Saturday, December 14, 2024
HomeHOMEಕೇಂದ್ರ ಗೃಹ ಮಂತ್ರಿ ಅಮಿತ್ ಶಾ (Amit Shah) ಜೀವನ ಚರಿತ್ರೆಮತ್ತು ಅವರಿಗೆ...

ಕೇಂದ್ರ ಗೃಹ ಮಂತ್ರಿ ಅಮಿತ್ ಶಾ (Amit Shah) ಜೀವನ ಚರಿತ್ರೆಮತ್ತು ಅವರಿಗೆ ಸಂಬಂಧ ಪಟ್ಟಂತ ವಾದ ವಿವಾದಗಳು.Home Minister Amit Shah’s biography and his controversy.

 ಗೃಹ ಮಂತ್ರಿ ಅಮಿತ್ ಶಾ (Amit Shah) ಜೀವನ ಚರಿತ್ರೆ ಮತ್ತು ಅವರಿಗೆ ಸಂಬಂಧ ಪಟ್ಟಂತ ವಾದ ವಿವಾದಗಳು. Home Minister Amit Shah’s biography and his controversy.

ಅಮಿತ್ ಶಾ (Amit Shah) ಅವರು ಭಾರತೀಯ ಜನತಾ ಪಕ್ಷದ ನಂಟು ಹೊಂದಿದ್ದಾರೆ. ಅವರು bjp ಪಕ್ಷದ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಅಮಿತ್ ಶಾ (Amit Shah) ಅವರ ಬಲದ ಮೇಲೆ bjp ಪಕ್ಷದ ಹಿಡಿತವಿಲ್ಲದ ಅನೇಕ ರಾಜ್ಯಗಳಲ್ಲೂ ಜಯ ಗಳಿಸಿದೆ. 

ಅಮಿತ್ ಶಾ ಅವರು ರಾಜಕೀಯದಲ್ಲಿ ಅನೇಕ ದಶಕಗಳಿಂದ ಸಕ್ರಿಯವಾಗಿದ್ದಾರೆ. Bjp ಪಕ್ಷ ಬೆಳೆಯಲು, ಮತ್ತು ಅವರ ಮಂತ್ರಿಸ್ಥಾನ ಪಡೆಯಲು ಅಮಿತ್ ಶಾ ಸಾಕಷ್ಟು ಕಷ್ಟಪಟ್ಟಿದ್ದಾರೆ.

2019 ರ ಲೋಕಸಭಾ ಚುನಾವಣೆ ಗೆದ್ದಮೇಲೆ ನರೇಂದ್ರ ಮೋದಿಯವರು ಅಮಿತ್ ಶಾ ಗೆ ಗೃಹ ಮಂತ್ರಿ ಸ್ಥಾನ ಕೊಟ್ಟಿದ್ದಾರೆ.


ಅಮಿತ್ ಶಾ (Amit Shah) ಅವರ ಜೀವನ ಚರಿತ್ರೆ (Biography of Amit Shah)


ಸಂಪೂರ್ಣ ಹೆಸರು 

ಅಮಿತ್ ಅನಿಲ್ ಚಂದ್ರ ಶಾ

ಜನ್ಮ ಸ್ಥಳ 

ಮುಂಬೈ ಮಹಾರಾಷ್ಟ್ರ 

ಜನ್ಮ ದಿನಾಂಕ 

1964 ಅಕ್ಟೋಬರ್ 22 1964 

ವೃತ್ತಿ 

ಭಾರತೀಯ ರಾಜಕಾರಣಿ 

ಅಧಿಕಾರ 

ಬಿಜೆಪಿ ಪಾರ್ಟಿ ವರ್ತಮಾನ ಅಧ್ಯಕ್ಷ ,ವರ್ತಮಾನ ಗೃಹ ಮಂತ್ರಿ , ಮಾಜಿ ಶಾಸಕ , ರಾಜ್ಯಸಭಾ ಸದಸ್ಯ, 

ತಾಯಿ ಹೆಸರು 

– ಕುಸುಮಬ 

ತಂದೆ ಹೆಸರು 

ಅನಿಲ್  ಚಂದ್ರ ಶಾ 

ಪತ್ನಿ ಹೆಸರು 

ಸೋನಲ್ ಶಾ 

ಸಹೋದರ ಸಹೋದರಿಯರು 

ಮಕ್ಕಳ್ಳು 

ಒಬ್ಬ ಮಗ 

ಎತ್ತರ 

5.6 

ತೂಕ 

81+

ಕಣ್ಣು ಬಣ್ಣ 

ಕಪ್ಪು 

ಕೇಶ ಬಣ್ಣ 

ಬಿಳಿ 

ಧರ್ಮ 

ಹಿಂದೂ 

ಸಂಪೂರ್ಣ ಆಸ್ತಿ 

ಸುಮಾರು 34 ಕೋಟಿ (2014 ರ ವರದಿಯ ಪ್ರಕಾರ)

ಅಮಿತ್ ಶಾ (Amit Shah) ಅವರ ಜನ್ಮ ಮತ್ತು ಶಿಕ್ಷಣ (Birth and Education of Amit Shah)

ಅಮಿತ್ ಶಾ (Amit Shah) ಅವರ ಜನ್ಮ ಮಹಾರಾಷ್ಟ್ರ ರಾಜ್ಯದ ಒಂದು ಗುಜರಾತಿ ಕುಟುಂಬದಲ್ಲಿ 1964 ರಲ್ಲಿ ಆಗಿತ್ತು. ಇವರ ಕುಟುಂಬ ಗುಜರಾತ್ ನ ಮೇಹಸಾನ ಎನ್ನುವ ಹಳ್ಳಿಗೆ ಸಂಬಂದಿಸುತ್ತೆ. ಮತ್ತು ಅಮಿತ್ ಶಾ ಅವರು ತನ್ನ ಆರಂಭಿಕ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿದ್ದರು.

ಅಮಿತ್ ಶಾ ಅವರು ವಿಜ್ಞಾನ ವಿಷಯದ ವಿದ್ಯಾರ್ಥಿ ಆಗಿದ್ದರು ಮತ್ತು ಸಿ. ಯು ಶಾ ಸಾಯನ್ಸ್ ಕಾಲೇಜ್ ಇಂದ ವಿಜ್ಞಾನ ವಿಷಯದಿಂದ ಡಿಗ್ರಿ ಕಂಪ್ಲೇಂಟ್ ಮಾಡಿದ್ದಾರೆ. ಈ ಮಹಾವಿದ್ಯಾಲಯ ಅಹಮದಾಬಾದ್ ನಲ್ಲಿದೇ. 

ಅಮಿತ್ ಶಾ ಅವರ ಕುಟುಂಬ (Amit Shah’s Family)

ಈ ಬಲಿಷ್ಠ ರಾಜಕಾರಣಿಯ ತಂದೆಯ ಹೆಸರು ಅನಿಲಚಂದ್ರ ಇದ್ದು ಮತ್ತು ಅವರು ವ್ಯಾಪಾರ ನಡೆಸುತ್ತಿದ್ದರು.ಅವರ ತಾಯಿ ಹೆಸರು ಕುಸುಮಬ ಇದ್ದು ಅವರು ಏನು ಕೆಲಸ ಮಾಡುತ್ತಿದ್ದರು ಎಂದು ಯಾವದೇ ತರಹದ ಮಾಹಿತಿ ಇಲ್ಲ. 

ಅಮಿತ್ ಶಾ (Amit Shah) ಅವರ ಪತ್ನಿಯ ಹೆಸರು ಸೋನಲ್ ಇದ್ದು ಇವರಿಬ್ಬರಿಗೆ ‘ಜಯ್’ ಎನ್ನುವ ಒಂದು ಗಂಡು ಮಗ ಇದ್ದಾನೆ. ಜಯ್ ಶಾ ನಿರಾಮ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಕಂಪ್ಲೀಟ್ ಮಾಡಿದ್ದಾರೆ.

ಸದ್ಯಕ್ಕೆ ಜಯ್ ಶಾ ವೃತ್ತಿಪರ ವ್ಯಾಪರಿಯಾಗಿದ್ದಾರೆ.

ಅಮಿತ್ ಶಾ ಅವರ ರಾಜಕೀಯ ವೃತ್ತಿಯ ಪ್ರಾರಂಭ

ಅಮಿತ್ ಶಾ (Amit Shah) 1983 ರಿಂದ ಆರ್ ಎಸ್ ಎಸ್ ನಂಟು ಹೊಂದಿದ್ದಾರೆ.

ಅಮಿತ್ ಶಾ ಅವರು ಕಾಲೇಜ್ ದಿನಗಳಲ್ಲೇ ರಾಜಕೀಯಕ್ಕೆ ಇಳಿಯುವ ನಿರ್ಣಯ ತೆಗೆದುಕೊಂಡರು, 1983 ರಲ್ಲಿ ಅಖಿಲ ಭಾರತೀಯ ಪರಿಷದ್ ಗೆ ಸೇರಿಕೊಂಡಿದ್ದರು.

ಬಳಿಕ 1986 ರಲ್ಲಿ BJP ಗೆ ಸೇರಿಕೊಂಡರು ಮತ್ತು ಪಾರ್ಟಿಯ ಪ್ರಚಾರ ಕಾರ್ಯಕ್ಕಾಗಿ ತೊಡಗಿಕೊಂಡರು.

1997 ರಲ್ಲಿ ಅಮಿತ್ ಶಾ ಅವರಿಗೆ BJP ಇಂದ ವಿಧಾನಸಭಾ ಚುನಾವಣೆ ನಿಲ್ಲುವಂತೆ ಪಾರ್ಟಿ ವತಿಯಿಂದ ಟಿಕೆಟ್ ಸಹ ಕೊಟ್ಟಿದ್ದರು.

1997 ರ ಚುನಾವಣೆಯಲ್ಲಿ ಅಮಿತ್ ಶಾ ಅವರು ಭರ್ಜರಿ ಗೆಲುವು ಕಂಡರು. ಬಳಿಕ ಮುಂಬರುವ ಮೂರು ವಿಧಾನಸಭಾ ಚುನಾವಣೆಯನ್ನು ಇದೆ ಸೀಟ್ ಇಂದ ಅಭ್ಯರ್ಥಿಯಾಗಿ ನಿಂತರು , ಸತತ ಮೂರು ಬಾರಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡರು.

 2002 ರಲ್ಲಿ ಸಿಕ್ಕಿತು ಸಚಿವ ಸ್ಥಾನ


ಗುಜರಾತ್ ಚುನಾವಣೆಯಲ್ಲಿ BJP ಬಹುಮತದಿಂದ ಗೆದ್ದು ಬಂದಾಗ , ಅಮಿತ್ ಶಾ (Amit Shah) ಅವರಿಗೆ ಗುಜರಾತ್ ರಾಜ್ಯದ ಅನೇಕ ಸಚಿವ ಸ್ಥಾನದ ಜವಾಬ್ದಾರಿ ಕೊಟ್ಟಿದ್ದರು.

ಯಾವಗೆಲ್ಲ ಅಮಿತ್ ಶಾ ಅವರಿಗೆ ಸಚಿವ ಸ್ಥಾನ ಸಿಕ್ಕಿತ್ತೋ ಯಾವಾಗ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದರು ಅವಾಗ ಅಮಿತ್ ಶಾ ಅವರು ಸಚಿವಸ್ಥಾನ ದಲ್ಲಿ ಇದ್ದರು.

ಇಷ್ಟೇ ಅಲ್ಲ 2000 ರಲ್ಲಿ ಅಮಿತ್ ಶಾ ಅವರಿಗೆ ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸ್ಥಾನದಲ್ಲೂ ನಿಯುಕ್ತಿ ಮಾಡಲಾಗಿತ್ತು. 

ಜೊತೆಗೆ ಅಮಿತ್ ಶಾ ಗುಜರಾತ್ ರಾಜ್ಯದ ಚೆಸ್ ಅಸೋಸಿಯೇಷನ್ ನ ಅಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದ್ದಾರೆ.

2014 ರ ಲೋಕಸಭಾ ಚುನಾವಣೆಯಲ್ಲಿ ಮೋದಿಗಾಗಿ ಪ್ರಚಾರ

ಶಾ ಮತ್ತು ಮೋದಿ ಮೂಲತಃ ಒಂದೇ ರಾಜ್ಯದಿಂದ ಸೇರಿರುವ ಕಾರಣ ಮೋದಿ ಮತ್ತು ಶಾ ಒಬ್ಬರಿಗೊಬ್ಬರು ತುಂಬಾನೇ ಹಳೆ ಕಾಲದಿಂದ ಪರಿಚಯವಿದ್ದಾರೆ.

2014 ರ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ (Amit Shah) ಅವರು BJP ಪ್ರತಿಗಾಗಿ ಮತ್ತು ನರೇಂದ್ರ ಮೋದಿಗಾಗಿ ಭರ್ಜರಿ ಪ್ರಚಾರವನ್ನು ನಡೆಸಿದ್ದರು. ಮತ್ತು ಅದೇ ಚುನಾವಣೆಯಲ್ಲಿ BJP ಬಹುಮತದಿಂದ ಗೆದ್ದು ಬಂತು.

ಅಲ್ಲದೆ ಅಮಿತ್ ಶಾ BJP ಪಾರ್ಟಿಯ ಇತರೆ ನಾಯಕರ ಪ್ರಚಾರಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ. 1991 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ ಕೆ ಅಡ್ವಾಣಿ ಗೋಸ್ಕರ ತಂತ್ರ ರೂಪಿಸಿದ್ದರು.

2014 ರ ಬಿಜೆಪಿ ಪಾರ್ಟಿಯ ಅಧ್ಯಾನಾಗಿ ಆಯ್ಕೆ

2014 ರಲ್ಲಿ BJP ಪಾರ್ಟಿಯ ಅಧ್ಯಕ್ಷನಾಗಿ ಆಯ್ಕೆ ಆದರೂ. 

