Saturday, December 14, 2024
HomeWeekend With Ramesh Season 5 Guest List :ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ...

Weekend With Ramesh Season 5 Guest List :ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಈ ಬಾರಿ ಬರುವ ಸಾಧಕರು ಇವರೇ ನೋಡಿ.

Weekend With Ramesh Season 5: Weekend With Ramesh Season 5 Guest List

Weekend With Ramesh Season 5: Zee Kannada ದಲ್ಲಿ ಪ್ರಸಾರವಾಗುತಿದ್ದ Weekend With Ramesh ಶೋ ಅಂದ್ರೆ ಕನ್ನಡಿಗರ ಅಚ್ಚು ಮೆಚ್ಚಿನ ಕಾರ್ಯಕ್ರಮ, ಎಂದರು ತಪ್ಪಿಲ್ಲ, ಯಾಕೆಂದರೆ, Weekend With Ramesh ಶೋ ನಲ್ಲಿ, ಸಿನಿಮಾ, ಕಲೆ, ರಾಜಕೀಯ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮದೆಯಾದಂತಹ, ಛಾಪನ್ನು ಮೂಡಿಸಿದವರಿಗೆ, ಆಹ್ವಾನಿಸಿ ಅವರ ಜೀವನದ ಕಥೆ, ಪ್ರೇಕ್ಷಕರ ಮುಂದೆ ತಂದಿಡುತ್ತಾರ. ಈ ಶೋ ನಲ್ಲಿ ಪ್ರತಿಯೊಂದು ಕ್ಷೇತ್ರದ ಗಣ್ಯರನ್ನು ಕರೆಸುವ ಮೂಲಕ, ಹತ್ತತ್ರ ಎಲ್ಲ Catagory ಪ್ರೇಕ್ಷಕರನ್ನ, ತನ್ನತ್ತ ಸೆಳೆಯುವುದರಲ್ಲಿ, ಯಶಸ್ವಿಯಾಗಿದೆ. 

ಈ ಬಾರಿ ಅಂದ್ರೆ Weekend With Ramesh Show Season 5 ರಲ್ಲಿ ಯಾರ್ ಯಾರಿಗೆ ಆಹ್ವಾನವನ್ನು ನೀಡಲಾಗಿದೆ. ಎಂಬುವುದರ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿದೆ. ಈ ಬಾರಿ ಯಾರ್ ಯಾರು weekend With Ramesh season 5 ರಲ್ಲಿ ಆಗಮಿಸುವ ಸಾಧ್ಯತೆ ಇದೆ, ಎಂಬುವ ಮಾಹಿತಿಯನ್ನು ನಿಮ್ಮಾಮುಂದೆ ಇಡುವ ಪ್ರಯತ್ನ ಇದು. 

Weekend With Ramesh Season 5 Episode: ‘ ಸೀಸನ್ 5ರ ವೀಕೆಂಡ್ ವಿತ್ ರಮೇಶ್ ಶೋ ಶೀಘ್ರದಲ್ಲೇ ಶುರುವಾಗಲಿದೆ. ಈ ಸೀಸನ್ ನಲ್ಲಿ ಯಾರ್ ಯಾರು ಆಗಮಿಸಲಿದ್ದಾರೆ ಎಂಬ ಕುತೂಹಲ ರಮೇಶ್ ಅಭಿಮಾನಿಗಳಲ್ಲಿ ಮತ್ತು ಪ್ರೇಕ್ಷಕರಲ್ಲಿ ಮೂಡಿದೆ. 

Weekend With Ramesh Show (Release Date) ಆಗಸ್ಟ್ 2 – 2014 ರಲ್ಲಿ ಶುರುವಾಗಿತ್ತು..

ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮೊದಲನೆ ಎಪಿಸೋಡ್ ಇಂದ ಈ ಶೋ ಗೆ ರಮೇಶ್ ಅರವಿಂದ್ ಅವರು ನಿರೂಪಣೆ ಮಾಡುತ್ತಿದ್ದಾರೆ. July 2019 ರ ವರೆಗೆ 4 ಸೀಸನ್ ಗಳು, ಯಶಸ್ವಿಯಾಗಿ, ಪೂರ್ಣಗೊಳಿಸಿತ್ತು. July 2019 ರಿಂದ, ಅಂದ್ರೆ, 2020-2021-2022- ಈ ಮೂರು ವರ್ಷ , ಪ್ರೇಕ್ಷಕರು weekend With Ramesh Show ಗೆ ಕಾಯ್ತಾ ಇದ್ರು.

 ಕೊನೆಗೂ ಈ ಶೋ ಮತ್ತೆ ಸೆಟ್ಟೇರಲಿದೆ, ಪ್ರೇಕ್ಷಕರು ಕಳೆದ ಮೂರು ವರ್ಷಗಳಲ್ಲಿ, ವಿವಿಧ Social Media ಮೂಲಕ ತಮ್ಮದೆಯಾ ದಂತಹ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಮತ್ತಷ್ಟು ಸಾಧಕರನ್ನು ಈ ಶೋ ಮುಖಾಂತರ ಪರಿಚಯಿಸಿ ಎಂಬುವ ಕೂಗು ಕೇಳಿಬರುತ್ತಿತ್ತು..

Weekend With Ramesh Show ದ ಶೂಟಿಂಗ್ ಬೆಂಗಳೂರಿನ ಅಬ್ಬಯ ನಾಯ್ಡು ಸ್ಟುಡಿಯೋದಲ್ಲಿ  ನಡೆಯಲಿದೆ.

 ಇನ್ನು Weekend With Ramesh Season 5th Guest List ಮತ್ತು ಮೊದಲ ಎಪಿಸೋಡ್ date ಇಲ್ಲಿದೆ…

ವೀಕೆಂಡ್ ವಿತ್ ರಮೇಶ್ ಸೀಸನ್ 5 ಮೊದಲನೇ ಸಂಚಿಕೆ ಮಾರ್ಚ್ 25 ರಿಂದು ಪ್ರಸಾರವಾಗಲಿದೆ. (Prabhudeva In Weekend With Ramesh Show) ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಮೊದಲನೇ ಅತಿಥಿಯಾಗಿ ಖ್ಯಾತ ನಟ ನಿರ್ದೇಶಕ ಕುರಿಯೋಗ್ರಾಫರ್ ಪ್ರಭುದೇವ ಅವರು ಮೊದಲನೇ ಅತಿಥಿಯಾಗಿ ಈ ಶೋ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು ಆದರೆಮೊಅಲನೆ ಅತಿಥಿ ಕನ್ನಡದ ಖ್ಯಾತ ನಟಿ ರಮ್ಯಾ ಅವರು ಕಾಣಿಸಿಕೊಳ್ಳಲಿದ್ದಾರೆ . (Daali Dhananjaya In Weekend With Ramesh Show) ಜೊತೆಗೆ ಇದೇ ಸೀಸನ್ ನಲ್ಲಿ, ಡಾಲಿ ಧನಂಜಯ್ ಅವರು ಕೂಡ ಅತಿಥಿಯಾಗಿ ಬರಲಿದ್ದಾರೆ ಎನ್ನಲಾಗಿದೆ.

Weekend With Ramesh Season 5 Guest List : ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಬರುವ ಮತ್ತುಳಿದ ಸಾಧಕರ ಲಿಸ್ಟ್ ಹೀಗಿದೆ.

ರಿಷಬ್ ಶೆಟ್ಟಿ : Rishab Shetty In Weekend With Ramesh Show

Rishab Shetty In Weekend With Ramesh Show
Rishab Shetty

ರಿಷಬ್ ಶೆಟ್ಟಿ , ‘ಕಾಂತಾರ’ ಸಿನಿಮಾದಲ್ಲಿ ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು ಚಿತ್ರರಂಗಕ್ಕೆ ಕಾಲಿಟ್ಟು ದಶಕಗಳಾಗಿದೆ. ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು 17 ಕೋಟಿ ರೂಪಾಯಿ ಬಜೆಟ್‌ನಲ್ಲಿ ‘ಕಾಂತಾರ’ ಸಿನಿಮಾ ಮೂಲಕ ನಮ್ಮ ಸಂಸ್ಕೃತಿಯನ್ನು ವಿಶ್ವದಾದ್ಯಂತ ರೀಚ್ ಆಗುವಂತೆ ಮಾಡಿದ ನಟ / ನಿರ್ದೇಶಕ .

ಬಾಕ್ಸ್ ಆಫೀಸ್‌ನಲ್ಲಿ 450 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರು. ಜೊತೆಗೇ ಕಾಂತಾರ ಸಿನಿಮಾ ಮುಖಾಂತರ, ರಿಶಭ್ ಕೂಡ, ವಿಶ್ವದಾದ್ಯಂತ ಪರಿಚಯವಾದರು..

ಧ್ರುವ ಸರ್ಜಾ: Dhruva Sarja In Weekend With Ramesh Show

 Dhruva Sarja In Weekend With Ramesh Show
Dhruva Sarja

ಧ್ರುವ ಸರ್ಜಾ , ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲನೇ ಸಿನಿಮಾದಿಂದ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಡುತ್ತಾ ಬಂದಿರುವ ನಟ ಧ್ರುವ ಸರ್ಜಾ, ಧ್ರುವ ಸರ್ಜಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ಜೀವನ ಚರಿತ್ರೆಯನ್ನು ಕೇಳಲು ಮತ್ತು ವೀಕೆಂಡ್ ವಿತ್ ರಮೇಶ್ ಶೋ ಸಾಧಕರ ಚೇರ್ ಮೇಲೆ ನೋಡುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ…

ರಚಿತಾ ರಾಮ್: Rachita Ram In Weekend With Ramesh Show

Rachita Ram In Weekend With Ramesh Show
Rachita Ram

ಧ್ರುವ ಸರ್ಜಾ , ಸ್ಯಾಂಡಲ್ ವುಡ್ ಟಾಪ್ ನಟಿ ರಚಿತ ರಾಮ್ ಇವರು ಸಹ ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಅತಿಥಿಯಾಗಿ ಬರುವ ಸಾಧ್ಯತೆ ಇದೆ..ಅರಸಿ ಸೀರಿಯಲ್ ಮೂಲಕ ಮನೆ ಮತಾಗಿದ್ದ, ನಟಿ ರಚಿತ ರಾಮ್, ರನ್ನ ಚಿತ್ರದ ಮೂಲಕ ದೊಡ್ದ ಸಕ್ಸಸ್ ಕಂಡು, ಇದೀಗ ಸ್ಯಾಂಡಲ್ವುಡ್ ನಲ್ಲಿ ಟಾಪ್ ನಟಿಯರ ಪೈಕಿ ಒಬ್ಬರು. ಸ್ಯಾಂಡಲ್ ವುಡ್ ನಲ್ಲಿ ಡಾ. ಶಿವರಾಜಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ದುನಿಯಾ ವಿಜಯ್, ಉಪೇಂದ್ರ, ರಮೇಶ್ ಅರವಿಂದ್, ಶ್ರೀಮುರಳಿ, ನಂತಹ ದಿಗ್ಗಜರ ಜೊತೆ ನಾಯಕಿಯ ಪಾತ್ರದಲ್ಲಿ ನಟಿಸಿ ಸೈನಿಸಿಕೊಂಡಿದ್ದಾರೆ. ರಚಿತರಾಮ್ ಅವರು ಸಹ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಅನುಶ್ರೀ : Anchor Anushree In Weekend With Ramesh Show

Anchor Anushree In Weekend With Ramesh Show
Anchor Anushree

 ನಿರೂಪಣೆಯಲ್ಲಿ ಮೊದಲನೇ ಸಾಲಿನಲ್ಲಿ ನಿಲ್ಲುವ ವ್ಯಕ್ತಿತ್ವ ಅಂದ್ರೆ ಅದು ಅನುಶ್ರೀ,  ನಟಿ ನಿರೂಪಕಿಯಾಗಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ಅನುಶ್ರೀ ಅನೇಕ ದೊಡ್ದ ದೊಡ್ದ ರಿಯಾಲಿಟಿ ಶೋ ಗಳನ್ನ ಹೋಸ್ಟ್ ಮಾಡಿದ್ದಾರೆ, ಮತ್ತು ಮತ್ತು ಆನೇಕ ದೊಡ್ದ ದೊಡ್ದ ಸ್ಟಾರ್ಗಳ ಇವೆಂಟ್ಗಳಲ್ಲಿ ನಿರೂಪಣೆ ಮಾಡುವ ಮೂಲಕ ಅನುಶ್ರೀ ಅವರು ಕನ್ನಡದ number 1  ರೂಪಕಿಯ ಪಟ್ಟವನ್ನು ಪಡೆದಿದ್ದಾರೆ.. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಈ ಮಟ್ಟಕ್ಕೆ ಬಂದಿರುವ ಆಂಕರ್ ಅನುಶ್ರೀ ವೀಕೆಂಡ್ ವಿತ್ ರಮೇಶ್ ಸಾಧಕರ ಚೇರ್ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ರಮ್ಯಾ: Actress Ramya In Weekend With Ramesh Show

Ramya In Weekend With Ramesh Show
Actress Ramya

ಮೋಹಕ ತಾರೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು, ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಆಗಮಿಸಲಿದ್ದಾರೆ . ಹೌದು, ಸ್ಟಾರ್ ನಟಿಯರ ಪೈಕಿ ಎವರ್ಗ್ರೀನ್ ನಟಿಯಂದ್ರೆ ಅದು ಮೋಹಕತಾರೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮಾತ್ರ. ರಮ್ಯಾ ಬಗ್ಗೆ ಹೆಚ್ಚಿನ ಇಂಟ್ರೊಡಕ್ಷನ್ ಕೊಡುವ ಅಗತ್ಯನೇ ಇಲ್ಲ ಬಿಡಿ. ರಮ್ಯಾ ಅವರನ್ನ ಕಳೆದ ನಾಲ್ಕು ಸೀಜನ್ ಗಳಿಂದ ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಸಾಧಕರ ಚೇರ್ ಮೇಲೆ ನೋಡುವ ಅಭಿಮಾನಿಗಳ ಆಸೆಯಾಗಿತ್ತು. ಇದೀಗ ಸೀಜನ್ 5ರಲ್ಲಿ ರಮ್ಯಾ ಆಗಮಿಸಲಿದ್ದಾರೆ ಮತ್ತು weekend with ramesh 5 ನಲ್ಲಿ ಮೊದಲನೇ ಅತಿಥಿಯಾಗಿ ಬರಲಿದ್ದಾರೆ .

ಕೆ ಎಲ್ ರಾಹುಲ್ : KL Rahul In Weekend With Ramesh

 ಕೆ ಎಲ್ ರಾಹುಲ್ ವೀಕೆಂಡ್ ವಿತ್ ರಮೇಶ್ ಸೀಸನ್ 5ರ, ಅತಿಥಿಯಾಗುವ ಸಾಧ್ಯತೆ ಇದೆ. ಕನ್ನಡಿಗ ಕೆ-ಎಲ್ ರಾಹುಲ್ ಟಿಮ್ ಇಂಡಿಯಾದ ಆಟಗಾರ. ಇವರು ಮೂಲತಃ ಬೆಂಗಳೂರಿನವರು.

ಇದನ್ನು ಓದಿ….Yuva Raj Kumar Biography , Yuva Rajkumar School College, Marriage , Film industry Career, Personal life

ಡಾ. ಬ್ರೋ : Dr Bro In Weekend With Ramesh Show

dr.bro kannada

Vloging ಮುಖಾಂತರ ಕರ್ನಾಟಕದಲ್ಲಿ ಸೆನ್ಸೇಶನ್ ಆಗಿರುವ ಯೂಟ್ಯೂಬರ್ ಡಾಕ್ಟರ ಬ್ರೋ ಸಹ ವೀಕೆಂಡ್ ವಿತ್ ರಮೇಶ್ ಈ ಶೋ ನಲ್ಲಿ ಅಗಮನಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.ಆದರೆ, ವೀಕೆಂಡ್ ವಿತ್ ರಮೇಶ್ ಶೋನಲ್ಲಿ  ಯೂಟ್ಯೂಬರ್ dr. Bro ಅಗಮನಿಸಿಲಿದ್ದರೆ ಎಂಬುವ ಅಧಿಕೃತ ಮಾಹಿತಿ Zee Kannada ವಾಹಿನಿ ಕದೆಯಿಂದ ಬಂದಿಲ್ಲ…

ಇದು ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಗೆಸ್ಟ್ ಲಿಸ್ಟ್ ಆಗಿತ್ತು..ಇಷ್ಟಲ್ಲದೆ ಈ ಬಾರಿ ವಿಕೇಂಡ್ ವಿತ್ ರಮೇಶ್ ಶೋ ನಲ್ಲಿ ಒಟ್ಟು 16 ಸಾಧಕರು ಕಾಣಿಸಿಕೊಳ್ಳಲಿದ್ದಾರೆ , ಇದುವರೆಗೆ 110 ಸಂಚಿಕೆಗಳು ಪ್ರಸಾರವಾಗಿತ್ತ , ಅದರಲ್ಲಿ 84 ಸಾಧಕರನ್ನ ತೋರಿಸಲಾಗಿತ್ತು , ಇದೀಗ 16 ಸಾಧಕರನ್ನ ಕರೆಸದ್ದರೆ 100 ಸಾಧಕರನ್ನ ಕರೆಸಿದ ಹಾಗೆ ಆಗುತ್ತೆ , ಮತ್ತೆ zee kannada ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುನೂಸುರು , ಮತ್ತು ನಿರೂಪಕ ರಮೇಶ್ ಅರವಿಂದ್ , ವಾರು 100 ನೇ ಅತಿಥಿ ಬಗ್ಗೆ ಮಹಿತಿಯನ್ನ ನೀಡಿದಾರೆ . ವೀಕೆಂಡ್ ವಿತ್ ರಮೇಶ್ ಶೋ ನ 100 ನೇ ಅತಿಥಿ ತುಂಬಾನೇ ವಿಶೇಷ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments