ವಾಹನ ಮಾಲಿನ್ಯಕ್ಕೂ ಮುನ್ನ: ಕುದುರೆ ಲದ್ದಿಯ ಮಾಲಿನ್ಯ! ನಂಬಲಸಾಧ್ಯವಾದ ಇತಿಹಾಸ!
ಕಾರು-ಬೈಕುಗಳು ಬರುವ ಮುನ್ನ, ಜಗತ್ತು ಒಂದು ವಿಚಿತ್ರ ಮಾಲಿನ್ಯದಿಂದ ಬಳಲುತ್ತಿತ್ತು ಗೊತ್ತಾ? ಹೌದು, ಅದುವೇ “ಕುದುರೆ ಲದ್ದಿಯ ಮಾಲಿನ್ಯ (Horse Manure Crisis) “!
ಅದು ಒಂದು ಕಾಲವಿತ್ತು , ರಾಜ ಮಹಾರಾಜರು , ಅಧಿಕಾರಿಗಳು, ಕುದುರೆ ಗಾಡಿಯಿಂದ ಓಡಾಟ ಮಾಡುತಿದ್ದರು , ಅವರ ಜೊತೆಗೆ ಹತ್ತಾರು ಸೈನಿಕರು , ತಮ್ಮ ಕುದುರೆ ಗಳ ಮೇಲೆ ಸವಾರಿ ಮಾಡಿ , ತಮ್ಮ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅಂದರೆ ಈಗಿನ ಕಾಲದಲ್ಲಿ ವಾಹನಗಳು ಹೇಗೆ ಜೀವನದ ಒಂದು ಭಾಗ ಆಗಿವೆ ಅದೇ ರೀತಿ ಕುದುರೆಗಾಡಿಗಳು ಆಗಿನ ರಾಜ ಮಹಾರಾಜರ ಸೈನಿಕರ ಜೀವನದ ಭಾಗವಾಗಿತ್ತು. ಆದರೆ ಇದರಿಂದ ಒಂದು ಸಮಸ್ಯೆ ಉಂಟಾಗುತಿತ್ತು ಅದೇನೆಂದರೆ , ಕುದುರೆ ಲದ್ದಿಗಳು ರಸ್ತೆಗಳ ಮೇಲೆ ಹರುಡುವಿಕೆ, ಕುದುರೆ ಲದ್ದಿಗಳಿಂದ ಆಗಿನ ಕಾಲದ ಜನ ತುಂಬಾ ಸಮಸ್ಯೆ ಗಳನ್ನ ಅನುಭವಿಸುವಂತೆ ಆಗುತಿತ್ತು , ಅದುವೇ ಕುದುರೆ ಲದ್ದಿಯ ಮಾಲಿನ್ಯ (Horse Manure Crisis) ಇದು ಈಗಿನ ವಾಹನ ಗಳಿಂದ ಹೊರಬರುವ ವಾಯು ಮಾಲಿನ್ಯದ ಹಾಗೆಯೇ ಇತ್ತು, ವಾಹನಗಳು ಇಲ್ಲದಾಗ, ನಮ್ಮ ನಗರಗಳು ಹೇಗಿದ್ದವು ಎಂದು ಈ ಲೇಖನದಲ್ಲಿ ನೋಡೋಣ.
ವಾಹನ ಇಲ್ಲದಿದ್ದಾಗ ಕುದುರೆಗಳದ್ದೇ ಆಳ್ವಿಕೆ
ಹಿಂದಿನ ಕಾಲದಲ್ಲಿ, ಈಗಿನಂತೆ ಕಾರು, ಬೈಕು ಇರಲಿಲ್ಲ. ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು, ಸಾಮಾನು ಸಾಗಿಸಲು ಕುದುರೆ ಗಾಡಿಗಳನ್ನು ಬಳಸುತ್ತಿದ್ದರು. ಅಂದರೆ, ಎಲ್ಲೆಡೆ ಕುದುರೆಗಳೇ ಓಡಾಡುತ್ತಿದ್ದವು. ಈ ಹೀಗಾಗಿ ಈ ಕುದುರೆಗಳು ಹೆಚ್ಚು ತಿಂದು, ಹೆಚ್ಚು ಲದ್ದಿ ಹಾಕುತ್ತಿದ್ದವು. ಇದರಿಂದ ರಸ್ತೆಗಳ ತುಂಬೆಲ್ಲಾ ಕುದುರೆ ಲದ್ದಿಯೇ ತುಂಬಿ ಹೋಗುತ್ತಿತ್ತು.
ಕುದುರೆ ಲದ್ದಿ ಮಾಲಿನ್ಯ, ರಸ್ತೆಗಳಲ್ಲಿ ಲದ್ದಿಯ ರಾಶಿ: ಶಾಕಿಂಗ್ ಸತ್ಯ!

ನ್ಯೂಯಾರ್ಕ್, ಪ್ಯಾರಿಸ್, ಲಂಡನ್‌ನಂತಹ ದೊಡ್ಡ ನಗರಗಳ ಹಳೆಯ ಫೋಟೋಗಳನ್ನು ನೋಡಿದರೆ, ರಸ್ತೆಗಳು ಕುದುರೆ ಲದ್ದಿಯಿಂದಲೇ ತುಂಬಿರುತ್ತಿದ್ದವು. ಅದನ್ನು ಸ್ವಚ್ಛ ಮಾಡುವುದು ದೊಡ್ಡ ಸಮಸ್ಯೆಯಾಗಿತ್ತು. ಈ ಲದ್ದಿ ರಸ್ತೆಗಳಲ್ಲಿ ಹರಡಿ, ಅಮೋನಿಯಾ ಮತ್ತು ಮೀಥೇನ್ ಅನಿಲಗಳನ್ನು ಹರಡುತ್ತಿತ್ತು. ಈ ತ್ಯಾಜ್ಯವನ್ನು ಚರಂಡಿಗೆ ಬಿಟ್ಟಾಗ, ಚರಂಡಿ ನೀರು ನಡಿಗೆ ಹೋಗಿ ಸೇರಿದಾಗ ಅದು ನದಿ ನೀರನ್ನು ಕೆಡಿಸಿ, ಮೀನುಗಳು ಸಾಯುವಂತೆ ಮಾಡುತ್ತಿತ್ತು. ಪರಿಸರಕ್ಕೆ ಇದು ದೊಡ್ಡ ಹಾನಿ ಮಾಡುತ್ತಿತ್ತು.
ಕುದುರೆ ಲದ್ದಿ ಮಾಲಿನ್ಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಕಾರು ಬೈಕ್ ಗಳು ಬಂದಿದ್ದ.?
ಕೆಲವು ತಜ್ಞರು ಹೇಳುವಂತೆ, ಕಾರುಗಳ ಆವಿಷ್ಕಾರ ಆಗಿದ್ದು ಈ “ಕುದುರೆ ಲದ್ದಿ ಮಾಲಿನ್ಯ”ವನ್ನು ಕಡಿಮೆ ಮಾಡಲು! ಕುದುರೆ ಲದ್ದಿಯ ಸಮಸ್ಯೆಯಿಂದ ಜಗತ್ತನ್ನು ಮುಕ್ತಗೊಳಿಸಲು ಕಾರುಗಳನ್ನು ಕಂಡುಹಿಡಿಯಲಾಯಿತು ಎಂದು ಹೇಳಲಾಗುತ್ತದೆ.
ಆದರೆ, ಇಲ್ಲಿ ಒಂದು ಮುಖ್ಯ ವಿಷಯವಿದೆ: ಹಿಂದೆ ಕುದುರೆ ಲದ್ದಿ ಮಾಲಿನ್ಯ ಸಮಸ್ಯೆಯಾಗಿತ್ತು, ಈಗ ವಾಹನಗಳ ಮಾಲಿನ್ಯ ಸಮಸ್ಯೆಯಾಗಿದೆ. ಅಂದರೆ, ಜಗತ್ತು ಎಂದಿಗೂ ಸಂಪೂರ್ಣವಾಗಿ ಮಾಲಿನ್ಯದಿಂದ ಮುಕ್ತವಾಗಿಲ್ಲ. ಒಂದು ಸಮಸ್ಯೆಗೆ ಪರಿಹಾರ ಕಂಡುಕೊಂಡಾಗ, ಮತ್ತೊಂದು ಹೊಸ ಸಮಸ್ಯೆ ಹುಟ್ಟಿಕೊಳ್ಳುತ್ತದೆ ಎಂಬುದನ್ನು ಇದು ತೋರಿಸುತ್ತದೆ.
ನಮಗಿದು ಒಂದು ಪಾಠ
ಈ ಇತಿಹಾಸದ ಸತ್ಯ ನಮಗೆ ಒಂದು ಪಾಠ ಹೇಳುತ್ತದೆ. ನಾವು ಒಂದು ರೀತಿಯ ಮಾಲಿನ್ಯವನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಹೊಸ ತಂತ್ರಜ್ಞಾನಗಳು ಮತ್ತೊಂದು ರೀತಿಯ ಮಾಲಿನ್ಯವನ್ನು ಸೃಷ್ಟಿಸಬಹುದು. ಹಾಗಾಗಿ, ನಾವು ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ಮತ್ತು ಎಲ್ಲರಿಗೂ ಒಳ್ಳೆಯದಾಗುವ ಪರಿಹಾರಗಳನ್ನು ಕಂಡುಕೊಳ್ಳಬೇಕು.
ಇದನ್ನು ಓದಿ…