ಪಾಕಿಸ್ತಾನ್ (pakistan) ದಲ್ಲಿ ದೀಕ್ಷಿಣ ಸಿಂಧ ಪ್ರಾಂತವನ್ನು ಪ್ರಾತ್ಯಕ್ಷ ಸಿಂಧುದೇಶ ಮಾಡುವುದಕ್ಕಾಗಿ ಜಿ ಎಂ ಸಯ್ಯದ್ ಸಮರ್ಥಕರಿಂದ ರ್ಯಾಲಿ ನಡೆದಿದ್ದು PM ಮೋದಿಯವರ (Narendra Modi) ಜೊತೆಗೆ ವಿಶ್ವದ ಇತರೆ ರಾಷ್ಟ್ರಗಳ ಗಣ್ಯರ ಸಹಾಯಹಸ್ತ ಕೇಳಿದ್ದಾರೆ ಪಾಕ್ ಜನ.
ಕರಾಚಿ – ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತವನ್ನು ಪ್ರತ್ಯಕ್ಷ ಸಿಂಧುದೇಶ (Sindhudesh) ಮಾಡುವುದಕ್ಕಾಗಿ ತೀವ್ರವಾದ ಹೋರಾಟ ನಡೆಯುತ್ತಿದೆ.ಆಧುನಿಕ ಭಾರತೀಯ ಸಿಂಧಿ ರಾಷ್ಟ್ರವಾದಿ ಸಂಸ್ಥಾಪಕರಲ್ಲಿ ಒಬ್ಬರಾದ ಜಿಎಂ ಸೈಯದ್ (GM sayyad) ಅವರ 117 ನೇ ಜಯಂತಿಯ ಅಂಗವಾಗಿ ಜಿಎಂ ಸೈಯದ್ (GM sayyad) ಅವರ ಬೆಂಬಲಿಗರು ಭಾನುವಾರ (Sunday) (ಜನವರಿ 17, 2021) ಸಿಂದುರಾಷ್ಟ್ರ ಸ್ವತಂತ್ಯದ ಸಮರ್ಥನಕ್ಕಾಗಿ ವಿಶಾಲವಾದ ರ್ಯಾಲಿ ನಡೆಸಿದ್ದರು.ಈ ಸಂಧರ್ಭದಲ್ಲಿ ಪ್ರತಿಭಟನಾಕಾರರ ಕೈಯಲ್ಲಿ ನರೇಂದ್ರ ಮೋದಿಯ (Narendra Modi) ಜೊತೆಗೆ ವಿಶ್ವದ ಅನೇಕ ಶಕ್ತಿಶಾಲಿ ನಾಯಕರ ಪೋಸ್ಟರವು ರರಾಜಿಸುತ್ತಿದ್ದವು.
ಪ್ರತಿಭಟನಾ ನಿರತ ಜನರ ಕೈಯಲ್ಲಿ ಪ್ರಧಾನಿ ಮೋದಿ (Narendra Modi) ಫೋಟೋ ಯಾಕೆ ?
ಪಾಕಿಸ್ತಾನದಲ್ಲಿ (Pakistan) ಪ್ರತಿಭಟನೆಯ ಸಂಧರ್ಭದಲ್ಲಿ ನರೇಂದ್ರ ಮೋದಿಯ (Narendra Modi) ಜೊತೆಗೆ ಅನೇಕ ವಿಶ್ವದ ಶಕ್ತಿ ಶಾಲಿ ನಾಯಕರ ಫೋಟೋವನ್ನು ಕಯ್ಯಲ್ಲಿ ಹಿಡಿದು ಪ್ರತ್ಯಕ್ಷ ಸಿಂಧುದೇಶ (Sindhudesh) ಮಾಡುವುದಕ್ಕಾಗಿ ತಾವು ಹಸ್ತಕ್ಷೇಪ ಮಾಡಿ ಎಂದು ಕೋರಿದ್ದಾರೆ. ಈ ಸಂಧರ್ಭದಲ್ಲಿ ಪ್ರತಿಭಟನಾಕಾರರು ಆಜಾದಿಯ (Aajadi) ಘೋಷಣೆಯು ಕೂಗಿದ್ದರೆ.
ಪ್ರತಿಭಟನೆಯಲ್ಲಿ ಈ ನಾಯಕರ ಫೋಟೋವು ನೋಡಲಿಕ್ಕೆ ಸಿಕ್ಕವು
ವಿರೋಧ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ (PM Narendra Modi) ಫೋಟೋ ಹೊರತುಪಡಿಸಿ ವಿಶ್ವದ ಅನ್ಯ ರಾಷ್ಟ್ರದ ನಾಯಕರ ಭಾವಚಿತ್ರವು ನೋಡಬಹುದಾಗಿದೆ. ಪ್ರತಿಭಟನಾಕಾರರು ಅನೇರಿಕದ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಜೋ ಬೈಡನ್, ಆಫ್ಘಾನಿಸ್ತಾನದ ರಾಷ್ಟ್ರಪತಿ ಅಶ್ರಫ್ ಗನಿ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಾಸಿನ , ಫ್ರಾನ್ಸ್ ರಾಷ್ಟ್ರಪತಿ ಇಮೇನುಎಲ್ ಮೈಕ್ರೋ, ಸೌದಿ ಅರೇಬಿಯಾದ ಕ್ರಾಉಂ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ರಷ್ಯಾ ರಾಷ್ಟ್ರಪತಿ ವ್ಲಾಡಿಮಿರ್ ಪುಟಿನ್, ಜರ್ಮನಿಯ ಚಾನ್ಸಲರ್ ಏಂಜೆಲ ಮಾರ್ಕೆಲ್ ಸಂಯುಕ್ತ ರಾಷ್ಟ್ರದ ಮಹಾಸಚಿವ ಎಂಟೋನಿಯೋ ಗುಟೆರೇಸ್ ಮತ್ತು ಬ್ರಿಟಿಷ್ ಪಿಎಂ ಬೋರಿಸ್ ಜಾನ್ಸನ್ ರಂತಹ ನಾಯಕರ ಫೋಟೋಗಳು ನೋಡಬಹುದಾಗಿದೆ.
ಪಾಕಿಸ್ತಾನದಿಂದ ಸ್ವಾತಂತ್ರ್ಯ ಬಯಸುತ್ತಿದೆ ಸಿಂಧ್
ಪೋಸ್ಟರ್ ಗಳ ಮೇಲೆ ಬರೆದಿರುವ ಲೈನ್ ಏನೆಂದರೆ “ಸಿಂಧ್ ಪಾಕಿಸ್ತಾನದಿಂದ ಸ್ವಾತಂತ್ರ್ಯ ಬಯಸುತ್ತಿದೆ” ಎಂದು ವಿಶ್ವಕ್ಕೆ ಹೇಳುತ್ತಿದೆ , ಅಲ್ಲದೆ ಪ್ರತಿಭಟನೆಯಲ್ಲಿ ಸಿಂಧುದೇಶ ಸ್ವಾತಂತ್ರ್ಯ ಆಂದೋಲನ ಎನ್ನುವ ಪೋಸ್ಟರವು ನೋಡಸಿಕ್ಕಿವೆ . ಈ ಪ್ರತಿಭಟನೆಗೆ ಸಿಂಧ್ ನ ಹೋರಾಟಗಾರ ಜಿ ಎಂ ಸಯ್ಯದ್ ಬಾಂಗ್ಲಾದೇಶ ಸ್ವಾತಂತ್ರ್ಯಗೊಂಡ ನಂತರ ಶುರುಮಾಡಿದ್ದರು. ಅವರು ಸಹ ಮಹಾತ್ಮ ಗಾಂಧಿಯವರಿಂದನೆ ಪ್ರೇರಿತರಾಗಿದ್ದರು ಮತ್ತು ಪಾಕಿಸ್ತಾನ ದೇಶದ ಸ್ಥಾಪನೆಯ ಮುನ್ನ ಮಹಾತ್ಮ ಗಾಂಧಿಯವರಿಂದ ಪ್ರೇರಿತರಾದ ಅವರು ಪಾಕಿಸ್ತಾನದ ನಂತರ ಮೊದಲ ರಾಜಕೀಯ ಕೈದಿಯಾಗಿದ್ದರು.