Home ರಾಜಕೀಯ ಬೆಳಗಾವಿಯಲ್ಲಿ ಜಯಭೇರಿ ಬಾರಿಸಿದ ಕಮಲ ಕಾಂಗ್ರೆಸ್ ಎಂಇಎಸ್ ಗೆ ತೀವ್ರ ಮುಖಭಂಗ . belagavi corporation...

ಬೆಳಗಾವಿಯಲ್ಲಿ ಜಯಭೇರಿ ಬಾರಿಸಿದ ಕಮಲ ಕಾಂಗ್ರೆಸ್ ಎಂಇಎಸ್ ಗೆ ತೀವ್ರ ಮುಖಭಂಗ . belagavi corporation election results 2021

0
198

 

ಬೆಳಗಾವಿಯಲ್ಲಿ ಕಮಲ ಜಯಭೇರಿ ಬಹರಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಕುಂದಾನಗರಿ ಬೆಳಗಾವಿ ಕಾಂಗ್ರೆಸ್ ಕೈ ತಪ್ಪಿದರೆ ಇತ್ತ ಎಂಇಎಸ್ ಗೂ ಹೀನಾಯವಾಗಿ ಸೋಲು ಕಾಣಬೇಕಾಯಿತು. ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶದ ಸಂಪೂರ್ಣ ವಿವರ ನಾವು ಕೊಡುತ್ತೇವೆ ಓದಿ.

ಕುಂದನಗರಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ . ಒಟ್ಟು 58 ವಾರ್ಡ್‌ಗಳ ಪೈಕಿ ಬಿಜೆಪಿ 36 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಪ್ರ ಪ್ರಥಮ ಕುಂದಾ ನಗರಿಯಲ್ಲಿ ಕಮಲ ಪಾಳಯ ಗೆಲುವಿನ ನಗೆ ಬೀರಿದ್ದು, ಕಾಂಗ್ರೆಸ್‌ ಹಾಗೂ ಎಂಇಎಸ್ ಹೀನಾಯವಾಗಿ ಸೋತಿದೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇದುವರೆಗೆ ಬಿಜೆಪಿ ಪಕ್ಷ ಗೆಲುವು ಕಂಡಿರಲಿಲ್ಲ. ಆದರೆ ಈ ಬಾರಿ ಮೊದಲ ಬಾರಿಗೆ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸವೆ ನಿರ್ಮಿಸಿದೆ. 58 ಸ್ಥಾನಗಳ ಪೈಕಿ ಬಿಜೆಪಿ 36 ಸ್ಥಾನ ಗಳಿಸಿದರೆ ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಮಾತ್ರ ಪಡೆದುಕೊಳ್ಳಲು ಸಾಧ್ಯವಾಗಿದೆ. ಉಳಿದಂತೆ ಎಂಇಎಸ್ 2, ಎಂಐಎಂಐಎಂ- 1 ಹಾಗೂ ಪಕ್ಷೇತರ 10 ಮಂದಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆದರೆ ಜೆಡಿಎಸ್‌ ಪಕ್ಷ  ಇಲ್ಲಿ ಯಾವುದೇ ಸ್ಥಾನದಲ್ಲಿ ಗೆಲುವು ಕಂಡಿಲ್ಲ.

ಬೆಳಗಾವಿ ಗೆಲುವಿಗೆ ಬಿಜೆಪಿ ಭಾರೀ ರಣತಂತ್ರ ಸಿದ್ಧಪಡಿಸಿತ್ತು. ಪೇಜ್ ಪ್ರಮುಖ್, ಬೂತ್ ಮಟ್ಟದಲ್ಲಿ ರಣತಂತ್ರ ಹಾಗೂ ಸಂಘಟನಾತ್ಮಕ ಹೋರಾಟ ಬೆಳಗಾವಿ ಮಹಾನಗರ ಪಾಲಿಕೆಯ ಗೆಲುವಿಗೆ ಇಂದು ಕಾರಣವಾಗಿದೆ. ಅಷ್ಟೇ ಅಲ್ಲದೆ ಹಿಂದುತ್ವದ ವಿಷಯವೂ ಇಲ್ಲಿ ವರ್ಕೌಟ್‌ ಆಗಿದೆ ಎಂದರು ತಪ್ಪಾಗಲಾರದು.

2021 ರ ಲೋಕಸಭಾ ಉಪಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಂಗಳಾ ಅಂಗಡಿ ಕಡಿಮೆ ಅಂತರದಲ್ಲಿ ಜಯಗಳಿಸಿದ್ದರು. ಈ ನಿಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಚಾಲೆಂಜ್ ಆಗಿತ್ತು ಮತ್ತು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಹೀಗಿದ್ದರೂ ಪಕ್ಷದ ಚಿಹ್ಹೆಯಡಿಯಲ್ಲೇ ಬಿಜೆಪಿ ಸ್ಪರ್ಧೆ ನಡೆಸಿತ್ತು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬೆಳಗಾವಿಗೆ ಬಂದು ಸ್ಥಳೀಯವಾಗಿ ರಣತಂತ್ರ ರೂಪಿಸಲು ಯಶಸ್ವಿಯಾಗಿದ್ದಾರೆ. ಎಂಇಎಸ್‌ ವಿರುದ್ಧವಾಗಿ ಮರಾಠ ಅಭ್ಯರ್ಥಿಗಳನ್ನೇ ಬಿಜೆಪಿ ರಣಾಂಗಣಕ್ಕೆ ಇಳಿಸಿತ್ತು. ಭಾಷೆಯನ್ನು ಪಕ್ಕಕ್ಕಿಟ್ಟು ಹಿಂದುತ್ವದ ಅಜೆಂಡಾವನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ರಣತಂತ್ರ ಹೂಡಿತ್ತು. ಇದು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಲು ಕಾರಣವಾಗಿದೆ.

ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಆದಿಯಾಗಿ ಪ್ರಮುಖ ಕಾಂಗ್ರೆಸ್ ನಾಯಕರು ಬೆಳಗಾವಿಯಲ್ಲಿ ಪ್ರಚಾರ ನಡೆಸಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಳ್ಗವಗೆ ಆಗಮಿಸಿದ್ದರೂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ. ಅಷ್ಟೇ ಅಲ್ಲದೆ, ಶಾಸಕ ಸತೀಶ್ ಜಾರಕಿಹೊಳಿ ಹಾಗೂ ಫಿರೋಝ್ ಸೇಠ್ ನಡುವಿನ ರಾಜಕೀಯ ತಿಕ್ಕಾಟವೂ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅಭ್ಯರ್ಥಿಯ ಆಯ್ಕೆಯಲ್ಲಿ ಒಮ್ಮತ ಇಲ್ಲದಿರುವುದು ಬಿಜೆಪಿಗೆ ಪ್ಲಸ್ ಪಾಯಿಂಟ್‌ ಆಗಿದೆ. ಇನ್ನು ಬೆಳಗಾವಿಯಲ್ಲಿ ಭಾಷೆ ವಿಚಾರವಾಗಿ ಜನಗಳನ್ನ ಸೆಳೆಯುತ್ತಿದ್ದ ಎಂಇಎಸ್‌ ಈ ಬಾರಿ ಹೀನಾಯ ಸೋಲು ಅನುಭವಿಸಿದೆ.

NO COMMENTS

LEAVE A REPLY

Please enter your comment!
Please enter your name here