್ಲಿ ಸೌಜನ್ಯ ಪ್ರಕರಣ,  ಮತ್ತೊಮ್ಮೆ , ತುಂಬಾ ಜೋರಾಗಿ ಸದ್ದು ಮಾಡ್ತಿದೆ, ಪ್ರತಿಯೊಬ್ಬರೂ ಈ ಬಗ್ಗೆ ಮಾತನಾಡುತ್ತಿದ್ದಾರೆ, .”ಎನ್ ರಿ ಸ್ವಾಮಿ ಸೌಜನ್ಯಳಿಗೆ ಯಾವಾಗ ನ್ಯಾಯ ಸಿಗತ್ತೆ” ಅಂತೆಲ್ಲ ಮಾತನಾಡುತ್ತಿದ್ದಾರೆ.


ಆದರೆ ಈ ಬಾರಿ ಜನ ರೋಡಿಗೆ ಇಳಿದು ಪ್ರೊಟೆಸ್ಟ್, ಮಾಡುವುದರ ಮೂಲಕ ಅಗ್ರೋಶ ಹೊರಹಾಕುತಿಲ್ಲ , ಬದಲಿಗೆ, ಸೋಶಿಯಲ್ ಮೀಡಿಯಾಗಳ ಮೂಲಕ , ಜನ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುತಿದ್ದಾರೆ…
ಅದಕ್ಕೆ ಕಾರಣ Dhoota Sameer MD ಎಂಬುವ ಯುಟ್ಯೂಬ್ ಚಾನಲ್ ನಲ್ಲಿ ಪೋಸ್ಟ್ ಮಾಡಿರುವ ಒಂದು ವೀಡಿಯೊ.


ಹೌದು, ಫೆಬ್ರುವರಿ 27 ರಂದು ಬಿಡುಗಡೆಯಾದ ಈ ವೀಡಿಯೊ, ಈಗ ಕರ್ನಾಟಕದಲ್ಲಿ ಸೆನ್ಸೇಷನ್.
ಬರೋಬ್ಬರಿ 39 ನಿಮಿಷಗಳ ಕಾಲ ಡ್ಯೂರೇಶನ್ ಇರುವಂತಹ ಈ ವಿಡಿಯೋ ದಲ್ಲಿ , ಸೌಜನ್ಯ ಪ್ರಕರಣದ ಬಗ್ಗೆ, ಸಂಪೂರ್ಣ ಮಾಹಿತಿ ಯುಟ್ಯೂಬರ್ ಧೂತ ಸಮೀರ್ ವಿವರಿಸಿದ್ದಾರೆ.
ಜೊತೆಗೇ ಧರ್ಮಸ್ಥಳದಲ್ಲಿ ಸೌಜನ್ಯ Dharmastala Soujanya Case ಕೊಲೆ ಕಿಂತಲು ಮುಂಚೆಯೂ ನಡೆದಿದ್ದ, ಕೆಲವು ಕೊಲೆಗಳ ಬಗ್ಗೆಯೂ ಈ ಯುಟ್ಯೂಬರ್ ಎಳೆಎಳೆಯಾಗಿ ವಿವರಿಸಿದ್ದಾರೆ.

ಈ ಮೂಲಕ , ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ, ಕ್ಯಾಂಪೇನ್ ಶುರು ಮಾಡಿದ್ದಾರೆ..
dhoota Sameer MD ಈ ಚಾನಲ್ ನಲ್ಲಿ ಬಿಡುಗಡೆಯಾಗಿರುವ ಈ ಒಂದು ವಿಡಿಯೊ ಕೇವಲ 5 ದಿನಗಳಲ್ಲಿ 10 million ವೀಕ್ಷಣೆ ಪಡೆದಿದೆ..
ಇದನ್ನ ಕಂಡಂತಹ ಕೆಲವರು, ಯುಟ್ಯೂಬರ್ ದೂತ ಸಮೀರ್ ಎಂ ಡಿ, ಗೆ ಜೀವ ಬೆದರಿಗೆ ಹಾಕುತಿದ್ದಾರಂತೆ, ಇವರ ಮನೆ ಅಡ್ರೆಸ್ ಫೋನ್ ನಂಬರ್ ಎಲ್ಲವು ಲಿಕ್ ಮಾಡಿದ್ದಾರೆ , ಗೌಡ್ರ ಕುಟುಂಬದ ಬೆಂಬಲಿಗರಿಂದ ಬೆದರಿಕೆ ಕರೆಗಳು ಬರ್ತಿದೆ ಎಂದು ತಮ್ಮ ಇನ್ಸ್ಟ ಖಾತೆಯಲ್ಲಿ , ಪೋಸ್ಟ್ ಮಾಡಿದ್ದಾರೆ..
ಬೆದರಿಕೆಗಳ ಬಳಿಕ, ಈ ಒಂದು ವಿಡಿಯೋ ಗೆ ಯುಟ್ಯೂಬ್ ನಲ್ಲಿ ಸಮೀರ್ ಸಹ ಪ್ರೈವೇಟ್ ಮಾಡಿದ್ರು.
ಕೆಲವೂ ಸಮಯದ ನಂತರ ಮತ್ತೆ ಅವರು, ಈ ಒಂದೂ ವಿಡಿಯೊ ಗೆ ಪಬ್ಲಿಕ್ ಸಹ ಮಾಡಿದ್ದಾರೆ.
ಆದರೆ ಯೂಟ್ಯೂಬರ್ ಸಮೀರ್ ಗೆ ಬೆದರಿಕೆ ಗಳು ಬರಲು ಕಾರಣ, ಧರ್ಮ, ಜಾತಿ ಎಂದೂ ಖುದ್ದು ಸಮೀರ್ ಅವರೇ ತಿಳಿಸಿದ್ದಾರೆ.

ನ್ಯಾಯಾ ಕೇಳುವುದರಲ್ಲಿ ಜಾತಿ , ಧರ್ಮ ಎಲ್ಲಿ ಬರತ್ತೆ..?? ಅಂತ ಸಮೀರ್ ಪ್ರಶ್ನೆಯಾಗಿದೆ..
ಮತ್ತೊಂದು ಕಡೆ ಯೂಟ್ಯೂಬರ್ ಸಮೀರ್, ಈ ವಿಡಿಯೊ ಮಾಡೋಕೆ 35 ಲಕ್ಷ ರೂಪಾಯಿ ಹಣವನ್ನು ಲಂಚ ಪಾಡ್ಕೊಂಡಿದ್ದಾನೆ ಅಂತ ಕೆಲವರು ಟ್ರೋಲ್ ಮಾಡ್ತಿದ್ದಾರೆ, ಇನ್ ಕೆಲವರು ಸಮೀರ್, ಗೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಅಂತ, ಫೇಕ್ ಸುದ್ದಿಗಳು ಹಬಿಸುತ್ತಿದ್ದಾರೆ..
ಎಲ್ಲ ಊಹಾ ಪೋಹಗಳಿಗೆ, ಸಮೀರ್ Insta ದಲ್ಲಿ Post ಮಾಡುವ ಮೂಲಕ ತೆರೆ ಎಳದಿದ್ದಾರೆ..

ಇದನ್ನು ಓದಿ..Duniya Vijay ! ನೆಟ್ಟಿಗರ ಮನಗೆದ್ದ ಕರಿ ಚಿರತೆ ದುನಿಯಾ ವಿಜಯ್ ! ವೈರಲ್ ಆಯ್ತು ವಿಕಲಂಗ ಅಭಿಮಾನಿಯ ಜೊತೆಗಿನ video.

ಕಳೆದ 13 ವರ್ಷಗಳಲ್ಲಿ, ಸಾವಿರಾರು ಜನ ಬೀದಿಗೆ  ಇಳಿದು ನಿರಂತರವಾಗಿ ಪ್ರೊಟೆಸ್ಟ್ ಮಾಡಿದರು ಸಹ ನ್ಯಾಯ ಸಿಗದ ಸೌಜನ್ಯಳ, ಕೊಲೆ ಪ್ರಕರಣಕ್ಕೆ.
ಇದೀಗ ಸೋಷಿಯಲ್ ಮೀಡಿಯಾಗಳ ಮೂಲಕ 2025 ರಲ್ಲಿ, ಹೋಸ ತಿರುವು ಸಿಕ್ಕಿದೆ..
ಈ ಮೂಲಕ ಈ ವಿಡಿಯೊ ದಲ್ಲಿ ಇರುವ, ಪಾತ್ರಗಳ ಮಾಹಿತಿಯ ಆಧಾರದ ಮೇಲೆ, ಮತ್ತೊಮ್ಮೆ, ನ್ಯಾಯಯುತವಾಗಿ ತನಿಖೆ ನಡೆಸಿ, ಆರೋಪಿ ಗಳಿಗೆ ಶಿಕ್ಷೆಯಾಗಬೇಕು ,
ದರ್ಶನ್ ವಿಚಾರದಲ್ಲಿ ಪೊಲೀಸ್ ಇಲಾಖೆ ಎಷ್ಟು ಸೂಕ್ಷ್ಮವಾಗಿ ತನಿಖೆ , ನಡೆಸಿದ್ರು ಅದೇ ಥರ , ಸೌಜನ್ಯಾಳ ಸಾವಿನ ಪ್ರಕರಣದಲ್ಲಿಯೂ ಅಷ್ಟೇ ಸೂಕ್ಷವಾಗಿ ತನಿಖೆ ಮಾಡಲಿ ಎಂದು, ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ.


ಅದೇನೇ ಇರಲಿ, soujanya rape and mulder ಪ್ರಕರಣ ಮತ್ತೊಮ್ಮೆ ಮುನ್ನಲಿಗೆ ಬಂದಿದೆ ಸರಕಾರ ಈಗಲಾದರೂ , dharmasthala soujanya case ಬಗ್ಗೆ , ಮತ್ತೊಮ್ಮೆ ಪರಿಶೀಲಿಸಿ , ನಿಜವಾದ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಸಲಿ ಅಂತ. ರಾಜ್ಯದ ಜನರ ಮಾತುಗಳಗಿದೆ , ಕಳೆದ 12 ವರ್ಷಗಳಲ್ಲಿ ಕಂಡು ಬರದೇ ಇರುವಂತಹ ಕೋಟ್ಯಂತರ ಜನರ ಬೆಂಬಲ ಸೌಜನ್ಯಳ ಪರ ಬಂದಿದೆ. ಈ ಸುದ್ದಿ ಕೇವಲ ರಾಜ್ಯ ವಲ್ಲದೆ ದೇಶದಲ್ಲಿಯೂ ತುಂಬಾ ಸದ್ದು ಮಾಡುತ್ತಿದೆ. ಅಲ್ಲದೆ ವಿದೇಶಗಳಲ್ಲಿಯೂ , ಅಲ್ಲಿನ ಸೋಷಿಯಲ್ ಮೀಡಿಯಾ influencer ಗಳು ಸಹ soujanya ಈ ಬಗ್ಗೆ ವಿಡಿಯೋ ಮಾಡಿ ಮಾತನಡುತ್ತಿದ್ದಾರೆ.

ಅಲ್ಲದೆ , ಧೂತ ಸಮೀರ್ ಯೂಟ್ಯೂಬರ್ ಬಗ್ಗೆಯೂ ಅನೇಕರು ಚರ್ಚೆ ಮಾಡುತ್ತಿದ್ದಾರೆ , ಇವರ ಧೈರ್ಯಕ್ಕೆ ಮೆಚ್ಚಿಗೆ ವ್ಯಕ್ತ ಪಡಿಸುತಿದ್ದಾರೆ , ಮತ್ತು ಸಮೀರ್ ಮಾಡಿರುವ ಈ ವಿಡಿಯೋ ಇದೀಗ 15 ಮಿಲಿಯನ್ ಗಡಿ ದಾಟುತ್ತಿದೆ.. ಸಮೀರ್ ಮಾಡಿರುವ ವಿಡಿಯೋ ಬರೋಬ್ಬರಿ 39 ನಿಮಿಷಗಳ ಲೆಂತ್ ಇರುವ ವಿಡಿಯೋ ಆದರೂ ಸಹ ಇದನ್ನ ಕೇವಲ 5 ದಿನಗಳಲ್ಲಿ 10 ಮಿಲಿಯನ್ ವೀಕ್ಷಣೆ ಬಂದಿದ್ದು ಕನ್ನಡ ಯೂಟ್ಯೂಬ್ ಇತಿಹಾಸದಲ್ಲಿಯೇ ಹೊಸ ದಾಖಲೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments