ದುನಿಯಾ ವಿಜಯ್, ಧ್ರುವ ಸರ್ಜಾ, ಉಮಾಪತಿ ಗೌಡ ಕಾಂಬಿನೇಶನ್ ನಲ್ಲಿ ಬಾರಲಿದೆಯ ಬಿಗ್ ಸಿನಿಮಾ ಫ್ಯಾಕ್ಟ್ ಚೆಕ್..? Umapati Gowda, Duniya Vijay And Dhruva Sarja film on the way ? Fact check!

ಇತ್ತೀಚಿನ ದಿನಗಳಲ್ಲಿ, ಉಮಾಪತಿಯವರ ನಿರ್ಮಾಣದಲ್ಲಿ, ಧ್ರುವ ಸರ್ಜಾ (Dhruva Sarja) ಮತ್ತು ದುನಿಯಾ ವಿಜಯ್ (Duniya Vijay) ಅವರ ಕಾಂಬಿನೇಶನ್ ನಲ್ಲಿ ಒಂದು ಸಿನಿಮಾ ಬರಲಿದೆ ಎಂಬುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಷ್ಟು ದಿನ ಇಲ್ಲದ ಈ ಸುದ್ದಿ ಬಗ್ಗೆ ಇವಾಗ ಯಾಕೆ ಸದ್ದು ಕೇಳಿ ಬರ್ತಿದೆ..?ನಿಜವಾಗ್ಲು ಧ್ರುವ ಸರ್ಜಾ ಮತ್ತು ದುನಿಯಾ ವಿಜಯ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರ. ನಿರ್ಮಾಪಕ ಉಮಾಪತಿ ಗೌಡ (Umapathy Srinivas) ಕೊಟ್ಟ ಸುಳಿವು ಏನೂ? ಹೇಗಿರಲಿದೆ ಸ್ಟೋರಿ , ಬಜೆಟ್ ಎಷ್ಟು , ಡೈರೆಕ್ಟರ್ ಯಾರು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖದಲ್ಲಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ನ್ಯೂಸ್ ಪ್ರಕಾರ, ದುನಿಯಾ ವಿಜಯ್ (Duniya Vijay) ಮತ್ತು ಧ್ರುವ ಸರ್ಜಾ (Dhruva Sarja) ಒಟ್ಟಿಗೆ ಸ್ಕ್ರೀನ್ ಶರ್ ಮಾಡಲಿದ್ದಾರೆ, ಮತ್ತು ಈ ಚಿತ್ರಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas) , ಬಂಡವಾಳ ಹಾಕಲಿದ್ದಾರೆ. ಇದೊಂದು ಬಿಗ್ ಬಜೇಟ್ ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಿದೆ.
ನಿರ್ಮಾಪಕ ಉಮಾಪತಿ ಗೌಡ (Umapathy Srinivas) ಬಿಗ್ ಕ್ಲೂ.
ಇದಕ್ಕೆ ಪುಷ್ಟಿ ನೀಡುವಂತೆ ದುನಿಯಾ ವಿಜಯ್ ಅವರ ಎರಡನೇ ಮಗಳು ಮೋನಿಷಳ ಚೊಚ್ಚಲ ಸಿನಿಮಾ, Duniya Vijay ಅವರೇ ನಿರ್ದೇಶಿಸುತ್ತಿರುವ ಸಿಟಿ ಲೈಟ್ಸ್ ಚಿತ್ರದ ಮುಹೂರ್ತಕ್ಕೇ ಆಗಮಿಸಿದ್ದ ಉಮಾಪತಿ ಶ್ರೀನಿವಾಸ್ (Umapathy Srinivas) ರವರು, ಮಾದ್ಯಮಗಳ ಜೊತೆ ಮಾತನಾಡುವಾಗ ದುನಿಯಾ ವಿಜಯ್ ಅವರ ಕಾರ್ಯಶೈಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಈ ಒಂದು ವಿಷಯ ರಿವಿಲ್ ಮಾಡಿದ್ರು, ಅದೇನೆಂದರೆ, “ನನಗೂ ದುನಿಯಾ ವಿಜಯ್ (Duniya Vijay) ಅವರ ಜೊತೆ ಸಿನಿಮಾ ಮಾಡಲು ಆಸೆಯಿದೆ, ಈ ವಿಷಯದ ಕುರಿತು ಒಮ್ಮೆ ಮೀಟಿಂಗ್ ಸಹ ಆಗಿದೆ 100%, ಆದಷ್ಟು ಬೇಗ ನಾವಿಬ್ಬರೂ ಒಂದು ಸಿನಿಮಾ ಅನೌನ್ಸ್ ಮಾಡ್ತೀವಿ” ಅಂತ ಹೇಳಿದ್ರು..
ಆದರೆ ಈ ಸಂಧಾರಭದಲ್ಲಿ , ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathy Srinivas) ಅವರು ಧ್ರುವ ಸರ್ಜಾ ಬಗ್ಗೆ, ಅಥವಾ , ದುನಿಯಾ ವಿಜಯ್ (Duniya Vijay) ಮತ್ತು ಧ್ರುವ ಸರ್ಜಾ (Dhruva Sarja) ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುವುದರ ಬಗ್ಗೆ ಯಾವುದೇ ಮಾತನಾಡಿರಲಿಲ್ಲ. ಅಂದರೆ ನಿರ್ಮಾಪಕ ಉಮಾಪತಿ ದುನಿಯಾ ವಿಜಯ್ ಅವರ ಮುಂದಿನ ಚಿಟ್ರಕ್ಕೆ Produce ಮಾಡಲಿರುವ ಸುದ್ದಿ ಸದ್ಯಕ್ಕಂತೂ ನಿಜವಾಗಿದೆ..
Dhruva Sarja Duniya Vijay ಸಿನಿಮಾಗೆ ಎಷ್ಟು ಬಜೆಟ್ ಹೇಗಿರತ್ತೆ ಕಥೆ ? ಡೈರೆಕ್ಟಾರ್ ಯಾರು

ಈ ಸಿನಿಮಾದ ಕಥೆ ಹೇಗಿರತ್ತೆ? , ಡೈರೆಕ್ಟಾರ್ ಯಾರು?, ಎಷ್ಟು ಬಜೆಟ್ ನಲ್ಲಿ ಈ ಚಿತ್ರ ತಯಾರ್ ಆಗಲಿದೆ ? ಎಂಬುವುದರ ಮಾಹಿತಿ ಅಧಿಕೃತ್ಯವಾಗಿ ಹೊರಬೀಳಬೇಕಿದೆ. ಅಥವಾ ನಿಜವಾಗಲೂ ಧ್ರುವ ಸರ್ಜಾ (Dhruva Sarja) ಮತ್ತು ದುನಿಯಾ ವಿಜಯ್ (Duniya Vijay) ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರ ಅಂತ ಕಾದು ನೋಡಬೇಕು.
Duniya Vijay ! ನೆಟ್ಟಿಗರ ಮನಗೆದ್ದ ಕರಿ ಚಿರತೆ ದುನಿಯಾ ವಿಜಯ್ ! ವೈರಲ್ ಆಯ್ತು ವಿಕಲಂಗ ಅಭಿಮಾನಿಯ ಜೊತೆಗಿನ video.
ದಕ್ಷಿಣದ ಚಿತ್ರಗಳಲ್ಲಿ ಸಕ್ಕತ್ ಬೂಸಿ ದುನಿಯಾ ವಿಜಯ್ (Duniya Vijay)

ಸಧ್ಯ ದುನಿಯಾ ವಿಜಯ್ (Duniya Vijay) ಅವರು ಫುಲ್ ಬ್ಯುಸಿ ಇದ್ದಾರೆ, ಲ್ಯಾಂಡ್ ಲಾರ್ಡ್, ಮಾರುತ ಚಿತ್ರಗಳು ಈ ವರ್ಷ ಬಿಡುಗಡೆಗೆ ಸಿದ್ಧವಾಗಿದೆ.. ಮತ್ತೊಂದುಕದೆ VK 30 ಚಿತ್ರದ ಕೆಲಸದ ಜೊತೆಗೇ ತಮಿಳ್ ತೆಲುಗು , ಭಾಷೆಯಲ್ಲೂ ಫುಲ್ ಬ್ಯುಸಿಯಾಗಿದ್ದಾರೆ. ಟಾಲಿವುಡ್‌ನಲ್ಲಿ ಬಾಲಯ್ಯ ನಟನೆಯ , ವೀರಸಿಂಹರೆಡ್ಡಿ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ದುನಿಯಾ ವಿಜಯ್ ಇದೀಗ ಎರಡನೇ ಬಾರಿಗೆ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ . ಟಾಲಿವುಡ್‌ನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್‌ರ ಹೊಸ ಸಿನಿಮಾಗೆ ದುನಿಯಾ ವಿಜಯ್ ಸಹಿ ಹಾಕಿದ್ದಾರೆ. ಇತ್ತ ಮೊದಲ ಬಾರಿಗೆ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ ದುನಿಯಾ ವಿಜಯ್. ಸುಂದರ್ ಸಿ. ನಿರ್ದೇಶನದ, ನಯನತಾರಾ ಮುಖ್ಯಭೂಮಿಕೆಯಲ್ಲಿರುವ ‘ಮೂಕುತಿ ಅಮ್ಮನ್ 2’ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಜೊತೆಗೇ ದುನಿಯಾ ವಿಜಯ್ ಅವರೆ ನಿರ್ದೇಶಿಸುತ್ತಿರುವ ಮಗಳ ಚಿತ್ರ City Light’s ಚಿತ್ರದ ನಿರ್ದೇಶನದಲ್ಲಿಯೂ ಬ್ಯುಸಿಯಾಗಿದ್ದಾರೆ.
ಬಿಗ್ ಪ್ರಾಜೆಕ್ಟ್ ಗಳಲ್ಲಿ ಧ್ರುವ ಸರ್ಜಾ (Dhruva Sarja) Full Busy

ಇನ್ನೂ ಧ್ರುವ ಸರ್ಜಾ ಅವರು ತಮ್ಮ ಬಿಗ್ ಬಿಗ್ ಪ್ರಾಜೆಕ್ಟ್ ಗಳಲ್ಲಿ busy ಇದ್ದಾರೆ, ಮಾರ್ಟಿನ್ ಬಳಿಕ KD ಚಿತ್ರ ಬಿಡುಗಡೆಗೆ ಸಜ್ಜಾಗಿದೆ , ಟಿಜರ್ ಮೂಲಕ ಕುತೂಹಲ ಮುಡಿಸಿರುವ KD ಇದೆ ವರ್ಷ ಸಪ್ಟೆಂಬರ್ 4 – 2025 ರಂದು ಬಿಡುಗಡೆಯಾಗಲಿದೆ.
ಉಮಾಪತಿ ಗೌಡ (Umapathy Srinivas) ಪ್ರೊಡಕ್ಷನ್ ನಲ್ಲಿ ದುನಿಯಾ ವಿಜಯ್ ಸಿನಿಮಾ ಬರೋದು ಫಿಕ್ಸ್ .!

ಸಿಟಿ ಲೈಟ್ಸ್ ಚಿತ್ರದ ಮುಹೂರ್ತದಲ್ಲಿ ಮಾತನಾಡಿದ್ದ ಉಮಾಪತಿಯವರ ಮಾತುಗಳು ಕೇಳಿದ್ರೆ ಉಮಾಪತಿಯವರ ಪ್ರೊಡಕ್ಷನ್ ನಲ್ಲಿ ದುನಿಯಾ ವಿಜಯ್ (Duniya Vijay) ಅವರ ಸಿನಿಮಾ ಬರುವುದು ಬಹುತೇಕ ಖಚಿತವಾಗಿದೆ.ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಪೊಸ್ಟ್ ಗಳ ಪ್ರಕರ ದುನಿಯಾ ವಿಜಯ್ ಮತ್ತು ಧೃವ ಸರ್ಜಾ ಕಾಂಬಿನೇಶನ್ ನಾ ಚಿತ್ರದ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸಮಾಜಿಕ ಜಲತನಗಳಲ್ಲಿ ಹರಿದಾಡುತ್ತಿರುವ ಈ ಪೋಸ್ಟ್ ಗಳು ಕೇವಲ ಲೈಕ್ ಮತ್ತು ವ್ಯೂಸ್ ಗೋಸ್ಕರ ಟ್ರೋಲ್ ಪೆಜೆಸ್ ಗಳು ಪೋಸ್ಟ್ ಮಾಡುತಿದ್ದಾರೆ ಎಂಬುವುದು ತಿಳಿದುಬಂದಿದೆ.
ಇದನ್ನು ಓದಿ..