Indian Railway Jobs 2024 ವಾಯುವ್ಯ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ1791 ಅರ್ಜಿ ಆಹ್ವಾನ ! Government Jobs 2024

Railway Jobs 2024 ವಾಯುವ್ಯ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ1791 ಅರ್ಜಿ ಆಹ್ವಾನ

ವಾಯುವ್ಯ ರೈಲ್ವೆಯಲ್ಲಿ ಸಾವಿರಾರು ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ರೈಲ್ವೆಯಲ್ಲಿ ಅಪ್ರೆಂಟಿಸ್ ಕೆಲಸ ಮಾಡಲು, ನೀವು ಐಟಿಐ ಪದವಿಯನ್ನು ಹೊಂದಿದ್ದು,
ರೈಲ್ವೆಯಲ್ಲಿ ಒಟ್ಟು 1791 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.


ಅಪ್ರೆಂಟಿಸ್ ಹುದ್ದೆಯ ವಿವರಗಳು

  • ಡಿಆರ್‌ಎಂ ಆಫಿಸ್, ಅಜ್ಮೀರ್ ಡಿವಿಸನ್: 440
  • ಡಿಆರ್‌ಎಂ ಆಫಿಸ್, ಬಿಜಾನೇರ್ ಡಿವಿಸನ್: 482
  • ಡಿಆರ್‌ಎಂ ಆಫಿಸ್, ಜೈಪುರ ಡಿವಿಸನ್ :532
  • ಡಿಆರ್‌ಎಂ ಆಫಿಸ್, ಜೋಧಪುರ ಡಿವಿಸನ್ :67
  • ಬಿಟಿಸಿ ಕ್ಯಾರೇಜ್,ಅಜ್ಮೀರ್ :99
  • ಬಿಟಿಸಿ, ಲೋಕೋ, ಅಜ್ಮೀರ್ : 69
  • ಕ್ಯಾರೇಜ್ ವರ್ಕ್ ಶಾಪ್, ಬಿಕಾನೇರ್ :32
  • ಕ್ಯಾರೇಜ್ ವರ್ಕ್ ಶಾಪ್, ಜೋಧಪುರ :70


ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಪರೀಕ್ಷಾ ಮಂಡಲಿಯಿಂದ 10 ನೇ ಪರೀಕ್ಷೆ ಅಥವಾ ಅದರ ಸಮಾನ ಪರೀಕ್ಷೆಯಲ್ಲಿ‌‌ ಉತ್ತೀರ್ಣರಾಗಿರಬೇಕು.
ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ (ಎನ್‌ಸಿವಿಟಿ)/ಸ್ಟೇಟ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ (ಎಸ್‌ಸಿವಿಟಿ) ಹೊರಡಿಸಿದ ಅಧಿಸೂಚಿತ ವ್ಯಾಪಾರದಲ್ಲಿ ಅಭ್ಯರ್ಥಿಯು ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರವನ್ನು ಹೊಂದಿರಬೇಕು.


ಅರ್ಜಿ ಶುಲ್ಕ


ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ ಪಾವತಿಸಬೇಕು. ಆದರೆ ಎಸ್ ಸಿ/ ಎಸ್ ಟಿ, ಅಂಗವಿಕಲರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ.


ವಯಸ್ಸಿನ ಮಿತಿ


ಅರ್ಜಿದಾರರ ಕನಿಷ್ಠ ವಯಸ್ಸು 15 ವರ್ಷ. ಗರಿಷ್ಠ ವಯಸ್ಸು 24 ವರ್ಷ ಮೀರಿರಬಾರದು. 24 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ.
ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. SSLC ಯಲ್ಲಿ ಶೇಕಡಾವಾರು ಅಂಕಗಳು (ಕನಿಷ್ಠ 50% ಒಟ್ಟು ಅಂಕಗಳು) ಮತ್ತು ಆಯಾ ಟ್ರೇಡ್‌ನಲ್ಲಿ ಐಟಿಐಯಲ್ಲಿನ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧ ಪಡಿಸಲಾಗುತ್ತದೆ.


ಪ್ರಮುಖ ದಿನಾಂಕಗಳು


ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10-11-2024
ಅರ್ಜಿ ಸಲ್ಲಿಕೆ ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10/12/2024.

ಡಿಸೆಂಬರ್ 10 ರೊಳಗೆ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrcjaipur.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Leave a Comment