ಅಮಿತ್ ಶಾ (Amit Shah) ಅವರು ಪಾರ್ಟಿಯ ಅಧ್ಯಕ್ಷನಾದಾಗ , ಪಾರ್ಟಿಯ ಗೆಲುವಿಗಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ.

ಅದೇ ವರ್ಷ 2014 ರಲ್ಲಿ ಪಾರ್ಟಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಅಮಿತ್ ಶಾ ಅವರು ಪಾರ್ಟಿಯ ಅಧ್ಯಕ್ಷರಾದ ಬಳಿಕ ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬರಿಸಿದ್ದರು.

ಮತ್ತು 2016 ರಲ್ಲಿ ಮತ್ತೊಮ್ಮೆ ಪಾರ್ಟಿಯ ಅಧ್ಯಕ್ಷನಾಗಿ ಆಯ್ಕೆಯಾದರು.

ಆದರೆ BJP ಪಕ್ಷ 2019 ರ ಲೋಕಸಭಾ ಚುನಾವಣಾ ಗೆದ್ದ ಮೇಲೆ ಮೋದಿ ಸರ್ಕಾರದ ಹೊಸ ಕ್ಯಾಬಿನೆಟ್ ಮಂತ್ರಿ ಗಳ ಪಟ್ಟಿಯಲ್ಲಿ ಅಮಿತ್ ಶಾ ಅವರಿಗೆ ಗೃಹ ಮಂತ್ರಿ (Minister of Home Affairs) ಮಾಡಲಾಯಿತು.

 2017 ರಲ್ಲಿ ರಾಜ್ಯಸಭೆಗೆ ರವಾನೆ

2017 ರಲ್ಲಿ BJP ವತಿಯಿಂದ ಅಮಿತ್ ಶಾ (Amit Shah) ಗೆ ರಾಜ್ಯಸಭೆಗೆ ಕಳುಹಿಸಲಾಯಿತು. ಸಧ್ಯಕ್ಕೆ ಸಹ ರಾಜ್ಯಸಭ ಸದಸ್ಯನಾಗಿ ಇದ್ದಾರೆ. ಇವರಿಗೆ ಗುಜರಾತ್ ರಾಜ್ಯದ ಸೀಟ್ ಇಂದ ರಾಜ್ಯಸಭೆಗೆ ಕಳುಹಿಸಲಾಗಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ಅವರ ಪಾತ್ರ

ನರೇಂದ್ರ ಮೋದಿಯವರ ರೈಟ್ ಹ್ಯಾಂಡ್ ಎಂದೇ ಬಿಂಬಿಸುವ ಅಮಿತ್ ಶಾ (Amit Shah) 2019 ರ ಲೋಕಸಭಾ ಚುನಾವಣೆಯಲ್ಲಿ ಗುಜರಾತ್ ನಾ ಗಾಂಧಿನಗರದಿಂದ ಅಖಾಡಕ್ಕೆ ಇಳಿದಿದ್ದರು. ಅದರಲ್ಲಿ ಕಾಂಗ್ರೆಸ್ ಡಾ. ಸಿ ಜೆ ಚಾವಡಾ ಅವರಿಗೆ ಹಿಂದಕ್ಕೆ ಸರಿಸಿ 5 ಲಕ್ಷಕ್ಕೂ ಅಧಿಕ ಮತಗಳಿಂದ ಮೋದಿಯವರು ಜಯ ಗಳಿಸಿದ್ದರು. 

ಇದರಲ್ಲಿ ಎಲ್. ಕೆ ಅಡ್ವಾಣಿಯ ಹಳೆ 4.83 ಲಕ್ಷ ವೋಟ್ ಗಳ ರೆಕಾರ್ಡ್ ಸಹ ಮುರಿದು ಹಾಕಿದ್ದರು.

2019 ರ ಈ ಚುನಾವಣೆಯಲ್ಲಿ ಮುಖ್ಯವಾಗಿ ಸ್ಪರ್ಧೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಡಾ. ಕೆ.ಸಿ ಚಾವಡಾ ಮಧ್ಯೆ ನಡೆದಿತ್ತು. ಇದರಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗೆಲುವು ಸಾಧಿಸಿದ್ದರು.

ಚುನಾವಣೆ ವೆಬ್ಸೈಟ್ ಒಂದರ ವರದಿಯ ಆಧಾರ ಅಮಿತ್ ಶಾ ಅವರು ಶೇ 69.7 ರಷ್ಟು ವೋಟ್ ಗಳು ಪಡೆದಿದ್ದಾರೆ.ಇದರಲ್ಲಿ ಕನಿಷ್ಠ 8,80,000 ಕಿಂತಲು ಅಧಿಕ ವೋಟ್ ಗಳನ್ನು ಪಡೆದಿದ್ದಾರೆ ಎನ್ನಲಾಗುತ್ತೆ.

2014 ರ ಲೋಕಸಭಾ ಚುನಾವಣೆಯ ಹಾಗೆಯೇ, 2019 ರ ಲೋಕಸಭಾ ಚುನಾವಣೆಯಲ್ಲೂ ಅಮಿತ್ ಶಾ ಅವರು BJP ಗಾಗಿ ತಂತ್ರವನ್ನು ಹೆಣೆದಿದ್ದರು. ಬಿಜೆಪಿಯ ಚಾಣಕ್ಯ ಎಂದೇ ಕರೆದುಕೊಳ್ಳುವ ಅಮಿತ್ ಶಾ ಅವರ ಕಷ್ಟದ ಫಲವೇ ನರೇಂದ್ರ ಮೋದಿಯವರು 303 ಸೀಟ್ ಗಳಿಂದ ಬಹುಮತ ಸಿಕ್ಕಿದ್ದು . ಮತ್ತೆ ನರೇಂದ್ರ ಮೋದಿ ಭಾರತದ ಪ್ರಧಾನಿಯಾದರು. ಮ್ಯಾಟೊಮೆ ಮೋದಿ ಮತ್ತು ಶಾ ಜೋಡಿ ಸದ್ದು ಮಾಡಿದ್ದು. ಮತ್ತು ಭಾರತದಲ್ಲಿ ಮೋದಿ ಅಲೆ ಕ್ರಾಂತಿಯನ್ನೇ ತಂದಿದ್ದಿದ್ದು.

 ಮೋದಿಯವರು ಸಾಕಷ್ಟು ರ್ಯಾಲಿಗಳು ನಡೆಸಿದ್ದರು , ಅದರಲ್ಲಿ ದೇಶದ ಜನತೆಯಲ್ಲಿ ನರೇಂದ್ರ ಮೋದಿ ಮತ್ತು ಸರ್ಕಾರ ದೇಶದ ಅಭಿವೃದ್ಧಿ ಮುಂದುವರಿಸುತ್ತಾರೆ ಎಂದು ವಿಶ್ವಾಸವನ್ನು ತುಂಬಿದ್ದರು. ಬಳಿಕವೇ ಅಮಿತ್ ಶಾ ಅವರು ಗೃಹ ಮಂತ್ರಿ ಖಂತೆಯನ್ನು ಪಡೆದುಕೊಂಡರು.

2019 ರಲ್ಲಿ ಗೃಹ ಸಚಿವ ಮತ್ತು ಲೋಕಸಭಾ ಸದಸ್ಯರಾದ ಅಮಿತ್ ಶಾ

ಅಮಿತ್ ಶಾ (Amit Shah) ಅವರು ಗೃಹ ಮಂತ್ರಿ ಆದಾ ಬಳಿಕ ಮೊಟ್ಟ ಮೊದಲು ಭಾರತಕೆ ಬಿಡದ ಪಿಸಚಿಯಂತೆ ಕಾಡುತ್ತಿರುವ ಜಮ್ಮು ಕಾಶ್ಮೀರದ ಭಯೋತ್ಪಾದನೆಯನ್ನು ಮುಗಿಸುವ ಪಣ ತೊಟ್ಟರು.

2019 ರಲ್ಲಿ ಅಮಿತ್ ಶಾ ದೊಡ್ಡ ದೊಡ್ಡ ನಿರ್ಧಾರಗಳು ತೆಗೆದುಕೊಂಡರು.

ಅದರಲ್ಲಿ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಮುಗಿಸುವ ನಿರ್ಧಾರ ತೆಗೆದುಕೊಂಡರು ಜಮ್ಮು ಕಾಶ್ಮೀರದ ಮೇಲೆ ಒತ್ತಡ ಹೇರಲು ಅಲ್ಲಿಯ ಭಯೋತ್ಪಾದನೆಯನ್ನು ಮಟ್ಟ ಹಾಕಲು ಆರ್ಟಿಕಲ್ 35 ಎ (Article 35 A) ಮತ್ತು ಆರ್ಟಿಕಲ್ 370 (Article 370 )ರದ್ದುಗೊಳಿಸಿದ ಬಳಿಕ ಕಾಶ್ಮೀರದ ಮುಖ್ಯ ಭೂಭಾಗವನ್ನು ಭಾರತಕ್ಕೆ ಸೇರಿಸಿಕೊಂಡರು.

Article 370  ಮತ್ತು 35 A ಮುಗಿದ ನಂತರ ಅಲ್ಲಿ ಹೊಸ ನಿಯಮಗಳು ಜಾರಿಗೆ ತಂದರು.ಅದೇ ಹೊಸ ನಿಯಮದ ಅಡಿಯಲ್ಲಿ ಭಾರತದಲ್ಲಿ ಮತ್ತೊಂದು ರಾಜ್ಯವನ್ನು ಸೇರಿಸಿಕೊಂಡರು , ಬಳಿಕ ಜಮ್ಮು- ಕಾಶ್ಮೀರದಿಂದ ಲಡಾಖ್ ಭೂ ಭಾಗವನ್ನು ಬೇರೆ ಮಾಡಲಾಯಿತು.ಈ ಅತಿ ಮಹತ್ವದ ಕಾರ್ಯದ ಸಂಪೂರ್ಣ ಶ್ರೇಯ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲತ್ತೆ.


ಎನ್ ಆರ್ ಸಿ ಸಮಸ್ಯೆ  NRC Issue – NRC (National Register of Citizens)


ಇದು ಸಂಪೂರ್ಣ ದೇಶದಲ್ಲಿ ವಿಶಿಷ್ಟ ಸಮುದಾಯದ ಒಳಗೆ ಗೊಂದಲ ಉಂಟು ಮಾಡಿತ್ತು. ಆದರೆ ದೇಶದಿಂದ ಭಯೋತ್ಪಾದನೆ ಮತ್ತು ಇತರೆ ಅಕ್ರಮಗಳಿಗೆ ತಡೆ ಹಿಡಿಯಲು ಅಮಿತ್ ಶಾ (Amit Shah) ಅವರ ಈ ಕ್ರಮ ತುಂಬಾನೇ ಮುಖ್ಯವಾದದ್ದು ಇದಕ್ಕೆ ಎನ್ ಆರ್ ಸಿ ಎಂದು ಹೆಸರಿದಲಾಯಿತು.

  ಅನೇಕ ಬಾಂಗ್ಲಾದೇಶಿಯರು , ಪಾಕಿಸ್ತಾನಿಗಳು ಮತ್ತು ಇತರೆ ದೇಶ ಗಳಿಂದ ಬಂದು ಅನೇಕ ವರ್ಷಗಳಿಂದ ಭಾರತದಲ್ಲಿ ಅನಧಿಕೃತವಾಗಿ ವಾಸವಿದ್ದ ಜನಗಳಿಗಾಗಿ ಅತಿ ದೊಡ್ಡ ತೀರ್ಮಾನಗಳನ್ನು ಈ NRC ಮೂಲಕ ತೆಗೆದುಕೊಳ್ಳಲಾಯಿತು. ಯಾರೆಲ್ಲ ಹೊರ ದೇಶದಿಂದ ಬಂದಿದ್ದಾರೆ ಅವರ ಐಡಿ ಡಾಕ್ಯುಮೆಂಟ್ ಪರಿಶೀಲಿಸಿ ಅವರಿಗೆ ವಾಪಸು ಕಳಸುವ ಕಾರ್ಯ ಮಾಡಬೇಕಾಯಿತು. 

ನಕ್ಸಲೈಟ್ ಗಳ ಸಮಸ್ಯೆ- (The problem of naxalites)

ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಇನ್ನು ಸಹ ನಕ್ಸಲೈಟ್ ಗಳ ಕಾಟ ಚಾರ ತಪ್ಪಿಲ್ಲ , ಅದರಲ್ಲೂ ಛತ್ತೀಸ್ಗಢದಲ್ಲಿ ಒಮ್ಮೆ ನಕ್ಸಲೈಟ್ ಗಳು ಒಂದು ದೊಡ್ಡ  ಸಪೋಟ ನಡೆಸಿದರು ಅವತ್ತೇ ಅಮಿತ್ ಶಾ (Amit Shah) ಅವರು ನಕ್ಸಲೈಟ್ ಗಳನ್ನ ಸಂಪೂರ್ಣವಾಗಿ ಮಟ್ಟ ಹಾಕಬೇಕೆಂದು ತೀರ್ಮಾನಿಸಿದ್ದರು.

ಎಲ್ಲ ನಕ್ಸಲೈಟ್ಗಳು ತಮ್ಮ ಜೀವ ಉಳಿಸಿಕೊಳ್ಳಲು, ದೇಶದಲ್ಲಿ ಇರೋಕೆ, ಆಯುಧಗಳನ್ನು ಬಿಟ್ಟಕಿ ಸರೆಂಡರ್ ಆಗುವಂತೆ ಸಂದೇಶ ರವಣಿಸಿದ್ದರು. ಆತ್ಮಸಮರ್ಪಣೆ ಬಳಿಕ ಅವರಿಗೆ ಯಾವುದೇ ಕಠಿಣ ಶಿಕ್ಷೆ ಮಾಡುವುದಿಲ್ಲ , ಅವರಿಗೆ ದೇಶದ ನಾಗರಿಕತೆಯನ್ನು ಕೊಡಲಾಗುವುದು ಎಂದು ಅಮಿತ್ ಶಾ ಹೇಳಿದ್ದರು. ಬಳಿಕ ಸಾಕಷ್ಟು ನಕ್ಸಲರು ಸರೆಂಡರ್ ಸಹ ಆದರೂ.

 

ಅಮಿತ್ ಶಾ ಅವರಿಗೆ ಸಂಬಂದಿಸಿದ ವಾದ ವಿವಾದಗಳು 

ಅಮಿತ್ ಶಾ (Amit Shah) ಅವರ ರಾಜಕೀಯ ಪ್ರವಾಸ ಸುಲಭವಾಗಿರಲಿಲ್ಲ , ಇವರ ಹೆಸರು ಅನೇಕ ಬಾರಿ ಅನೇಕ ವಾದ ವಿವಾದಗಲ್ಲಿ ಕೇಳಿ ಬಂತು. ಅಮಿತ್ ಶಾ ಅವರಿಗೆ ಸಂಬಂದಿಸಿದ ವಾದ ವಿವಾದಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ನಕಲಿ ಎನ್ಕೌಂಟರ್ ಆರೋಪ (Accused of fake encounter)

2005 ರಲ್ಲಿ ಆದಂತಹ ಒಂದು ಎನ್ಕೌಂಟರ್ ನಲ್ಲಿ , ಎನ್ಕೌಂಟರ್ ಆದಂತಹ ಆ 3 ಜನ ಭಯೋತ್ಪಾದಕರು ಎಂದು ಹೇಳಿ ಕೊಲ್ಲಲಾಯಿತು. 

ಆಗ ಈ ಎನ್ಕೌಂಟರ್ ಅನ್ನು ಅಮಿತ್ ಶಾ (Amit Shah) ಅವರು ದುಡ್ಡು ಪಡೆದು ನಡೆಸಿದ್ದಾರೆ ಎಂದು ಹೇಳಲಾಯಿತು.

ಬಳಿಕ ಸಿಬಿಐ ತನಿಖೆಯು ನಡೆಸಿಲಾಯಿತು , CBI ತನಿಖೆಯಲ್ಲಿ ಇದೊಂದು ನಕಲಿ ಎನ್ಕೌಂಟರ್ ಎಂದು ಬಯಲಾಯಿತು.

ಗುಜರಾತ್ ಒಳಗೆ ಪ್ರವೇಶಕ್ಕೆ ತಡೆ (Barriers to entry into Gujarat)

2010 ರಲ್ಲಿ ಅಮಿತ್ ಶಾ (Amit Shah) ಕೊಲೆ ಮತ್ತು ವಸೂಲಿ ಆರೋದಡಿಯಲ್ಲಿ ಪೊಲೀಸರಿಂದ ಬಂಧನಕೆ ಒಳಗಾದರು.

ಇದೆಲ್ಲ ಇಷ್ಟಕ್ಕೆ ನಿಲ್ಲಲಿಲ್ಲ ಅಮಿತ್ ಶಾ ಅವರಿಗೆ ಹೈ ಕೋರ್ಟ್ ರಾಜ್ಯದಿಂದ ಹೊರ ಹಾಕಿ, ಮತ್ತೆ ರಾಜ್ಯದ ಒಳಗೆ ಬರದಂತೆ ಗಡಿಪಾರ್ ಸಹ ಮಾಡಿದ್ದರು. 2012 ರಲ್ಲಿ ಅಮಿತ್ ಶಾ ಅವರ ಮೇಲಿದ್ದ ಗಡಿಪಾರ್ ತೆಗೆದು ಹಾಕಿದ್ದರು.

ಗುಜರಾತ್ ಗಲಭೆಯ ಸಾಕ್ಷಾಧಾರ ನಾಶ ಪಡಿಸಿರುವ ಆರೋಪ

2002 ರಲ್ಲಿ ಗುಜರಾತ್ ನಲ್ಲಿ ನಡೆದಿರುವ ಗಲಭೆಯಲ್ಲೂ ಅಮಿತ್ ಶಾ(Amit Shah) ಅವರ ಹೆಸರು ಕೇಳಿ ಬಂದಿತ್ತು.

2002 ರಲ್ಲಿ ನಡೆದಿರುವ ಗಲಭೆಯ ಸಾಕ್ಷಾಧಾರ ನಾಶ ಪಡೆಸುವ ಪ್ರಯತ್ನ ನಡೆಸಿ , ಈ ಕೇಸ್ ನ ಸಾಕ್ಷಿಗಳಿಗೆ ತನ್ನ ಹೇಳಿಕೆಯನ್ನ ಬದಲಾಯಿಸುವಂತೆ ಒತ್ತಡ ಹೇರಿದ್ದರು ಎನ್ನುವ ಆರೋಪವಿತ್ತು.

ಒಬ್ಬ ಮಹಿಳೆಯ ಪತ್ತೇದಾರಿ ಮಾಡಿರುವ ಆರೋಪ.


2009 ರಲ್ಲಿ ಮತ್ತೊಮ್ಮೆ ಮತ್ತೊಂದು ವಾದದಲ್ಲಿ ಅಮಿತ್ ಶಾ (Amit Shah) ಅವರ ಹೆಸರು ಕೇಳಿ ಬಂತು. ಆ ವಿವಾದವೇ ಒಂದ್ ಮಹಿಳೆಯ ಪತ್ತೇದಾರಿ ಮಾಡುತಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಆರೋಪದಲ್ಲಿ ಅಮಿತ್ ಶಾ ಅವರು ಕಾನೂನುಬಾಹಿರವಾಗಿ ಮಹಿಳೆಯ ಪತ್ತೇದಾರಿ ಕೆಲಸ ಮಾಡಿಸುತ್ತಿದ್ದರು ಎನ್ನಲಾಗಿತ್ತು. ಆದರೆ ಈ ಎಲ್ಲ ಆರೋಪಗಳನ್ನ ಅಮಿತ್ ಶಾ ಅವರು ಅಲ್ಲಗಳೆದಿದ್ದರು.

ಅಮಿತ್ ಶಾ ಅವರಿಗೆ ಸಂಬಂಧಿಸಿದ ಅನ್ಯ ವಿಷಯಗಳು


ಅಮಿತ್ ಶಾ (Amit Shah) ಗೆ ಸಿಗ್ತಿದೆ Z+ ಸೆಕ್ಯುರಿಟಿ –

ಅಮಿತ್ ಶಾ (Amit Shah) ಅವರ ಹೆಸರು Z+ ಸೆಕ್ಯೂರಿಟಿ ಪಡೆಯುವಂತಹ ನಾಯಕರ ಪಟ್ಟಿಯಲ್ಲಿ ಬರತ್ತೆ, ಯಾವಾಗ್ಲೂ ಅಮಿತ್ ಶಾ ಅವರ ಕಾವಲುಗಾಗಿ 25 ಕಮಾಂಡೋ ಗಳು ಇರುತ್ತಾರೆ

1982 ರಲ್ಲಿ ಮೊದಲಬಾರಿಗೆ ಮೋದಿ ಶಾ ಭೇಟಿ ಆಗಿದ್ದು – 

ಮೋದಿ ಮತ್ತು ಶಾ ಒಂದೇ ಪಕ್ಷದ ಮಹಾ ನಾಯಕರು ಮತ್ತು ತುಂಬಾ ಒಳ್ಳೆ ಸ್ನೇಹಿತರು ಸಹ ಹೌದು. ಮೋದಿ ಮತ್ತು ಶಾ ಮೊದಲಬಾರಿಗೆ 1982 ರಲ್ಲಿ ಭೇಟಿ ಆಗಿದ್ದರು ಎಂದು ಹೇಳಲಾಗುತ್ತೆ.

ಇವರಿಬ್ಬರು ಅಹಮದಾಬಾದ್ ನಲ್ಲಿ ಆಯೋಜಿಸಿದ ಆರ್ ಎಸ್ ಎಸ್ (RSS) ಆಯೋಜಿಸಿದ ಕಾರ್ಯಕ್ರಮ ಒಂದರಲ್ಲಿ ಭೇಟಿಯಾಗಿದ್ದು. ಇವರ ಭೇಟಿ ತುಂಬಾ ಬೇಗನೆ ಸ್ನೇಹದಲ್ಲಿ ಪರಿವರ್ತನೆಯಾಯಿತು.

ಸ್ಟಾಕ್ ಬ್ರೋಕರ್ ಆಗಿಯೂ ಶಾ ಕೆಲಸ- 

ಒಂದು ಕಾಲದಲ್ಲಿ ಅಮಿತ್ ಶಾ (Amit Shah) ಸಹಕಾರಿ ಬ್ಯಾಂಕ್ ನಲ್ಲಿಯೂ ತನ್ನ ಸೇವೆ ಸಲ್ಲಿಸಿದ್ದಾರೆ. ಇಷ್ಟಲ್ಲದೆ ಅಮಿತ್ ಶಾ ಅವರು ತನ್ನ ಕರಿಯರ್ ನ ಆರಂಭ ಶೇರ್ ಮಾರ್ಕೆಟ್ ನಲ್ಲಿ ಸ್ಟಾಕ್ ಬ್ರೋಕರ್ ಆಗಿ ಶುರು ಮಾಡಿದ್ದರು.   

ಈ ಮಾಹಿತಿ ಇಷ್ಟವಾದರೆ ಶೇರ್ ಮಾಡಿ ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments