Saturday, February 24, 2024
HomeಮನರಂಜನೆChallenging Star Darshan: ಬ್ಯಾಡಗಿಯಲ್ಲಿ ನಟ ದರ್ಶನ್ ಸಕ್ಕತ್ ಹವಾ 'ಡಿ ಬಾಸ್' ನೋಡಲು ಮುಗಿಬಿದ್ದ...

Challenging Star Darshan: ಬ್ಯಾಡಗಿಯಲ್ಲಿ ನಟ ದರ್ಶನ್ ಸಕ್ಕತ್ ಹವಾ ‘ಡಿ ಬಾಸ್’ ನೋಡಲು ಮುಗಿಬಿದ್ದ ಫ್ಯಾನ್ಸ್‌!

 

Challenging Star Darshan: ಬ್ಯಾಡಗಿಯಲ್ಲಿ ನಟ ದರ್ಶನ್ ಸಕ್ಕತ್ ಹವಾ ‘ಡಿ ಬಾಸ್’ ನೋಡಲು ಮುಗಿಬಿದ್ದ ಫ್ಯಾನ್ಸ್‌!

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ Chalenging Satr Darsahn ಅವರ ವಿರುದ್ಧ ನಿರ್ದೇಶಕ , ನಿರ್ಮಾಪಕ ಇಂದ್ರಜಿತ್ ಲಂಕೇಶ್‌ indrajit lankesh ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸದ್ಯ ಅದೀಗ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಈ ಮಧ್ಯೆ ನಟ ದರ್ಶನ್ ಎರಡು ದಿನಗಳ ಕಾಲ ಬ್ಯಾಡಗಿಯಲ್ಲಿ ಕಾಲ ಕಳೆದಿದ್ದಾರೆ.

 

ಕಳೆದ ಕೆಲವು ದಿನಗಳಿಂದ ನಟ ದರ್ಶನ್ ಅವರ ಹೆಸರು ಬೇರೆ ಬೇರೆ ಕಾರಣಗಳಿಗೆ ಸುದ್ದಿಯಾಗುತ್ತಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಅವರು ಕೂಡ ದರ್ಶನ್ ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದರು. ಇದೆಲ್ಲದರ ಹೊರತಾಗಿ ಸದ್ಯ ದರ್ಶನ್ ವಿಶ್ರಾಂತಿ ಮೂಡ್‌ನಲ್ಲಿದ್ದಾರೆ. ವಿಶ್ರಾಂತಿ ಪಡೆಯುವ ಸಲುವಾಗಿ ಅವರು ಈಚೆಗೆ ಬ್ಯಾಡಗಿಗೆ ಅವರು ಬಂದಿದ್ದರು. ಬ್ಯಾಡಗಿ ಮಾಜಿ ಶಾಸಕ ಸುರೇಶ್‌ ಗೌಡ ಪಾಟೀಲ್ ಅವರ ಅತಿಥಿ ಗೃಹದಲ್ಲಿ ಎರಡು ದಿನಗಳ ಕಾಲ ತಂಗಿದ್ದ ಅವರು, ಈಗ ಬೆಂಗಳೂರಿಗೆ ಮರಳಿದ್ದಾರೆ.

ಸೋಮವಾರ (ಜು.19) ಬ್ಯಾಡಗಿಗೆ ಆಗಮಿಸಿದ್ದ ನಟ ದರ್ಶನ್ ಅವರು ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಅವರ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಬುಧವಾರ (ಜು.21) ಬೆಂಗಳೂರಿಗೆ ಹೊರಟ ಅವರು, ಅದಕ್ಕೂ ಮುನ್ನ ಸುರೇಶ್ ಗೌಡ ಅವರ ಮನೆಯಲ್ಲಿ ತಿಂಡಿ ಸೇವಿಸಿದರು. ನಂತರ ಸುರೇಶ ಗೌಡ ಮತ್ತು ಕುಟುಂಬದ ಸದಸ್ಯರು ನಟ ದರ್ಶನ್‌ಗೆ ಮೈಸೂರು ಪೇಟ ತೊಡಿಸಿ ಗೌರವಿಸಿದರು. ಇನ್ನು, ದರ್ಶನ್ ಅವರು ಆಗಮಿಸಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಸುರೇಶ್ ಗೌಡ ನಿವಾಸದ ಎದುರು ಸಾವಿರಾರು ಸಂಖ್ಯೆಯಲ್ಲಿ ದರ್ಶನ್ ಅಭಿಮಾನಿಗಳು ಜಮಾಯಿಸಿದರು. ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯ್ತು.

‘ದರ್ಶನ್ ವಿಶ್ರಾಂತಿಗಾಗಿ ನಮ್ಮ ಅತಿಥಿಗಳಾಗಿ ಬಂದಿದ್ದರು. ಮೈಸೂರು ಮತ್ತು ಬೆಂಗಳೂರು ಕಡೆ ತೊಂದರೆಯಾಗಬಹುದು ಎಂದು ನಮಗೆ ಅತಿಥಿ ಗೃಹಕ್ಕೆ ಆಗಮಿಸಿದ್ದರು ಸೋಮವಾರ ಆಗಮಿಸಿದ ಅವರು ಬುಧವಾರ ನಮ್ಮ ಮನೆಯಲ್ಲಿ ಉಪಹಾರ ಸೇವಿಸಿ, ಬೆಂಗಳೂರಿಗೆ ತೆರಳಿದರು’ ಎಂದು ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ತಿಳಿಸಿದ್ದಾರೆ.

ಇನ್ನು, ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದರು. ಆ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳು ಗರಂ ಆಗಿದ್ದಾರೆ. ಇಂದ್ರಜಿತ್ ಲಂಕೇಶ್‌ ವಿರುದ್ಧ ರಾಜ್ಯದ ನಾನಾ ಭಾಗಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಹಾವೇರಿಯಲ್ಲಿ ಇಂದ್ರಜಿತ್ ಲಂಕೇಶ್ ಫೋಟೋಗೆ ಚಪ್ಪಲಿ ಹಾರ ಹಾಕಿ ದರ್ಶನ್ ಫ್ಯಾನ್ಸ್ ಧರಣಿ ನಡೆಸುತ್ತಿದ್ದಾರೆ. ಅನೇಕರು ಇಂದ್ರಜಿತ್ ಲಂಕೇಶ್ ವಿರುದ್ಧವಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುತ್ತಿದ್ದಾರೆ. ಇದರ ಜೊತೆಗೆ ನಟರಾದ ಧನ್ವೀರ್, ಶಿವರಾಜ್ ಕೆ.ಆರ್‌. ಪೇಟೆ, ಪ್ರೇಮ್, ನಟಿ ಆಶಿತಾ ಚಂದ್ರಪ್ಪ, ಪ್ರಜ್ವಲ್ ದೇವರಾಜ್, ಪ್ರಣವ್ ದೇವರಾಜ್ ಮುಂತಾದವರು ದರ್ಶನ್ ಪರವಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments