Tuesday, December 3, 2024
HomeHOMEHoli Festival 2023 ! ಹೋಳಿ ಹಬ್ಬ ಆಚರಣೆ ಮಾಡಲು ಕಾರಣವೇನು..? ಹೋಳಿ ಹಬ್ಬದ ಇತಿಹಾಸವೇನು..?...

Holi Festival 2023 ! ಹೋಳಿ ಹಬ್ಬ ಆಚರಣೆ ಮಾಡಲು ಕಾರಣವೇನು..? ಹೋಳಿ ಹಬ್ಬದ ಇತಿಹಾಸವೇನು..? What Is the Reason For Celebrating Holi? What is the history of Holi?

ಹೋಳಿ ಹಬ್ಬ ಆಚರಣೆ ಮಾಡಲು ಕಾರಣವೇನು..? ಹೋಳಿ ಹಬ್ಬದ ಇತಿಹಾಸವೇನು..? What Is The Reason For Celebrating Holi? What Is The History Of Holi?

(Holi Festival 2023) – ಇನ್ನೇನು ಹೋಳಿ ಹಬ್ಬ ಮಾರ್ಚ್ 8 – 2023 ರಂದು ಇದೆ (Holi Festival 2023) ಹೋಳಿ ಮೂಲತಃ ಹಿಂದೂ ಸಂಸ್ಕೃತಿಯ ಹಬ್ಬ, ನಮ್ಮ ದೇಶದಲ್ಲಿ ಹೋಳಿ ಹಬ್ಬದ ಸಂಭ್ರಮ 8 -10 ದಿನಗಳ ಮುಂಚಿತವೆ ಶುರುವಾಗಿರತ್ತೆ , ಇನ್ನೂ ಹೋಳಿ ಹಬ್ಬವನ್ನ ದೇಶದಎಲ್ಲ ಕಡೆ ಒಂದೇ ದಿನ ಅಚ್ಚರಿಸುವುದಿಲ್ಲ , ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನದಂದು ಹೋಳಿ ಹಬ್ಬವನ್ನು ಆಚಾರಿಸಿಕೊಳ್ಳುತ್ತಾರೆ. ನೀವು ಸಹ ವಾರದ ಮುಂಚಿತವೆ ನಿಮ್ಮ ನಿಮ್ಮ whatsapp status ಗಳಲ್ಲಿ ಹ್ಯಾಪಿ ಹೋಳಿ 2023 (Happy Holi 2023) ಎಂದು ಹಾಕಿರಬಹುದು. (happy holi whatsapp Status 2023) ಎಂದು ಆರಂಭ ವಾಗುವ ಈ ಹಬ್ಬದ ಬಗ್ಗೆ ನಿಮಗೆ ಎಷ್ಟು ಗೊತ್ತು..?

ಇಡೀ ಭಾರತದಾದ್ಯಂತ ಹೋಳಿ ಹಬ್ಬವನ್ನು (Holi Festival) ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸುತ್ತಾರೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಿಗೆ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮೀಯುತ್ತಾರೆ. ಪ್ರತೀ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಒಳಗೊಂಡಿರುತ್ತದೆ. ಅದೇ ರೀತಿ ಹೋಳಿಯು ಬಣ್ಣಗಳ ಹಬ್ಬವಾಗಿದ್ದು, ಎಲ್ಲರೂ ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುವುದು ವಿಶೇಷ. ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸುತ್ತಾರೆ, ಚಳಿಗಾಲದ ಕೊನೆಯನ್ನು ಹಾಗೂ ವಸಂತನ ಆಗಮನವನ್ನು ಸಾರುವ ಹಬ್ಬವೇ ಹೋಳಿ. ಎಲ್ಲರೂ ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಈ ಹಬ್ಬವನ್ನು ತುಂಬಾನೇ  ಸಡಗರದಿಂದ ಆಚರಿಸುತ್ತಾರೆ. ಈ ವರ್ಷ ಹೋಳಿಯ ಹಿಂದಿನ ದಿನ ನಡೆಸೋ ಹೋಲಿಕಾ ದಹನ ಮಾರ್ಚ್ 7 ರಂದು ಬಂದಿದೆ. ಹೋಳಿ ಹಬ್ಬವನ್ನು (Holi Festival) ಮಾರ್ಚ್ 8 ರಂದು ಆಚರಿಸಲಾಗುತ್ತೆ. ಹೋಲಿಕಾ ದಹನಕ್ಕೂ ವಿಶೇಷ ಮಹತ್ವವಿದೆ, ಕೆಟ್ಟದರ ವಿರುದ್ಧ ಒಳಿತು ಜಯ ಸಾಧಿಸಿದ ಸಂಕೇತವನ್ನೇ ಹೋಲಿಕಾ ದಹನವನ್ನಾಗಿ ಆಚರಿಸಲಾಗುತ್ತೆ. ಮಹಾ ವಿಷ್ಣುವಿನ ಪರಮ ಭಕ್ತ ಪ್ರಹ್ಲಾದ ಅಗ್ನಿಯಿಂದ ಪಾರಾದ ದಿನವೇ ಈ ಹೋಲಿಕಾ ದಹನದ ವಿಶೇಷ.

ಇನ್ನು, ಹೋಳಿ ಹಬ್ಬದ (Holi Festival) ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರ ಮನೆಮಾಡಿರುತ್ತದೆ. ಈ ಹಬ್ಬದ ದಿನ ಕಾಮನ ಸುಂದರ ಪ್ರತಿಮೆ ಮಾಡಿ ಶೃಂಗರಿಸಿ ಊರಿನ ಕಾಮನ ಕಟ್ಟೆಯ ಮೇಲೆ ಚಪ್ಪರ ಕಟ್ಟಿ ಇಟ್ಟು, ಕಾಮನ ಮುಂದೆ ಮಂಗಳ ವಾದ್ಯಗಳನ್ನು ಊದಲಾಗುತ್ತದೆ. ಜೊತೆಗೆ ಪರಸ್ಪರ ಬೈಗುಳ, ಬಣ್ಣದ ನೀರು ಹಾಗೂ ಸಗಣಿ ಗಂಜಲಗಳನ್ನು ಎರಚುವುದು ಪದ್ಧತಿ.

ಹೋಳಿಯ ಇತಿಹಾಸ: What is the History of Holi

ಹೋಳಿಯ ಇತಿಹಾಸ ಏನು ಎಂದು ನೋಡೋಣ.  ಹಿಂದೆ ತಾರಕಾಸುರ ಎನ್ನುವ ದುರಹಂಕಾರಿ ಹಾಗೂ ಕ್ರೂರಿಯಾದ ರಾಕ್ಷಸನಿದ್ದನು. ಈ ತಾರಕಾಸುರ ತನಗೆ ಸಾವು ಬರದಿರಲಿ ಎಂದು ತಪಸ್ಸು ಬ್ರಹ್ಮ ದೇವನಿಂದ ನನಗೆ ಮರಣ ಬಾರದಿರಲಿ, ಬಂದರೂ ಭಗವಾನ್ ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಮಾತ್ರವೇ ಸಾವು ಬರಬೇಕು ಎಂಬ ವರವನ್ನು ಪಡೆದಿದ್ದನು. ತನಗೆ ಸಿಕ್ಕ ವರವನ್ನು ದುರುಪಯೋಗ ಮಾಡಿಕೊಂಡು ತಾರಕಾಸುರ ಮೆರೆಯುತ್ತಿರುತ್ತಾನೆ.

ಇತ್ತ ತಪಸ್ಸಿನಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿಲ್ಲ. ಆಗ ದೇವತೆಗಳು ಕಾಮನ ಸಹಾಯ ಬೇಡಿದರು. ಕಾಮ ಹಾಗೂ ಅವನ ಪತ್ನಿ ರತಿದೇವಿ ಈ ಒಳ್ಳೆಯ ಕಾರ್ಯಕ್ಕೆ ಒಪ್ಪಿದ್ದರು. ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಕಾಮನು ಎಚ್ಚರಿಸಿದಾಗ ಕೋಪಗೊಂಡ ಶಿವನು ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡುತ್ತಾನೆ. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಾಗ, ಶಾಂತಗೊಂಡ ಶಿವನು ಪತ್ನಿಯ ಜೊತೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ನೀಡುತ್ತಾನೆ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯ ದಿನ, ಹಾಗಾಗಿ ಈ ದಿನವನ್ನು “ಕಾಮನ ಹುಣ್ಣಿಮೆ” ಎಂದು ಆಚರಿಸಲಾಗುತ್ತದೆ.

ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುವುದರ ಜೊತೆಗೆ ಹಬ್ಬದ ಸಡಗರವನ್ನು ಎಲ್ಲರಲ್ಲೂ ತುಂಬುತ್ತದೆ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎನ್ನುವ ಸಂದೇಶವನ್ನು ಈ ಹಬ್ಬ ಸಾರುತ್ತದೆ. ದುಷ್ಟ ಶಕ್ತಿಗಳು ದೈವ ಶಕ್ತಿಯ ಮುಂದೆ ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸಾರವು ಈ ಹಬ್ಬದ ಹಿಂದಿದೆ. ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗಿ ಹೊಸ ವಿಷಯದ ಪ್ರಾರಂಭದ ಕಡೆಗೆ ಮನುಷ್ಯರು ಹೋಗುತ್ತಾರೆ ಎನ್ನುವುದು ಹೋಳಿ ಹಬ್ಬದ (Holi Festival) ಸಂದೇಶವಾಗಿದೆ.

ಇದು ಹೋಳಿ ಹಬ್ಬದ ಕುರಿತು ಮಹಿತಿಯಾಗಿತ್ತು ತಮ್ಮೆಲಲೇರಿಗೂ ಹ್ಯಾಪಿ ಹೋಳಿ (happy Holi)

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments