ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆಯಿಂದ ನೋಟಿಸ್ ಬಂದಿದೆ.ಕೆಜಿಎಫ್ -2 ಟೀಸರ್ KGF2 teaser ಹಾಗೂ ಪೋಸ್ಟರ್ ನಲ್ಲಿ ಯಶ್ ಸಿಗರೇಟ್ ಸೇದುವ ದೃಶ್ಯವೊಂದು ಪ್ರಸಾರ ಮಾಡಿರುವುದರಿಂದ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಈ ನೋಟಿಸ್ ನೀಡಿದೆ.
ನೋಟಿಸ್ ಅಲ್ಲ ಮನವಿ ಅಷ್ಟೇ.
ಇದಕ್ಕೆ ಸಂಬಂಧ ಪಟ್ಟಂತೆ ಪ್ರತಿಕ್ರಿಯಿಸಿರುವ ಸಚಿವ ಡಾ. ಸುಧಾಕರ್, ನಟ ರಾಕಿಂಗ್ ಸ್ಟಾರ್ ಯಶ್ ಗೆ ನೋಟಿಸ್ ಅಲ್ಲ ಮನವಿ ಅಷ್ಟೇ ಬೇರೇನು ಅಲ್ಲ . ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಟ ಯಶ್ ಗೆ ಕೇವಲ ಮನವಿ ಮಾಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಈ ನೋಟಿಸ್ ಯಶ್ ಗೆ ಮಾತ್ರವಲ್ಲ ಎಲ್ಲ ಕನ್ನಡದ ನಟರಲ್ಲಿ ಮನವಿ ಮಾಡುತ್ತೇವೆ
ಬರೀ ಯಶ್ ಗೆ ಮಾತ್ರ ಅಲ್ಲ ಮುಂದೆ ಎಲ್ಲಾ ನಟರಿಗೂ ಮನವಿ ಮಾಡುತ್ತೇವೆ. ಲಕ್ಷಾಂತರು ಅಭಿಮಾನಿಗಳು ನಿಮ್ಮನ್ನು ಅನುಕರಣೆ ಮಾಡುತ್ತಿರುತ್ತಾರೆ. ಹಾಗಿರುವಾಗ ಮಧ್ಯಪಾನ ಮಾಡುವುದು ಸಿಗರೇಟ್ ಸೇದುವುದನ್ನ ಈ ಥರದ ನಶೆ ಮಾಡುವ ಸಿನ್ ತೋರಿಸಬಾರದು. ಇದಕ್ಕೆ ಕಾರಣವೆಂದರೆ ಸಿನೆಮಾ ಗಳಲ್ಲಿ ನಶೆ ಮಾಡುವ ದೃಶ್ಯ ನೋಡಿ ಯುವಕರ ಮೇಲೆ ಕೆಟ್ಟ ಪರಿಣಾಮಗಳು ಬೀಳುತ್ತಿದೆ ಆಹಾಗಿ ಕ್ಯಾನ್ಸರ್ ಪೀಡಿತರು ಜಾಸ್ತಿ ಆಗುತ್ತಿದ್ದು. ಈ ಹಿನ್ನೆಲೆಯಲ್ಲಿ ಈ ಥರದ ನಶೆ ಮಾಡುವ ಸಿನ್ ಗಳು ತೋರಿಸದೇ ಜಾಗೃತಿ ಮೂಡಿಸಬೇಕು ಎಂದು ಸಚಿವ ಡಾ ಸುಧಾಕರ್ ಹೇಳಿದ್ದಾರೆ.
‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆ ಹಾಕದೆ ಇರೋಕೆ ನೋಟಿಸ್.?
ಹೌದು KGF 2 teaser ಕೆ ಜಿ ಎಫ್ 2 ಟೀಸರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಬಂದೂಕಿನ ಮೂಲಗ ಸಿಗರೇಟ್ ಹಚ್ಚುವ ದೃಶ್ಯವಿದ್ದು, ಇದಕ್ಕೆ ಈ ದೃಶ್ಯದಲ್ಲಿ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆ ಹಾಕಿರಲಿಲ್ಲ. ಇದು ಧೂಮಪಾನವನ್ನು ಪ್ರಚೋದಿಸುತ್ತದೆ ಎನ್ನುವ ಕಾರಣಕ್ಕೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನನ್ನಗಳ ಕಾಯ್ದೆ -2003 ಸೆಕ್ಷನ್ 5ರ ಉಲ್ಲಂಘಟನೆಯಾಗಿದೆ.