Saturday, December 14, 2024
HomeHOMEಡಿಕೆ ಶಿವಕುಮಾರ್ ಆವರ ಜೀವನ ಪರಿಚಯ (DK Shivakumar Biography In kannada)

ಡಿಕೆ ಶಿವಕುಮಾರ್ ಆವರ ಜೀವನ ಪರಿಚಯ (DK Shivakumar Biography In kannada)

ಡಿಕೆ ಶಿವಕುಮಾರ್ ಆವರ ಜೀವನ ಪರಿಚಯ (DK Shivakumar Biography In kannada)

ಡಿಕೆ ಶಿವಕುಮಾರ್ ಅವರ ಸಂಪೂರ್ಣ ಗೆಸರು  ದೊಡ್ಡಳಹಳ್ಳಿ ಕೆಂಪೇಗೌಡ ಶಿವಕುಮಾರ್ . ಇವರು ಮೇ 15 -1962ರಲ್ಲಿ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡ ಆಲಹಳ್ಳಿಯಲ್ಲಿ ಜನಿಸಿದ್ದಾರೆ . 
ಡಿಕೆ ಶಿವಕುಮಾರ್ ಅವರು ರಾಜ್ಯ ರಾಜಕಾರಣದಲ್ಲಿ ಒಂದು ದೊಡ್ಡ ಹೆಸರಾಗಿದ್ದು ಇವರು ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರೆ ಇವರು ರಾಜ್ಯ ಕಾಂಗ್ರೆಸ್  ಪಕ್ಷದ (KPCC) ಅಧ್ಯಕ್ಷರಾಗಿ ತನ್ನ ಕಾರ್ಯ ನಿರ್ವಹಿಸುತ್ತಿದ್ದಾರೆ.
ಡಿಕೆ ಶಿವಕುಮಾರ್ ಕುಮಾರಸ್ವಾಮಿ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದರು ಇದಕ್ಕೂ ಮುಂಚೆ ಸಿದ್ಧರಾಮಯ್ಯ ಸರ್ಕಾರದಲ್ಲಿ ಇಂಧನ ಸಚಿವ ಹುದ್ದೆಯಲ್ಲೂ ಕಾರ್ಯನಿರ್ವಹಿಸಿದ್ದಾರೆ. ಸಧ್ಯಕ್ಕೆ ಅವರು ಕನಕಪುರ ಕ್ಷೇತ್ರದ ಮುಖಂಡರಾಗಿದ್ದರೆ.

ಡಿಕೆ ಶಿವಕುಮಾರ್ ಅವರ ಶಿಕ್ಷಣ

ಡಿಕೆ ಶಿವಕುಮಾರ್ ಅವರ ಕನಕಪುರದ ಕರಿಯಪ್ಪ ವಿದ್ಯಾ ಟ್ರಸ್ಟ್ ನಲ್ಲಿ ತನ್ನ ಆರಂಭಿಕ ಶಿಕ್ಷಣವನ್ನು ಮುಗಿಸಿದ್ದಾರೆ. ಮತ್ತು ತನ್ನ ಡಿಗ್ರಿಯನ್ನು ವಿಶ್ವವಿದ್ಯಾನಿಲಯದಲ್ಲಿ ಪೂರ್ಣಗೊಳಿಸಿದ್ದರು ಅದು ಸಹ ರಾಜ್ಯಶಾಸ್ತ್ರ ವಿಷಯದಲ್ಲಿ. 



ರಾಜಕೀಯ ವೃತ್ತಿ

ಡಿಕೆ ಶಿವಕುಮಾರ್ ಅವರು 1989 ರಲ್ಲಿ ಸಾತನೂರು  ಕ್ಷೇತ್ರದಿಂದ ಎಚ್ ಡಿ ದೇವೇಗೌಡರನ್ನ  ಸೋಲಿಸಿದ್ದರು ಆಗಲೇ ಅವರು ತನ್ನ ಗಿಂತಲೂ ದೊಡ್ಡ ರಾಜಕಾರಣಿಯನ್ನು ಸೋಲಿಸಿದ್ದರು ಎಂಬುವ ಕಾರಣಕ್ಕೆ ಅವರಿಗೆ ದೊಡ್ಡ ಪ್ರಸಿದ್ದಿ ಸಿಕ್ಕಿತು ಮತ್ತು ಅಲ್ಲಿಂದಲೆಯೇ ಡಕ್ ಶಿವಕುಮಾರ್ ಅವರು ರಾಜಕೀಯ ಜೀವನಕ್ಕೆ ಕಾಲಿಟ್ಟರು. ಮತ್ತು ಕಡಿಮೆ ಅವಧಿಯಲ್ಲಿ ಅವರಿಗೆ ಮಂತ್ರಿಗಿರಿ ಸಿಕ್ಕಿತು. ಸಾತನೂರು ಎಚ್ ಡಿ ದೇವೇಗೌಡರನ್ನ ಸೋಲಿಸಿದ ಮೇಲೆ ಅವರು ಎಚ್ ಡಿ ದೇವೇಗೋದರೊಂದಿಗೆ ಬೆಂಗಳೂರು ಗ್ರಾಮೀಣ ಪ್ರದೇಶದಲ್ಲಿ ರಾಜಕಿಯ ಕಾಳಗ ಮುಂದುವರಿಸಿದ್ದರು. 

1999 ರಲ್ಲಿ ಡಿ ಕೆ ಶಿ ಸಾತನೂರು ಇಂದ ಎಚ್ ಡಿ ದೇವೇಗೌಡರ ಮಗ ಎಚ್ ಡಿ ಕುಮಾರ್ ಸ್ವಾಮಿ ಅವರಿಗೆ ಸೋಲಿಸಿದ್ದರು.
ಎಚ್ ಡಿ ದೇವೇಗೌಡರು 2002 ರಲ್ಲಿ ಕನಕಪುರ ದಿಂದ ಒಂದೇ ಬಾರಿ ಡಿಕೆ ಶಿ ಗಿಂತಲೂ ಒಳ್ಳೆ ಪ್ರದರ್ಶನ ನೀಡಿದ್ದರು.
2013 ರಲ್ಲಿ ಡಿಕೆ ಶಿ ಜೆಡಿಎಸ್ ನ ಮಹಾರಥಿ ಪಿಜಿಆರ್ ಸಿಂಧಿಯ ಅವರಿಗು ಕನಕಪುರದಿಂದ ಸೋಲಿಸಿದ್ದಾರೆ. ಆಗ ಶಿವಕುಮಾರ್ ಒಂದು ಲಕ್ಷಕ್ಕೂ ಅಧಿಕ ಮತಗಳು ಡಿಕೆ ಶಿವಕುಮಾರ್ ಗೆ ಬಂದಿದ್ದವು ಜೊತೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಪಿಜಿಆರ್ ಸಿಂಧಿಯ ಅವರಿಗೆ 68,580 ಕ್ಕೂ ಅಧಿಕ ಮತಗಳು ಬಂದಿದ್ದವು. 

2018 ರ ವಿಧಾನಸಭಾ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅವರು 80 ಸಾವಿರ ಮತಗಳಿಂದ ಜಯಭೇರಿ ಬಾರಿಸಿದ್ದರು.
ಡಿಕೆಶಿ ಗೆ  ರಾಜ್ಯ ರಾಜಕೀಯದ ಚಾಣಕ್ಯ ಎಂದು ಕರೆಯಲಾಗುತ್ತೆ. ಎಚ್ ಡಿ ದೇವೇಗೌಡರ ಒಟ್ಟು 3 ಸದ್ಯಸಸ್ಯರಿಗೆ  ಕನಕಪುರ ಮತ್ತು ಸಾತನೂರು ಇಂದ ಸೋಲಿಸಿದ್ದಾರೆ. ಅದರಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ, ಮತ್ತು ಕುಮಾರ್ ಸ್ವಾಮಿಯವರ ಮೊದಲನೇ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಸ್ಥನೂರ್ ಮತ್ತು ಕನಕಪುರದಿಂದ ಸೋಲಿಸಿದ್ದಾರೆ. 
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಸೋಲುತಿರುವಾಗ 2019 ರಲ್ಲಿ ಅವರ ಸಹೋದರ ಡಿಕೆ ಸುರೇಶ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ತಂದು ಕೊಟ್ಟರು.

ಡಿಕೆ ಶಿವಕುಮಾರ್ ಕರ್ನಾಟಕದ ಅತ್ಯಂತ ಶ್ರೀಮಂತ ರಾಜಕಾರಣಿಗಳ ಪಟಿಯಿಯಲ್ಲಿ ಬರುತ್ತಾರೆ. 

2018 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ನಾಮಪತ್ರದಲ್ಲಿ  ತನ್ನ ಒಟ್ಟು ಆಸ್ತಿಯ ಮೊತ್ತ 840 ಕೋಟಿ ಇದೆ ಎಂದು ಹೇಳಿದ್ದರು.
2018 ರ ವಿಧಾನಸಭಾ ಚುನಾವಣೆಯ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಡಿಕೆಶಿ ಅವರ ಪಾತ್ರ ಬಹುಮುಖ್ಯವಾದ್ದಾಗಿತ್ತು. ಮತ್ತು ಮೈತ್ರಿ ಸರ್ಕಾರ ಸ್ಥಾಪಿಸಿದ ಒಟ್ಟು ಶ್ರೇಯ ಡಿಕೆ ಶಿವಕುಮಾರ್ ಅವರಿಗೆ ಸಲ್ಲತ್ತೆ.
2001 ರಲ್ಲಿ ಕಾಂಗ್ರೆಸ್ ಮೇಲೆ ಬಂದಿರುವ ಅಪ್ಪತ್ತಿನಲ್ಲಿ ಮಹಾರಾಷ್ಟ್ರದ ಮುಖಂಡರ ಎಲ್ಲ ಉಸ್ತುವಾರಿ ಡಿಕೆ ಶಿ ನೋಡಿಕೊಂಡಿದ್ದರು. 
2017 ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲೇ ಇತರೆ ರಾಜಕೀಯ ಪಕ್ಷದಿಂದ ಗುಜರಾತ್ ಕಾಂಗ್ರೆಸ್ ಪಕ್ಷದ ಒಟ್ಟು 42 ಮುಖಂಡರಿಗೆ ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಸ್ಥಳಾಂತರ ಮಾಡಲು ಸಹಾಯ ಮಾಡಿದ್ದರು.
ಅದರಿಂದ ಅಹಮದ್ ಪಟೇಲ್ ಎಂಬವರಿಗೆ ಗೆಲುವು ಸಿಕ್ಕಿತು , ಅವರು ಪಾರ್ಟಿಯ ಸದಸ್ಯರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಹತ್ತಿರದ ವಿಶ್ವಾಸದ ವ್ಯಕ್ತಿಯಾಗಿದ್ದರೆ. 

ಡಿಕೆ ಶಿ ವಯಕ್ತಿಕ ಜೀವನ 

ಡಿಕೆ ಶಿವಕುಮಾರ್ ಅವರ ತಂದೆಯ ಹೆಸರು ಕೆಂಪೇಗೌಡ ಮತ್ತು ಅವರ ತಾಯಿಯ ಹೆಸರು ಗೌರಮ್ಮ ಇದ್ದು , ಅವರ ಜನನ ಬೆಂಗಳೂರಿನ ಹತ್ತಿರ ಕನಕಪುರ ದಲ್ಲಿ ಮೇ 15 – 1962 ರಲ್ಲಿ ಆಗಿದೆ.
ಅವರ ಸಹೋದರನ ಹೆಸರು ಡಿಕೆ ಸುರೇಶ್ ಅವರು ಸಹ ಲೋಕಸಭಾ ಸಾದ್ಯಸಸ್ಯರಾಗಿದ್ದರೆ.
1993 ರಲ್ಲಿ ಡಿಕೆ ಶಿವಕುಮಾರ್ ಅವರು ಪತ್ನಿ ಉಷಾ ಜೊತೆ ಮದುವೆ ಆಗಿದ್ದರು, ಅವರಿಬ್ಬರಿಗೆ ಇಬ್ಬರು ಹೆಣ್ಣುಮಕ್ಕಳ್ಳಗಿದ್ದು ಒಬ್ಬ ಮಗ ಇದ್ದಾನೆ. ಹೆಣ್ಣುಮಕ್ಕಳ ಹೆಸರು ಐಶ್ವರ್ಯ ಮತ್ತು ಅಭರಣ್ ಇದ್ದು . ಮಗನ ಹೆಸರು ಆಕಾಶ್ ಇದೆ. ಅವರು ಒಕ್ಕಲಿಗ ಸಮುದಾಯದವರಾಗಿದ್ದರೆ. 

ಡಿಕೆಶಿ ವಿವಾದಗಳು ಮತ್ತು ಭ್ರಷ್ಟಾಚಾರದ ಆರೋಪ

ಇನಕಮ್ ಟ್ಯಾಕ್ಸ್ ದಾಳಿ.   

ಆಗಸ್ಟ್ 2- 2017 ರಂದು ಡಿಕೆ ಶಿವಕುಮಾರ್ ಅವರ ಬೆಂಗಳೂರಿನ ಕಾರ್ಯಾಲಕ್ಕೆ ಐಟಿ ದಾಳಿ ನಡೆಸಿತ್ತು.
ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿ ಇರುವ ಅವರ ಸೊಹೋದರ ಡಿಕೆ ಸುರೇಶ್ ಅವರ ಸ್ವಾಮಿತ್ವದ ಇಗಲ್ ಟನ್ ಗೋಲ್ಫ್ ರಿಜೋರ್ಟ್, ಮೇಲೆ  ಐಟಿ ದಾಳಿ ನಡೆಸಿತ್ತು.
ಅಷ್ಟಲ್ಲದೆ , ದೆಹಲಿ , ಬೆಂಗಳೂರು ಮೈಸೂರು ಚೆನೈ ಮತ್ತು ಸ್ವ ಕ್ಷೇತ್ರ ಕನಕಪುರದಲ್ಲಿ ಸೇರಿ ಒಟ್ಟು , 67 ಕಡೆಗೆ , ಸುಮಾರು 80 ಗಂಟೆಗಳ ಕಾಲ , ಬರೋಬ್ಬರಿ 300 ಅಧಿಕಾರಿಗಳಿಂದ ತಪಾಸಣೆ ನಡೆಸಲಾಯಿತು.  
ಆಗ ಅವರ ದೆಹಲಿ ನಿವಾಸದಿಂದ 8 ಕೋಟಿ ರೂಪಾಯಿ ಮೊತ್ತ ಜಪ್ತಿ ಮಾಡಲಾಯಿತು ಅದಲ್ಲದೆ ಡಿಕೆಶಿ ಯ ಇತರೆ ನಿವಾಸಗಳು , ಫಾರ್ಮ್ ಹೌಸ್ , ಮತ್ತು ಇತರೆ ಸ್ಥಳಗಳಿಂತ ಒಟ್ಟು 2 ಕೋಟಿ ರೂಪಾಯಿಯಷ್ಟು ನಗದು ಅಧಿಕಾರಿಗಳಿಂದ ಜಪ್ತಿ ಮಾಡಲಾಗಿತ್ತು. ಕೇಂದ್ರ ರಿಸರ್ವ್ ಪೊಲೀಸ್ ದಳಕ್ಕೆ ದಾಳಿಯ ನಡೆಸುವ ವೇಳೆಯಲ್ಲಿ ಸುರಕ್ಷ ನೀಡುವುದಕ್ಕೆ ಕರೆಯಲಾಗಿತ್ತು. ಗುಜರಾತ್ ಕಾಂಗ್ರೆಸ್ ನ 44 ವಿಧಾನಸಭಾ ಸದಸ್ಯರ ಮೇಲೆ   ನಡೆಸಿದ ಬಳಿಕವೇ ಡಿಕೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಲಾಯಿತು.      ಆಗ ರಾಜ್ಯಸಭಾ ಚುನಾವಣೆಗೂ ಮುನ್ನ ಅನೇಕ ಮುಖಂಡರಿಗೆ ಭಾರತೀಯ ಜನತಾ ಪಾರ್ಟಿ (BJP) ಗೆ ಸೇರಲು ಬಿಡಲಾಯಿತು. 
ಈ ದಾಳಿ ಆಗಸ್ಟ್ 5- 2017 ರಂದು ಮುಗಿಯಿತು ಆಗ ದಾಳಿ ನಡೆಸಿದ ಬಳಿಕ ಬರೋಬ್ಬರಿ 300 ಕೋಟಿಯ ಅಘೋಷಿತ ಹಣವನ್ನು ಜಪ್ತಿ ಮಾಡಲಾಯಿತು. 
ದಾಳಿಯ ಬಳಿಕ ಡಿಕೆ ಶಿ ಗೆ ಮತ್ತು ಅವರ ಬೆಂಬಲಿಗರಿಗೆ ಜಮೀನಿನ ಮೇಲೆ ಬಿಡಲಾಯಿತು.  2019 ರಲ್ಲಿ ಡಿಕೆ ಶಿ ಗೆ ಮನಿ ಲ್ಯಾಂಡ್ರಿಂಗ್ ಮತ್ತು ಆಯ್ಕರ್ ಕದ್ದಾಳೆಕೆಯ ಆರೋದಡಿ ಅವರನ್ನು ಬಂಧಿಸಲಾಯಿತು.ಆಗ ಅವರು ಕರ್ನಾಟಕ ಬಿಜೆಪಿ ಕಡೆಯಿಂದ ಹೇರಲಾಗಿರುವ ಆರೋಪಗಳು ಸುಳ್ಳು ಮತ್ತು ಇದು ರಾಜಕೀಯ ಷಡ್ಯಂತ್ರ ಎಂದು ಹೇಳಿದ್ದರು.

ಅಕ್ರಮ ಉತ್ಖನನದ ಆರೋಪ

2015 ರಲ್ಲಿ ಕರ್ನಾಟಕ ಹೈಕೋರ್ಟ್ ಡಿಕೆ ಶಿವಕುಮಾರ್ ಅವರ ಕುಟುಂಬದ ಸಾದ್ಯಸರ ಮೇಲೆ ಪಿಐಎಲ್ ಮೇಲೆ ಗ್ರೇನೈಟ್ ಉತ್ಖನನ ಮಾಡಿದ್ದಾರೆ ಎಂದು ನೋಟಿಸ್ ಕೊಟ್ಟಿತ್ತು. ಅದರಲ್ಲಿ ಕನಕಪುರ ಮತ್ತು ರಾಮನಗರ ಉಪಜಿಲ್ಲೆಗಳಲ್ಲಿ ಅಕ್ರಮ ಖನನ ದಲ್ಲಿ ಭಾಗಿಯಾಗಿದ್ದಾರೆ ಎಂದು ಅವರ ಮೇಲೆ ಆರೋಪವಿತ್ತು.

ಶಾಂತಿನಗರ ಹೌಸಿಂಗ್ ಸೊಸೈಟಿ ಹಗರಣದದಲ್ಲಿ ಭಾಗಿ ಎನ್ನುವ ಆರೋಪ

2015 ರಲ್ಲಿ ಭೂಮಿ ಕಾರ್ಯಕರ್ತರು ಡಿಕೆ ಶಿ ಮತ್ತು ಆಚಾರ ಸಹೋದರ ಡಿಕೆ ಸುರೇಶ್ ಅವರ ಮೇಲೆ , ಬೆಂಗಳೂರಿನ ಶಾಂತಿನಗರದಲ್ಲಿ ಬಡವರ ಮತ್ತು ವಂಚಿತರ ಅವಾಸಕಾಗಿ 66 ಎಕರೆ ಜಮೀನು ಲಪಾತಾಯಿಸಿ ವಂಚಿಸಿದ್ದಾರೆ ಎಂದು ಆರೋಪ ಮಾಡಿದ್ದರು.
ಆದರೆ ಆಗಿನ  ಸಹಕಾರಿ ಸಚಿವ ಎಚ್ ಎಸ್ ಮಹದೇವ್ ಪ್ರಸಾದ್ ಅವರು ಈ ವಂಚನೆಯಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿರುವ ಯಾವದೇ ಪುರಾವೆಗಳು ಸಿಕ್ಕಿಲ್ಲ ಎನ್ನುತ್ತಾ ಕ್ಲಿನ್ ಚಿಟ್ ಕೊಟ್ಟರು. 

 ED ವತಿಯಿಂದ ಬಂಧನ

2019 ರಲ್ಲಿ ಮನಿ ಲಾಂಡ್ರಿಗ್ ಆರೋಪದಡಿ ಡಿಕೆ ಶಿವಕುಮಾರ್ ಅವರಿಗೆ ED ಕಡೆಯಿಂದ ಕರೆಯಲಾಯಿತು.
ಡಿಕೆ ಶಿ ಅವರಿಗೆ ಸತತ9 ದಿನಗಳ ಕಾಲ ED ತಪಾಸಣೆ ನಡೆಸಿತ್ತು. ಮತ್ತು ಅವರಿಗೆ ಕ್ರೋರ್ಟ್ ನಲ್ಲಿ ಹಾಜರು ಪಡಿಸಲಾಯಿತು. 
ಇಡಿಯ ವಿಚಾರಣೆಯಲ್ಲಿ ಡಿಕೆ ಶಿವಕುಮಾರ್ ಸಹಕರಿಸುತ್ತಿಲ್ಲ ಎಂದು , ಇಡಿ ಅಧಿಕಾರಿಗಳು ಅವರಿಗೆ ಕ್ರೋರ್ಟ್ ಗೆ ಒಪ್ಪಿಸುವ ತೀರ್ಮಾನ ತೆಗೆದುಕೊಂಡರು.
ಮತ್ತು ಡಿಕೆ ಶಿವಕುಮಾರ್ ಅವರಿಗೆ ಕೋರ್ಟ್, ಕೋರ್ಟ್ ಬಂಧನಕ್ಕೆ ತೆಗೆದುಕೊಂಡರು.
ಮತ್ತು ಸಪ್ಟೆಂಬರ್ 3- 2019 ರಂದು ಡಿಕೆ ಶಿ ಗೆ ಬಂಧಿಸಿದ್ದರು.
ಆಗ ಡಿಕೆ ಶಿವಕುಮಾರ್ ಗೆ ED ಕಾರ್ಯಾಲಯದಿಂದ ತಿಹಾಡ್ ಜೈಲಿಗೆ ಸ್ಥಳಾಂತರಿಸಲಾಯಿತು. ಆಗ ಕಾಂಗ್ರೆಸ್ ನಾಯಕರು ಇದು ಬಿಜೆಪಿಯ ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದದು.ಡಿಕೆ ಶಿವಕುಮಾರ್ ಅವರಿಗೆ ED ಅಧಿಕಾರಿಗಳು ವಿಚಾರಣೆಯಲ್ಲಿ ಸರಿಯಾದ ವ್ಯವಹಾರ ಮಾಡಿಲ್ಲ ಎಂದು ಆರೋಪಿಸಿದ್ದರು.
 ಡಿಕೆ ಶಿವಕುಮಾರ್ ಅವರು ಜಾಮೀನನ್ನು ಪಡೆಯಲು 2 ಬಾರಿ ಅರ್ಜಿ ಸಹ ಸಲ್ಲಿಸಿದ್ದರು ಎರೆಡು ಬಾರಿ ಸಹ ಅವರ ಅರ್ಜಿ ವಜಾಗೊಳಿಸಲಾಯಿತು. ಬಳಿಕ ಆಕ್ಟೊಬರ್ 23- 2019 ರಲ್ಲಿ ED ನ್ಯಾಯಾಲಯ ಅವರಿಗೆ ಕೆಲವು , ಕಂಡಿಷನ್ಸ್ ಮೇಲೆ , ಜಮೀನು ಕೊಟ್ಟರು ಆ ಕಂಡೀಷನ್ ನಲ್ಲಿ ಸಾಕ್ಷಿಗಳನ್ನು ನಾಶ ಪಡಿಸಲು ಯತ್ನ  ಮಾಡುವಂತಿಲ್ಲ, ಮತ್ತು ಅನೇಕ ಕಂಡಿಷನ್ಸ್ ಹಾಕಿ ಬಾಂಡ್ ಮೊತ್ತ 25 ಲಕ್ಷ ರೂಪಾಯಿ ನಗದು ಇತ್ತು.
 

ಯೇಸುಕ್ರಿಸ್ತ ಮೂರ್ತಿ ಸ್ಥಾಪನೆ 

ಶಿವಕುಮಾರ್ ಅವರು ಕನಕಪುರದ ಕಪಾಲಿ ಬೆಟ್ಟದಲ್ಲಿ ವಿಶ್ವದ ಅತಿ ದೊಡ್ಡ ಯೇಸುವಿನ ಮೂರ್ತಿಯನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮುಂದಿಟ್ಟರು . ಆಗ ಈ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಯಿತು. ಈ ಜಾಗದಲ್ಲಿ ಅಕ್ರಮವಾಗಿ ಧರ್ಮಾಂತರನಡೆಯುತ್ತಿದೆ ಎಂದು ಬಿಜೆಪಿ ಯ ವಿವಾದ ಮೊದಲಿಂದಲೆಯೇ ಎನ್ನಲಾಗುತ್ತೆ .
ಇದೆ ಪ್ರಕಾರ ಈ ಕಾರ್ಯವನ್ನು ವಿರೋಧದ ನಡುವೆಯೇ ಮುಂದೆ ಇಡಲಾಯಿತು. ಬಿಜೆಪಿ ಮಂತ್ರಿಗಳು ಈ ಕಾರ್ಯಕ್ಕೆ ಪಡೆದಿರುವ ಭೂಮಿ ಅವೈದ್ಯಾ ವಾಗಿದ್ದು . ಈ ಭೂಮಿಯ ಸಮೀಕ್ಷೆಯನ್ನು ಸರ್ಕಾರಿ ಅಧಿಕಾರಿಗಳೇ ನಡೆಸಬೇಕು ಎಂದು ಹೇಳಿದ್ದರು.
ಅನೇಕ ಹಿಂದೂ ಸಂಘಗಳಿಂದ ಈ ಜಾಗದಲ್ಲಿ ಈ ಕಾರ್ಯಕ್ಕೆ ವಿರೋಧ ಪಫೀಸಲಾಯಿತು ಮತ್ತು ಕನಕಪುರದಲ್ಲಿ ಹೋರಾಟ ಮಾಡುವ ಎಚ್ಚರಿಕೆ ಕೊಟ್ಟರು.
ಆರ್ ಎಸ್ ಎಸ್ ಮುಖಂಡ ಕಲ್ಲಾದಕ ಪ್ರಭಾಕರ್ ಅವರು ಬಿಜೆಪಿಯ ಪರವಾಗಿ , ಈ ನಿರ್ಮಾಣದ ಕರ್ಯಕ್ಕೆ ವಿರೋಧ ಪಡಿಸುತ್ತ, ಅವರು ಕನಕಪುರದಲ್ಲಿ ವಿಶಾಲವಾದ ರ್ಯಾಲಿಯ ನೇತೃತ್ವ ನಡೆಸಿದ್ದರು. ಕಪಾಲಿ ಬೆಟ್ಟದಲ್ಲಿ ಒಂದು ಹಿಂದೂ ಮಂದಿರವು ಇದೆ, ಅನೇಕ ಹಿಂದುಗಳಿಗೆ ಈ ಮಂದಿರ ತೀರ್ಥಕ್ಷೇತ್ರವಾಗಿದೆ ಮತ್ತು ಆಶ್ರಯದ ಸ್ಥಳ ಇದಾಗಿದೆ. 
ಇದಿಷ್ಟು (ಕೆಪಿಸಿಸಿ kpcc) ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬಗ್ಗೆ ಮಾಹಿತಿ ಕೊಟ್ಟಿದ್ದೆವೇ ಮತ್ತಷ್ಟು , ಕನ್ನಡದಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ . 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments