Wednesday, November 20, 2024
HomeHOMEmadhagaja Movie Review ರಕ್ತದೊಕುಳಿಯ ಆರ್ಭಟ; ರಕ್ತ ಸಂಬಂಧಗಳ ಹುಡುಕಾಟ- madhagaja 'ಮದಗಜ' ಸಿನಿಮಾ ವಿಮರ್ಶೆ

madhagaja Movie Review ರಕ್ತದೊಕುಳಿಯ ಆರ್ಭಟ; ರಕ್ತ ಸಂಬಂಧಗಳ ಹುಡುಕಾಟ- madhagaja ‘ಮದಗಜ’ ಸಿನಿಮಾ ವಿಮರ್ಶೆ

ರಕ್ತದೊಕುಳಿಯ ಆರ್ಭಟ; ರಕ್ತ ಸಂಬಂಧಗಳ ಹುಡುಕಾಟ- madhagaja ‘ಮದಗಜ’ ಸಿನಿಮಾ ವಿಮರ್ಶೆ

ನಟ:ಶ್ರೀಮುರಳಿ,ಆಶಿಕಾ ರಂಗನಾಥ್‌,ದೇವಯಾನಿ,ಜಗಪತಿ ಬಾಬು,ಚಿಕ್ಕಣ್ಣ,ಶಿವರಾಜ್‌ ಕೆ.ಆರ್. ಪೇಟೆ,ಗರುಡ ರಾಮ್

ನಿರ್ದೇಶಕ : ಎಸ್‌. ಮಹೇಶ್‌ ಕುಮಾರ್

ಚಿತ್ರದ ವಿಧ: Kannada, Action, Thriller, Crime

ಅವಧಿ: 2 Hrs 12 Min

‘ಅಯೋಗ್ಯ’ ದಂತಹ ಕಾಮಿಡಿ ಸಿನಿಮಾ ಮಾಡಿ ಭರ್ಜರಿ ಯಶಸ್ಸು ಪಡೆದುಕೊಂಡಿದ್ದ ನಿರ್ದೇಶಕ ಎಸ್. ಮಹೇಶ್‌ ಕುಮಾರ್ ಅವರು, ಎರಡನೇ ಸಿನಿಮಾವನ್ನು ಶ್ರೀಮುರಳಿ ನಂತಹ ಪಕ್ಕಾ ಕಮರ್ಷಿಯಲ್ ಹೀರೋ ಜೊತೆಗೆ ಮಹೇಶ್ ಸಿನಿಮಾ ಮಾಡುತ್ತಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿತ್ತು. ಕಾಮಿಡಿ ಸಿನಿಮಾ ಮಾಡಿದ ನಿರ್ದೇಶಕ ಮಹೇಶ್ ಕುಮಾರ್ , ಈ ಬಾರಿ ಪಕ್ಕಾ ಆಕ್ಷನ್ ಸಿನಿಮಾವನ್ನು ಯಾವ ರೀತಿ ಮಾಡಬಹುದು..? ಶ್ರೀಮುರಳಿ ನಂತಹ ದೈತ್ಯ ಇಮೇಜ್‌ಗೆ ಎಂಥ ಸಿನಿಮಾ ಕೊಡಬಹುದು ಎಂಬ ಕುತೂಹಲ ಸಹಜವಾಗಿತ್ತು.  ಆದರೆ, ಆ ಎಲ್ಲ ನಿರೀಕ್ಷೆಗಳನ್ನು ಸಿನಿಮಾ ಫುಲ್‌ಫಿಲ್ ಮಾಡತ್ತಾ? ಎನ್ನುವುದಕ್ಕೆ ಇಲ್ಲಿದೆ ಉತ್ತರ ವಿಮರ್ಶೆ, ಓದಿ.

ವಾರಾಣಸಿ ಟು ವೀರಗಲ್ಲು! 

‘ಮದಗಜ’ madhagaja  ಚಿತ್ರದಲ್ಲಿ ಶಿವಗಢ ಮತ್ತು ಗಜೇಂದ್ರಗಢ ಎಂಬ ಎಂಬೆರಡು ಊರಿನ ಜಗಳ ಇದೆ. ಎರಡೂ ಊರಿನವರಿಗೂ ರಕ್ತದ ಮೇಲೆ ಅತೀವ ಪ್ರೀತಿ. ಆದರೆ ಆ ಪ್ರೀತಿ ಜನರ ಮಧ್ಯೆ ಇರಲ್ಲ ! ಅಲ್ಲಿನ ಜನರಿಗೆ ರಕ್ತ ಸುರಿಸುವುದರ ಮೇಲಿರುವಷ್ಟು ಆಸಕ್ತಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರಲ್ಲಿ ಇರುವುದಿಲ್ಲ. ಅತ್ತ ವಾರಾಣಸಿಯಲ್ಲಿ varanasi ಬೆಳೆದ ಹುಡುಗ ಸೂರ್ಯನಿಗೆ (ಶ್ರೀಮುರಳಿ Shrimurali) ಹೆಣ ಸುಡುವುದೇ ದಿನ ನಿತ್ಯದ ಕಾಯಕ. ದುಡ್ಡು ಹಣ ಸಿಗತ್ತೆ ಅಂದ್ರೆ ಏನು ಬೇಕಾದರೂ ಮಾಡುವ ಕಿರಾತಕನ ಪಾತ್ರ. ಇಂಥ ಗಟ್ಟಿ ಗುಂಡಿಗೆಯ ನಾಯಕನಿಗೂ, ಮಾತೆತ್ತಿದರೆ ಕತ್ತಿ ಬೀಸುವವಷ್ಟು ಸಿಟ್ಟು ಈ ಎರಡು ಊರಿನ ಜನರಿಗೂ ಒಂದು ಕನೆಕ್ಷನ್ ಇದೆ. ಉತ್ತರ ಭಾರತದಲ್ಲಿದ್ದ ಸೂರ್ಯ ಕರ್ನಾಟಕಕ್ಕೆ (karnataka) ಏಕೆ ಬರುತ್ತಾನೆ? ಆ ಎರಡು ಊರಿನ ಮಧ್ಯೆ ಇರುವ ವೈರತ್ವ ಏನು? ಆ ಊರಿನ ಜನರಿಗೂ ಸೂರ್ಯನಿಗೂ ಏನು ಸಂಬಂಧ. ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತ ಸಾಗುತ್ತಾನೆ ‘ಮದಗಜ’ Madhagaja !

ಅಂದುಕೊಂಡ ಹಾದಿಯಲ್ಲೇ ಸಾಗುವ ಮದಗಜ  Madhagaja

ಸಾಮಾನ್ಯವಾಗಿ ಎಲ್ಲರೂ ಹೇಳುವ ಒಂದು ಮಾತಿದೆ; ‘ಆನೆ ನಡೆದಿದ್ದೇ ದಾರಿ..’ ಅಂತ. ಆದರೆ, ಈ ‘ಮದಗಜ Madhagaja ‘ ಪ್ರೇಕ್ಷಕ ಅಂದುಕೊಂಡಂತೆಯೇ ಸಾಗುತ್ತಾನೆ ಅನ್ನೋದು ವಿಪರ್ಯಾಸ ! ‘ಮದಗಜ Madhagaja ‘ ಥರದ ಕಥೆಯುಳ್ಳ ಸಿನಿಮಾಗಳು ಇದಕ್ಕೂ ಮುಂಚೆ ಬಂದಿವೆಯಾದರೂ, ಅದನ್ನು ತೆರೆಮೇಲೆ ಹೊಸ ರೀತಿಯಲ್ಲಿ ಪ್ರೆಸೆಂಟ್ ಮಾಡುವುದರಲ್ಲಿ, ಪಾತ್ರಗಳಿಗೆ ಬೇರೆ ಥರ ಟ್ರೀಟ್‌ಮೆಂಟ್ ನೀಡುವ ಪ್ರಯತ್ನವನ್ನು ನಿರ್ದೇಶಕರು ಮಹೇಶ್ ಕುಮಾರ್ ಮಾಡಿದ್ದಾರೆ. ಮೇಕಿಂಗ್ ಉತ್ತಮವಾಗಿದೆ, ಛಾಯಾಗ್ರಹಣದಲ್ಲಿ ನವೀನ್‌ ಕುಮಾರ್ ವಾರು ಬಿಗ್ ಸ್ಕೋರ್ ಮಾಡಿದ್ದಾರೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತದ ಅಬ್ಬರ ಮುಂದುವರಿದಿದೆ. ‘ಮದಗಜ Madhagaja ..’ ಟೈಟಲ್ ಟ್ರ್ಯಾಕ್‌ ಕೇಳಲು ತುಂಬಾ ಮಜವಾಗಿದೆ. ಅದರ ಮೇಕಿಂಗ್ song making ದುಬಾರಿ ಆಗಿದೆ. ಸಿನಿಮಾದ ಫೈಟ್‌ಗಳು ಸಹ ಮಾಸ್‌ ಆಡಿಯೆನ್ಸ್‌ಗೆ ಮಜಾ ಕೊಡುತ್ತವೆ. ವಾರಾಣಸಿಯ ಘಾಟ್‌ನಲ್ಲಿ ಮಾಡಿರುವ ಹಾಗೂ ಜಾತ್ರೆಯಲ್ಲಿ ಮಾಡಿರುವ ಫೈಟ್‌ಗಳು ಸಖತ್ ಸ್ಟೈಲಿಶ್‌ ಆಗಿ ಮೂಡಿಬಂದಿದೆ. ಆದರೆ, ಸಿನಿಮಾದ ಮೇಕಿಂಗ್‌ಗೆ ನೀಡುವಷ್ಟು ಆದ್ಯತೆಯನ್ನು ಸ್ಕ್ರಿಪ್ಟ್ ವಿಚಾರದಲ್ಲೂ ನಿರ್ದೇಶಕರು ನೀಡಬೇಕಿತ್ತು ಅನ್ನೋದು ಪ್ರೇಕ್ಷಕರ ಅಭಿಪ್ರಾಯ. ಚಿತ್ರಕಥೆಯಲ್ಲಿ ಇನ್ನಷ್ಟು ಟ್ವಿಸ್ಟ್‌ಗಳನ್ನು ಇಟ್ಟಿದ್ದರೆ, ‘ಮದಗಜ Madhagaja’ ಅಬ್ಬರ ಬಹುಶಃ ಇನ್ನಷ್ಟು ಜೋರಾಗಿರುತ್ತಿತ್ತು. ಹೆಜ್ಜೆಹೆಜ್ಜೆಗೂ ತೆರೆ ಮೇಲೆ ರಕ್ತದೊಕುಳಿಯೇ ನಡೆಯುತ್ತದೆ. ಹಾಗೇ ನೋಡಿದ್ರೆ, ಇಡೀ ಕಥೆಯಲ್ಲಿ ರಕ್ತ ಹರಿಸುವುದು ಮತ್ತು ರಕ್ತ ಸಂಬಂಧಗಳನ್ನು ಬೆಸೆಯುವುದರ ಸುತ್ತವೇ ಸಾಗುತ್ತದೆ. ಚಂದ್ರಮೌಳಿ ಬರೆದ ಸಂಭಾಷಣೆಯಲ್ಲಿ ಆಗಾಗ ಪಂಚಿಂಗ್ ಡೈಲಾಗ್ ಕೇಳಿಬರುತ್ತದೆ.

ಕಣ್ಣಲ್ಲೇ ಮಾತಾಡುವ ಶ್ರೀಮುರಳಿ Shrimurali

ಸೂರ್ಯ ಪಾತ್ರವನ್ನು ನಟ ಶ್ರೀಮುರಳಿ Shrimurali ಆವಾಹಿಸಿಕೊಂಡಿದ್ದಾರೆ. ಹೆಚ್ಚು ಡೈಲಾಗ್ ಇಲ್ಲದೇ ಬರೀ ಕಣ್ಣಲ್ಲೇ ಖಡಕ್ ಲುಕ್ ನಲ್ಲೇ ಮಿಂಚಿದ್ದಾರೆ. ಆ್ಯಕ್ಷನ್‌ ವಿಚಾರದಲ್ಲಿ ಸಖತ್ ಸ್ಕೋರ್ ಮಾಡುವ ಶ್ರೀಮುರಳಿ, ಸೆಂಟಿಮೆಂಟ್‌ ಸೀನ್‌ಗಳಲ್ಲಿ ಇನ್ನೊಂದು ಕೈ ಮೇಲು. ಮಧ್ಯಗಜ ಟೈಟಲ್‌ ಸಾಂಗ್‌ನಲ್ಲಿ ಭರ್ಜರಿಯಾಗಿ ಸ್ಟೆಪ್‌ ಹಾಕಿದ್ದಾರೆ ಶ್ರೀಮುರಳಿ Shrimurali . ನಾಯಕಿ ಆಶಿಕಾ ಪಾತ್ರಕ್ಕೆ ಜಾಸ್ತಿ ಸ್ಕೋಪ್‌ ಇಲ್ಲ. ಸಿಕ್ಕ ಪಾತ್ರಕ್ಕೆ ಜೀವ ತುಂಬುವ ಯತ್ನ ಮಾಡಿದ್ದಾರೆ ಅವರು. ಚಿತ್ರದಲ್ಲಿ ಲವ್‌ ಸ್ಟೋರಿಗೆ ಅಷ್ಟೇನೂ ಪ್ರಾಮುಖ್ಯತೆ ಇಲ್ಲ. ಚಿಕ್ಕಣ್ಣ, ಧರ್ಮಣ್ಣ ಕಡೂರು, ಶಿವರಾಜ್ ಕೆ.ಆರ್. ಪೇಟೆ ಥರದ ಪ್ರತಿಭಾನ್ವಿತ ಕಲಾವಿದರೂ ಇದ್ದರೂ ಕೂಡ ಕಾಮಿಡಿ ಸೀನ್‌ಗಳ ಕೊರತೆ ಇದೆ. ರಂಗಾಯಣ ರಘು ಒಂದು ಮಹತ್ವದ ಪಾತ್ರ ಮಾಡಿದ್ದಾರೆ. ಜಗಪತಿ ಬಾಬು, ಅನಿಲ್, ಗರುಡ ರಾಮ್ ಭಯ ಹುಟ್ಟಿಸುವಲ್ಲಿ ಸಫಲರಾಗಿದ್ದಾರೆ. ತಾಯಿಯಾಗಿ ದೇವಯಾನಿ ಜೀವ ತುಂಬಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments