Wednesday, November 20, 2024
HomeHOMEನಟ ದುನಿಯಾ ವಿಜಯ್ ಜೀವನ ಚರಿತ್ರೆ, Actor Duniya Vijay Biography

ನಟ ದುನಿಯಾ ವಿಜಯ್ ಜೀವನ ಚರಿತ್ರೆ, Actor Duniya Vijay Biography

ನಟ ದುನಿಯಾ ವಿಜಯ್ ಜೀವನ ಚರಿತ್ರೆ, ದುನಿಯಾ ವಿಜಯ್ ಆರಂಭಿಕ ಜೀವನ Actor Duniya Vijay Biography And Early Life

Duniya Vijay- ಒಂದು ಬಡ ಕುಟುಂಬದಿಂದ , ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ನಟ, ನಿರ್ಮಾಪಕ, ಮತ್ತು ಇತ್ತೀಚೆಗೆ ನಿರ್ದೇಶನಕ್ಕೂ ಕೈ ಹಾಕಿ ಸೈ ಅನ್ನಿಸಿಕೊಂಡಿರುವ. Sandalwood ಸಲಗ, ಕರಿ ಚಿರತೆ, ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರ ಲೈಫ್ ಸ್ಟೋರಿ (Duniya Vijay Life Story).

ತೀರ ಬಡತನದ ಕುಟುಂಬದಿಂದ , ಹೆಜ್ಜೆ ಹೆಜ್ಜೆಗೂ, ಸಂಘರ್ಷದ ಜೀವನ ಕಂಡು. ದುನಿಯಾ ಸಿನಿಮಾದ ಮೂಲಕ ಕರುನಾಡ ಕರಿಯ ಎನಿಸಿಕೊಂಡಿರುವ ನಟ ದುನಿಯಾ ವಿಜಯ್ (Duniya Vijay) ಅವರು, ಬೆಂಗಳೂರು ಜಿಲ್ಲೆಯ ಕುಂಬಾರನಹಳ್ಳಿಯಲ್ಲಿ ಜನವರಿ 20- 1974 ರಲ್ಲಿ ಜನಿಸಿದರು. ಇವರ ತಂದೆ (Duniya Vijay Father) ರುದ್ರಪ್ಪ ಅವರು, ಕೂಲಿ ಕೆಲಸ ಮಾಡ್ತುತಿದ್ದರು,ಇವರ ತಾಯಿ Duniya Vijay Mother ಹೆಸರು ನಾರಾಯನಮ್ಮ.

ಬಾಲ್ಯದಲ್ಲಿ Duniya Vijay , ತುಂಬಾ ತುಂಟ ಹುಡುಗ ಆಗಿದ್ದರು. ಈ ಕರಣಕ್ಕೆಯೇ ತನ್ನ ಶೈಕ್ಷಣಿಕ ಜೀವನದಲ್ಲಿ (Duniya School Life) ಬರೋಬ್ಬರಿ 7 ರಿಂದ 8 ಸ್ಕೂಲ್ ಗಳನ್ನ ಬದಲಾಯಿಸಿಕೊಂಡಿದ್ದರು. ಬಳಿಕ ಅವರು ಕಾಲೇಜ್ ಮತ್ತು ಡಿಗ್ರಿ ಕಂಪ್ಲೇಂಟ್ ಮಾಡಿದ್ದರು. 

ದುನಿಯಾ ವಿಜಯ್ ಅವರಿಗೆ ಒಬ್ಬರು ಅಕ್ಕ ಇದ್ದಾರೆb (Duniya Vijay Sister) , ಇವರ ಹೆಸರು ಅಂಬುಜ, (Ambuja Duniya Vijay Sister) ಇವರು ಬೇರೆ ಯಾರು ಅಲ್ಲ , ಸ್ಯಾಂಡಲ್ವುಡ್ ನಟ ಲೂಸ್ ಮಾದ ಯೋಗಿ ಅವರ ತಾಯಿ (Loose Mada Yogi Mother). ಹೌದು, ನಿಮಗೆ ಆಶ್ಚರ್ಯ ಆದ್ರೂ ಇದು ನಿಜ. ದುನಿಯಾ ವಿಜಯ್ ಅವರು ಲೂಸ್ ಮಾದ ಯೋಗಿ ಅವರಿಗೆ ಸ್ವಂತ ಮಾವ ಆಗಬೇಕು.

ದುನಿಯಾ ವಿಜಯ್ ವೃತ್ತಿ ಜೀವನ (Duniya Vijay Professional Life)

ಬಾಲ್ಯದಿಂದಲೇ ದುನಿಯಾ ವಿಜಯ್ ಅವರಿಗೆ ನಟನೆಯಲ್ಲಿ ಆಸಕ್ತಿ ಇತ್ತು. ಸ್ಕೂಲ್ ಕಾಲೇಜ್ ಗಳಲ್ಲಿ ಸಣ್ಣ ಪುಟ್ಟ ಪಾತ್ರಗಳು ಮಾಡುತಿದ್ದರು. ದುನಿಯಾ ವಿಜಿ ಅವರಿಗೆ ರಜನಿಕಾಂತ್ (Rajanikanth) ಅಂದ್ರೆ ಪಂಚಪ್ರಾಣ Duniya Vijay ಅವರು ಸುಮಾರು ಎರೆಡುವರೆ, ದಶಕಗಳಿಂದ ಸ್ಯಾಂಡಲ್ವುಡ್ನಲ್ಲಿ ನಟನೆ ಮಾಡುತ್ತಿದ್ದಾರೆ ,

ಹೌದು,
ದುನಿಯಾ ಸಿನಿಮಾ (Duniya Movie) ಮಾಡೋಕು ಮೊದಲೇ ದುನಿಯಾ ವಿಜಯ್ ಅವರು, ಸಿನಿಮಾಗಳಲ್ಲಿ , ಧಾರಾವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆಗ Duniya Vijay ಅವರು ಕೇವಲ ವಿಜಯ್ ಎಂದೇ ಗುರುತಿಸಿಕೊಂಡಿದ್ದರು.

ದುನಿಯಾ ವಿಜಿ ಅವರು ಅನೇಕ ಬಾರಿ ದೊಡ್ಡ ದೊಡ್ಡ ಡೈರೆಕ್ಟರ್ , Producer ಹತ್ತಿರ ಸಿನಿಮಾದಲ್ಲಿ ಒಂದು ಚಾನ್ಸ್ ಕೊಡಿ ಅಂತ ಕೇಳೋಕು ಹೋಗಿದ್ದು ಇದೆ. ಕೆಲವೊಮ್ಮೆ ಅವರಿಗೆ ಅಪಮಾನ ಮಾಡಿ ವಾಪಸ್ ಕಳಿಸಿರುವ ಉದಾಹರಣೆಯು ಇದೆ. ಬಳಿಕ ರಂಗ SSLC ಸಿನಿಮಾದಲ್ಲಿ, ಕೊಂಚ ಗುರುತಿಸಿಕೊಳ್ಳುವಂತಹ ಪಾತ್ರ ಸಿಕ್ಕಿತು. ರಂಗ SSLC ಸಿನಿಮಾ ಒಳ್ಳೆ ಯಶಸ್ಸು ಕಂಡಿತ್ತು. ಆಗ ಅಲ್ಪ ಸ್ವಲ್ಪ Duniya Vijay ಅವರು ಜನರಿಗೆ ಪರಿಚಯವಾದರು.

90 ರ ದಶಕದಲ್ಲೇ ಜಿಮ್ ಜಾಇನ್ ಮಾಡಿದ್ದ ದುನಿಯಾ ವಿಜಯ್, ಬಾಡಿ ಬಿಲ್ಡರ್ ಆಗುವ ಕನಸು.

 ವಿಜಯ್ ಕುಮಾರ್ ಅವರು , ದುನಿಯಾ ವಿಜಯ್ ಎಂದು ಕರೆಸಿಕೊಳ್ಳೋಕೆ. ಅಷ್ಟಿಷ್ಟು ಕಷ್ಟ ಪಟ್ಟಿದಲ್ಲ. ಹೌದು ಸ್ನೇಹಿತರೆ, ದುನಿಯಾ ಸಿನಿಮಾ ಮಾಡೋಕು ಮೊದಲು, ವಿಜಯ್ ಅವರು ಸಾಕಷ್ಟು ಏಳು ಬಿಳುಗಳನ್ನ ಕಂಡಿದ್ದಾರೆ. Duniya Vijay ಅವರಿಗೆ Bodybuilding ಅಂದ್ರೆ ಹುಚ್ಚು. ತಾನು ಸಹ Bodybuilder ಆಗಬೇಕು ಎಂದು ಕನಸು ಕಂಡಿದ್ದರು. 90 ರ ದಶಕದಲ್ಲೇ ಜಿಮ್ ಜಾಇನ್ ಮಾಡಿ, Body Build ಮಾಡೋಕೆ ಶುರು ಮಾಡಿದ್ದರು. ಒಂದು ಹಂತಕ್ಕೆ ಬಂದಮೇಲೆ ಸಣ್ಣ ಪುಟ್ಟ Bodybuilding ಕಾಂಪಿಟಿಷನ್ ಗೆ ಇಳಿಯುತ್ತಿದ್ದರು. 

ಒಮ್ಮೆ ಮಿಸ್ಟರ್ ಬೆಂಗಳೂರು Bodybuilding ಕಾಂಪಿಟಿಷನ್ (MR.MS Bangalore Bodybuilding Competition) ಗೆ ಇಳಿಬೇಕು , ಈ ಬಾರಿ ಮಿಸ್ಟರ್ ಬೆಂಗಳೂರು ಪಟ್ಟ ಗಿಟ್ಟಿಸಿಕೊಳ್ಳಬೇಕು ಅಂತ ಪಣ ತೊಟ್ಟರು. ಆದರೆ Bodybuilding ಸುಲಭದ ಮಾತಲ್ಲ,Bodybuild ಮಾಡಬೇಕಾದ್ರೆ ಸಾಧಾರಣ ಫುಡ್ ಸಾಲಲ್ಲ ಸ್ನೇಹಿತರೆ, ದೇಹದ ತೂಕ ಹೆಚ್ಚಿಸಿ, ಅಥವಾ ಕಡಿಮೆ ಮಾಡಿ, Six pack ಮಾಡಿ, ಮೈ ಮೇಲೆ ಕಟ್ಸ್ ತರೋಕೆ, ಖಂಡಿತ ಮನೆಯಲ್ಲಿರೋ ಊಟ ಸಾಲಲ್ಲ, ಅದರಲ್ಲೂ ಕಾಂಪಿಟಿಷನ್ ಗೆ ಇಳಿಬೇಕಾದ್ರೆ, ಚಿಕನ್ನು , ಮಟ್ಟನ್ನು, ಮೊಟ್ಟೆ, ಮತ್ತು ಇತರೆ, ಸಸ್ಯಾಹಾರಿ ಪದಾರ್ಥಗಳನ್ನು ಟೈಮ್ ಟು ಟೈಮ್ ಸೇವಿಸಬೇಕಾಗುತ್ತೆ. ಆದರೆ ಆ ಕಾಲದಲ್ಲಿ ದುನಿಯಾ ವಿಜಿ ಹತ್ರ ಇವೆಲ್ಲದಕ್ಕೆ ಖರ್ಚು ಮಾಡೋಕೆ ಹಣವಿರಲಿಲ್ಲ.

ಹಣಕ್ಕಾಗಿ ಪ್ರೀತಿಯ ಬೈಕ್ ಆಡ ಇಡಬೇಕಾಯಿತು

ಆಗ ಅವರು Bodybuilding Competition ಗೆ ರೆಡಿ ಆಗೋಕೆ , ತಾನು ಪ್ರಿತಿಂದ ತೊಗೊಂಡಿರುವ ಬೈಕ್ ನಾ ಚಿಕನ್ ಅಂಗಡಿಯಲ್ಲಿ ಅಡ ಇಟ್ಟಿದರು. ಮತ್ತು ತಿಂಗಳ ಪೂರ್ತಿ ಚಿಕನ್ ಕೊಡುವಂತೆ ಅಂಗಡಿ ಮಾಲೀಕನಿಗೆ ಮನವಿ ಮಾಡಿದ್ದರು. ಕೊನೆಗೆ ಮಿಸ್ಟರ್ ಬೆಂಗಳೂರು ಕಾಂಪಿಟಿಷನ್ ಗೆ ಇಳಿದೆ ಬಿಟ್ಟರು.ಆಗ ಮಿಸ್ಟರ್ ಬೆಂಗಳೂರು ಕಾಂಪಿಟಿಷನ್ , ನಲ್ಲಿ ಮೊದಲನೇ ಸ್ಥಾನ ಬೇರೆವರಿಗೆ ಹೋಯಿತು.ಮತ್ತು ಮೋಸ ಎರಡನೆ ಸ್ಥಾನ ದುನಿಯಾ ವಿಜಯ್ ಅವರಿಗೆ ಕೊಟ್ಟಿದ್ದರು, ಅಲ್ಲಿ ಅವರ ಜೊತೆ ದೊಡ್ಡ ಅನ್ಯಾಯವಾಗಿದೆ ಎಂದು , ಅವರಿಗೆ ಕೊಟ್ಟಿರುವ ಸರ್ಟಿಫಿಕೇಟ್ ವೇದಿಕೆಮೆಲೆಯೇ ಹರಿದು ಬಿಸಾಕಿ, ಇನ್ಮೇಲೆ Bodybuilding ತಂಟೆಗೆ ಹೋಗಲ್ಲ ಅಂದು Bodybuilding ಇಂದ ದೂರವಾದ್ರೂ.

ದುನೀಯ ವಿಜಯ್ ಪತ್ನಿ, ಮಕ್ಕಳು, ಮತ್ತು ಜಾತಿ (Duniya Vijay Marriage , Childrens And Cast)

ಬಳಿಕ 1999 ರಲ್ಲಿ ನಾಗರತ್ನ ಅವರೊಂದಿಗೆ ಮದುವೆಯಾದರು. ಅವರಿಗೆ 3 ಮಕ್ಕಳಾದ್ರೂ. Duniya Vijay ಆವರಿಗೆ ಮೂರು ಮಕ್ಕಳು ಇದ್ದು , ಅದರಲ್ಲಿ 3 ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗ ಇದ್ದಾನೆ. ದೊಡ್ಡ ಮಗಳ ಹೆಸರು ಮೋನಿಕಾ, ಚಿಕ್ಕ ಮಗಳು ಮೋನಿಷಾ, ಮತ್ತು 3 ನೆ ಕೊನೆಯ ಮಗನ ಹೆಸರು ಸಾಮ್ರಾಟ್. ದುನಿಯಾ ವಿಜಯ್ ಕನಕದಾಸರು , ಕ್ರಾಂತಿವಿರ ಸಂಗೊಳ್ಳಿ ರಾಯಣ್ಣರ ಕುಲದವರು ಅಂದರೆ , ಕುರುಬ ಸಮುದಾಯದವರು (Duniya Vijay Cast Kuruba).

ಡುನೀಯ ವಿಜಯ ಪುತ್ರಿಯರು (Duniya Vijay Daughters)

ಇದೀಗ ದುನಿಯಾ ವಿಜಯ್ ಅವರ ಮಕ್ಕಳು ದೊಡ್ಡವರಗಿದ್ದಾರೆ , PUC, ಡಿಗ್ರಿ ಅಂತ ಓದುತಿದ್ದಾರೆ, ಜೊತೆಗೆ ತಮ್ಮದೆಯಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೌದು , Duniya Vijay ಅವರ ಇಬ್ಬರು ಪುತ್ರಿಯರು ಫ್ಯಾಶನ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ, ಮತ್ತು ‘ಶುಗರ್ ಬೈ ಮೋನಿಷಾ’ ಎಂಬ ಸಂಸ್ಥೆಯನ್ನ ಹುಟ್ಟು ಹಾಕಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಕೆಲಸ ಮಾಡುತ್ತಿರುವ ಅವರು ತಮ್ಮದೇ ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. 2 ನೆ ಪುತ್ರಿ ಮೋನಿಷಾ ಮಾಡೆಲ್‌ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ, ಅನೇಕ ಫ್ಯಾಷನ್‌ ಶೋಗಳಲ್ಲಿ ಅವರು ರಾಂಪ್‌ ವಾಕ್‌ ಮಾಡಿದ್ದಾರೆ.

ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿಜಯ್ (Duniya Vijay Son Samrat Vijay)

 ಇನ್ನೂ ಮಗ ಸಾಮ್ರಾಟ್ಸಿ ಸಿನಿಮಾ ಕ್ಷೇತ್ರದಲ್ಲಿ ಕಾಲಿಟ್ಟಿದ್ದಾರೆ, ಇದುವರೆಗೆ ಸಾಮ್ರಾಟ್ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ , ಆದರೂ ಅಪ್ಪನ ಎಲ್ಲಾ ಸಿನಿಮಾ ಪ್ರಾಜೆಕ್ಟ್ ಗಳಲ್ಲಿ ಸಾಮ್ರಾಟ್ ಭಾಗಿಯಾಗಿರುತ್ತಾರೆ. ಚಿಕ್ಕ ವಯಸ್ಸಲ್ಲಿ ಸ್ಟಂಟ್ ಮತ್ತು ಫೈಟ್ ಗಳನ್ನ ಕಲಿತಿರುವ ಸಾಮ್ರಾಟ್ ಗೆ, ಇದೀಗ ಅಪ್ಪನಿಂದ ಸಿನಿಮಾ ಕ್ಷೇತ್ರದ ಪಾಠಗಳು ಕಲಿಯೋಕೆ ಸಿಗುತ್ತಿದೆ. ವಿಜಿ ಮಗ ಸಾಮ್ರಾಟ್ ಸಹ ಯಾವಾಗ ಬೇಕಾದರೂ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಬಹುದು. ಹೌದು, 2018 ರಲ್ಲಿ ಕುಸ್ತಿ ಎಂಬ ಚಿತ್ರದ ಮೂಲಕ ಮಗ ಸಾಮ್ರಾಟ್ ಗೆ, ವಿಜಯ್ ಇಂಟ್ರೊಡ್ಯೂಸ್ ಮಾಡಿದ್ರು. ಕಾರಣಾಂತರಗಳಿಂದ ಕುಸ್ತಿ ಸಿನಿಮಾ ಶೂಟಿಂಗ್ ನಿಂತು ಹೋಯ್ತು.ದುನಿಯಾ ವಿಜಿ ಭೀಮಾ ಚಿತ್ರದಲ್ಲಿ ಬ್ಯುಸಿ ಆಗಿದ್ದರೆ . ಕುಸ್ತಿ ಸಿನಿಮಾ ಯಾವಾಗ ಬೇಕಾದರೂ ಮತ್ತೆ ಸೆಟ್ ಏರಬಹುದು. ಕುಸ್ತಿ ಸಿನೆಮಾ ಮೂಲಕ, ಸಾಮ್ರಾಟ್, ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಬಹುದು.

ದುನಿಯಾ ವಿಜಯ್ ಸಂಘರ್ಷಮಯ ಜೀವನ (Struggle life of Duniya Vijay)

ಇನ್ನೂ Duniya Vijay ಮದುವೆ ಬಳಿಕ ಸಿನಿಮಾ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳು ಮಾಡುತ್ತ , ದುನಿಯಾ ಸಿನಿಮಾ ಮಾಡೋಕೆ ಕೈ ಹಾಕಿದ್ದರು. ಸ್ನೇಹಿತರೆ ದುನಿಯಾ ಸಿನಿಮಾದ ಶೂಟಿಂಗ್ ಮುಗಿಸುವಷ್ಟರಲ್ಲೇ ದುನಿಯಾ ವಿಜಯ್ ಅವರಿಗೆ ಇಡೀ ದುನಿಯಾ ನೆ ಹೇಗಿದೆ ಎಂಬುವುದು ಅರ್ಥವಾಯಿತು.

ದುನಿಯಾ ಸಿನಿಮಾವನ್ನು T. P. ಸಿದ್ಧರಾಜು ಅವರು ನಿರ್ಮಾಣ ಮಾಡಿದ್ದರು, T. P. Siddharaju ಇವರು ಬೆರೆ ಯಾರು ಅಲ್ಲ, ಸ್ವಂತ ಅಕ್ಕನ ಗಂಡ ಅಂದ್ರೆ, ದುನಿಯಾ ವಿಜಯ್ ಅವರ ಭಾವ. ದುನಿಯಾ ಸಿನಿಮಾವನ್ನು ದುನಿಯಾ ಸೂರಿ (Duniya Suri) ಅವರು ನಿರ್ದೇಶನ ಮಾಡಿದ್ದರು. ನಿರ್ದೇಶಕ ಸೂರಿ ದುನಿಯಾ ಸಿನಿಮಾ ಗೆ ವಿಜಯ್ ಅವರನ್ನೇ ಹೀರೊ ಆಗಿ ಆಯ್ಕೆ ಮಾಡಿದ್ದರು. ದುನಿಯಾ ಸಿನಿಮಾ ಗೆ ದುನಿಯಾ ರಶ್ಮಿ (Duniya Rashmi) ಅವರು ನಾಯಕಿಯಾಗಿದ್ದರು.

ಹೀರೊ ಅಂದ್ರೆ, ಬೆಳ್ಳಗೆ , ಹ್ಯಾಂಡ್ಸಮ್ ಆಗಿ ಇರಬೇಕು ಎಂದು ಮಾತಿದೆ. ಆದ್ರೆ ಇಲ್ಲಿ ಎಲ್ಲ ಉಲ್ಟಾ , Duniya Vijay ಅವರು ಕಪ್ಪಗೆ ಇದ್ರು. ಆಗ ಅವರನ್ನ ನೋಡಿದ್ರೇನೇ ಯಾರು ಸಹ ಅವರನ್ನ ಹೀರೊ ಅಂತ ಗುರುತು ಹಿಡಿಯುತಿರಲಿಲ್ಲ. ನಿರ್ದೇಶಕ ಸೂರಿ ಅವರಿಗೆ, ದುನಿಯಾ ಸಿನಿಮಾದ ಶೂಟಿಂಗ್ ಶುರು ಮಾಡೋಕು ಮೊದಲು , ಈ ಸಿನಿಮಾದ ಹೀರೊ ಯಾರು ಅಂತ ಕೇಳಿದ್ರೆ, ಸೂರಿ ಅವರು ಸರಿಯಾಗಿ ಉತ್ತರಿಸುತ್ತಿರಲಿಲ್ಲ, ಅಷ್ಟೇ ಯಾಕೆ ಅಂತಹ ಸಮಯದಲ್ಲಿ ದುನಿಯಾ ವಿಜಯ್ ಅವರು ಪಕ್ಕದಲ್ಲೇ ಇದ್ದರು , ಇವರೇ ನಮ್ ಸಿನಿಮಾ ಹೀರೊ ಅಂತ ಕೂಡ ಹೇಳ್ತಾ ಇರಲಿಲ್ಲವಂತೆ.ಈ ಸಂಗತಿಯನ್ನು ದುನಿಯಾ ವಿಜಯ್ ಅವರು ಒಂದು ಸಂದರ್ಭದಲ್ಲಿ ತಿಳಿಸಿದ್ದರು.

ದುನಿಯಾ ಬಿಡುಗಡೆಗೂ ವಿಘ್ನ

ದುನಿಯಾ ಸಿನಿಮಾ ಎನು ಶುರು ಆಯಿತು , ಎಷ್ಟೋ ಜನ ಈ ಸಿನಿಮಾ ಶೂಟಿಂಗ್ ನೋಡಿ , “ಯಾವುದೋ ಸೀರಿಯಲ್ ಶೂಟಿಂಗ್ ನಡೆಯುತ್ತಿದಿಯ”..? ಅಂತ ಲೇವಡಿ ಸಹ ಮಾಡಿದ್ದರು..

ಕೆಲವರಂತೂ, “ಹೊಸಬರ ಸಿನಿಮಾ ಮೂರೇ ದಿನಕ್ಕೆ ಔಟ್ ಆಗತ್ತೆ” ಅಂತ ಉಡಾಫೆ ಮಾತನ್ನು ಸಹ ಅಡಿದ್ದರು. 

ಇನ್ನೇನು ಸಿನಿಮಾ ಶೂಟಿಂಗ್ ಮುಗಿಯಿತು, ಸಿನಿಮಾ ರಿಲೀಸ್ ಗೆ ರೆಡಿ ಇರುವಾಗಲೇ ಗಾಂಧಿನಗರದಲ್ಲಿ ಕೆಲವರು ಈ ಸಿನಿಮಾವನ್ನು, ಸಿನಿಮಾ ಡಿಸ್ಟ್ರಿಬ್ಯೂಟರ್ ಆಗಿ ಯಾರು ತೊಗೋಬೇಡಿ ಎಂದು ಪ್ರಚಾರ ಮಾಡಿದರಂತೆ.ದುನಿಯಾ ಸಿನಿಮಾ ರಿಲೀಸ್ ಅಗೋಕು ಸಾಕಷ್ಟು ಕಷ್ಟ ಪಡಬೇಕಾಯಿತು, ಕೊನೆಗೆ ದುನಿಯಾ ಸಿನಿಮಾ ವನ್ನು ಮಾರಿ ಬಿಡೋಣ ಅಂತ ಅಂದು ಕೊಂಡಿದ್ದರಂತೆ. 

ತೊಂದರೆ ಗಳ ನಡುವೆಯೇ, ಫೆಬ್ರುವರಿ 23 – 2007 ರಲ್ಲಿ ದುನಿಯಾ ಸಿನಿಮಾ ರಿಲೀಸ್ ಆಯಿತು , ಮೊದಲಿಗೆ ಸಿನಿಮಾವನ್ನು ನೋಡೋಕೆ ಚಿತ್ರಮಂದಿರಗಳಲ್ಲಿ ಜನರು ಅಷ್ಟೊಂದು ಬರಲಿಲ್ಲ.

ಸುಮಾರು ಒಂದು ವಾರದ ಬಳಿಕ ಸಿನಿಮಾ ನೋಡೋಕೆ, ಜನ ಚಿತ್ರಮಂದಿರದತ್ತ ಮುಖ ಮಾಡಿದ್ದರು. ಫ್ಯಾಮಿಲಿ ಸಮೇತ ನೋಡಬಹುದಾದ ಸಿನಿಮಾವಾಗಿತ್ತು ದುನಿಯಾ.ಹಾಡುಗಳು ಮತ್ತು ಸಿನಿಮಾ ಸ್ಟೋರಿ, ದುನಿಯಾ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತ್ತು.  ವಿಜಯ್ ಕುಮಾರ್ ಈಗ , ದುನಿಯಾ ವಿಜಯ್ ಆಗಿ ಹೊರಹೊಮ್ಮಿದರು. ಸಮಸ್ತ ಕರುನಾಡಿನ ಜನ, ಪ್ರೀತಿಯಿಂದ ಕರುನಾಡ ಕರಿಯ ಎಂದು ಒಪ್ಪಿಕೊಂಡರು..

ಕೇವಲ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ದುನಿಯಾ ಸಿನಿಮಾ ಬರೋಬ್ಬರಿ 50 ಕೋಟಿ ಕಿಂತಲು ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಈ ಕಲೆಕ್ಷನ್ ಆಗಿನ ಕಾಲದಲ್ಲಿ ದಾಖಲೆಯೆ ಸೃಷ್ಟಿಸಿತು. 

ದುನಿಯಾ ಸಿನಿಮಾದ ಬಳಿಕ , ದುನಿಯಾ ವಿಜಯ್ ಅವರು ದೊಡ್ಡ ದೊಡ್ಡ ನಿರ್ದೇಶಕರೊಂದಿಗೆ ಸಿನಿಮಾ ಮಾಡಿದ್ದರು.ದುನಿಯಾ ಸಿನಿಮಾದ ಬಳಿಕ ದುನಿಯಾ ವಿಜಯ್ ಅವರು,ಸುಮಾರು 28 ಸಿನಿಮಾಗಳಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.ಚಂಡ, ಜಂಗ್ಲಿ, ಶಿವಾಜಿನಗರ, ಜಾನಿ ಮೆರಾ ನಾಮ್ ಪ್ರೀತಿ ಮೇರಾ ಕಾಮ್, ಜಯಮ್ಮನ ಮಗ, ಆರ್ ಎಕ್ಸ್ ಸೂರಿ, ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟರು.

2015 ರಲ್ಲಿ, ರಿಲೀಸ್ ಅದ ಎಸ್ ನಾರಾಯಣ್ ನಿರ್ದೇಶನದ ದಕ್ಷ ಸಿನಿಮಾ ಬಹಳ ವಿಶೇಷ. ಯಾಕಂದ್ರೆ , ದಕ್ಷ ಸಿನಿಮಾ ಕೇವಲ ಒಂದೇ ಟೆಕ್ ನಲ್ಲಿ ಚಿತ್ರೀಕರಿಸಿದ ಸಿನಿಮಾವಾಗಿದೆ. ದಕ್ಷ ಸಿನಿಮಾವನ್ನು ಗಿನಿಜ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಲಾಗಿದೆ.

ಸ್ಟಾರ್ ಪಟ್ಟ ಬಂದಮೇಲು ಕೌಟುಂಬಿಕ ಕಲಹದ ಕಾರಣ ಜೀವನದಲ್ಲಿ ಸಾಕಷ್ಟು ಏಳು ಬಿಳು, ಅಪಮಾನವನ್ನು ಕಂಡಿದ್ದರು, ಬಳಿಕ ಜನವರಿ 2016 ರಲ್ಲಿ ದುನಿಯಾ ವಿಜಯ್ ಅವರು ಕೀರ್ತಿ ಪಟ್ಟಡಿ ಅವರ ಜೊತೆ 2ನೆ ಮದುವೆಯಾದರು.2018 ರ ಕೊನೆಯ ವರೆಗೆ ಮತ್ತಷ್ಟು ಮಗದಷ್ಟು ನೋವು ನಲಿವುಗಳನ್ನು ದುನಿಯಾ ವಿಜಯ್ ಅವರ ಬಾಳಿನಲ್ಲಿ ನೋಡಬೇಕಾಯಿತು.

ಇನ್ನೇನು ದುನಿಯಾ ವಿಜಿ ಕಥೆ ಮುಗಿತು ಅನ್ನೋವಾಗಲೇ ದುನಿಯಾ ವಿಜಯ್ ಅವರು ನಿರ್ದೇಶನಕ್ಕೆ ಕೈ ಹಾಕಿದರು. ಹೌದು, ದುನಿಯಾ ವಿಜಯ್ ಅವರು , ಮೊದಲ ಬಾರಿಗೆ, ಸಲಗ ಸಿನಿಮಾವನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಮೊಂಡರು. ದುನಿಯಾ ಸಿನಿಮಾದ ಬಳಿಕ ಸಲಗ ಸಿನಿಮಾ ಅತಿ ದೊಡ್ಡ ಬ್ರೇಕ್ ಕೊಟ್ಟ ಸಿನಿಮವಾಗಿದೆ. ಸಲಗ ಅವರ 29 ನೆ ಸಿನಿಮವಾಗಿದೆ..ಕೊರೊನಾ ಬಳಿಕ ಸಿನಿ ಪ್ರಿಯರಿಗೆ ಹುಚ್ಚೆದ್ದು ಚಿತ್ರಮಂದಿರದತ್ತ ಬರುವ ಹಾಗೆ ಮಾಡಿತ್ತು ಸಲಗ ಸಿನಿಮಾ.

ದುನಿಯಾ ವಿಜಯ್ ಗೆ ದೊರೆತಿರುವ ಅವಾರ್ಡ್ ಗಳು

ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ನಟ
ಅಲ್ಲದೆ ನಿರ್ದೇಶಕ
ಫಿಲ್ಮ್‌ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ – ಕನ್ನಡ [27]

ಈ ಸಿನಿಮಾ ಆಕ್ಟೊಬರ್ 14- 2021 ರಂದು ರಿಲೀಸ್ ಆಗಿತ್ತು. ಸಲಗ ಸಿನಿಮಾದ ಬಳಿಕ ದುನಿಯಾ ವಿಜಯ್ ಅವರು ಸಲಗ ವಿಜಯ್ ಎಂದು ಹೆಸರು ಬದಲಾಯಿಸಿ ಕೊಂಡಿದ್ದಾರೆ.. ಅಂದ್ರೆ ಈಗ ಅವರಿಗೆ “ಸಲಗ ವಿಜಯ್” ಎಂದು ಕರಿಬೇಕು. ಸಲಗ ಸಿನಿಮಾದ ಬಳಿಕ ದುನಿಯಾ ವಿಜಯ್ ಅವರಿಗೆ ಟಾಲಿವುಡ್ ಇಂದಲೂ ಆಫರ್ ಗಳು ಬಂದವು, ಟಾಲಿವುಡ್ ಖ್ಯಾತ ನಟ ಬಾಲಯ್ಯ ಅವರ ಜೊತೆ , ಅವರ 107 ನೆ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಕರುನಾಡ ಕರಿ ಚಿರತೆ ದುನಿಯಾ ವಿಜಯ್ ಅವರು ಟಾಲಿವುಡ್ ನಲ್ಲಿಯೂ ಮಿಂಚಿದ್ದಾರೆ.

2021 ದುನಿಯಾ ವಿಜಯ್ ಅವರಿಗೆ ಎಷ್ಟು ಒಳ್ಳೆಯದಾಗಿತ್ತು ಅಷ್ಟೇ ಕೆಟ್ಟದಾಗಿಯು ಹೋಯಿತು, ಯಾಕಂದ್ರೆ ಜುಲೈ 2021 ರಲ್ಲಿ ದುನಿಯಾ ವಿಜಯ್ ಅವರು ತಾಯಿಯನ್ನು ಕಳೆದುಕೊಂಡರು, ಕೇವಲ ನಾಳಕ್ಕೆ ತಿಂಗಳ ಅವಧಿಯಲ್ಲಿ ತಂದೆಯನ್ನು ಕಳೆದುಕೊಂಡರು.

ಈಗ ಅವರು ತನ್ನ ಪತ್ನಿ ಕೀರ್ತಿ ಪಟ್ಟಡಿ, ಮತ್ತು ಮಗ ಸಾಮ್ರಾಟ್ ಅವರೊಂದಿಗೆ. ಬೆಂಗಳೂರಿನ ಹೊಸಕೆರೆ ಹಳ್ಳಿಯಲ್ಲಿ ವಾಸವಿದ್ದಾರೆ.

ಅವತ್ತು , ಚಿಕನ್ ಅಂಗಡಿಯಲ್ಲಿ ಬೈಕ್ ಅಡ ಇಟ್ಟ ದುನಿಯಾ ವಿಜಯ್ ಹತ್ತಿರ ಇವತ್ತು , ಕೋಟ್ಯಂತರ ರೂಪಾಯಿ ಬೆಲೆಬಾಳುವ ಐಷಾರಾಮಿ ರೇಂಜ್ ರೋವರ್ ಕಾರ್ ಇದೆ.

ಅವತ್ತು Bodybuilding ನಲ್ಲಿ ಮೊದಲ ಸ್ಥಾನ ಕೊಡದೆ ಮೋಸ ಹೋಗಿದ್ದ , ದುನಿಯಾ ವಿಜಿಗೆ, ಇವತ್ತು ಹತ್ತಾರು ಹುಡುಗರನ್ನ ತಾವೇ ಖರ್ಚು ಮಾಡಿ Bodybuilding ಗೆ ನಿಲ್ಲಿಸುವಷ್ಟು ತಾಕತ್ ಇದೆ.

ಅವತ್ತು ಒಂದು ಚಾನ್ಸ್ ಕೊಡಿ , ಎಂದು ಹೋಗಿ ಅವಮಾನ ಮಾಡಿಸಿಕೊಂಡು ಬಂದಿರಿವ ವಿಜಿ ಹತ್ತಿರ, ಇವತ್ತು ನಿರ್ಮಾಪಕರು, ನಿರ್ದೇಶಕರು ಕ್ಯೂ ನಲ್ಲಿ ನಿಂತಿದ್ದಾರೆ.

ಇವತ್ತು ದುನಿಯಾ ವಿಜಿ ಒಂದು ಸಿನಿಮಾ ಮಾಡಿದ್ರೆ ನೂರಾರು ಕುಟುಂಬಗಳು ಬದುಕತ್ತೆ ಸ್ನೇಹಿತರೆ..

ಇಷ್ಟು ಬಿಟ್ಟರೆ ಮನುಷ್ಯ ಎಂದಮೇಲೆ ಜೀವನದಲ್ಲಿ ಏಳು ಬಿಳು , ಇದ್ದೆ ಇರತ್ತೆ, ಆದೇ ರೀತಿ ದುನಿಯಾ ವಿಜಯ್ ಅವರ ಬಾಳಿನಲ್ಲೂ ಕೆಲವು ಏಳು ಬಿಳಿನ ಘಟನೆಗಳು ನಡೆದು ಹೋಗಿವೆ. ಯಾವದೇ Background ಇಲ್ಲದೆ ಇಷ್ಟು ದೊಡ್ಡ ಮಟ್ಟದಲ್ಲಿ, ಸಾಧನೆ ಮಾಡುವುದು ತಮಾಷೆಮತಲ್ಲ ಸ್ನೇಹಿತರೆ.

ದುನಿಯಾ ವಿಜಯ್ ಅವರಿಂದ ಕಲಿಯೋದು ತುಂಬಾನೇ ಇದೆ ಸ್ನೇಹಿತರೆ. ನೀವ್ ಹೇಗೆ ಇರಿ, ಜೀವನದಲ್ಲಿ ಮುಂದೆ ಬರ್ಬೇಕಾದ್ರೆ ತಾಳ್ಮೆ , ಮತ್ತು , ಗೆಲ್ಲುವ ಹಠ ಇರಬೇಕು. ಆಗಲೇ ಮನುಷ್ಯ ಏನಾದರೂ ಸಾಧಿಸೋಕೆ ಸಾಧ್ಯ…

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments