Monday, November 18, 2024
HomeHOMEGruha Lakshmi Yojana 2022 - ಗೃಹಲಕ್ಷ್ಮಿ ಅರ್ಜಿ ಹಾಕಲು ಮೆಸೇಜ್ ಕಳಿಸುವ ಅವಶ್ಯಕತೆ ಇಲ್ಲ,...

Gruha Lakshmi Yojana 2022 – ಗೃಹಲಕ್ಷ್ಮಿ ಅರ್ಜಿ ಹಾಕಲು ಮೆಸೇಜ್ ಕಳಿಸುವ ಅವಶ್ಯಕತೆ ಇಲ್ಲ, ಈಗಲೇ ಈ ಕೆಲಸ ಮಾಡಿ

Gruha Lakshmi Yojana 2022- ಗೃಹಲಕ್ಷ್ಮಿ ಅರ್ಜಿ ಹಾಕಲು ಮೊಬೈಲ್‌ ಗೆ ಕರೆ ಮಾಡುವ ಅವಶ್ಯಕತೆ ಇಲ್ಲ , ಹಾಗಾದರೆ ಹೇಗೆ ನೋಂದಣಿ ಅರ್ಜಿ ಹಾಕಬೇಕು.?

ಗೃಹಲಕ್ಷ್ಮಿ ಯೋಜನೆಗೆ (gruha lakshmi yojana) ಅರ್ಜಿ ಹಾಕುವ ದಿನಾಂಕ ಬಗ್ಗೆ ಮೊಬೈಲ್‌ ಸಂದೇಶ ಬರುವ ಅವಧಿಯು ಈಗಿನವರೆಗೂ ಹೇಳಲಾಗಿದ್ದಿತು. ಈಗ ಮೊಬೈಲ್‌ ಸಂದೇಶಕ್ಕೆ ಕಾಯುವ ಅಗತ್ಯವಿಲ್ಲ. ನೇರವಾಗಿ ನೋಂದಣಿ ಕೇಂದ್ರಕ್ಕೆ ಹೋಗಬಹುದು ಮತ್ತು ಅಲ್ಲಿಂದ ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ತಿಳಿಸಿದ್ದಾರೆ.

ಇದಕ್ಕೂ ಮೊದಲು ಅರ್ಹ ಫಲಾನುಭವಿಗಳ ಮೊಬೈಲ್‌ ಸಂಖ್ಯೆಗೆ ಮೆಸೇಜ್‌ (ಶೆಡ್ಯೂಲಿಂಗ್‌) ಬಂದಿದ್ದು ನೋಂದಣಿ ಕೇಂದ್ರಗಳಿಗೆ ತೆರಳಬೇಕಾಗಿತ್ತು. ಆದರೆ ಈಗ, ಎಸ್‌ಎಂಎಸ್‌ ಅವಲಂಬಿಸದೆ ನೇರವಾಗಿ ನೋಂದಣಿ ಕೇಂದ್ರಗಳಿಗೆ ದಾಖಲಾತಿಗಳೊಂದಿಗೆ ಹೋಗಿ, ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.

Gruha Lakshmi Yojana 2022
Gruha Lakshmi Yojana 2022

ವಾರದಲ್ಲಿಯೇ 50 ಲಕ್ಷ ನೋಂದಣಿ

ಯೋಜನೆಗೆ ಚಾಲನೆ ಸಿಕ್ಕ 7 ದಿನಗಳಲ್ಲೇ 50 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ಹರ್ಷದಿಂದ ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ಪಡೆಯಲು ಗೃಹಲಕ್ಷ್ಮಿ (gruha lakshmi yojana) ನೋಂದಣಿಗೆ ಹಣ ಪಡೆದರೆ ಕ್ರಿಮಿನಸ್‌ ಕೇಸ್‌ ದಾಖಲಿಸಲಾಗುತ್ತದೆ. ಸೇವಾ ಕೇಂದ್ರಗಳಲ್ಲಿ ಅಸಡ್ಡೆ ತೋರಿದರೆ ಅಂತಹವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಎಚ್ಚರಿಸಲಾಗಿದೆ.

ಗೃಹ ಲಕ್ಷ್ಮಿ ನೋಂದಣಿಗೆ ಹಣ ಪಡೆಯುತ್ತಿದ್ದಾರೆ

ಸಚಿವರ ಸೂಚನೆ ಮಧ್ಯೆಯೂ, ಸರಕಾರದ ನಾನಾ ಯೋಜನೆಗಳಿಗೆ ಹೆಸರು ನೋಂದಾಯಿಸಲು ಪ್ರತಿ ಅರ್ಜಿದಾರರಿಂದ 50- 100 ರೂಪಾಯಿ ಪಡೆಯುತ್ತಿದ್ದಾರೆ. ಹಣ ಕೊಡದಿದ್ದರೆ ವಿನಾಕಾರಣ ಸರ್ವರ್‌ ಡೌನ್‌, ಪಕ್ಕಕ್ಕೆ ನಿಲ್ಲಿ ಎನ್ನುತ್ತಾರೆ. ಹಣ ಕೊಟ್ಟವರಿಗೆ ತಕ್ಷಣಕ್ಕೆ ನೋಂದಣಿ ಮಾಡುತ್ತಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಅರ್ಜಿದಾರರು ಸ್ಥಳದಲ್ಲೇ ಪ್ರತಿರೋಧಿಸಿದರೆ ಅರ್ಜಿಗಳು ಮತ್ತಷ್ಟು ವಿಳಂಬವಾಗುತ್ತವೆ.

ನಕಲಿ ಸರ್ಟಿಫಿಕೇಟ್‌ ಸೈಬರ್‌ ಸೆಂಟರ್‌ ಮಾಲೀಕನ ಬಂಧನ

ಕಾಂಗ್ರೆಸ್‌ ಸರಕಾರದ(Congress Government) ಗ್ಯಾರಂಟಿಗಳಲ್ಲಿನ ಒಂದು ಗೃಹ ಲಕ್ಷ್ಮೀ ಯೋಜನೆಯ ನಕಲಿ ಸರ್ಟಿಫಿಕೇಟ್‌ಗಳನ್ನು ಸಿದ್ಧಪಡಿಸುತ್ತಿದ್ದ ಸೈಬರ್‌ ಸೆಂಟರ್‌ಗೆ ಮೇಟಗಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ ಮತ್ತು ಸೆಂಟರ್‌ನ ಮಾಲೀಕನನ್ನು ಬಂಧಿಸಿದ್ದಾರೆ.

ಮೈಸೂರಿನ (mysore) ಮೇಟಗಳ್ಳಿಯ ಸುಧಾಮೂರ್ತಿ ರಸ್ತೆಯಲ್ಲಿರುವ ಸೈಬರ್‌ ಸೆಂಟರ್‌ನ ಮಾಲೀಕ ಸುರೇಶ್‌ ಕುಮಾರ್‌ ಬಂಧಿತನಾಗಿದ್ದಾನೆ. ಆತ ಗೃಹಲಕ್ಷ್ಮೇ ಯೋಜನೆಯಡಿ 2 ಸಾವಿರ ರೂಪಾಯಿ ಪಡೆಯಲು ಸೈಬರ್‌ ಸೆಂಟರ್‌ಗೆ ಹೋಗಿದ್ದ ಜನರ ನಕಲಿ ಸರ್ಟಿಫಿಕೇಟ್‌ಗಳನ್ನು ವಶಪಡಿಸಿಕೊಂಡಿದ್ದಾನೆ. ಪೊಲೀಸರು ದಾಳಿ ನಡೆಸಿದ್ದು, ಸೆಂಟರ್‌ಗೆ ಬೀಗ ಜಡಿದಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಡಾ. ಬಿ. ರಮೇಶ್‌ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಮುತ್ತುರಾಜ್‌, ಜಾಹ್ನವಿ ಉಸ್ತುವಾರಿ, ಎಸಿಪಿ ಗಜೇಂದ್ರ ಪ್ರಸಾದ್‌, ಮೇಟಗಳ್ಳಿ ಠಾಣೆ ಇನ್ಸ್‌ಪೆಕ್ಟರ್‌ ದಿವಾಕರ್‌ ಹಾಗೂ ಸಿಬ್ಬಂದಿ ದಾಳಿ ಕಾರ್ಯದಲ್ಲಿದ್ದರು.

ಮೈಸೂರು ಡಿಸಿ ಸೂಚನೆ

ಮೈಸೂರು ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಹೇಳಿದ್ದಾರೆ, “ಸಾರ್ವಜನಿಕರು ಯೋಜನೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಅಧಿಕೃತವಾಗಿ ಇರುವಂತಹ ಕರ್ನಾಟಕ ಒನ್‌, ಗ್ರಾಮ-ಒನ್‌, ಬಾಬೂಜಿ ಸೇವಾ ಕೇಂದ್ರ, ಯುಎಲ್‌ಬಿ ಕಚೇರಿ ಮತ್ತು ವಲಯ ಆಯುಕ್ತರ ಕಚೇರಿಗಳಲ್ಲಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ, ಯಾವುದೇ ಖಾಸಗಿ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಬಾರದು.”

ಇದ್ದನ್ನು ಓದಿ… Gruha Lakshmi Scheme 2023 – ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವ ಮೊದಲು ಈ ಕೆಲಸ ಮಾಡಿ, Apply Link – sevasindhu.karnataka.gov.in ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments