ದೇಶದ ಎಲ್ಲ ಭಾಷೆಗಳು ಪೂಜನೀಯ, ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತಿಗೆ ನಟ ಕಿಚ್ಚ ಸುದೀಪ್ (Kiccha Sudeep) ಹೇಳಿದ್ದೇನು..
ದೇಶದ ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆಯ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಮಾತನಾಡಿರುವ ಬಗ್ಗೆ ನಮ್ಮ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿಂದಿ ಭಾಷೆ ನಮ್ಮ ರಾಷ್ಟ್ರೀಯ ಭಾಷೆಯಲ್ಲ ಎಂಬುವ ಸ್ಯಾಂಡಲ್ವುಡ್ ಸ್ಟಾರ್ ಕಿಚ್ಚ ಸುದೀಪ್ ಅವರ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ (ajay devgan) ಅವರು ಪ್ರತಿಕ್ರಿಯೆ ನೀಡಿದರು ಆಗ ಕಿಚ್ಚ ಸುದೀಪ್ ಮತ್ತು ಅಜಯ್ ದೇವ್ಗನ್ ಅವರ ನಡುವೆ ಟ್ವಿಟರ್ ವಾರೆ ನಡೆದುಹೋಗಿತ್ತು.
ಇದೀಗ ವಿಷಯ ಏನಪ್ಪಾ ಅಂದ್ರೆ ಭಾಷೆಗಳ ನಡುವೆ ವಿವಾದ ಹುಟ್ಟಿಕೊಂಡಿರುವ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಅಂದರೆ 20 may 2022 ರ ಒಂದು ಹೇಳಿಕೆಯ ಬಗ್ಗೆ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಹಿಂದಿ ಭಾಷೆ ಕುರಿತು ನಾನು ಯಾವುದೇ ವಾರ ಯಾವುದೇ ರೀತಿಯ ಚರ್ಚೆ ಹುಟ್ಟುಹಾಕಬೇಕು ಎಂಬುವ ಉದ್ದೇಶ ನನಗೆ ಇರಲಿಲ್ಲ.ನನ್ನ ಪ್ರತಿಕ್ರಿಯೆಯಲ್ಲಿ ಯಾವುದೇ ರೀತಿಯ ಅಜೆಂಡಾ ಇರಲಿಲ್ಲ.. ಇದೊಂದು ಅಜೆಂಡ ಇಲ್ಲದ ಪ್ರತಿಕ್ರಿಯೆ ಯಾಗಿತ್ತು ಮತ್ತು ನನ್ನ ಅನಿಸಿಕೆ ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಹೇಳಿರುವ ಮಾತುಗಳನ್ನು ಕೇಳಿಸಿಕೊಳ್ಳುವುದು ನಮಗೊಂದು ಸೌಭಾಗ್ಯದ ವಿಷಯ ಎಂದು ಕಿಚ್ಚ ಸುದೀಪ್ ಅವರು ಎನ್ ಡಿಟಿವಿಗೆ ನೀಡಿರುವ ಇಂಟರ್ವ್ಯೂನಲ್ಲಿ ತಿಳಿಸಿದ್ದಾರೆ. ಮತ್ತು ತಮ್ಮ ಮಾತೃಭಾಷೆಯನ್ನು ಗೌರವದಿಂದ ಕಾಣುವ ಪ್ರತಿಯೊಬ್ಬರಿಗೂ ಪ್ರಧಾನಿಯವರ ಹೇಳಿಕೆಯಿಂದ ತುಂಬಾನೇ ಸಂತಸ ತಂದಿದೆ ಎಂದು ಕಿಚ್ಚ ಸುದೀಪ್ ಹೇಳಿದರು.
ದೇಶದ ಎಲ್ಲ ಪ್ರಾದೇಶಿಕ ಭಾಷೆಗಳು ಪೂಜನೀಯ ಎಂಬ ನರೇಂದ್ರಮೋದಿಯವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ ನಾಗ ಕನ್ನಡ ಭಾಷೆಯನ್ನು ಪ್ರತಿನಿಧಿಸುತ್ತಿದ್ದ ನಾನು ಪ್ರತಿಯೊಬ್ಬರ ಮಾತೃಭಾಷೆ ಗಳನ್ನು ಗೌರವಿಸುತ್ತೇನೆ ಮತ್ತು ನೆಲೆಗಟ್ಟಿನಲ್ಲಿ ಮಾತನಾಡಿದೆ . ನಾನು ಅವತ್ತು ನೀಡಿದ ಹೇಳಿಕೆಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆ ಅರ್ಥಪೂರ್ಣವಾಗಿದೆ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇವಲ ರಾಜಕಾರಣಿಯಾಗಿ ನೋಡುತ್ತಿಲ್ಲ ನಾವೆಲ್ಲಾ ಅವರನ್ನು ನಾಯಕರನ್ನಾಗಿ ನೋಡುತ್ತಿದ್ದೇವೆ ಎಂದು ಕಿಚ್ಚ ಸುದೀಪ್ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ನಾವು ಭಾರತದ ಎಲ್ಲಾ ಸ್ಥಳೀಯ ಭಾಷೆಗಳನ್ನು ಗೌರವಿಸುತ್ತೇವೆ ಪ್ರತಿಯೊಬ್ಬರು ಗೌರವಿಸಬೇಕು ಭಾಷೆಗಳಲ್ಲಿ ದೇಶದ ಸಂಸ್ಕೃತಿ ಪ್ರತಿಫಲನ ಗೊಳ್ಳುತ್ತದೆ ಅವುಗಳನ್ನೆಲ್ಲಾ ಬಿಜೆಪಿ ಪಕ್ಷ ಪೂಜ್ಯನೀಯವಾಗಿ ಕಾಣುತ್ತದೆ ಅಷ್ಟು ಮಾತ್ರವಲ್ಲದೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಎಲ್ಲಾ ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.