Home ಕ್ರೀಡೆ ಮಹೇಂದ್ರ ಸಿಂಗ್ ಧೋನಿ ಜೀವನಚರಿತ್ರೆ ಮತ್ತು ಕ್ರೀಡಾ ವೃತ್ತಿ ಜೀವನ , Mahendra Singh Dhoni...

ಮಹೇಂದ್ರ ಸಿಂಗ್ ಧೋನಿ ಜೀವನಚರಿತ್ರೆ ಮತ್ತು ಕ್ರೀಡಾ ವೃತ್ತಿ ಜೀವನ , Mahendra Singh Dhoni Biography in kannada

0
552
Mahendra Singh Dhoni Biography in kannada
Mahendra Singh Dhoni Biography in kannada

Mahendra Singh Dhoni:  ಮಹೇಂದ್ರ ಸಿಂಗ್ ಧೋನಿ ಜೀವನಚರಿತ್ರೆ ಮತ್ತು ಕ್ರೀಡಾ ವೃತ್ತಿ ಜೀವನ ( Mahendra Singh Dhoni Biography, Birthday, Career, Personal Life and ms dhoni Records)

ಭಾರತದಲ್ಲಿ ಅನೇಕ ಆಟಗಳು ಅಡಲಾಗತ್ತೆ ಅದರಲ್ಲಿ ಅತಿ ಹೆಚ್ಚು ಇಷ್ಟಪಡುವ ಆಟವೆಂದರೆ ಅದು ಕ್ರಿಕೆಟ್. ಭಾರತದ ಅನೇಕ ಮಹಾನ್ ಆಟಗಾರರು ಭಾರತೀಯ ಕ್ರಿಕೆಟ್ ಟೀಮನ್ನು ತುಂಬಾ ಎತ್ತರಕ್ಕೆ ಬೆಳಿಸಿದ್ದಾರೆ.  

ಮಹೇಂದ್ರ ಸಿಂಗ್ ಧೋನಿ ಸಹ ಅಂತಹ ಮಹಾನ್ ಸಾಧಕರ ಪಟ್ಟಿಯಲ್ಲಿ ಬರುತ್ತಾರೆ. ಅವರ ಸಂಪೂರ್ಣ ಪರಿಚಯ ನಾವು ಮಾಡಿಸುತ್ತೇವೆ ಬನ್ನಿ .

 

 

ಮಹೇಂದ್ರ ಸಿಂಗ್ ಧೋನಿ ಅವರ ಜನನ ಮತ್ತು ಆರಂಭಿಕ ಜೀವನ (Mahendra Singh Dhoni Birth and Early Life )

Mahendra Singh Dhoni life Story
Mahendra Singh Dhoni life Story

Mahendra Singh Date of Birth ಮಹೇಂದ್ರ ಸಿಂಗ್ ಧೋನಿ ಅವರು ಜುಲೈ 7 ರಂದು  ಜಾರ್ಖಂಡ್ ನಲ್ಲಿ ಜನಿಸಿದ್ದರು (ಆಗಿನ ಬಿಹಾರ ರಾಜ್ಯ).

ಮಹೇಂದ್ರ ಸಿಂಗ್ ಧಿನಿ ಅವರ ತಂದೆ ಹೆಸರು ಪಾನ್ ಸಿಂಗ್ ಮತ್ತು ತಾಯಿಯ ಹೆಸರು ದೇವಕಿ ಧೋನಿ ಇದ್ದು, ಎಂ ಎಸ್ ಧೋನಿ ಅವರಿಗೆ ಒಬ್ಬ ಸಹೋದರಿ ಮತ್ತು ಒಬ್ಬ ಸಹೋದರ ಇದ್ದಾರೆ . ಸಹೋದರನ ಹೆಸರು ನರೇಂದ್ರ ಧೋನಿ ಇದ್ದು ಮತ್ತು ಸಹೋದರಿಯ ಹೆಸರು ಜಯಂತಿ ಧೋನಿ ಇದೆ .ಎಂ ಎಸ್ ಧೋನಿ ಅವರ ಮಧ್ಯಮ ವರ್ಗದ ಕುಟುಂಬ. ಎಂ ಎಸ್  ತನ್ನ ಆರಂಭಿಕ ಶಿಕ್ಷಣ ರಾಂಚಿಯ ಜವಾಹರ್ ವಿದ್ಯಾಮಂದಿರ ಸ್ಕೂಲ್ ಇಂದ ಪೂರ್ಣಗೊಳಿಸಿದ್ದರು. ಮಹೇಂದ್ರ ಸಿಂಗ್ ಧೋನಿ ಅವರ ತಂದೆ ಒಂದು ಸ್ಟಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 

 

 

ಎಂ ಎಸ್ ಧೋನಿ ಅವರಿಗೆ ಬಾಲ್ಯದಿಂದಲೇ ಕ್ರಿಕೆಟ್ ಬದಲು ಫುಟ್ಬಾಲ್ ಇಷ್ಟವಿತ್ತು. ಆದರೆ ಇವರ ಕೋಚ್ ಠಾಕೂರ್ ದಿಗ್ವಿಜಯ್ ಸಿಂಗ್ ಅವರು ಕ್ರಿಕೆಯ್ ಆಡಲು ಪ್ರೇರಿಸಿದ್ದರು . ಧೋನಿ ಫುಟ್ಬಾಲ್ ಟೀಮ್ ನಲ್ಲಿ ಗೋಲ್ ಕೀಪರ್ ಆಗಿ ಇದ್ದರು. ಇದನ್ನ ಕಂಡ ಅವರ ಕೋಚ್ ಕ್ರಿಕೆಟ್ ಟೀಮ್ ನಲ್ಲಿ ವಿಕೆಟ್ ಕೀಪರ್ ಆಗಿ ಅಡುವಂತೆ ಹೇಳಿದ್ದರು. ಮತ್ತು ಎಂ ಎಸ್ ಅವರ ತಂದೆ ತಾಯಿಯ ಒಪ್ಪಿಗೆ ಮೆರಿಗೆ ಕ್ರಿಕೆಟ್ ಆಡಲು ಶುರು ಮಾಡಿದ್ದರು.  2001 – 2003 ರಲ್ಲಿ ಮಹೇಂದ್ರ ಸಿಂಗ್ ಧೋನಿ ಕಮಾಂಡೋ ಕ್ರಿಕೆಟ್ ಕ್ಲಬ್ ವತಿಂದ ಆಡುತ್ತಿದ್ದರು , ಆಗ ಅವರು ವಿಕೆಟ್ ಕೀಪರ್ ಆಗಿ ಆಟವಾಡುತ್ತಿದ್ದರು. ಆಗ ಅವರ ವಿಕೆಟ್ ಕೀಪಿಂಗ್ ನೋಡಿ ಎಲ್ಲರು ಮೆಚ್ಚುಗೆ ಪಟ್ಟಿದ್ದರು. 2003 ರಲ್ಲಿ ಮಹೇಂದ್ರ ಸಿಂಗ್ ಧೋನಿ ಖಡಕಪುರ್ ರೇಲ್ವೆ ಸ್ಟೇಷನ್ ನಲ್ಲಿ ಟ್ರೆನ್ ಟಿಕೆಟ್ ಚೆಕರ್ ಆಗಿ ಕೆಲಸ ಮಾಡಿದ್ದಾರೆ.

 

ಮಹೇಂದ್ರ ಸಿಂಗ್ ಧೋನಿ ವೃತ್ತಿಪರ ಜೀವನ. (Mahendra Singh Dhoni Professional Career)

Mahendra Singh Dhoni Biography in kannada
Mahendra Singh Dhoni Biography in kannada

ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನದ ಆರಂಭ 1998 ರಲ್ಲಿ ಬಿಹಾರ್ ಅಂಡರ್ -19 ಟಿಮ್ ಇಂದ ಶುರು ಮಾಡಿದರು.1999-2000 ರಲ್ಲಿ ಎಂ ಎಸ್ ಬಿಹಾರ್ ರಣಜಿ ಟೈಮ್ ಇಂದ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟರು.

ದೇವಧರ್ ಟ್ರಾಫಿ ದಿಲೀಪ್ ಟ್ರಾಫಿ ಮತ್ತು ಇಂಡಿಯಾ ‘ಎ’ ನಲ್ಲಿ ಕೀನ್ಯಾ ಟೂರ್ ದಲ್ಲಿ ಮಾಡಿರುವ ಪ್ರದರ್ಶನದ ಫಲವೇ ರಾಷ್ಟ್ರೀಯ ಟೈಮ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಗೆ ಆಯ್ಕೆ ಮಾಡಲಾಯಿತು. 2004 ರಲ್ಲಿ ಟೀಮ್ ನಲ್ಲಿ ಆಟಗಾರನ್ನು ಆಯ್ಕೆ ಮಾಡಲು ಸಭೆ ನಡೆಸಿದ್ದಾಗ ಸೌರಭ್ ಗಂಗೂಲಿ ಅವರಿಗೆ ವಿಕೆಟ್ ಕೀಪರ್ ಯಾರಿಗೆ ಮಾಡೋಣ ಅಂತ ಕೇಳಿದಾಗ  , ಗಂಗೂಲಿ ಕಡೆಯಿಂದ ಬಂದಿರುವ ಉತ್ತರ ಒಂದೇ ಆಗಿತ್ತು ಅದು ಮಹೇಂದ್ರ ಸಿಂಗ್ ಧೋನಿ ಗೆ ವಿಕೆಟ್ ಕೀಪರ್ ಆಗಿ ಮಾಡೋಣ ಅಂತ ಹೇಳಿದ್ದರು. 2004 ರಲ್ಲಿ ಬಾಂಗ್ಲಾದೇಶದ ವಿರುದ್ಧದ ಮ್ಯಾಚ್ ಚಿಟ್ಟಿಗಾಮ್ ನಲ್ಲಿ ನಡೆಯಿತು ಅಲ್ಲಿಂದ ಎಂ ಎಸ್ ಅಂತರರಾಷ್ಟ್ರೀಯ ಕಿರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ಮಹೇಂದ್ರ ಸಿಂಗ್ ಧೋನಿ ತುಂಬಾ ಸುಧೀರಘ ಪಯಣ ಸಾಗಿಸಿದ್ದಾರೆ.  ತನ್ನ ಕ್ರಿಕೆಟ್ ಕರಿಯರ್ ನಲ್ಲಿ ಎಂ ಎಸ್ ಧೋನಿ ಅವರು ಒಟ್ಟು 90 ಟೆಸ್ಟ್ ಮ್ಯಾಚ್ ಗಳಲ್ಲಿ 4876 ರನ್ಸ್ ಮಾಡಿದ್ದಾರೆ. ಟೆಸ್ಟ್ ಮ್ಯಾಚ್ ನಲ್ಲಿ ಅವರು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ನಲ್ಲಿ ಎಂ ಎಸ್ 224 ರನ್ಸ್ ಮಾಡಿದ್ರು. ಟೆಸ್ಟ್ ಮ್ಯಾಚ್ ನಲ್ಲಿ ಅವರು 256 ಕ್ಯಾಚ್ ಗಳು ಮತ್ತು 38 ಸ್ಟಮ್ಪ್ ಔಟ್ ಮಾಡಿದ್ದಾರೆ. 

ಒನ್ ಡೆ ಇಂಟರ್ನ್ಯಾಷನಲ್ ನಲ್ಲಿ 347 ಮ್ಯಾಚ್ ಗಳಲ್ಲಿ 10773 ರನ್ಸ್ ಮಾಡಿದ್ದಾರೆ. ಮತ್ತು ತನ್ನ ವೃತ್ತಿಯ ಸರ್ವೋತ್ತಮ ಆಟ ಮಾತ್ರ 2005 ರಲ್ಲಿ ಶ್ರೀಲಂಕಾದ ವಿರುಧ್ಧದ ಮ್ಯಾಚ್ ನಲ್ಲಿ ಮಾಡಿದ್ದಾರೆ. ಈ ಮ್ಯಾಚ್ ಜಯಪುರ್ ನ ಸವಾಯಿ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಒನ್ ಡೆ ಮ್ಯಾಚ್ ನಲ್ಲಿ ಧೋನಿ 183 ರನ್ಸ್ ಗಳು ಮಾಡಿದ್ದಾರೆ. ಡಒನ್ ಡೆ ಮ್ಯಾಚ್ ನಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತ ಒಟ್ಟು 1318 ಕ್ಯಾಚ್ ಔಟ್ ಮತ್ತು  120 ಸ್ಟಮ್ಪ್ ಔಟ್ ಮಾಡಿದ್ದಾರೆ. ಎಂ ಎಸ್ ಧೋನಿ ಹೆಸರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ನಲ್ಲಿ ಶರವೇಗದಲ್ಲಿ ಸ್ಟಮ್ ಔಟ್ ಮಾಡಿರುವ ರೆಕಾರ್ಡ್ ಸಹ ಇದೆ . ಇವರಿಗೂ ಮುಂಚೆ ಮಿಶೆಲ್ ಮಾರ್ಶ್ ಎಂಬ ಕ್ರಿಕೆಟಿಗನ ಸ್ಟಮ್ಪಿಂಗ್ ಸಮಯ 0.76 ಸೆಕೆಂಡ್ ಇತ್ತು. 

ಬ್ಯಾಟಿಂಗ್ ಮತ್ತು ಕೀಪರಿಂಗ್ ಗಾಗಿ ಎಂ ಎಸ್ ಧೋನಿ ಜಗತ್ಪ್ರಸಿದ್ಧ ಆಗಿದ್ದರೆ. ಅವರು ಭಾರತಕ್ಕಾಗಿ ಐ ಸಿ ಸಿ ಟ್ರಾಫಿ ಗೆದ್ದಿದ್ದಾರೆ, 2007 ರ ಟಿ-20 ವರ್ಲ್ಡ್ ಕಪ್ , 2011 ಒನ್ ಡೆ ವರ್ಲ್ಡ್ ಕಪ್ , 2013 ರ ಚಾಂಪಿಯನ್ ಟ್ರಾಫಿಯು ಅವರು ಭಾರತಕ್ಕೆ ತಂದಿದ್ದಾರೆ. 

 

 • ಎಂ ಎಸ್ ಧೋನಿ ಒನ್ ಡೆ ಮ್ಯಾಚ್ ಗಲ್ಲಿ 10 ಸಿಕ್ಸ್ ಬರಿಸಿದ್ದಾರೆ, ಮತ್ತು ಅತಿ ಹೆಚ್ಚು ಒನ್ ಡೆ ನಲ್ಲಿ ಸಿಕ್ಸ್ ಬಾರಿಸುವ ಆಟಗಾರರ ಪಟ್ಟಿಯಲ್ಲಿ ಇವರು 6 ನೆ ಸ್ಥಾನದಲ್ಲಿ ಇದ್ದಾರೆ.
 • ಎಂ ಎಸ್ ಒನ್ ದೇ ಮ್ಯಾಚ್ ನಲ್ಲಿ 183 ರನ್ ಮಾಡಿ ವಿಕೆಟ್ ಕೀಪರ್ ಆದ ಎಡಮ್ ಗಿಲ್ಕ್ರಿಸ್ಟ್ ನ ರೆಕಾರ್ಡ್ ಮುರಿದ್ರು.
 • ಭಾರತೀಯ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ವಿಕೆಟ್ ತೆಗಿಯುವ ವಿಕೆಟ್ ಕೀಪರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
 • ಎಂ ಎಸ್ ಧೋನಿಯ ಕ್ಯಾಪ್ಟನ್ ಶಿಪ್ ನಲ್ಲಿ ಟೀಮ್ ಇಂಡಿಯಾದ ಸರ್ವೋಚ್ಚ ಸ್ಕೊರ್ 726 ರ ವರೆಗೆ ತಲುಪಿತ್ತು. 
 • ಒನ್ ಡೆ ಮ್ಯಾಚ್ ನಲ್ಲಿ 7ನೆ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿಯು ಶತಕ ಬಾರಿಸುವ ಆಟಗಾರ ಪೈಕಿ ಒಬ್ಬರಾಗಿದ್ದಾರೆ. 
 • 4000 ರನ್ಸ್ ಕಿಂತಲು ಅಧಿಕ ರನ್ಸ್ ಗಳು ಮಾಡಿರುವ ಏಕೈಕ ವಿಕೆಟ್ ಕೀಪರ್ ಎಂ ಎಸ್ ಧೋನಿ ಆಗಿದ್ದಾರೆ.
 • ಧೋನಿ ಕ್ಯಾಪ್ಟನ್ ಶಿಪ್ ನಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ಆಟವನ್ನು ಟೀಮ್ ಇಂಡಿಯಾ ಅಡಿದೆ.
 • ಎಂ ಎಸ್ ಧೋನಿಯ ಕ್ಯಾಪ್ಟನ್ ಶಿಪ್ ನಲ್ಲಿ ಒಟ್ಟು 199 ಒನ್ ಡೆ ಮ್ಯಾಚಗಳಲ್ಲಿ  110  ಒನ್ ಡೆ ಮ್ಯಾಚ್ ಗಳು ಟೀಮ್ ಇಂಡಿಯಾ ಗೆದ್ದಿದೆ. ಟಿ-20 ಯಲ್ಲಿ 72 ಮ್ಯಾಚ್ ಪೈಕಿ 41 ಮ್ಯಾಚ್ ಗಳು ಗೆದ್ದರೆ , 60 ಟೆಸ್ಟ್ ಮ್ಯಾಚ್ ಗಳ ಪೈಕಿ 27 ಟೆಸ್ಟ್ ಮ್ಯಾಚ್ ಗಳು ಟೀಮ್ ಇಂಡಿಯಾ ಗೆದ್ದಿದೆ, 
 • ಮಹೇಂದ್ರ ಸಿಂಗ್ ಧೋನಿ ಅವರ ಕ್ಯಾಪ್ಟನ್ ಶಿಪ್ ನಲ್ಲಿ ಅತಿ ಹೆಚ್ಚು ಟೂರ್ನಮೆಂಟ್ನ ಗಳಲ್ಲಿ ಗೆಲವು ಕಂಡಿದೆ ನಮ್ ಟೀಮ್ ಇಂಡಿಯಾ.
 •  ಧೋನಿ 300 ಒನ್ ಡೆ ಮ್ಯಾಚ್ ಅಡಿದ್ದಾರೆ ಈ ಮೂಲಕ ದೇಶದ ಮೊದಲನೇ ಮತ್ತು ವಿಶ್ವದ ನಾಲಕನೆ ವಿಕೆಟ್ ಕೀಪರ್  ಆಗಿದ್ದರೆ. 
 • ಒನ್ ಡೆ ಮ್ಯಾಚ್ ನಲ್ಲಿ 200 ಸಿಕ್ಸ್ ಬಾರಿಸುವ ಮೊದಲನೇ ಭಾರತೀಯ ಆಟಗಾರ ಮತ್ತು ವಿಶ್ವದ 5 ನೆ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. 
 • ಒನ್ ಡೆ ಮ್ಯಾಚ್ ಗಳಲ್ಲಿ 6 ನೆ ನಂಬರ್ ನಲ್ಲಿ ಬ್ಯಾಟಿಂಗ್ ಮಾಡುತ್ತ ಇತಿಹಾಸದಲ್ಲೇ ಅತಿ ಹೆಚ್ಚು ರನ್ಸ್ ಗಳು ಮಾಡಿರುವ ರೆಕಾರ್ಡ್ ಇವರ ಹೆಸರಿನಲ್ಲಿ ಇದೆ.
 • 7 ನೆ ಪೂಜಿಶನ್ ನಲ್ಲಿ ಬ್ಯಾಟಿಂಗ್ ಮಾಡುತ್ತ ಅಥವಾ ಅದಕ್ಕಿಂತ ಕಮ್ಮಿ ನಂಬರ್ ನಲ್ಲಿ ಬ್ಯಾಟಿಂಗ್ ಮಾಡುತ್ತ ಅತಿ ಹೆಚ್ಚು ರನ್ಸ್ ಗಳು ಮಾಡಿರುವ ಆಟಗಾರ ಅದು ಎಂ ಎಸ್ ಧೋನಿ ಮಾತ್ರ. ಧೋನಿ 7 ನೆ ಸ್ಥಾನದಲ್ಲಿ 2 ಶತಕ ಬಾರಿಸಿದ್ದಾರೆ. 

ಮಹೇಂದ್ರ ಸಿಂಗ್ ಧೋನಿ ಅವರ ವೈಯಕ್ತಿಕ ಜೀವನ (MS Dhoni Persnol Life)

MS Dhoni Persnol Life
MS Dhoni Persnol Life

MS Dhoni Persnol Life ಧೋನಿ ಅವರ ವೈಯಕ್ತಿಕ ಜೀವನದಲ್ಲಿ ಅನೇಕ ಬಾಲ್ಯದ ಸ್ನೇಹಿತರು ಈಗಲೂ ಅವರ ಜೊತೆ ಇದ್ದಾರೆ. ಅವರ ನೆಹಿತ ಒಬ್ಬ ಅವರಿಗೆ ಹೆಲಿಕಾಪ್ಟರ್ ಶಾಟ್ ಅನ್ನು ಬಾರಿಸುವುದನ್ನು ಹೇಳಿ ಕೊಟ್ಟಿದ್ದರು . ಈ ಹೆಲಿಕಾಪ್ಟರ್ ಶಾಟ್ ತುಂಬಾ ಫೇಮಸ್ ಆಗಿದೆ.   ಎಂ ಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾಗ ಅವರಿಗೆ ಪ್ರಿಯಾಂಕ ಎಂಬ ಹುಡುಗಿಯ ಮೇಲೆ ಪ್ರೀತಿ ಹುಟ್ಟಿತ್ತು. ಕೇಳುವು ಸಮಯದ ರಿಯೇಷನ್ ಶಿಪ್ ಬಳಿಕ ಪ್ರಿಯಾಂಕಾಳ ಆಕ್ಸಿಡೆಂಟ್ ಆಗೋಯ್ತು ಮತ್ತು ಆ ಆಕ್ಸಿಡೆಂಟ್ ನಲ್ಲಿ ಪ್ರಿಯಾಂಕ ಮೃತ ಪಟ್ಟರು. ದಿ ಆಂಟೋಲ್ಡ್ ಎಂ ಎಸ್ ಧೋನಿ The Untold Ms Dhoni ಚಿತ್ರದಲ್ಲಿ ತೋರಿಸಿರುವ ಪ್ರಕಾರ ಧೋನಿ ಮತ್ತು ಸಾಕ್ಷಿ ಒಂದು ಹೋಟಲ್ ನಲ್ಲಿ ಭೇಟಿಯಾಗಿದ್ದರು. ಆದರೆ ಅದು ನಿಜಾವಲ್, ಅಸಲಿಗೆ ಸಾಕ್ಷಿಯವರ ತಂದೆ ಮತ್ತು ಮಹೇಂದ್ರ ಸಿಂಗ್ ತಂದೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಕ್ಷಿ ಮತ್ತು ಧೋನಿ ಒಂದೇ ಸ್ಕೂಲ್ ನಲ್ಲಿ ಓದಿದ್ದಾರೆ. ಆದ್ರೆ ಎಂ ಎಸ್ ಧೋನಿ ಸ್ಕೂಲ್ ಇಂದ ಹೊರ ಬಂದಾಗ (ಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ ನಂತರ) ಸಾಕ್ಷಿಯವರು ಅಡ್ಮಿಷನ್ ತೆಗೆದುಕೊಂಡಿದ್ದರು . ಆದಕಾರಣ ಸಾಕ್ಷಿ ಮತ್ತು ಧೋನಿ ಒಬ್ಬರಿಗೊಬ್ಬರು ನೋಡಿರಲಿಲ್ಲ. ಕೆಲವು ಸಮಯದ ನಂತರ ಸಾಕ್ಷಿ ಕುಟುಂಬ ರಾಂಚಿ ನಗರವನ್ನು ಬಿಟ್ಟು ದೇಹರಾದುನ್ ಗೆ ಶಿಫ್ಟ್ ಆದ್ರು. ದೇಹರದುನ್ ನಲ್ಲಿ ಸಾಕ್ಷಿ ಯವರ ಅಜ್ಜಿ ಅಜ್ಜಮೊದಲಿಂದಲೇ ವಾಸವಿದ್ದರು.

ನವೆಂಬರ್ – ಡಿಸೆಂಬರ್ 2007 ರಲ್ಲಿ ಧೋನಿಯವರ ಸಿಲೆಕ್ಷನ್ ಇಂಡಿಯಾ vs ಪಾಕಿಸ್ತಾನ ಮ್ಯಾಚ್ ಗೆ ಸಿಲೆಕ್ಟ್ ಆಗಿದ್ದರು ಆಗ ಟೈಮ್ ಇಂಡಿಯಾ ಕೊಲ್ಕತ್ತಾ ದಲ್ಲಿ ಪಾಕಿಸ್ತಾನದ ವಿರುದ್ಧ ಮ್ಯಾಚ್ ಆಡುತ್ತಿದ್ದರು.ಇದೆ ಸಮಯಕ್ಕೆ ಧೋನಿ ಯವರ ಮತ್ತು ಸಾಕ್ಷಿ ಯವರ ಭೇಟಿ ನಡೆದಿತ್ತು. ಆಗ ಟೀಮ್ ಇಂಡಿಯಾ ಒಂದು ಹೋಟೆಲ್ ನಲ್ಲಿ ಉಳಿದುಕೊಂಡಿತ್ತು ಅಲ್ಲಿಯೇ ಸಾಕ್ಷಿ ಮತ್ತು ಮಹೇಂದ್ರ ಸಿಂಗ್ ಧೋನಿ ಭೇಟಿಯಾಗಿದ್ದರು. ಸಾಕ್ಷಿಯವರಿಗೆ ಧೋನಿ ಗೆ ಮಾಡಿಸಿದ್ದ “ಯುಧ್ ಜಿತ್ ದತ್ತ ” ಅ ಹೋಟೆಲ್ ಮ್ಯಾನೇಜರ್ ಆಗಿದ್ದರು. ಧೋನಿ ಮತ್ತು ಸಾಕ್ಷಿ ಭೇಟಿಯಾದ ದಿನವೇ ಸಾಕ್ಷಿಯವರ ಇಂಟರ್ ಶಿಪ್ ನ ಕೊನೆಯ ದಿನವಾಗಿತ್ತು ಅದಕ್ಕಾಗಿ ಸಾಕ್ಷಿ ಹೋಟಲ್ ಬಿಟ್ಟು ತೆರೆಳಿದರು. ಬಳಿಕ ಧೋನಿ ಮ್ಯಾನೇಜ್ ಹತ್ತಿರ ಸಾಕ್ಷಿಯ ನಂಬರ್ ಕೇಳಿ ಅವರೊಂದಿಗೆ ಸಂಪರ್ಕಿಸಿದ್ದರು.

 

ಯಾವಾಗ ಎಂ ಎಸ್ ಸಾಕ್ಷಿಯವರಿಗೆ ಮೊದಲ ಬಾರಿಗೆ ಮೆಸೇಜ್ ಮಾಡಿದ್ದರು ಆಗ ಸಾಕ್ಷಿಗೆ ಇದು ಯಾರೋ ತಮಾಷೆ ಮಾಡುತ್ತಿರಬಹುದು ಎಂದು ಅನಿಸಿತ್ತು.ಯಾವಾಗ ಇದು ಟೀಮ್ ಇಂಡಿಯಾದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಮಗೆ ಮೆಸೇಜ್ ಮಾಡುತ್ತಿದ್ದಾರೋ ಖಚಿತಪಡಿಸಿದಾಗ ಅವರ ಖುಷಿಗೆ ಪಾರವೇ ಇರಲಿಲ್ಲ , ಅಷ್ಟೊತ್ತಿಗೆ ಎಂ ಎಸ್ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿದ್ದರು. 

ಕಾಲ ಕಳೆದ ಹಾಗೆ ಇವರಿಬ್ಬರು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು 2010 ರಲ್ಲಿ ಮದುವೆಯೂ ಆದರೂ , 2015 ರಲ್ಲಿ ಅವರಿಗೆ ಹೆಣ್ಣು ಮಗು ಆಯಿತು ಆಕೆಯ ಹೆಸರು ‘ಜೀವಾ’

ಕ್ರಿಕೆಟ್ ವೃತ್ತಿಜೀವನಕ್ಕೆ ಮಹೇಂದ್ರ ಸಿಂಗ್ ಧೋನಿ ವಿದಾಯ. (Ms Dhoni Retirement life)

Ms Dhoni Retirement life
Ms Dhoni Retirement life
 
ಮಹೇಂದ್ರ ಸಿಂಗ್ ಧೋನಿ ಆಗಸ್ಟ್ 15 – 2020 ರಲ್ಲಿ ಕ್ರಿಕೆಟ್ ವೃತ್ತಿಜೀವನಕ್ಕೆ ರಾಜೀನಾಮೆ ನೀಡಿ . ಆಗ ಕೋಟ್ಯಂತರ ಅಭಿಮಾನಿಗಳಿಗೆ , ಭಾರತೀಯರಿಗೆ ದೊಡ್ಡ ಶಾಕ್ ಕೊಟ್ಟರು. ಅದು ಆಗಸ್ಟ್ 15- 2020 ರ ದಿನ ಈ ದಿನವೇ ಮಹೇಂದ್ರ ಸಿಂಗ್ ಧೋನಿ ತನ್ನ 16 ವರ್ಷದ ಸುಧೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳುವ ನಿಧಾರ ತೆಗೆದುಕೊಂಡರು. ಈ ಘಟನೆಯಿಂದ ಸೋಷಿಯಲ್ ಮೀಡಿಯಾ ಗಳಲ್ಲಿ ಅವರ ಅಭಿಮಾನಿಗಳು ಮತ್ತು ಕೋಟ್ಯಂತರ ಭಾರತೀಯರು ದುಃಖ ವ್ಯಕ್ತಪಡಿಸಿದ್ದರು. ಮತ್ತು ಅನೇಕ ದಿಗ್ಗಜರು ಅವರ ಇವರ ಮುಂದಿನ ಜೀವನಕ್ಕೆ ಶುಭಕೋರಿದ್ದರು.
 
ಇದನ್ನು ಓದಿ… ನಿವೃತ್ತಿಯ ಬಳಿಕ ಕಡಕ್‍ನಾಥ್ ಕಪ್ಪು ಕೋಳಿ ಸಾಕಣೆ ಮಾಡಲು ಮುಂದಾದ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ

NO COMMENTS

LEAVE A REPLY

Please enter your comment!
Please enter your name here