Anna Bhagya Yojana: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೀಯಾ ಎಂದು ತುಂಬಾ ಸುಲಭವಾಗಿ ಚೆಕ್ ಮಾಡಬಹುದು .
Anna Bhagya Yojana : ರಾಜ್ಯ ಸರಕಾರ bpl card ದಾರರಿಗೆ ಕಾಂಗ್ರೆಸ್ ಸರಕಾರ, ತಿಂಗಳಿಗೆ ತಲಾ 10 ಕೆಜಿ ಅಕ್ಕಿ ಕೋಡುವ ಭರವಸೆ ನೀಡಿತ್ತು, ಕೋವಿಡ್ ಸಮಯದಿಂದಲೂ ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ವಿತರಿಸುತ್ತಿತ್ತು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ, ಕೇಂದ್ರದಿಂದ ಬರುವ 5ಕೆಜಿ ಅಕ್ಕಿ ಕೆಂದ್ರ ಸರಕಾರ, ಕರ್ಣಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬಂದ್ ಮಾಡಿಸಿತ್ತು..
ಕೇಂದ್ರದಿಂದ ಬರುವ ಐದು ಕೆಜಿ ಅಕ್ಕಿಯಲ್ಲಿ ರಾಜ್ಯ ಸರಕಾರ 5 ಕೆಜಿ ಅಕ್ಕಿ ಸೇರಿಸಿ 10 ಕೆಜಿ ಅಕ್ಕಿಯನ್ನು ಬಿಪಿಎಲ್ ಕಾರ್ಡ್ ದಾರರಿಗೆ ಹಂಚಲು ಪ್ಲಾನ್ ಮಾಡಿತ್ತು. ಅದರೆ ಕೇಂದ್ರದಿಂದ ಬರುವ ತಲಾ 5ಕೆಜಿ ಅಕ್ಕಿ ಯೋಜನೆ ಬಂದ್ ಮಾಡಿರುವುದರಿಂದ, ಮತ್ತೆ 5 ಅಕ್ಕಿ ಅಕ್ಕಿಗಾಗಿ ರಾಜ್ಯ ಸರಕಾರ ಪರದಾಡಬೇಕಾಯಿತು, ಆಕ್ಕಿ ಏನು ಸಿಗಲಿಲ್ಲ ಅದಕ್ಕಾಗಿಯೇ, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ನೇರವಾಗಿ ಹಣವನ್ನೇ ಡೆಪಾಸಿಟ್ ಮಾಡುವ ಪ್ಲಾನ್ ಹಾಕೊಂಡಿದೆ ರಾಜ್ಯ ಸರಕಾರ.
ಅಂದರೆ ತಲಾ 5KG ಅಕ್ಕಿ ಜೊತೆಗೆ 5ಕೆಜಿ ಅಕ್ಕಿಯ ಬದಲು, ಪ್ರತಿ ಕೆಜಿ ಗೆ 34 ರೂಪಾಯಿಯಂತೆ 5ಕೆಜಿ ಅಕ್ಕಿಗೆ 170 ರೂಪಾಯಿ ಫಲಾನುಭವಿಗಳ ಖಾತೆಗೆ ಬರಲಿದೆ.
(ಉದಾಹರಣೆಗೆ )– ನಿಮ್ಮ ಮನೆಯಲ್ಲಿ ಒಟ್ಟು 5 ಜನ ಇದ್ದರೆ, ತಲಾ 170 ರೂಪಾಯಿಯಂತೆ ಒಟ್ಟು 5 ಜನರ 850ರೂಪಾಯಿ ನಿಮ್ಮ ಬ್ಯಾಂಕ್ ಖಾತೆಗೆ ಬರಲಿದೆ..
ನಿಮ್ಮ ಹಣ ನಿಮ್ಮ ಖಾತೆಗೆ ಬಂದಿದ್ಯ ಇಲ್ವಾ ಅಂತ ಹೆಗೆ ಚೆಕ್ ಮಾಡೋದು ? ಈ ಬಗ್ಗೆ ಸಂಪೂರ್ಣ ಮಾಹಿತಿ ಹೀಗಿದೆ.
ಅನ್ನಭಾಗ್ಯ ಯೋಜನೆಯ (Anna Bhagya yojana ) ಫಲಾನುಭವಿಗಳಿಗೆ ನೇರ ನಗದು ವರ್ಗಾಯಿಸುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಚಾಲನೆ ನೀಡಿದ್ದಾರೆ.ಹಣವು ಖಾತೆಗೆ ವರ್ಗಾವಣೆಯಾಗಿದೆಯೇ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಆಹಾರ ಇಲಾಖೆ ವೆಬ್‌ಸೈಟ್ ಲಿಂಕ್ ಬಿಡುಗಡೆ ಮಾಡಿದೆ.ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಹಣ ಹಾಕಲಾಗುತ್ತಿದ್ದು, ನಿಮ್ಮ ಖಾತೆಗೆ ಹಣ ಬಂದಿದೆಯೇ? ಎಷ್ಟು ಹಣ ಜಮೆಯಾಗಿದೆ? ಯಾರ ಖಾತೆಗೆ ಜಮೆಯಾಗಿದೆ? ಎಂಬ ಇತ್ಯಾದಿ ಮಾಹಿತಿ ತಿಳಿಸಿಕೊಡುವ ನಿಟ್ಟಿನಲ್ಲಿ ಆಹಾರ ಇಲಾಖೆಯು ವೆಬ್‌ಸೈಟ್ ಲಿಂಕ್ ಬಿಡುಗಡೆ ಮಾಡಿದೆ.ಸದ್ಯ ಫಲಾನುಭವಿ ಗಳ ಖಾತೆಗೆ ಹಣ ಕ್ರೆಡಿಟ್ ಮದುವ ಪ್ರೋಸೆಸ್ ಶುರುವಾಗಿದೆ, ಇದನ್ನ ಹಂತ ಹಂತವಾಗಿ ರಜ್ಯದ ಎಲ್ಲ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ.
Anna Bhagya yojana Website Link – ಅನ್ನಭಾಗ್ಯ ವೆಬ್‌ಸೈಟ್ ಲಿಂಕ್
ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿ ನೀಡುವ ವೆಬ್‌ಸೈಟ್ ಲಿಂಕ್ ಹೀಗಿದೆ (anna bhagya yojana link) : https://ahara.kar.nic.in/status1/status_of_dbt.aspx ಈ ಲಿಂಕ್ ಬಳಸಿ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಗೆ ಭೇಟಿ ನೀಡಿ ಅಲ್ಲಿ ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿ ಪಡೆದುಕೊಳ್ಳಬಹುದು.
ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ವರ್ಷ, ತಿಂಗಳು ಹಾಗೂ ಪಡಿತರ ಚೀಟಿಯ RC CARD ನಂಬರ್ , ಅಂದರೆ ರೇಶನ್ ಕಾರ್ಡ್ ನಲ್ಲಿರುವ 12 ಸಂಖೆಗಳ ನಂಬರ್ ಎಂಟರ್ ಮಾಡಿ. ಆ ಬಳಿಕ Go ಎಂಬ ಆಯ್ಕೆಯನ್ನು ಮಾಡಿದರೆ ಮಾಹಿತಿ ಲಭ್ಯವಾಗಲಿದೆ. ಅನ್ನಭಾಗ್ಯ ಹಣ ವರ್ಗಾವಣೆ ಕುರಿತು ಏನೆಲ್ಲಾ ಮಾಹಿತಿ ಲಭ್ಯವಿದೆಯೋ ಅದನ್ನು ತಿಳಿದುಕೊಳ್ಳಲು ವೆಬ್‌ಸೈಟ್‌ನಲ್ಲಿ ಪರಿಶೀಲನೆ ಮಾಡಬಹುದು. ಅನ್ನಭಾಗ್ಯ ಯೋಜನೆಯ ಹಣವು ಕುಟುಂಬ ಮುಖ್ಯಸ್ಥರ ಖಾತೆಗೆ ಬರಲಿದೆ. ಒಂದು ಕೆಜಿ ಅಕ್ಕಿಗೆ 34 ರೂಪಾಯಿ ಹಾಗೂ ಐದು ಕೆಜಿ ಅಕ್ಕಿಗೆ ತಲಾ ಐದು ಕೆಜಿ ಅಕ್ಕಿಗೆ 170 ರುಪಾಯಿ ಹಣ ವರ್ಗಾವಣೆ ಮಾಡಲಾಗಿದೆ.
ಇನ್ನು ಹಣ ಜಮೆಯಾದ ಕೂಡಲೇ ಬ್ಯಾಂಕ್‌ನಿಂದ ಮೇಸೆಜ್ ಬರತ್ತೆ. ಒಂದೂ ವೇಳೆ ಹಣ ನಿಮ್ಮ ಅಕೌಂಟ್ ಗೆ Transfar ಆಗಿಲ್ಲ ಅಂದರೆ.. ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ, ವಿಚಾರಿಸಬಹುದು.
ಇದನ್ನು ಓದಿ- ಸರಕಾರಿ ಯೋಜನೆ 2023- ರೈತರೇ ಚಿಂತಿಸಬೇಡಿ ನಿಮಗೆ ಬಡ್ಡಿ ಇಲ್ಲದ ಸಾಲ ಸಿಗುತ್ತದೆ : ಏಪ್ರಿಲ್ 1ರಿಂದ ಸರಕಾರಿ ಯೋಜನೆ ಜಾರಿ