ವಾರ ರಾಶಿ ಭವಿಷ್ಯ : ಯಾವ ರಾಶಿಗೆ ಒಲಿಯಲಿದೆ ಅದೃಷ್ಟ ? Weekly Horoscope In Kannada

ವಾರದ ರಾಶಿ ಭವಿಷ್ಯ: ವಾರಗಳು ಬದಲಾದಂತೆ ಗ್ರಹಗಳೂ ತಮ್ಮ ಸ್ಥಾನ ಬದಲಿಸುತ್ತವೆ. ಆಗಸ್ಟ್ 30, 2025ರ ಈ ವಾರ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರುತ್ತೆ ಅಂತ ತಿಳಿಯೋಣ. ನಿಮ್ಮ ಕನಸುಗಳಿಗೆ ಹೊಸ ಬಣ್ಣ ಹಚ್ಚಲಿದೆಯೇ? ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗುತ್ತವೆಯೇ? ಬ್ಯುಸಿನೆಸ್‌ನಲ್ಲಿ ಒಳ್ಳೆ ಲಾಭ ಬರುತ್ತಾ? ಪ್ರೀತಿ, ಸಂಬಂಧಗಳು ಹಾಗೂ ಕೌಟುಂಬಿಕ ಜೀವನದಲ್ಲಿ ಖುಷಿ ನೆಲೆಸುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಕೆಲವರಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ, ಮತ್ತೂ ಕೆಲವರಿಗೆ ಕೆಲವು ಸವಾಲುಗಳು ಎದುರಾಗಬಹುದು. ಆದರೆ ಭಯಪಡಬೇಕಾಗಿಲ್ಲ, ಏಕೆಂದರೆ ಪ್ರತಿ ಸವಾಲೂ ಒಂದು ಹೊಸ ಪಾಠ ಮತ್ತು ಗೆಲುವಿನ ಮೆಟ್ಟಿಲು. ನಿಮ್ಮ ವಾರದ ಪ್ರತಿಯೊಂದು ಕ್ಷಣವೂ ಅರ್ಥಪೂರ್ಣವಾಗಲು, ಈ ಭವಿಷ್ಯವನ್ನು ಓದಿ, ಅದಕ್ಕೆ ತಕ್ಕಂತೆ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ. ನಿಮ್ಮ ಬದುಕಿನ ಪಯಣ ಇನ್ನಷ್ಟು ಸುಂದರವಾಗಲಿ ಎಂದು ಆಶಿಸುತ್ತೇವೆ.

note – ಈ ಭವಿಷ್ಯವನ್ನು ಕೇವಲ ಒಂದು ಮಾರ್ಗದರ್ಶನವಾಗಿ ನೋಡಿ. ನಿಮ್ಮ ಜೀವನವನ್ನು ಸುಂದರವಾಗಿಸುವ ಶಕ್ತಿ ನಿಮ್ಮ ಕೈಯಲ್ಲೇ ಇದೆ.

ಮೇಷ (Aries)

mesha rashi horoscope

ಈ ವಾರ ನಿಮಗೆ ಫುಲ್ ಬಿಜಿ ಇರುತ್ತೆ. ಪ್ರೀತಿಯಲ್ಲಿರೋರಿಗೆ ಖುಷಿ ತರುತ್ತೆ. ಜಗಳ ಇದ್ರೆ ಮಾತಾಡಿ ಸರಿ ಮಾಡ್ಕೊಳ್ಳಿ. ಮದುವೆಯಾಗಿರೋರು ಸ್ವಲ್ಪ ಹುಷಾರಾಗಿ ಇರಿ. ದುಡ್ಡು ಚೆನ್ನಾಗಿ ಬರುತ್ತೆ, ಶೇರ್ ಮಾರ್ಕೆಟ್‌ನಲ್ಲೂ ಲಾಭ ಇದೆ. ಆದ್ರೆ, ಯಾರಿಗೆ ಸಾಲ ಕೊಡೋಕ್ಕೂ ಮುನ್ನ ಯೋಚ್ನೆ ಮಾಡಿ. ಕೆಲಸದಲ್ಲಿ ಸ್ವಲ್ಪ ಕಷ್ಟ ಬರಬಹುದು. ಅವಸರ ಮಾಡಿದ್ರೆ ತಪ್ಪು ಆಗುತ್ತೆ, ಬಾಸ್ ಬೈಯಬಹುದು. ವಿದ್ಯಾರ್ಥಿಗಳಿಗೆ ಟೆನ್ಷನ್ ಇರುತ್ತೆ, ಆದ್ರೆ ಓದಿನ ಮೇಲೆ ಗಮನ ಇಡಿ. ಜಾಬ್‌ಗೆ ಓದೋರಿಗೆ ಯಶಸ್ಸು ಸಿಗುತ್ತೆ. ಆರೋಗ್ಯದಲ್ಲೂ ಸ್ವಲ್ಪ ಎಚ್ಚರ ಇರಲಿ.

ವೃಷಭ (Taurus)

vrishabha rashi horoscope
2 vrishabha rashi astrology

ಈ ವಾರ ನಿಮಗೆ ಸ್ವಲ್ಪ ಸರಿ-ತಪ್ಪು ಅಂತ ಇರುತ್ತೆ. ಮದುವೆಯಾಗಿರೋರು ಸ್ವಲ್ಪ ಕೇರ್ ಫುಲ್ ಆಗಿ ಇರಿ. ನಿಮ್ಮ ಮಾತು ಸ್ವಲ್ಪ ಬದಲಾಯಿಸಬೇಕಾಗುತ್ತೆ. ಲವ್ ಮಾಡ್ತಿರೋರು ಆರಾಮಾಗಿ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ದುಡ್ಡು ನೀವು ಅಂದ್ಕೊಂಡಷ್ಟು ಬರುತ್ತೆ, ಆದ್ರೆ ಖರ್ಚು ಕೂಡ ಜಾಸ್ತಿ ಇರುತ್ತೆ. ಮನೆ ಅಥವಾ ಜಮೀನು ತಗೊಳೋ ಪ್ಲಾನ್ ಮಾಡ್ಬೋದು. ಕೆಲಸದಲ್ಲಿ ಕಷ್ಟ ಜಾಸ್ತಿ ಆಗಬಹುದು. ನಿಮ್ಮ ಬ್ಯುಸಿನೆಸ್‌ನಲ್ಲಿ ಬೇರೆಯವರನ್ನು ಸೇರಿಸ್ಬೇಡಿ. ಜಾಬ್‌ನಲ್ಲಿ ಪ್ರಮೋಷನ್ ಆಗಬಹುದು, ಆದ್ರೆ ಬೇರೆ ಕಡೆ ಟ್ರಾನ್ಸ್‌ಫರ್ ಆಗೋ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ಆರೋಗ್ಯ ಸ್ವಲ್ಪ ವೀಕ್ ಇರುತ್ತೆ.

ಮಿಥುನ (Gemini)

mithuna rashi astrology
mithuna rashi horoscope

ಇದು ಮಿಶ್ರ ವಾರ. ಲವ್ ಮಾಡ್ತಿರೋರು ಸ್ವಲ್ಪ ಜಾಸ್ತಿ ಪ್ರಯತ್ನ ಮಾಡಬೇಕಾಗುತ್ತೆ. ಮದುವೆ ಜೀವನದ ಸಮಸ್ಯೆಗಳು ಮುಗಿದು ಹೋಗುತ್ತೆ. ಕುಟುಂಬದವರು ಸಪೋರ್ಟ್ ಮಾಡ್ತಾರೆ. ದುಡ್ಡಿಗೋಸ್ಕರ ತಲೆಕೆಡಿಸ್ಕೋಬೇಡಿ, ಒಂದಕ್ಕಿಂತ ಹೆಚ್ಚು ಕಡೆ ಇಂದ ದುಡ್ಡು ಬರುತ್ತೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸ್ಟ್ರಾಂಗ್ ಇರುತ್ತೆ. ವ್ಯಾಪಾರಿಗಳಿಗೆ ಒಳ್ಳೆಯ ವಾರ. ಜಾಬ್ ಮಾಡೋರಿಗೆ ಪ್ರಮೋಷನ್, ಸ್ಯಾಲರಿ ಹೆಚ್ಚಾಗುತ್ತೆ, ಬಾಸ್ ಜೊತೆಗೂ ಒಳ್ಳೆ ಸಂಬಂಧ ಇರುತ್ತೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಪಾಸ್ ಆಗ್ತಾರೆ. ಫಿಟ್ನೆಸ್‌ ಮೇಲೂ ಗಮನ ಕೊಡಿ.

ಕಟಕ (Cancer)

karkataka rashi horoscope
karkataka rashi rashifal

ಈ ವಾರ ತುಂಬಾ ಯೋಚನೆ ಮಾಡಿ ಮುಂದುವರಿಬೇಕಾಗುತ್ತೆ. ಲವ್ ಮಾಡ್ತಿರೋರಿಗೆ ಗುಡ್ ನ್ಯೂಸ್ ಸಿಗುತ್ತೆ. ಆದ್ರೆ ಮದುವೆ ಆಗಿರೋರಿಗೆ ಟೆನ್ಷನ್ ಇದ್ದೇ ಇರುತ್ತೆ. ದುಡ್ಡು ಲಾಭ ಜಾಸ್ತಿ ಇದೆ, ಆದ್ರೆ ಖರ್ಚು ಕಂಟ್ರೋಲ್ ಮಾಡಬೇಕು. ಹೊಸ ಇನ್ವೆಸ್ಟ್‌ಮೆಂಟ್ ಬಗ್ಗೆ ಪ್ಲಾನ್ ಮಾಡ್ತೀರಾ. ವ್ಯಾಪಾರದಲ್ಲಿ ದೊಡ್ಡ ಇನ್ವೆಸ್ಟ್‌ಮೆಂಟ್ ಮಾಡ್ಬೋದು. ಸೋಮಾರಿತನ ಬಿಟ್ಟು ಕೆಲಸಗಳನ್ನು ಟೈಮ್‌ಗೆ ಮುಗಿಸಬೇಕು. ಜಾಬ್ ಚೇಂಜ್ ಬಗ್ಗೆ ಈಗ ಯೋಚಿಸಬೇಡಿ. ವಿದ್ಯಾರ್ಥಿಗಳು ಜಾಸ್ತಿ ಓದಬೇಕು. ಆರೋಗ್ಯಕ್ಕೂ ಸಮಯ ಕೊಡಬೇಕು.

ಸಿಂಹ (Leo)

karkataka rashi horoscope
karkataka rashi horoscope

ಇದು ನಿಮಗೆ ಮಧ್ಯಮ ವಾರ. ಮದುವೆ ಆಗಿರೋರು ನಿಮ್ಮ ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಿ. ಲವ್ ಮಾಡ್ತಿರೋರಿಗೆ ಸಂಗಾತಿಯ ಜೊತೆ ಮಾತಾಡೋಕೆ ಸಮಯ ಸಿಗೋದಿಲ್ಲ, ಅದ್ರಿಂದ ಬೇಸರವಾಗುತ್ತೆ. ದುಡ್ಡು ವಾರ ಚೆನ್ನಾಗಿದೆ, ಆದ್ರೆ ಖರ್ಚು ಕಡಿಮೆ ಮಾಡೋದಿಲ್ಲ. ವ್ಯಾಪಾರ ಮಾಡೋರಿಗೆ ಒಳ್ಳೆ ಲಾಭ ಸಿಗುತ್ತೆ. ಜಾಬ್ ಮಾಡೋರು ಜಾಸ್ತಿ ಕೆಲಸ ಇರೋದ್ರಿಂದ ಬೇಸರಗೊಂಡು ಜಾಬ್ ಚೇಂಜ್ ಬಗ್ಗೆ ಯೋಚ್ನೆ ಮಾಡ್ಬೋದು. ವಿದ್ಯಾರ್ಥಿಗಳು ಹೆಚ್ಚು ಗಮನ ಕೊಡಬೇಕಾಗುತ್ತೆ. ದಿನಚರಿ ಸರಿ ಮಾಡ್ಕೊಂಡು ಕೆಲಸದ ಜೊತೆಗೆ ರೆಸ್ಟ್ ಮಾಡೋಕೂ ಸಮಯ ಇಡಿ.

ಕನ್ಯಾ (Virgo)

kanya rashi horoscope
kanya rashi astrology

ಈ ವಾರ ನಿಮಗೆ ಖುಷಿ ಖುಷಿಯಾಗಿರುತ್ತೆ. ಲವ್ ಮಾಡ್ತಿರೋರು ಒಬ್ಬರಿಗೊಬ್ಬರು ಸಮಯ ಕೊಡಬೇಕು. ಮದುವೆಯಾಗಿರೋರು ಹೊಂದಾಣಿಕೆಯಿಂದ ಇರಿ. ಆದಾಯ ಜಾಸ್ತಿ ಇರುತ್ತೆ, ಅದರಿಂದ ಖುಷಿ ಪಡ್ತೀರಾ. ಮುಳುಗಿದ ದುಡ್ಡು ಮರಳಿ ಬರಬಹುದು. ವ್ಯಾಪಾರ ಮಾಡೋರು ಒಳ್ಳೆ ಲಾಭ ಪಡ್ತಾರೆ. ಜಾಬ್‌ನಲ್ಲಿ ಜಾಸ್ತಿ ಕೆಲಸ ಮಾಡಬೇಕಾಗುತ್ತೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಾರೆ. ಜ್ಞಾನ ಜಾಸ್ತಿ ಮಾಡಿಕೊಳ್ಳೋ ಅವಕಾಶ ಸಿಗುತ್ತೆ. ಆರೋಗ್ಯ ಸ್ವಲ್ಪ ಹದಗೆಡಬಹುದು.

ತುಲಾ (Libra)

tula rashi horoscope
tula rashi astrology

ಈ ವಾರ ನಿಮಗೆ ನಾರ್ಮಲ್ ಇರುತ್ತೆ. ಪ್ರೇಮಿಗಳಿಗೆ ಸ್ವಲ್ಪ ಕನ್‌ಫ್ಯೂಶನ್ ಇರುತ್ತೆ. ಮದುವೆಯಾಗಿರೋರು ಕುಟುಂಬದ ಸಮಸ್ಯೆ ಎದುರಿಸ್ತಾರೆ. ದುಡ್ಡಿನ ಬಗ್ಗೆ ಯೋಚ್ನೆ ಮಾಡಿ ಡಿಸಿಷನ್ ತಗೊಳ್ಳಿ. ಶೇರ್ ಮಾರ್ಕೆಟ್‌ನಲ್ಲಿ ಇನ್ವೆಸ್ಟ್ ಮಾಡಿದ್ರೆ ಲಾಭ ಇದೆ. ವ್ಯಾಪಾರ ಮಾಡೋರು ಹುಷಾರಾಗಿರಬೇಕು. ರಿಸ್ಕ್ ತಗೊಂಡ್ರೆ ದೊಡ್ಡ ನಷ್ಟ ಆಗಬಹುದು. ಒಂದು ಡೀಲ್ ಫೈನಲ್ ಆಗೋದು ನಿಂತು ಹೋಗಬಹುದು. ಜಾಬ್‌ನಲ್ಲಿ ಪೊಲಿಟಿಕ್ಸ್ ಇಂದ ದೂರ ಇರಿ, ಕೆಲಸದಲ್ಲಿ ಅವಸರ ಮಾಡಬೇಡಿ. ವಿದ್ಯಾರ್ಥಿಗಳು ಓದಿನ ಮೇಲೆ ಫೋಕಸ್ ಇಡಿ. ಆರೋಗ್ಯ ಸ್ವಲ್ಪ ವೀಕ್ ಇರುತ್ತೆ.

ವೃಶ್ಚಿಕ (Scorpio)

vrischika rashi horoscope
vrischika rashi astrology

ಈ ವಾರ ಕೆಲವು ಸಮಸ್ಯೆಗಳು ಬರಬಹುದು. ಪ್ರೀತಿಯ ಸಂಬಂಧ ಸರಿ ಇಡೋಕೆ ಜಾಸ್ತಿ ಪ್ರಯತ್ನ ಮಾಡಬೇಕು. ಮದುವೆ ಜೀವನದ ಸಮಸ್ಯೆಗಳು ದೂರವಾಗುತ್ತವೆ. ಇನ್ಕಮ್ ಸೋರ್ಸ್ ಹೆಚ್ಚಿಸೋಕೆ ಪ್ರಯತ್ನ ಮಾಡ್ತೀರಾ, ಆದ್ರೆ ಇಷ್ಟ ಇಲ್ಲದೇ ಖರ್ಚು ಮಾಡಬೇಕಾಗುತ್ತೆ. ವ್ಯಾಪಾರ ಮಾಡೋರಿಗೆ ಒಳ್ಳೆಯ ವಾರ. ಒಂದು ಪ್ರಾಪರ್ಟಿ ತಗೊಳ್ಳೋಕೆ ಅವಕಾಶ ಸಿಗಬಹುದು. ಜಾಬ್‌ನಲ್ಲಿ ದೊಡ್ಡ ಸಾಧನೆ ಆಗೋ ಸಾಧ್ಯತೆ ಇದೆ. ನಿಮ್ಮ ಕೆಲಸದ ಮೇಲೆ ಫೋಕಸ್ ಇಡಿ, ಇಲ್ಲಾ ಅಂದ್ರೆ ಎದುರಾಳಿಗಳು ಸಮಸ್ಯೆ ಮಾಡ್ತಾರೆ. ವಿದ್ಯಾರ್ಥಿಗಳು ಓದಿನ ಬಗ್ಗೆ ಸ್ವಲ್ಪ ಟೆನ್ಶನ್‌ನಲ್ಲಿ ಇರ್ತಾರೆ, ಆದ್ರೆ ಫೋಕಸ್ ಮಾಡ್ತಾರೆ. ಆರೋಗ್ಯದ ಬಗ್ಗೆ ಕೇರ್ ಫುಲ್ ಆಗಿ ಇರಿ.

ಧನು (Sagittarius)

 dhanu rashi horoscope
dhanu rashi astrology

ಈ ವಾರ ನಿಮಗೆ ನಾರ್ಮಲ್ ಇರುತ್ತೆ. ಪ್ರೇಮಿಗಳಿಗೆ ಖುಷಿ ಜಾಸ್ತಿ ಆಗುತ್ತೆ, ಸಂಗಾತಿಯಿಂದ ಗುಡ್ ನ್ಯೂಸ್ ಸಿಗಬಹುದು. ಮದುವೆ ಆಗಿರೋರು ಜಗಳದಲ್ಲಿ ಬೇರೆಯವರ ಸಲಹೆ ತಗೊಂಡ್ರೆ ನಷ್ಟ ಆಗಬಹುದು. ದುಡ್ಡಿನ ವಿಷಯದಲ್ಲೂ ಖುಷಿ ಸುದ್ದಿ ಇದೆ, ಆದ್ರೆ ಖರ್ಚು ಬಗ್ಗೆ ಲೆಕ್ಕ ಇಡಿ, ಇಲ್ಲಾ ಅಂದ್ರೆ ಕಷ್ಟ ಆಗುತ್ತೆ. ಈ ವಾರ ಯಾರಿಗೂ ಸಾಲ ಕೊಡಬೇಡಿ. ವ್ಯಾಪಾರ ಮಾಡೋರು ಯಾರನ್ನೂ ನಂಬಬೇಡಿ, ನಷ್ಟ ಆಗಬಹುದು. ಜಾಬ್ ಮಾಡೋರಿಗೆ ಸ್ಥಾನಮಾನ ಹೆಚ್ಚಾಗುತ್ತೆ. ಸಹೋದ್ಯೋಗಿಯಿಂದ ಸಹಾಯ ತಗೊಳ್ಳಬೇಕಾಗಬಹುದು. ವಿದ್ಯಾರ್ಥಿಗಳಿಗೆ ಕನ್ಫ್ಯೂಷನ್ ಇರುತ್ತೆ. ಆರೋಗ್ಯದ ಬಗ್ಗೆ ಎಚ್ಚರ ಇರಿ.

ಮಕರ (Capricorn)

makara rashi horoscope
makara rashi astrology

ಈ ವಾರ ನಿಮಗೆ ಗೊಂದಲದಿಂದ ಕೂಡಿರುತ್ತೆ. ಲವ್ ಮಾಡ್ತಿರೋರು ಸಂಗಾತಿಯ ಮೇಲೆ ಬೇಜಾರಲ್ಲಿ ಇರ್ತಾರೆ. ಮದುವೆಯಾಗಿರೋರು ಅನಗತ್ಯ ಜಗಳ ಮಾಡಬೇಡಿ. ಈ ವಾರ ನಿಮ್ಮ ಖರ್ಚು ಜಾಸ್ತಿ ಆಗೋ ಸಾಧ್ಯತೆ ಇದೆ. ಯೋಚನೆ ಮಾಡಿ ಡಿಸಿಷನ್ ತಗೊಳ್ಳಿ. ಹೊಸ ಕೆಲಸ ಶುರು ಮಾಡೋಕೆ ಪ್ಲಾನ್ ಮಾಡ್ಬೋದು. ವೃತ್ತಿಜೀವನದಲ್ಲಿ ಹುಷಾರಾಗಿ ಇರಿ. ವ್ಯಾಪಾರದಲ್ಲಿ ನಿಂತು ಹೋಗಿದ್ದ ಕೆಲಸಗಳನ್ನು ಮುಗಿಸಬೇಕಾಗುತ್ತೆ. ಜಾಬ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗುತ್ತೆ. ಆರೋಗ್ಯ ಸ್ವಲ್ಪ ವೀಕ್ ಇರುತ್ತೆ.

ಕುಂಭ (Aquarius)

 kumbha rashi horoscope
kumbha rashi astrology

ಇದು ನಿಮಗೆ ಸಾಧಾರಣ ವಾರ. ಪ್ರೇಮಿಗಳು ಅನುಮಾನದಿಂದ ಜಗಳ ಮಾಡ್ಕೋಬಹುದು. ಮದುವೆಯಾಗಿರೋರು ಕುಟುಂಬ ಮತ್ತು ಸಂಗಾತಿಯ ಮಾತುಗಳನ್ನು ಗಮನಿಸಬೇಕು. ಈ ವಾರ ಸಿಕ್ಕಿಬಿದ್ದ ದುಡ್ಡು ಮರಳಿ ಬರುವ ಸಾಧ್ಯತೆ ಇದೆ. ಪ್ರಾಪರ್ಟಿ ಇನ್ವೆಸ್ಟ್‌ಮೆಂಟ್ ಮಾಡೋ ಮುನ್ನ ಎಕ್ಸ್‌ಪರ್ಟ್ ಸಲಹೆ ತಗೊಳ್ಳಿ. ವೃತ್ತಿಜೀವನದಲ್ಲಿ ಯೋಚನೆ ಮಾಡಿ ಹೆಜ್ಜೆ ಇಡಿ. ಅಪರಿಚಿತರನ್ನು ನಂಬೋದು ಹಾನಿಕರ. ಜಾಬ್ ಮಾಡೋರು ತಮ್ಮ ಕೆಲಸಗಳ ಬಗ್ಗೆ ಯೋಚಿಸಿ ಮುಂದುವರಿಬೇಕು ಮತ್ತು ಬೇರೆಯವರಿಗೆ ಬೇಕು ಅಂದ್ರೆ ಮಾತ್ರ ಸಲಹೆ ಕೊಡಿ. ವಿದ್ಯಾರ್ಥಿಗಳು ಮೋಜು ಮಸ್ತಿಯಲ್ಲಿ ಜಾಸ್ತಿ ಸಮಯ ಕಳಿತಾರೆ. ಆರೋಗ್ಯದಲ್ಲಿ ಏರುಪೇರು ಆಗಬಹುದು.

ಮೀನ (Pisces)

meena rashi horoscope
meena rashi astrology

ಈ ವಾರ ಯೋಚಿಸಿ ಮುಂದುವರಿಬೇಕಾಗುತ್ತೆ. ಮದುವೆ ಜೀವನದಲ್ಲಿ ಖುಷಿ ಬರುತ್ತೆ. ಲವ್ ಮಾಡ್ತಿರೋರಿಗೆ ಸಂಗಾತಿಯ ಕೋಪದಿಂದ ಜಗಳ ಜಾಸ್ತಿ ಆಗಬಹುದು. ಖರ್ಚುಗಳ ಬಗ್ಗೆ ಹುಷಾರಾಗಿ ಇರಿ. ಈ ವಾರ ಯಾರ ಜೊತೆಗೂ ಹಣದ ವ್ಯವಹಾರ ಮಾಡಬೇಡಿ. ಯಾವುದೇ ಇನ್ವೆಸ್ಟ್‌ಮೆಂಟ್ ಮುನ್ನ ಚೆನ್ನಾಗಿ ಪರಿಶೀಲಿಸಿ. ವ್ಯಾಪಾರ ಮಾಡೋರಿಗೆ ಒಳ್ಳೆಯ ವಾರ. ಹೊಸಬರ ಜೊತೆ ಸೇರಿ ಬ್ಯುಸಿನೆಸ್ ಮುಂದುವರಿಸ್ತಾರೆ. ಜಾಬ್‌ನಲ್ಲಿ ಬಾಸ್ ಮಾತುಗಳಿಗೆ ಗಮನ ಕೊಡಿ. ಜಾಬ್ ಇಲ್ಲ ಅನ್ನೋರಿಗೆ ಒಳ್ಳೆಯ ಅವಕಾಶ ಸಿಗಬಹುದು. ವಿದ್ಯಾರ್ಥಿಗಳು ಓದಿನಿಂದ ಗಮನ ಬೇರೆ ಕಡೆಗೆ ತಿರುಗುತ್ತೆ. ಗಂಟಲಿನ ಸಮಸ್ಯೆ ಕಾಡಬಹುದು, ಊಟದ ಬಗ್ಗೆ ಗಮನ ಇರಲಿ.

ಈ ವಾರದ ನಿಮ್ಮ ರಾಶಿ ಭವಿಷ್ಯದ ಬಗ್ಗೆ ನಾವು ಇಲ್ಲಿ ವಿವರಿಸಿದ್ದೇವೆ. ಪ್ರತಿಯೊಂದು ಭವಿಷ್ಯವೂ ಕೇವಲ ಮಾರ್ಗದರ್ಶನವಷ್ಟೇ, ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಶಕ್ತಿ ನಿಮ್ಮ ಕೈಯಲ್ಲಿದೆ. ಸವಾಲುಗಳು ಬಂದಾಗ ಧೈರ್ಯದಿಂದ ಎದುರಿಸಿ, ಯಶಸ್ಸು ಬಂದಾಗ ವಿನಯದಿಂದ ಸ್ವೀಕರಿಸಿ. ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಸಂತೋಷ ಮತ್ತು ಯಶಸ್ಸು ಸಿಗಲಿ. ಮುಂದಿನ ವಾರ ಮತ್ತೊಂದು ಹೊಸ ಭವಿಷ್ಯದೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇವೆ. ನಿಮ್ಮೆಲ್ಲರಿಗೂ ಶುಭವಾಗಲಿ.

ಇದನ್ನು ಓದಿ…

ಗೋಕರ್ಣದ ಕಾಡಲ್ಲಿ ಸಿಕ್ಕ ರಷ್ಯಾ ಮಹಿಳೆ ಮತ್ತು ಮಕ್ಕಳು ನೆಮ್ಮದಿಗಾಗಿ ಗುಹೆಯಲ್ಲಿ ವಾಸ ! Russian Woman With Children Found Living In Gokarna Cave

Leave a Comment