Saturday, February 24, 2024
Homeಬ್ರೇಕಿಂಗ್ ನ್ಯೂಸ್Breaking News -ಗನ್ ಇಂದ ಸಿಗರೇಟ್ ಹಚ್ಚಿದ್ದಕ್ಕೇ ರ್ರಾಕಿಂಗ್ ಸ್ಟಾರ್ ಯಶ್‍ಗೆ ಆರೋಗ್ಯ ಇಲಾಖೆಯಿಂದ ನೋಟಿಸ್

Breaking News -ಗನ್ ಇಂದ ಸಿಗರೇಟ್ ಹಚ್ಚಿದ್ದಕ್ಕೇ ರ್ರಾಕಿಂಗ್ ಸ್ಟಾರ್ ಯಶ್‍ಗೆ ಆರೋಗ್ಯ ಇಲಾಖೆಯಿಂದ ನೋಟಿಸ್

ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆಯಿಂದ ನೋಟಿಸ್ ಬಂದಿದೆ.ಕೆಜಿಎಫ್ -2 ಟೀಸರ್ KGF2 teaser ಹಾಗೂ ಪೋಸ್ಟರ್ ನಲ್ಲಿ ಯಶ್ ಸಿಗರೇಟ್ ಸೇದುವ ದೃಶ್ಯವೊಂದು ಪ್ರಸಾರ ಮಾಡಿರುವುದರಿಂದ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಈ ನೋಟಿಸ್ ನೀಡಿದೆ.

ನೋಟಿಸ್ ಅಲ್ಲ ಮನವಿ ಅಷ್ಟೇ. 

ಇದಕ್ಕೆ ಸಂಬಂಧ ಪಟ್ಟಂತೆ ಪ್ರತಿಕ್ರಿಯಿಸಿರುವ ಸಚಿವ ಡಾ. ಸುಧಾಕರ್, ನಟ ರಾಕಿಂಗ್ ಸ್ಟಾರ್ ಯಶ್ ಗೆ ನೋಟಿಸ್ ಅಲ್ಲ ಮನವಿ ಅಷ್ಟೇ ಬೇರೇನು ಅಲ್ಲ . ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಟ ಯಶ್ ಗೆ ಕೇವಲ ಮನವಿ ಮಾಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ನೋಟಿಸ್ ಯಶ್ ಗೆ ಮಾತ್ರವಲ್ಲ ಎಲ್ಲ ಕನ್ನಡದ ನಟರಲ್ಲಿ ಮನವಿ ಮಾಡುತ್ತೇವೆ

ಬರೀ ಯಶ್ ಗೆ ಮಾತ್ರ ಅಲ್ಲ ಮುಂದೆ ಎಲ್ಲಾ ನಟರಿಗೂ ಮನವಿ ಮಾಡುತ್ತೇವೆ. ಲಕ್ಷಾಂತರು ಅಭಿಮಾನಿಗಳು ನಿಮ್ಮನ್ನು ಅನುಕರಣೆ ಮಾಡುತ್ತಿರುತ್ತಾರೆ. ಹಾಗಿರುವಾಗ ಮಧ್ಯಪಾನ ಮಾಡುವುದು ಸಿಗರೇಟ್ ಸೇದುವುದನ್ನ ಈ ಥರದ ನಶೆ ಮಾಡುವ ಸಿನ್ ತೋರಿಸಬಾರದು. ಇದಕ್ಕೆ ಕಾರಣವೆಂದರೆ ಸಿನೆಮಾ ಗಳಲ್ಲಿ ನಶೆ ಮಾಡುವ ದೃಶ್ಯ ನೋಡಿ ಯುವಕರ ಮೇಲೆ ಕೆಟ್ಟ ಪರಿಣಾಮಗಳು ಬೀಳುತ್ತಿದೆ ಆಹಾಗಿ ಕ್ಯಾನ್ಸರ್ ಪೀಡಿತರು ಜಾಸ್ತಿ ಆಗುತ್ತಿದ್ದು. ಈ ಹಿನ್ನೆಲೆಯಲ್ಲಿ ಈ ಥರದ ನಶೆ ಮಾಡುವ ಸಿನ್ ಗಳು ತೋರಿಸದೇ ಜಾಗೃತಿ ಮೂಡಿಸಬೇಕು ಎಂದು ಸಚಿವ ಡಾ ಸುಧಾಕರ್ ಹೇಳಿದ್ದಾರೆ. 

 ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆ ಹಾಕದೆ ಇರೋಕೆ ನೋಟಿಸ್.? 

ಹೌದು KGF 2 teaser ಕೆ ಜಿ ಎಫ್ 2 ಟೀಸರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಬಂದೂಕಿನ ಮೂಲಗ ಸಿಗರೇಟ್ ಹಚ್ಚುವ ದೃಶ್ಯವಿದ್ದು, ಇದಕ್ಕೆ ಈ ದೃಶ್ಯದಲ್ಲಿ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆ ಹಾಕಿರಲಿಲ್ಲ. ಇದು ಧೂಮಪಾನವನ್ನು ಪ್ರಚೋದಿಸುತ್ತದೆ ಎನ್ನುವ ಕಾರಣಕ್ಕೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನನ್ನಗಳ ಕಾಯ್ದೆ -2003 ಸೆಕ್ಷನ್ 5ರ ಉಲ್ಲಂಘಟನೆಯಾಗಿದೆ.

ಎಲ್ಲ ದಾಖಲೆ ಗಳಲಾನ್ನ ಮುರಿದ ಮುರಿದಿರುವ KGF 2 ಚಿತ್ರದ ಟಿಸರ್ 

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಟೀಸರ್ KGF2 teaser ಇತ್ತೀಚೆಗಷ್ಟೇ ಬಿಡುಗಡೆಗೊಂಡು ಯೂಟ್ಯೂಬ್ ನ ಎಲ್ಲಾ ದಾಖಲೆಗಳನ್ನು ಪುಡಿಪುಡಿ ಮಾಡಿದೆ ಇಂಟರ್ನೆಟ್ ಲೋಕದಲ್ಲೇ ಸಂಚಲನ ಸೃಷ್ಟಿಸಿದ್ದು. KGF2 ಸಿನಿಮಾದ ಟೀಸರ್ ಗೆ ಜಗತ್ತಿನಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಈ ಮಧ್ಯೆಯೇ ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದ ನೋಟಿಸ್ ಬಂದಿದೆ.
 ಹೀಗಾಗಿ KGF 2 ಚಿತ್ರದಲ್ಲಿ ಸಿಗರೇಟ್ ಸೇದುವ ಸಿನ್ ತೆಗೆದುಹಾಕುವಂತೆ ಇಲಾಖೆ ನೋಟಿಸ್ ನಲ್ಲಿ ಸೂಚಿಸಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments