ರಾಜ್ಯದ ಹಲವೆಡೆ ಧಾರಾಕಾರ ಮಳೆ, ಮಳೆಯ ಅಬ್ಬರಕ್ಕೆ ಹೈರಾಣಾದ ಜನ
ರಾಜ್ಯದ ಹಲವೆಡೆ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆರಾಯನ ಅಬ್ಬರಕ್ಕೆ ಜನರೂ ಹೈರಾಣಾಗಿದ್ದಾರೆ. ರಾಜ್ಯದಲ್ಲಿ ಎಲ್ಲೆಲ್ಲಾ ಮಳೆ ಸುರಿಯುತ್ತಿದೆ ಎಂಬುವ ವಿವರ ಇಲ್ಲಿದೆ.
ರಾಜ್ಯದ ಬೀದರ್, ಗದಗ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಕಲಬುರಗಿ,ಚಿಕ್ಕಮಗಳೂರು, ಕೋಲಾರ,ಚಿತ್ರದುರ್ಗ, ತುಮಕೂರು ಈ ಕಡೆಯಲ್ಲ ಭಾರಿ ಮಳೆಯಾಗುತ್ತಿದೆ ಭಾರೀ ಮಳೆಯಾಗುತ್ತಿದೆ.
ಇತ್ತ ರಾಯಚೂರು, ದಾವಣಗೆರೆ, ಮಂಡ್ಯ ಜಿಲ್ಲೆಗಳಲ್ಲೂ ಮಳೆ ಸುರಿಯುತ್ತಿದೆ. ಬೆಂಗಳೂರಿನಲ್ಲೂ ನಿನ್ನೆ ಮೊನ್ನೆ ಇಂದ ತುಂತುರು ಮಳೆ ಬೀಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪರಿಸರದಲ್ಲಿ 9 ಸೆಂಟಿಮೀಟರ್ ಮಳೆ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 8 ಸೆಂ. ಮೀ ಮಳೆಯಾಗಿದ್ರೆ, ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಪ್ಪಿನಂಗಡಿ ಮತ್ತು ಮೂಡಬಿದಿರೆಯಲ್ಲಿ 5 ಸೆಂಟಿಮೀಟರ್ ಮಳೆ ದಾಖಲಾಗಿದೆ.
ಕೋಲಾರ ಜಿಲ್ಲೆಯಲ್ಲು ಧಾರಾಕಾರ ಮಳೆ ಬೀಳುತ್ತಿದೆ, ಜಿಲ್ಲೆಯ ಬಂಗಾರಪೇಟೆ, ಗದಗದ ನರಗುಂದದಲ್ಲಿ 5 ಸೆಂಟಿಮೀಟರ್ ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ, ಕಲಬುರ್ಗಿಯ ಜಿಲ್ಲೆಯ ಜೇವರ್ಗಿಯಲ್ಲಿ ತಲಾ 1 sಸೆಂಟಿಮೀಟರ್ ಮಳೆಯಾಗಿದೆ. ನಿರಂತರ ಸುರಿಯುತ್ತಿರುವ ವರ್ಷಧಾರೆಇಂದ ಜನಜೀವನವೂ ಅಸ್ಯವ್ಯಸ್ತಗೊಂಡಿದೆ.
ಹೆಲಿಕಾಪ್ಟರ್ ಹಾರಾಟಕ್ಕೂ ಅಡ್ಡಿಯಾಯಿತು ವರುಣ
ಮಾಜಿ ಸಂಸದ ಜಿ. ಮಾದೇಗೌಡರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಮಂಡ್ಯಕ್ಕೆ ತೆರಳಬೇಕಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹೆಲಿಕಾಪ್ಟರ್ ಹಾರಾಟಕ್ಕೂ ಮಳೆರಾಯನ ಅಬ್ಬರ ಅಡ್ಡಿ ಆಗಿತ್ತು. ಪುರಕವಿಲ್ಲದ ಹವಾಮಾನ ಹೆಲಿಕಾಪ್ಟರ್ ಹಾರಾಟಕ್ಕೆ ಅಡ್ಡಿಯಾಗುತ್ತಿದೆ ಎಂದು ಪೈಲಟ್ ಹೇಳಿದರು. ರಸ್ತೆ ಮಾರ್ಗವಾಗಿ ಹೊರಟರೂ ಮಂಡ್ಯಗೆ ಸಕಾಲಕ್ಕೆ ತಲುಪಲು ಸಾಧ್ಯವಿಲ್ಲ. ಆದ ಕಾರಣ ಜಿ. ಮದೇಗೌಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದು ನೋವಿನ ಸಂಗತಿ. ಆದರೆ ಹನ್ನೊಂದನೇ ದಿನದ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.ಪೂರ್ವನಿಗದಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಜಮಖಂಡಿಯಲ್ಲಿ ಡಿಕೆ ಶಿವಕುಮಾರ್ ಇದ್ದಾರೆ.