Home ದೇಶ ಇಂದೋರ್ ಇಂದ ಬಂತು ಶುಭ ಸಮಾಚಾರ, 16 ತಿಂಗಳ ನಂತರ ಮೊದಲ ಬಾರಿಗೆ ಪತ್ತೆಯಾಯಿತು ಕೇವಲ...

ಇಂದೋರ್ ಇಂದ ಬಂತು ಶುಭ ಸಮಾಚಾರ, 16 ತಿಂಗಳ ನಂತರ ಮೊದಲ ಬಾರಿಗೆ ಪತ್ತೆಯಾಯಿತು ಕೇವಲ ಒಂದು ಕೊರೊನಾ ಕೇಸ್.

0
230

 ಇಂದೋರ್ ಇಂದ ಬಂತು ಶುಭ ಸಮಾಚಾರ, 16 ತಿಂಗಳ ನಂತರ ಮೊದಲ ಬಾರಿಗೆ ಪತ್ತೆಯಾಯಿತು ಕೇವಲ ಒಂದು ಕೊರೊನಾ ಕೇಸ್.


ದೇಶದಲ್ಲಿ ಕೇಳೆದ 4-5 ದಿನಗಳಿಂದ ಮತ್ತೊಮ್ಮೆ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಾ ಇದೆ. ಜುಲೈ 12 ರಂದು 31 ಸಾವಿರ ಹೊಸ ಕೊರೊನಾ ಕೇಸ್ ಗಳು ಪತ್ತೆಯಾಗಿದ್ದವು. ಆದ್ರೆ ಜುಲೈ 13 ರಂದು ಈ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂತು 38 ಸಾವಿರ ಕೊರೊನಾ ಕೇಸೆಸ್ ಭಾರತದಲ್ಲಿ ಪತ್ತೆಯಾಯಿತು. ಬಳಿಕ ಜುಲೈ 14 ರಂದು 41 ಸಾವಿರ ಕೊರೊನಾ ಕೇಸ್ ಪತ್ತೆಯಾಗಿದ್ದವು ಅದಕ್ಕಾರಣ ಕೊರೊನಾ 3ನೆ ಅಲೆಯ ಭೀತಿ ಎದುರಾಗಿದೆ.  ಒಡಿಶಾ ಮತ್ತು ಮಣಿಪುರ ನಲ್ಲಿ ಲಾಕ್ ಡೌನ್ ಅವಧಿ ಹೆಚ್ಚಿಸಲಾಗಿದೆ ಮತ್ತು ಕರ್ನಾಟಕದಲ್ಲಿ ಡಿಸೆಂಬರ್ ನಲ್ಲಿ ನಡೆಯುವ ಜಿಲ್ಲಾ ಪಂಚಾಯತ್ ಚುನಾವಣೆಯನ್ನ ಮುಂದೂಡಲಾಗಿದೆ.  

ಕೇಂದ್ರ ಸರ್ಕಾರ ದೇಶದ ಎಲ್ಲ ರಾಜ್ಯಗಳಲ್ಲಿ ವ್ಯಾಕ್ಸಿನ್ ನ 41.10 ಕೋಟಿ ಕಿಂತಲು ಅಧಿಕ ಡೋಜ್ ಗಳು ಕೊಟ್ಟಿದೆ. 

ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್ -19  ರ ಲಸಿಕೆಗಳು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ್ದು, ರಾಜ್ಯಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 2.51 ಕೋಟಿಗಿಂತಲು ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ವ್ಯಾಕ್ಸಿನ್ ಲಭ್ಯವಿದೆ.

ಇಂದೋರ್ ನಲ್ಲಿ 16 ತಿಂಗಳ ಬಳಿಕ , ಕಳೆದ 24 ಗಂಟೆಗಳಲ್ಲಿ ಕೇವಲ ಒಂದು ಕೊರೊನಾ ಕೇಸ್ ಪತ್ತೆ .

ಮಧ್ಯಪ್ರದೇಶದಲ್ಲಿ ಕೊರೊನಾ ದಿಂದ ಅತಿ ಹೆಚ್ಚು ಪ್ರಭಾವಿತಗೊಂಡಿರುವ ಇಂದೋರ್ ಜಿಲ್ಲೆಯಲ್ಲಿ ಕೊರೊನಾದ 3ನೆ ಅಲೆಯಿಂದ ಬಚಾವಾಗಲು ಅನೇಕ ಸಿದ್ಧತೆ ನಡೆಯುತ್ತಿದೆ ,ಈ ನಡುವೆಯೇ ಆರೋಗ್ಯ ವಿಭಾಗದಿಂದ ಒಂದು ನಿಟ್ಟುಸಿರು ಬಿಡುವ ಸುದ್ದಿಯೊಂದು ಬಂದಿದೆ . ಅದೇನೆಂದರೆ ಇಂದೋರ್ ನಲ್ಲಿ 16 ತಿಂಗಳ ಬಳಿಕ ಕಳೆದ 24 ಗಂಟೆಗಳಲ್ಲಿ ಕೇವಲ ಒಂದು ಕೊರೊನಾ ಕೇಸ್ ಪತ್ತೆಯಾಗಿದೆ. 

ಇದು ದೈನಿಕ ಕೊರೊನಾ ಲಿಸ್ಟ್ ನಲ್ಲಿ 16 ತಿಂಗಳಲ್ಲಿ ಮೊದಲ ಬಾರಿಗೆ ಅತಿ ಕಡಿಮೆ ಕೇಸ್ ಪತ್ತೆಯಾಗಿದೆ 

ಗುರುಗ್ರಾಮ್ ನಲ್ಲಿ ಇಂದು 9 ನೆ ತರಗತಿಯಿಂದ 12 ನೆ ತರಗತಿಯ ವರೆಗೆ ಎಲ್ಲ ಸ್ಕೂಲ್ ಗಳು ತೆರೆಯಲಾಗಿದೆ. 

ಹೆಚ್ಚಾಗುತ್ತಿರುವ ಕೊರೊನಾ ಕೇಸ್ ನಡುವೆ ಇವತ್ತು ಕೊಂಚ ನಿಟ್ಟುಸಿರು ಬಿಡುವ ಸುದ್ದಿಯೊಂದು ಹೊರ ಬಂದಿದೆ , ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 38,949 ಹೊಸ ಕೊರೊನಾ ಕೇಸ್ ಗಳು ಪತ್ತೆಯಾಗಿದೆ,ಮತ್ತು 542 ಜನ ಸವನಪ್ಪಿದ್ದಾರೆ. ಈ  ಸಂಖ್ಯೆ ಕಳೆದ ಕೆಲವು ದಿನಗಳಿಂದ ಹೆಚ್ಚಾಗುತ್ತಿರುವ ಕೊರೊನಾ ಕೇಸ್ ಕಿಂತಲು ಕಮ್ಮಿ ಇದೆ.  

ಪಾಂಡೆಚೇರಿಯಲ್ಲಿ 20 ಮಕ್ಕಳಿಗೆ ಕೊರೊನಾ ಧೃಢ  


ಪಂಡಿಚೇರಿಯಲ್ಲಿ 20 ಮಕ್ಕಳಿಗೆ ಕೊರೊನಾ ಧೃಢಪಟ್ಟಿದೆ ಇದರಿಂದ ಆರೋಗ್ಯ ಇಲಾಖೆಯಲ್ಲಿ ಮತ್ತು ಜನರಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿವೆ . ಈ ಎಲ್ಲ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಎಲ್ಲ ಮಕ್ಕಳಿಗೆ ಕಾದಿರಕಾಮ್ ಮ್ ನಲ್ಲಿ ಇರುವ ಇಂದಿರಾ ಗಾಂಧಿ ಸರ್ಕಾರಲಿ ಮೆಡಿಕಲ್ ಕಾಲೇಜ್ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಡೈರೆಕ್ಟರ್ ಎಸ್ ಮೋಹನ್ ಕುಮಾರ್ ಅವರು ಹೇಳಿದ್ದಾರೆ. ಮತ್ತು ಇದು ಕೊರೊನಾ ದ 3ನೆ ಅಲೆ ಹೌದು ಇಲ್ಲ ಎಂದು ಡಾಟಾ ಸಂಗ್ರಹಿಸುತ್ತಿದ್ದಾರೆ.


ಮಿಜೋರಾಂ ನಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾದ 456 ಹೊಸ ಕೇಸ್ ಗಳು ಪತ್ತೆ.


ಮಿಜೋರಾಂ ನಲ್ಲಿ ಕಳೆದ 24 ಗಂಟೆಗಳಲ್ಲಿ 456 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ. ಮತ್ತು ಒಬ್ಬರ ಸಾವು ಸಂಭವಿಸಿದೆ.  ಇಲ್ಲಿಯ ಕೊರೊನಾ ಪೀಡಿತರ ಸಂಖ್ಯೆ 26,207 ಕ್ಕೆ ಏರಿದೆ , ಸಾಧ್ಯ ಮಿಜೋರಾಂ ನಲ್ಲಿ 5,612 ಸಕ್ರಿಯ ಪ್ರಕರಣಗಳು ಇದ್ದು , 117 ಸೋಂಕಿತರ ಸಾವು ಸಂಭವಿಸಿದೆ, ಒಟ್ಟು 20,478 ಕಿಂತಲು ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ.

ಮಣಿಪುರದಲ್ಲಿ ಡೆಲ್ಟಾ ವೇರಿಯೆಂಟ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ , ಮಣಿಪುರ್ ರಾಜ್ಯ ಸರ್ಕಾರ 10 ದಿನಗಳ ಕಾಲ ರಾಜ್ಯದಲ್ಲಿ ಕರ್ಫ್ಯೂ ಜಾರಿಗೆ ತಂದಿದೆ. ಈ ಕರ್ಫ್ಯೂ ಜುಲೈ 18 ರ ವರೆಗೆ ಜಾರಿಯಲ್ಲಿ ಇರಲಿದೆ. 

ಕರ್ನಾಟಕದಲ್ಲಿ ಕುಗ್ಗುತ್ತಿದೆ ಕೊರೊನ 


ಇತ್ತ ಕರ್ನಾಟಕದಲ್ಲೂ ಕೊರೊನ ಕಗ್ಗುತಿದ್ದು ಇವತ್ತು ರಾಜ್ಯದಲ್ಲಿ 1806 ಕೊರೊನಾ ಪ್ರಕರಣಗಳು ಧೃಢ ಪತ್ತಿದೆ. ಮತ್ತು 42 ಮಂದಿ ಸವನಅಪ್ಪಿದ್ದಾರೆ . ಈ ಮುಖಾಂತರ ರಾಜ್ಯದಲ್ಲಿ ಒಟ್ಟು ಸವನಅಪ್ಪಿದವರ ಸಂಖೆ 36,079 ಗಿಂತಲೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ 
ಈ ಮೂಲಕ ರಾಜ್ಯದ ಕೊರೊನ ಸೋಂಕಿತರ ಸಂಖೆ 28,80,370  ಕ್ಕೆ ಏರಿಕೆ ಆಗಿದೆ .

NO COMMENTS

LEAVE A REPLY

Please enter your comment!
Please enter your name here