Tuesday, April 16, 2024
Homeಬ್ರೇಕಿಂಗ್ ನ್ಯೂಸ್ನಂದಿ ಹಿಲ್ಸ್‌ಗೆ ಬೈಕ್‌ ರೈಡಿಂಗ್ ಗೆ ಹೋಗುವುದು ಹೇಗೆ ?

ನಂದಿ ಹಿಲ್ಸ್‌ಗೆ ಬೈಕ್‌ ರೈಡಿಂಗ್ ಗೆ ಹೋಗುವುದು ಹೇಗೆ ?

ನಂದಿ ಹಿಲ್ಸ್‌ಗೆ ಬೈಕ್‌ ರೈಡಿಂಗ್ ಗೆ ಹೋಗುವುದು ಹೇಗೆ ?


ಸ್ನೇಹಿತರ ಜೊತೆ ಸೇರಿ ಬೆಳ್ ಬೆಳಗ್ಗೆ ಬೈಕಿನಿಂದ ನಂದಿ ಹಿಲ್ಸ್‌ ಹೋದಿರೆಂದರೆ ನಮ್ಮ ಖುಷಿಗೆ ಪಾರವೇ ಇರುವುದಿಲ್ಲ . ಒಂದು ದಿನ ರಜಾ ಸೀಕ್ರೆ ಸಾಕು ನಂದಿ ಬೆಟ್ಟಕೆ ಬೆಂಗಳೂರಿನಿಂದ ಆರಾಮವಾಗಿ ಹೋಗಿ ಬರಬಹುದು. ಕರ್ನಾಟಕದ ಬೇರೆ ಬೇರೆ ಕಡೆಯಿಂದ ಬರುವವರಿಗೆ ಈ ಸಮಯ ಹೆಚ್ಚೇ ಬೇಕಾಗಬಹುದು. ಜಾಸ್ತಿ ದಿನ ರಜ ತೆಗೆದುಕೊಂಡು ಬರಬೇಕಾಗಬಹುದು. ಹಬ್ಬದ ದಿನ ರಜೆ ದಿನಕ್ಕೆ ಬೆಂಗಳೂರಿಗರಿಗೆ ಮತ್ತು ನಂದಿ ಹಿಲ್ಸ್ ಸುತ್ತಮುತ್ತಿನ ಜನರು ಡಬಲ್ ಮಜಾ ಪಡೆಯಬಹುದು. ಹಬ್ಬದ ದಿನ ನಿಮ್ಮ ಮನೆಗೆ ರಿಲೇಟಿವ್ಸ್ , ಸಂಬಂಧಿಕರು ಬಂದ್ರೆ, ಒಮ್ಮೆ ಅವರಿಗೂ ನಂದಿ ಬೆಟ್ಟಕೆ ಕರೆದುಕೊಂಡು ಹೋಗಬಹುದು. ಮುಂಜಾನೆಯೇ ಬೈಕ್ನಲ್ಲಿ ನಂದಿ ಹಿಲ್ಸ್ ಗೆ ಹೊರಟರೆ ಅದರ ಮಜಾ ನೆ ಬೇರೆ. ಪ್ರಕೃತಿಯ ಸೌಂದರ್ಯವನ್ನು ಸವಿತಾ ಅಲ್ಲಲ್ಲಿ ಫೋಟೋ ತೊಗೋತ ಹೋದರೆ ಸ್ವರ್ಗಕ್ಕೆ ಮೂರೇ ಗೇಣು. ನಂದಿ ಹಿಲ್ಸ್ ಕರ್ನಾಟಕ ರಾಜ್ಯದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದ್ದು ಸಮುದ್ರ ತಿರದಿಂದ ಇದರ ಎತ್ತರ 1,478 ಮೀಟರ್ ಇದೆ, ಮತ್ತು ಬೆಂಗಳೂರಿನಿಂದ ಹತ್ತಿರವಾದ ಸ್ಥಳ ಅಂದ್ರೆ ಅದು ನಂದಿ ಬೆಟ್ಟ ಅದಕ್ಕೆಯೇ ಬೆಂಗಳೂರಿಗರಿಗೆ ಅತ್ಯಂತ ಜನಪ್ರಿಯ ಸ್ಥಳವಾಗಿದೆ. ನಂದಿ ಬೆಟ್ಟಗಳಲ್ಲಿ ಮಾಡುವ ಕಾಮನ್ ಕೆಲಸವೆಂದರೆ ಗುಡ್ಡಗಾಡು ಪ್ರದೇಶದ ಉದ್ದಕ್ಕೂ ಸುದೀರ್ಘ ಅಲ್ಲಲ್ಲಿ ನಿಂತುಕೊಂಡು ವಿರಾಮವನ್ನು ತೆಗೆದುಕೊಳ್ಳುವುದು, ಮತ್ತು ಬೆಳಗಿನ ಸಮಯದಲ್ಲಿ ನೀವು ಪ್ರಕೃತಿಯ ಅದ್ಭುತವಾದ ಸೂರ್ಯೋದಯ ಕಾಣಬಹುದು. ಇದು ಬೆಟ್ಟಗಳಲ್ಲಿ ನಡೆಯುವ ಒಂದು ವಿಭಿನ್ನ ಅನುಭವವನ್ನು ನೀಡುತ್ತದೆ. ನಂದಿ ಬೆಟ್ಟದಿಂದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿರುತ್ತದೆ.

ಅಮೃತ ಸರೋವರ (Amrita Sarovar Nandi Hill)

ಅಮೃತ ಸರೋವರ – ಇದು ಸುಂದರವಾದ ನೀರಿನ ಕೊಳವಾಗಿದೆ, ಹಗೆಯೇ ಇದು ದೀರ್ಘಕಾಲಿಕ ಬುಗ್ಗೆಗಳಿಂದ ರೂಪುಗೊಳ್ಳುತ್ತದೆ. ಈ ಕರಣಕಾಗಿಯೇ, ಈ ಸರೋವರವನ್ನು ‘ಮಕರಂದ ಸರೋವರ’ ಅಥವಾ ‘ಆಂಬ್ರೋಸಿಯಾ ಸರೋವರ’ ಎಂದೂ ಕರೆಯಲಾಗುತ್ತದೆ. ನಂದಿ ಬೆಟ್ಟಗಳ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿರುವ ಈ ಸರೋವರ ಈ ಭಾಗದ ನೀರು ಪೂರೈಕೆ ಮಾಡುವ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಈ ಕೊಳವು ವರ್ಷವಿಡೀ ನೀರಿನಿಂದ ತುಂಬಿರುತ್ತದೆ ಮತ್ತು ರಾತ್ರಿಯ ಸಮಯದಲ್ಲಿ ಹೊಳೆಯುತ್ತಾ ಇರುತ್ತದೆ. ಮತ್ತು ಪ್ರವಾಸಿಗರ ಗಮನ ಸೆಳೆಯುತ್ತದೆ. ಈ ಸುಂದರ ಸ್ಥಳ ಬೆಂಗಳೂರಿನಿಂದ 68 ಕಿ.ಮೀ ದೂರದಲ್ಲಿದೆ.

ಟಿಪ್ಪು ಡ್ರಾಪ್ (Tippu Drop Nandi Hill)

ಟಿಪ್ಪು ಡ್ರಾಪ್ – ಇದು ನಂದಿ ಹಿಲ್ಸ್ ನಾ ಅತ್ಯಂತ ಹಳೆಯ ಭೇಟಿ ನೀಡುವ ಸ್ಥಳಗಳ ಪೈಕಿ ಒಂದಾಗಿದೆ. ಇದು ನೆಲದಿಂದ 600 ಮೀಟರ್ ಎತ್ತರವಾದ ಬಂಡೆಯ ಮೇಲೆ ಬೆಟ್ಟದ ಕೊನೆಯ ತುದಿಯಲ್ಲಿದೆ. ಈ ಬೆಟ್ಟದ ಕೊನೆಯ ತುದಿಯಿಂದ ಎಲ್ಲಾ ಬೆಟ್ಟ ಶ್ರೇಣಿಗಳ ನಿಸರ್ಗದ ಸುಂದರ ನೋಟವನ್ನು ಪಡೆಯಬಹುದು. ಯೋಗಾನಂದೀಶ್ವರ ದೇವಸ್ಥಾನ ಸಹ ಬೆಟ್ಟದ ತುದಿಯಲ್ಲಿರುವ ಒಂದು ದೇವಾಲಯವಾಗಿದೆ, ಈ ದೇವಾಲಯವನ್ನು ಚೋಳ ರಾಜರು ನಿರ್ಮಿಸಿದ್ದಾರೆ ಎನ್ನಲಾಗುತ್ತೆ. ಈ ಸ್ಥಳ ಸಹ ಒಂದು ಸುಂದರ ಸೌಂದರ್ಯವಾದ ಪ್ರಕೃತಿ ಪ್ರಿಯರು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಇದು ನಗರದ ಜಂಜಾಟದಿಂದ, ಒತ್ತಡದ ಜೀವನದಿಂದ, ದೂರ ಶಾಂತಿ ಮತ್ತು ತೃಪ್ತಿಯ ಸಮಾಧಾನವನ್ನು ನೀಡುತ್ತದೆ. ಟಿಪ್ಪು ಸುಲ್ತಾನರ ಕಾಲದಲ್ಲಿ ತಪ್ಪಿತಸ್ಥರನ್ನು ಈ ಎತ್ತರವಾದ ಸ್ಥಳದಿಂದ ಕೆಳಕ್ಕೆ ತಳ್ಳಲಾಗುತ್ತಿದ್ದರು ಎನ್ನುವ ಮಾತಿದೆ. ಈ ಅರಮನೆಯ ಕಾಮಗಾರಿ ಹೈದರ್ ಅಲಿ ಪ್ರಾರಂಭಿಸಿದರು ಮತ್ತು ಮುಂದೆ ಟಿಪ್ಪು ಸುಲ್ತಾನ್ ಅವರು ಪೂರ್ಣಗೊಳಿಸಿದರು, ನಂತರದವರು ಇದನ್ನು ಟಿಪ್ಪು ಅವರ ಬೇಸಿಗೆ ರೆಸಾರ್ಟ್ ಆಗಿ ಬಳಸುತ್ತಿದ್ದರು. ಈ ಅರಮನೆಯ ಹೆಸರನ್ನು ತಾಷ್ಕ್-ಎ-ಜನ್ನತ್ ಎಂದು ಮಾಡಲಾಯಿತು. ಈ ಅರಮನೆಯ ನಿರ್ಮಾಣವು ಮುಖ್ಯವಾಗಿ ಮರದಿಂದ ಮಾಡಿದ್ದು, ಇದರಲ್ಲಿ ಸುಂದರವಾಗಿ ಚಿತ್ರ ರೇಖಾನ ಮಾಡಿರುವ ಗೋಡೆಗಳಿವೆ ಮತ್ತು ಛಾವಣಿಗಳ ಜೊತೆಗೆ ಸುಂದರವಾದ ಕೆತ್ತಿದ ಕಮಾನುಗಳು ಇವೆ.

ಭೋಗ ನಂದೀಶ್ವರ ದೇವಸ್ಥಾನ (Bhoga Nandeeshwara Temple Nandi Hill)

ಭೋಗ ನಂದೀಶ್ವರ ದೇವಸ್ಥಾನ – ಧಾರ್ಮಿಕವಾಗಿ ಒಲವು ಹೊಂದಿರುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚು. ಐತಿಹಾಸಿಕ ಪ್ರಾಚೀನ ಮತ್ತು ಭವ್ಯವಾದ ಭೋಗ ನಂದೀಶ್ವರ ಈ ದೇವಸ್ಥಾನ ಶಿವನಿಗೆ ಅರ್ಪಿತವಾದ ಇದು ಒಂದು ದೊಡ್ಡ ದೇವಾಲಯವಾಗಿದೆ. ಈ ದೇವಾಲಯವನ್ನು ಧಾರ್ಮಿಕ ಸ್ಥಳಗಳನ್ನು ಇಷ್ಟಪಡುವವರು ಮೆಚ್ಚುತ್ತಾರೆ . ಈ ದೇವಾಲಯ ನಂದಿ ಬೆಟ್ಟಗಳಿಂದ 15 ಕಿಲೋಮೀಟರ್ ದೂರದಲ್ಲಿದೆ. ಮುಖ್ಯ ದೇವಾಲಯದ ಒಳಗೆ, ಮದುವೆ ಶುಭಕಾರ್ಯಗಳು ಇನ್ನೂ ನಡೆಯುತ್ತವೆ.

ಹೌದು ಈ ಎಲ್ಲ ಪ್ರವಾಸಿ ತಾಣಗಳಬಗ್ಗೆ ನೀವು ಮಾಹಿತಿ ಪಡೆದ್ರಿ ಆದ್ರೆ ಇಲ್ಲಿ ತಲುಪುದು ಹೇಗೆ ?

ಈ ಸುಂದರವಾದ ನಂದಿ ಬೆಟ್ಟ ಬೆಂಗಳೂರು ನಗರದಿಂದ 60 ಕಿ.ಮೀ ಅಂತರದಲ್ಲಿದೆ, ಅಲ್ಲಿಂದ ಬಸ್ಸುಗಳು , ಮತ್ತು ಇತರೆ ಪ್ರವಾಸಿ ವಾಹನಗಳು ಆಗಾಗ್ಗೆ ಚಲಿಸುತ್ತವೆ. ಕ್ಯಾಬ್ ಬುಕ್ ಮಾಡಿಕೊಂಡು ಆರಾಮಾಗಿ ನಂದಿ ಬೆಟ್ಟವನ್ನು ತಲುಪಬಹುದು. ಇತರೆ ವಾಹನಗಳು , ನಿಮ್ಮ ಸ್ವಂತ ಕಾರಿಂದವು ನಂದಿ ಬೆಟ್ಟಕ್ಕೆ ಮತ್ತು ಅಲ್ಲಿಯ ಸುಂದರ ತಾಣಗಳಿಗೆ ಭೇಟಿ ನೀಡಬಹುದು. ಆದ್ರೆ ಬೆಂಗಳೂರು ನಗರದಿಂದ ನಂದಿ ಬೆಟ್ಟಕೆ ಹೋಗುವವರು ಬೈಕ್ ಇಂದ ಹೋದ್ರೆ ಅದರ ಸವಿರುಚಿಯೇ ಬೇರೆ ಎನ್ನುತ್ತಾರೆ ಬೈಕ್ ರೈಡರ್ಸ್ಗಳು. ಸಧ್ಯಕಂತು ಲಾಕ್ಡೌನ್ (Corona lockdown) ಇದೆ ಲಾಕ್ ಡೌನ್ ಮುಗಿದ ಮೇಲೆ ಖಂಡಿತ ನಂದಿ ಬೆಟ್ಟಕ್ಕೆ ಭೇಟಿ ನೀಡಿ. ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ. ಮಾಸ್ಕ್ ಧರಿಸಿ ಅಂತರ ಕಾಪಾಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments