Tuesday, December 3, 2024
HomeHOMEKarnataka Election 2023 : BJP ಪಕ್ಷದಿಂದ ರಾಜಕೀಯಕ್ಕೆ ಕಿಚ್ಚ ಸುದೀಪ್ ಎಂಟ್ರಿ ? ಇಲ್ಲಿದೆ...

Karnataka Election 2023 : BJP ಪಕ್ಷದಿಂದ ರಾಜಕೀಯಕ್ಕೆ ಕಿಚ್ಚ ಸುದೀಪ್ ಎಂಟ್ರಿ ? ಇಲ್ಲಿದೆ Exclusive ಸುದ್ದಿ.

Karnataka election 2023 : kiccha sudeep political party- ರಾಜ್ಯದಲ್ಲಿ ವಿಧಾನಸಭೆ ಎಲೆಕ್ಷನ್ ಚಟುವಟಿಕೆಗಳು ಜೋರಾಗಿ ನಡೆಯುತ್ತಿದೆ. ಯಾರಿಗೆ ಟಿಕೆಟ್ ಕೊಡಬೇಕು ಯಾರಿಗೆ ಟಿಕೆಟ್ ಕೊಡಬಾರದು, ಯಾರಿಗೆ ಯಾವ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಮಾಡಬೇಕು, ಯಾರಿಗೆ ಗೆಲ್ಲಿಸಬೇಕು ಯಾರಿಗೆ ಸೋಲಿಸಬೇಕು ಎಂಬ ನೂರೆಂಟು ಲೆಕ್ಕಾಚಾರದಲ್ಲಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಇದ್ದಾರೆ. ಎಲೆಕ್ಷನ್ ಹತ್ತಿರ ಬರುತ್ತಿದ್ದ ಹಾಗೆಯೇ ರಾಜಕೀಯ ಪಕ್ಷಗಳು ಸೆಲಿಬ್ರೆಟಿಗಳನ್ನ ಸಿನಿಮಾ ಕಲಾವಿದರನ್ನು ತಮ್ಮ ಪಕ್ಷದ ಪ್ರಚಾರಕ್ಕೆ, ಮತ್ತು ಬೆಂಬಲಕ್ಕೆ ಆಹ್ವಾನ ನೀಡುತ್ತಿರುತ್ತಾರೆ. ಮತ್ತು ಕಲಾವಿದರು ಕೂಡ ,ಆ ಪಕ್ಷದ ಪರ ಪ್ರಚಾರ ಮಾಡುತಿರುತ್ತಾರೆ.ಅದರಂತೆ ಕನ್ನಡದ ಖ್ಯಾತ ನಟ, ಕಿಚ್ಚ ಸುದೀಪ್ ಅವರೂ ಸಹ, ರಾಜಕೀಯ ಪಕ್ಷಗಳು ಕೈಬಿಸಿ ಕರೆಯುತ್ತಿದ್ದಾರೆ.

ಹಾಗಾದ್ರೆ ಕಿಚ್ಚ ಸುದೀಪ್ (Kiccha Sudeep) ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರಾ.? ಯಾವ ಪಕ್ಷಕ್ಕೆ ಸೇರ್ತಿದ್ದಾರೆ, ಎಲೆಕ್ಷನ್ಗೆ ನಿಲ್ತಿದ್ದಾರಾ, ಯಾವ ಕ್ಷೇತ್ರದಿಂದ ಚುನಾವಣೆಗೆ ಅಭ್ಯರ್ಥಿಯಾಗಲಿದ್ದಾರೆ..? ಕಿಚ್ಚ ಸುದೀಪ್‌ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ಹಲವು ದಿನಗಳಿಂದ ಸುದೀಪ್‌ ಪಾಲಿಟಿಕ್ಸ್‌ ಎಂಟ್ರಿ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. 

ಹಲವು ಪ್ರಮುಖ ರಾಜಕೀಯ ಮುಖಂಡರ ಜೊತೆ ಒಡನಾಟ ಹೊಂದಿರುವ ಸುದೀಪ್‌ ಯಾವ ಪಾರ್ಟಿ ಸೇರಲಿದ್ದಾರೆ ಎಂಬುದು ಕೂಡ ಕುತೂಹಲ ಮೂಡಿಸಿತ್ತು. ಇದೀಗ ಈ ಬಗ್ಗೆ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅನೇಕ ರಾಜಕೀಯ ನಾಯಕರು ಸುದೀಪ್​ ಅವರನ್ನು ಮೀಟ್‌ ಆಗಿದ್ದಾರೆ. ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಶತಪ್ರಯತ್ನವನ್ನೂ ಮಾಡಿದ್ದಾರೆ.  ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸುದೀಪ್ ರಾಜಕೀಯ ಪ್ರವೇಶ, ಆ ಪಕ್ಷದ ಬಲವನ್ನು ಹೆಚ್ಚಿಸುವುದು ಪಕ್ಕಾ. ಇದನ್ನು ಅರಿತ ನಾಯಕರು ಕಿಚ್ಚನ ಮನೆಯ ಬಾಗಿಲು ತಟ್ಟಿದ್ದಾರಂತೆ ಎನ್ನಲಾಗಿದೆ. ಸುದೀಪ್​ ಅವರಿಂದ ಬೆಂಬಲ ಪಡೆಯೋದು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ. ಪಕ್ಷಕ್ಕೆ ಸೇರ್ಪಡೆ ಆಗುವಂತೆ ಕೂಡ ಸುದೀಪ್‌ ಅವರಿಗೆ ಆಹ್ವಾನ ನೀಡಿದ್ದರು ಎಂದು ಕೂಡ ಹೇಳಲಾಗ್ತಿದೆ. 

ಮೂಲಗಳ ಪ್ರಕಾರ, ನಟ ಸುದೀಪ್‌ ಬಿಜೆಪಿ ಪರ ಆಸಕ್ತಿ ತೋರಿದ್ದಾರಂತೆ ಎನ್ನಲಾಗಿದೆ. ಅವರು ಕಮಲದ ಕೈ ಹಿಡಿಯುವ ಸಾಧ್ಯತೆ ದಟ್ಟವಾಗಿದೆಯಂತೆ ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ ಸುದೀಪ್​ ಅವರು ನೇರವಾಗಿ ರಾಜಕೀಯಕ್ಕೆ ಪ್ರವೇಶ ಮಾಡ್ತಾರೋ ಅಥವಾ ಕೇವಲ ಬಿಜೆಪಿ ಪಕ್ಷದ ಪರ ಪ್ರಚಾರ ರಾಯಭಾರಿ ಆಗಿರುತ್ತಾರೋ ಎಂಬ ಕುತೂಹಲ ಮನೆಮಾಡಿದೆ.

ಇದನ್ನು ಓದಿ… ಸರಕಾರಿ ಯೋಜನೆ 2023- ರೈತರೇ ಚಿಂತಿಸಬೇಡಿ ನಿಮಗೆ ಬಡ್ಡಿ ಇಲ್ಲದ ಸಾಲ ಸಿಗುತ್ತದೆ : ಏಪ್ರಿಲ್ 1ರಿಂದ ಸರಕಾರಿ ಯೋಜನೆ ಜಾರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments