ಸೆಪ್ಟೆಂಬರ್ 2 ರಾಶಿ ಭವಿಷ್ಯ, ಮೇಷದಿಂದ ಮೀನು ರಾಶಿಯ ಭವಿಷ್ಯ! September 02 Dayli Horoscope in Kannada

ಸೆಪ್ಟೆಂಬರ್ 2, 2025 – ಮಂಗಳವಾರದ ರಾಶಿಫಲ

ಮಂಗಳವಾರ ಸೆಪ್ಟೆಂಬರ್ 2 ರಾಶಿ ಭವಿಷ್ಯ ನಮಸ್ಕಾರ, ಎಲ್ಲರಿಗೂ ಶುಭವಾಗಲಿ. ಗ್ರಹಗಳ ಸ್ಥಾನದ ಪ್ರಕಾರ ಇಂದು ಅಂದರೆ ಸೆಪ್ಟೆಂಬರ್ 2, ಮಂಗಳವಾರದ ದಿನವು ನಿಮ್ಮೆಲ್ಲರ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರುತ್ತೆ ಎಂದು ನೋಡೋಣ. ನಿಮ್ಮ ಅದೃಷ್ಟ ಹೇಗೆ ಇರುತ್ತೆ, ಯಾವ ರಾಶಿಯವರು ಎಚ್ಚರವಾಗಿರಬೇಕು ಎಂದು ತಿಳಿದುಕೊಳ್ಳೋಣ.

ಮೇಷ ರಾಶಿ (Aries)

mesha rashi horoscope

ಸೆಪ್ಟೆಂಬರ್ 2 ಮೇಷ ರಾಶಿ ಭವಿಷ್ಯ – ಮೇಷ ರಾಶಿಯವರೇ, ಇಂದು ನಿಮ್ಮ ಮನಸ್ಸು ಸ್ವಲ್ಪ ಸಮಾಧಾನ ಇರೋದಿಲ್ಲ. ಆತ್ಮವಿಶ್ವಾಸದಲ್ಲಿ ಸ್ವಲ್ಪ ಕೊರತೆ ಇರಬಹುದು. ಹಣಕಾಸಿನ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ, ಹಾಗಾಗಿ ದುಡ್ಡು ಖರ್ಚು ಮಾಡುವಾಗ ಯೋಚಿಸಿ ಮುಂದುವರಿಯಿರಿ. ವ್ಯಾಪಾರದಲ್ಲಿ ಯಾರನ್ನೂ ಸುಲಭವಾಗಿ ನಂಬಬೇಡಿ, ಸ್ವಲ್ಪ ಎಚ್ಚರಿಕೆ ಇರಲಿ. ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ವೃಷಭ ರಾಶಿ (Taurus)

vrishabha rashi horoscope
vrishabha rashi astrology

ಸೆಪ್ಟೆಂಬರ್ 2 ವೃಷಭ ರಾಶಿ ಭವಿಷ್ಯ – ವೃಷಭ ರಾಶಿಯವರೇ, ಇಂದು ನಿಮಗೆ ಒಳ್ಳೆಯ ದಿನ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ದೇವರ ಕೆಲಸಗಳಲ್ಲಿ ನಿಮ್ಮ ಮನಸ್ಸು ಹೆಚ್ಚಿರುತ್ತದೆ. ಆರೋಗ್ಯವೂ ಸುಧಾರಿಸುತ್ತದೆ. ನಿಮ್ಮ ತಂದೆಯ ಬೆಂಬಲ ಇರುತ್ತದೆ. ಕುಟುಂಬದವರ ಜೊತೆ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಮತ್ತು ಬೇರೆ ಬೇರೆ ಮೂಲಗಳಿಂದ ಹಣ ಬರುತ್ತದೆ.

ಮಿಥುನ ರಾಶಿ (Gemini)

mithuna rashi astrology
mithuna rashi horoscope

ಸೆಪ್ಟೆಂಬರ್ 2 ಮಿಥುನ ರಾಶಿ ಭವಿಷ್ಯ- ಮಿಥುನ ರಾಶಿಯವರೇ, ಇಂದು ನಿಮಗೆ ಸಾಮಾನ್ಯ ದಿನ. ಮಾನಸಿಕವಾಗಿ ಸ್ವಲ್ಪ ಒತ್ತಡ ಇರಬಹುದು. ಕೆಲಸದ ಜಾಗದಲ್ಲಿ ಕೆಲಸದ ಒತ್ತಡ ಹೆಚ್ಚಿರುತ್ತದೆ. ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿ. ಕುಟುಂಬದವರಿಂದ ಬೆಂಬಲ ಸಿಗುತ್ತದೆ. ವ್ಯಾಪಾರದಲ್ಲಿ ಸುಧಾರಣೆ ಇರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಹೂಡಿಕೆ ಮಾಡುವ ಮುನ್ನ ನಿಮ್ಮ ಸ್ನೇಹಿತರ ಅಥವಾ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.

ಕಟಕ ರಾಶಿ (Cancer)

karkataka rashi horoscope
karkataka rashi rashifal

ಸೆಪ್ಟೆಂಬರ್ 2 ಕಟಕ ರಾಶಿ ಭವಿಷ್ಯ – ಕರ್ಕಾ ರಾಶಿಯವರೇ, ಇಂದು ನಿಮಗೆ ಒಳ್ಳೆಯ ದಿನ ಅಂತ ಹೇಳೋಕೆ ಆಗೋದಿಲ್ಲ. ನಿಮ್ಮ ಮನಸ್ಸಿನ ಸ್ಥಿತಿ ಅಷ್ಟೊಂದು ಸರಿ ಇರೋದಿಲ್ಲ. ಜೀವನದಲ್ಲಿ ಓಡಾಟ ಜಾಸ್ತಿ ಇರುತ್ತದೆ. ಯಾವುದೇ ವಿವಾದದಿಂದ ದೂರವಿರಿ. ನಿಮ್ಮ ಪ್ರೀತಿಪಾತ್ರರ ಜೊತೆ ಮನಸ್ತಾಪ ಆಗುವ ಸಾಧ್ಯತೆ ಇದೆ. ಕೆಲಸದಲ್ಲಿ ಬೇರೆ ಸ್ಥಳಕ್ಕೆ ಹೋಗಬೇಕಾಗಿ ಬರಬಹುದು. ಆರ್ಥಿಕ ಸ್ಥಿತಿ ಸರಿ ಇರುತ್ತೆ, ಆದರೆ ದುಡ್ಡು ಖರ್ಚು ಮಾಡುವಾಗ ಎಚ್ಚರ ಇರಲಿ.

ಸಿಂಹ ರಾಶಿ (Leo)

karkataka rashi horoscope
karkataka rashi horoscope

ಸೆಪ್ಟೆಂಬರ್ 2 ಸಿಂಹ ರಾಶಿ ಭವಿಷ್ಯ – ಸಿಂಹ ರಾಶಿಯವರೇ, ಇಂದು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳು ಆಗಬಹುದು. ಕೆಲಸದಲ್ಲಿ ಮತ್ತು ವ್ಯಾಪಾರದಲ್ಲಿ ಲಾಭ ಇರುತ್ತೆ. ಕುಟುಂಬದವರ ಜೊತೆ ಸುತ್ತಾಡಲು ಹೋಗಬಹುದು. ಖರ್ಚುಗಳು ಹೆಚ್ಚಾಗುತ್ತವೆ, ಆದರೆ ಅದೇ ಸಮಯದಲ್ಲಿ ಬೇರೆ ಬೇರೆ ಮೂಲಗಳಿಂದ ಹಣವೂ ಬರುತ್ತದೆ. ನಿಮ್ಮ ಪ್ರೀತಿಯ ಜೀವನ ಚೆನ್ನಾಗಿ ಇರುತ್ತೆ. ವೃತ್ತಿಜೀವನದಲ್ಲಿ ಪ್ರಗತಿಯ ಅವಕಾಶಗಳು ಸಿಗುತ್ತವೆ.

ಕನ್ಯಾ ರಾಶಿ (Virgo)

kanya rashi horoscope
kanya rashi astrology

ಸೆಪ್ಟೆಂಬರ್ 2 ಕನ್ಯಾ ರಾಶಿ ಭವಿಷ್ಯ – ಕನ್ಯಾ ರಾಶಿಯವರೇ, ಇಂದು ನಿಮ್ಮ ಮನಸ್ಸನ್ನು ಶಾಂತವಾಗಿ ಇಡಲು ಪ್ರಯತ್ನಿಸಿ. ತಾಳ್ಮೆ ಕಳೆದುಕೊಳ್ಳಬೇಡಿ. ಯಾವುದೇ ಕೆಲಸವನ್ನು ಅವಸರದಲ್ಲಿ ಮಾಡಬೇಡಿ. ವಾಹನ ನಿಧಾನವಾಗಿ ಚಲಾಯಿಸಿ. ಕೆಲಸದಲ್ಲಿ ಮತ್ತು ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಿ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಪ್ರೀತಿಯ ಜೀವನದಲ್ಲಿ ಸಂತೋಷದ ಅನುಭವ ಇರುತ್ತದೆ.

ತುಲಾ ರಾಶಿ (Libra)

tula rashi horoscope
tula rashi astrology

ಸೆಪ್ಟೆಂಬರ್ 2 ತುಲಾ ರಾಶಿ ಭವಿಷ್ಯ – ತುಲಾ ರಾಶಿಯವರೇ, ಇಂದು ನಿಮಗೆ ಉತ್ತಮ ದಿನ. ಮಾನಸಿಕ ಒತ್ತಡ ದೂರವಾಗುತ್ತದೆ. ತಾಳ್ಮೆಯಿಂದ ಕೆಲಸ ಮಾಡ್ತೀರಾ. ಕೆಲಸದಲ್ಲಿ ಮತ್ತು ವ್ಯಾಪಾರದಲ್ಲಿ ಲಾಭ ಇರುತ್ತದೆ. ಪ್ರಗತಿಯ ಹೊಸ ಅವಕಾಶಗಳು ಸಿಗಬಹುದು. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಕುಟುಂಬದ ಬೆಂಬಲ ಸಿಗುತ್ತದೆ. ವಿದೇಶಕ್ಕೆ ಪ್ರಯಾಣ ಮಾಡುವ ಯೋಗ ಇರುತ್ತದೆ.

ವೃಶ್ಚಿಕ ರಾಶಿ (Scorpio)

vrischika rashi horoscope
vrischika rashi astrology

ಸೆಪ್ಟೆಂಬರ್ 2 ವೃಶ್ಚಿಕ ರಾಶಿ ಭವಿಷ್ಯ – ವೃಶ್ಚಿಕ ರಾಶಿಯವರೇ, ಇಂದು ನಿಮಗೆ ಒಳ್ಳೆಯ ದಿನ. ಕೆಲಸದಲ್ಲಿ ಮತ್ತು ವ್ಯಾಪಾರದಲ್ಲಿ ಲಾಭ ಇರುತ್ತದೆ. ನಿಮ್ಮ ಸ್ನೇಹಿತನ ಸಹಾಯದಿಂದ ನಿಮ್ಮ ಆದಾಯ ಹೆಚ್ಚಾಗುತ್ತದೆ. ಕುಟುಂಬದ ಬೆಂಬಲದಿಂದ ನಿಮ್ಮ ನಿಂತುಹೋಗಿದ್ದ ಕೆಲಸಗಳು ಮತ್ತೆ ಶುರುವಾಗುತ್ತವೆ. ನಿಮ್ಮ ಮಾನ-ಸಮ್ಮಾನ ಹೆಚ್ಚಾಗುತ್ತದೆ. ಪ್ರೀತಿಪಾತ್ರರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ.

ಧನು ರಾಶಿ (Sagittarius)

dhanu rashi horoscope
dhanu rashi astrology

ಸೆಪ್ಟೆಂಬರ್ 2 ಧನು ರಾಶಿ ಭವಿಷ್ಯ – ಧನು ರಾಶಿಯವರೇ, ಇಂದು ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಬರುತ್ತವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ನಿಮ್ಮ ಜೀವನ ಸಂಗಾತಿಯ ಜೊತೆ ಉತ್ತಮ ಸಮಯ ಕಳೆಯುತ್ತೀರಾ. ಕೆಲಸ ಮತ್ತು ವ್ಯಾಪಾರದಲ್ಲಿ ದೊಡ್ಡ ಬದಲಾವಣೆಗಳು ಬರಬಹುದು. ಹೂಡಿಕೆ ಮಾಡಲು ನಾಳೆ ಶುಭ ದಿನ.

ಮಕರ ರಾಶಿ (Capricorn)

makara rashi horoscope
makara rashi astrology

ಸೆಪ್ಟೆಂಬರ್ 2 ಮಕರ ರಾಶಿ ಭವಿಷ್ಯ – ಮಕರ ರಾಶಿಯವರೇ, ಇಂದು ನಿಮಗೆ ತುಂಬಾ ಒಳ್ಳೆಯ ದಿನ. ಕೆಲಸ, ವ್ಯಾಪಾರ, ಪ್ರೀತಿ – ಎಲ್ಲವೂ ಉತ್ತಮವಾಗಿರುತ್ತವೆ. ನೀವು ಯಾವ ಕೆಲಸ ಮಾಡಿದ್ರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಕುಟುಂಬದವರ ಜೊತೆ ಸಮಯ ಕಳೆಯುತ್ತೀರಾ. ನಿಮ್ಮ ಮದುವೆಯ ಮಾತುಕತೆ ಪಕ್ಕಾ ಆಗುವ ಸಾಧ್ಯತೆ ಇದೆ. ಧಾರ್ಮಿಕ ಕೆಲಸಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ.

ಕುಂಭ ರಾಶಿ (Aquarius)

kumbha rashi horoscope
kumbha rashi astrology

ಸೆಪ್ಟೆಂಬರ್ 2 ಕುಂಭ ರಾಶಿ ಭವಿಷ್ಯ – ಕುಂಭ ರಾಶಿಯವರೇ, ಇಂದು ನಿಮಗೆ ಮಿಶ್ರ ಫಲಗಳು ಸಿಗಬಹುದು. ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರುತ್ತದೆ. ಕೆಲಸ ಮತ್ತು ವ್ಯಾಪಾರದಲ್ಲಿ ಕೆಲವು ಕಷ್ಟಗಳು ಬರಬಹುದು. ನಿಮ್ಮ ಆದಾಯ ಹೆಚ್ಚಾಗಬಹುದು. ಆದ್ರೆ ಕೋಪ ಮಾಡಿಕೊಳ್ಳಬೇಡಿ. ವಾದ-ವಿವಾದಗಳಿಂದ ದೂರವಿರಿ. ಮಾನಸಿಕ ಒತ್ತಡ ಇರಬಹುದು. ನಿಮ್ಮ ಆರೋಗ್ಯದ ಬಗ್ಗೆ ಗಮನ ಇರಲಿ.

ಮೀನ ರಾಶಿ (Pisces)

meena rashi horoscope
meena rashi astrology

ಸೆಪ್ಟೆಂಬರ್ 2 ಮೀನ ರಾಶಿ ಭವಿಷ್ಯ – ಮೀನ ರಾಶಿಯವರೇ, ಇಂದು ನೀವು ಸ್ವಲ್ಪ ಜಾಗರೂಕರಾಗಿರಿ. ದುಡ್ಡು ಖರ್ಚು ಮಾಡುವಾಗ ಯೋಚಿಸಿ, ಇಲ್ಲವಾದರೆ ಸಾಲ ಮಾಡುವ ಪರಿಸ್ಥಿತಿ ಬರಬಹುದು. ಕೆಲಸದಲ್ಲಿ ಮತ್ತು ವ್ಯಾಪಾರದಲ್ಲಿ ನಿಮಗೆ ಹೆಚ್ಚುವರಿ ಜವಾಬ್ದಾರಿಗಳು ಸಿಗಬಹುದು. ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯಿರಿ.

ಇಂದಿನ ರಾಶಿ ಭವಿಷ್ಯದ ಬಗ್ಗೆ ನಾವು ಇಲ್ಲಿ ವಿವರಿಸಿದ್ದೇವೆ . ಪ್ರತಿಯೊಂದು ಭವಿಷ್ಯವೂ ಕೇವಲ ಮಾರ್ಗದರ್ಶನವಷ್ಟೇ, ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಶಕ್ತಿ ನಿಮ್ಮ ಕೈಯಲ್ಲಿದೆ. ಸವಾಲುಗಳು ಬಂದಾಗ ಧೈರ್ಯದಿಂದ ಎದುರಿಸಿ, ಯಶಸ್ಸು ಬಂದಾಗ ವಿನಯದಿಂದ ಸ್ವೀಕರಿಸಿ. ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಸಂತೋಷ ಮತ್ತು ಯಶಸ್ಸು ಸಿಗಲಿ. ಮುಂದಿನ ವಾರ ಮತ್ತೊಂದು ಹೊಸ ಭವಿಷ್ಯದೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇವೆ. ನಿಮ್ಮೆಲ್ಲರಿಗೂ ಶುಭವಾಗಲಿ.

ಇದನ್ನು ಓದಿ…

ವಾರ ರಾಶಿ ಭವಿಷ್ಯ : ಯಾವ ರಾಶಿಗೆ ಒಲಿಯಲಿದೆ ಅದೃಷ್ಟ ? Weekly Horoscope In Kannada

Leave a Comment