Thursday, November 21, 2024
HomeHOMEpm narendra modi Security , ಪ್ರಧಾನಿ ನರೇಂದ್ರ ಮೋದಿ ಭದ್ರತೆ ಹೇಗಿರುತ್ತೆ ಗೊತ್ತ ?

pm narendra modi Security , ಪ್ರಧಾನಿ ನರೇಂದ್ರ ಮೋದಿ ಭದ್ರತೆ ಹೇಗಿರುತ್ತೆ ಗೊತ್ತ ?

ನಮಸ್ಕಾರ ಸ್ನೇಹಿತರೆ, 

ಪಂಜಾಬ್ ನಲ್ಲಿ ಇತ್ತೀಚೆಗೆ ನರೇಂದ್ರ ಮೋದಿ ಅವರ ಭದ್ರತೆ ಲೋಪವಾಗಿತ್ತು. ಪಂಜಾಬ್ ಸರ್ಕಾರ , ಮತ್ತು ಪಂಜಾಬ್ ಪೊಲೀಸ್ ಪ್ರಧಾನಿಗೆ ಭದ್ರತೆ ಕಲ್ಪಿಸುವುದರಲ್ಲಿ ವಿಫಲವಾಗಿತ್ತು… 

ಹಾಗಾದ್ರೆ, ಭಾರತದ ಪ್ರಧಾನಿಗೆ ಯಾವ ರೀತಿಯ ಭದ್ರತೆ ಒದಗಿಸಲಾಗುತ್ತೆ ಗೊತ್ತಾ..?  ಈ article ನಲ್ಲಿ ಸಂಪೂರ್ಣ ಮಾಹಿತಿ ಪಡೆಯೋಣ ಬನ್ನಿ…

ಒಂದು ದೇಶದ ಪ್ರಧಾನಿ ಅಂದಮೇಲೆ , ಹೆಜ್ಜೆ ಹೆಜ್ಜೆ ಗು ಅವರಿಗೆ ಭದ್ರತೆ ಇರತ್ತೆ.. ಪ್ರಧಾನಿಗಳು ಎಲ್ಲೇ ಹೋದರು, ಅವರ ಹಿಂದೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹೊಂದಿರುವ Security Force ಇರತ್ತೆ. 

ನರೇಂದ್ರ ಮೋದಿ , narendra modi , narendra modi security

ಅದರಲ್ಲೂ ಭಾರತದ ಪ್ರಧಾನಿ ಎಂದಮೇಲೆ ಸುಮ್ನೆ ನಾ ? narendra modi Security ಗೆ ಯಾವದೇ ಕೊರತೆ ಇರಬಾರದು ಎಂದು ಭಾರತ ಸರ್ಕಾರ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಪ್ರಧಾನಿ ಭದ್ರತೆಗೆ ಖರ್ಚು ಮಾಡತ್ತೆ.. 

ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಭದ್ರತೆ ಅಂದ್ಮೇಲೆ ಕೇಳ್ಬೇಕಾ..? ನರೇಂದ್ರ ಮೋದಿಯವರ ಭದ್ರತೆ ಜವಾಬ್ದಾರಿ SPG  ವಹಿಸುತ್ತೇ.. SPG ಅಂದ್ರೆ Special Protection Group ಎಂಬರ್ಥ. 

ಈ security Force ಸಾಮಾನ್ಯವಾಗಿರಲ್ಲ , SPG ಗೆ ಸೇರುವ ಸೈನಿಕರು ಸಾಮಾನ್ಯರಾಗಿರಲ್ಲ. SPG ಗೆ ಒಬ್ಬ ಸೈನಿಕನಿಗೆ ಆಯ್ಕೆ ಮಾಡಬೇಕಾದ್ರೆ , 10 ಸಾವಿರ ಸೈನಿಕರಿಗೆ   ಟ್ರೇನಿಂಗ್ ಕೊಡಬೇಕಾಗುತ್ತೆ. ಅವರಿಗೆ ಕೊಡುವ ಟ್ರೇನಿಂಗ್ ಸುಲಬವಾಗಿರಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರು ಎಷ್ಟು ಬಲಶಾಲಿ ಎನ್ನುವುದನ್ನು SPG ಆಯ್ಕೆಯಲ್ಲಿ ಮುಖ್ಯವಾಗಿರತ್ತೆ..

SPG ಗೆ ಕೇವಲ ದೈಹಿಕವಾಗಿ , ಮತ್ತು ಟ್ರೇನಿಂಗ್ ನಲ್ಲಿ ಪಾಸ್ ಆದ್ರೆ ಸಾಲದು, ಇಲ್ಲಿ ಮತ್ತೊಂದು ವಿಷಯದಲ್ಲಿ ಆ ಸೈನಿಕ ಪಾಸ್ ಆಗಬೇಕು. 

ಅದೇನೆಂದರೆ, ಬೌದ್ಧಿಕವಾಗಿ ಆ ಸೈನಿಕ ಎಷ್ಟು Intelligent ಎನ್ನುವುದು..

ಹೌದು,  SPG ಗೆ ಸೇರುವ ಸೈನಿಕ ತುಂಬಾನೇ ಶಾರ್ಪ್ ಆಗಿರಬೇಕು , ಪ್ರಧಾನಿ ಎದುರುಗಡೆ ಮತ್ತು ಆಜು ಬಾಜು ಇರುವ ವ್ಯಕ್ತಿ ಯಾರೇ ಇರಲಿ ಆ ವ್ಯಕ್ತಿಯನ್ನ ನೋಡಿದ ತಕ್ಷಣ ಅವನ ಹಾವಭಾವವನ್ನು ನೋಡಿ ಅವನ ಮನಸಲ್ಲಿ ಸಧ್ಯಕ್ಕೆ ಏನು ನಡೆಯುತ್ತಿದೆ ಎನ್ನುವುದು ಪತ್ತೆ ಹಚ್ಚಬೇಕು…

 ಕಠಿಣಾಧಿ ಕಠಿಣ ಟ್ರೇನಿಂಗ್ ಬಳಿಕ ಆ ಕಮಾಂಡೋ SPG (Special Protection Group)ಗೆ ಆಯ್ಕೆ ಆಗುತ್ತಾನೆ.. 

ಅಷ್ಟೇ ಅಲ್ಲದೆ, ಪ್ರತಿ 10 ದಿನಕ್ಕೊಮ್ಮೆ , ಪ್ರಧಾನಿ ಭದ್ರತೆಗೆ ಇರುವ SPG (Special Protection Group) ಕಮಾಂಡೋ ಗಳ ಟ್ರೇನಿಂಗ್ ಇರತ್ತೆ. ಟ್ರೇನಿಂಗ್ ನಲ್ಲಿ ಕಮಾಂಡೋ ಕಳಪೆ ಪ್ರದರ್ಶನ ನೀಡಿದ್ರೆ, ಆತನ ಜಾಗದಲ್ಲಿ ಇನ್ನೊಬ್ಬ ಕಮಾಂಡೋ ಆಯ್ಕೆ ಆಗ್ತಾನೆ.. ಪ್ರಧಾನಿ ಭದ್ರತೆಗೆ ಅಷ್ಟೊಂದು ಒತ್ತು ನೀಡುತ್ತದೆ SPG.

ಪ್ರಧಾನಿ ಭದ್ರತೆಗೆ ಇರುವ ಬಾಡಿಗಾರ್ಡ್ ಗಳು ತನ್ನ ಜೀವವನ್ನೇ ಪ್ರಧಾನಿ ಭದ್ರತೆಗೆ ಮಿಸಲಿಟ್ಟಿರುತ್ತಾನೆ.. ತನ್ನ ಪ್ರಾಣ ಹೋದರು ಪ್ರಧಾನಿ ಗೆ ಕಾಪಾಡುವುದು ಅವರ ಮುಖ್ಯ ಗುರಿಯಾಗಿರತ್ತೆ.. 

ವಿಶೇಷ ಏನೆಂದರೆ ಒಂದು ವೇಳೆ SPG ಕಮಾಂಡೋ , ರಜೆಗೆ ಅಂತ ತೆರೆಳಿದ್ದರೆ, ಆತನ ಮೇಲೆ ಲೋಕಲ್ ಪೊಲೀಸ್ ನಿಗಾ ವಹಿಸುತ್ತಾರೆ. SPG ಕಮಾಂಡೋ ಎಲ್ಲಿಗೆ ಹೋಗ್ತಿದ್ದಾನೆ, ಯಾರನ್ನ ಭೇಟಿ ಮಾಡುತ್ತಿದ್ದಾನೆ, ಮತ್ತು ಯಾರಿಗೆ ಫೋನ್ ಮುಖಾಂತರ ಸಂಪರ್ಕಿಸುತ್ತಿದ್ದಾನೆ ಎನ್ನುವುದು , ಲೋಕಲ್ ಪೊಲೀಸರು ಮಫ್ಟಿಯಲ್ಲಿ ಆತನಿಗೆ ಗೊತ್ತಿಲ್ಲದೆ ಆತನ ಮೇಲೆ ನಿಗಾ ವಹಿಸುತ್ತಾರೆ.. ಮತ್ತು ಆತನ ಬಗ್ಗೆ ಸಂಪೂರ್ಣ ಮಾಹಿತಿಯನ್ನು , SPG ಗೆ ಸಲ್ಲಿಸುತ್ತಾರೆ.. 

SPG ಕಮಾಂಡೋ ತನ್ನ ಮುಂದಿನ ನಡೆ, ಮತ್ತು, ಪ್ರಧಾನಿ Security ಬಗ್ಗೆ ಯಾರಲ್ಲೂ ಹೇಳೋಹಾಗಿಲ್ಲ.. ಸ್ವಂತ ಮನೆಯಲ್ಲೂ ಅವರ ಬಗ್ಗೆ ಗೊತ್ತಿರಲ್ಲ.. 

ಪ್ರಧಾನಿ security ಗೆ ಇರುವ SPG ಕಮಾಂಡೋ ಕೈಯಲ್ಲಿ ಜಗತ್ತಿನ ಅತ್ಯಾಧುನಿಕ ರೈಫಲ್ ಗಳಿರುತ್ತವೆ. 

ನರೇಂದ್ರ ಮೋದಿ ಹತ್ತಿರ ಯಾರು ಸಹ ಸುಳಿಯದಂತೆ ನೋಡಿಕೊಳ್ಳುತ್ತಾರೆ.. 

SPG ಕಮಾಂಡೋಗಳು ಕೇವಲ ಅವರ ಬಾಡಿಗಾರ್ಡ್ ಅಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರು ಯಾವ ರಾಜ್ಯಕೆ, ಯಾವ ಜಿಲ್ಲೆಗೆ ತೆರೆಳುತ್ತಾರೋ ಅಲ್ಲಿಯ ಪೊಲೀಸ್ Force ಜೊತೆಗೆ ಸಂಪರ್ಕದಲ್ಲಿರುತ್ತಾರೆ..

ಲೋಕಲ್ ಪೊಲೀಸ್ ಮತ್ತು Inttaligents ಗಳು ಪ್ರಧಾನಿ ತೆರಳುವ ಸ್ಥಳಕ್ಕೆ , ಭದ್ರತೆಯ ದೃಷ್ಟಿಯಿಂದ 4-5 ದಿನಗಳು ಸಂಪೂರ್ಣವಾಗಿ ಚೆಕಿಂಗ್ ಮಾಡ್ತಾರೆ..

ಅಷ್ಟೇ ಅಲ್ಲದೆ ಪ್ರಧಾನಿ ನಡೆಸುವ ಕಾರ್ಯಕ್ರಮ ಸ್ಥಳದಿಂದ ಸುತ್ತ ಮುತ್ತ 5 ಕಿಲೋಮೀಟರ್ ವರೆಗೆ ಪೊಲೀಸ್ ಬಿಗಿ ಭದ್ರತೆ ಇರತ್ತೆ..

ಪೊಲೀಸರು ಪ್ರತಿಯೊಂದು ಏರಿಯಾ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ..

ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ರಸ್ತೆ ಮೂಲಕ ತೆರಳಬೇಕಾದ್ರೆ ಆ ರಸ್ತೆಗಳು ಸಂಪೂರ್ಣವಾಗಿ ಖಾಲಿ ಮಾಡಲಾಗುತ್ತೆ.. ಜೀರೋ ಟ್ರಾಫಿಕ್ ನಲ್ಲಿ ಅವರ ಕಾರು ಚಲಿಸುತ್ತಿರುತ್ತೆ.. ಅವರು ಸಾಗುವ ರಸ್ತೆಯಲ್ಲಿ , ಮತ್ತು ರಸ್ತೆಯ ಸುತ್ತಾ ಮುತ್ತ 2 ಕಿಲೋಮೀಟರ್ ವರೆಗೆ ಪೊಲೀಸ್ ಬಿಗಿ ಬಂದೋಬಸ್ತ್ ಇರತ್ತೆ.. 

ಅಕಸ್ಮಾತ್ ಪ್ರಧಾನಿ ತೆರೆಳುವ ರಸ್ತೆಯಲ್ಲಿ ತೊಂದರೆ ಉಂಟಾಗಿದ್ದರೆ. ಅದಾಗಲೇ ಮತ್ತೊಂದು ರಸ್ತೆಯ ರೂಟ್ ಮ್ಯಾಪ್ ರೇಡಿಯಾಗಿರತ್ತೆ. 

ಪ್ರಧಾನಿಗಳು ರಸ್ತೆ ಮೂಲಕ ತೆರಳಬೇಕಾದ್ರೆ , ಅವರ ಜೊತೆ ಒಂದು ಆಂಬುಲೆನ್ಸ್ , ಒಂದು ಪೊಲೀಸ್ ವಾಹನ , ಮತ್ತು ಪ್ರಧಾನಿ ಕಾರಿನಂತೆಯೇ ಕಾಣುವ ಮತ್ತೊಂದು, ಕಾರು ಅವರ ಜೊತೆಗೆ ಸಾಗುತ್ತದೆ.. 

ಇಷ್ಟು ಬಿಟ್ಟರೆ ಅವರ ಜೊತೆ ಇತರೆ ರಾಜಕೀಯ ನಾಯಕರು ಅವರ ಕಾರಿಗೆ ಫಾಲೋ ಮಾಡ್ತಿರ್ತಾರೆ..

ರಸ್ತೆ ಮಧ್ಯದಲ್ಲಿ ಪ್ರಧಾನಿಗೆ ಅನಾರೋಗ್ಯ ಉಂಟಾದರೆ , ಹತ್ತಿರವಾದ ಆಸ್ಪತ್ರೆ ಯಾವದು, ಯಾವ ಆಸ್ಪತ್ರೆಗೆ ಅವರಿಗೆ ಸಾಗಿಸಬೇಕು ಎಂದು ಮುಂಚೆಯೇ ನಿಗದಿಪಡಿಸಲಾಗುತ್ತೆ..

ಅಕಸ್ಮಾತ್ ರಸ್ತೆಯಲ್ಲಿ ಅವರ ಕಾರಿನ ಮೇಲೆ ಭಯೋತ್ಪಾದಕ ಹಲ್ಲೆ ಆದರೆ , ಬಾಬ್ ದಾಳಿ ಆದರೆ ಅವರು ಯಾವ ಮನೆಯಲ್ಲಿ ಸುರಕ್ಷಿತವಾಗಿರಬಹುದು, ಯಾವ ಮನೆಯಲ್ಲಿ ಅವರಿಗೆ ಕರೆದೊಯ್ಯಬೇಕು ಎನ್ನುವುದು ಸಹ ರೂಟ್ ಮ್ಯಾಪ್ ನಲ್ಲಿ ಮೊದಲೇ ನಿಗದಿಪಡಿಸುತ್ತಾರೆ..

ರಸ್ತೆ ಮೂಲಕ ಪ್ರಧಾನಿಗಳು ಸಂಚರಿಸುವಾಗ ಅಥವಾ ರಸ್ತೆಯ ಅಕ್ಕ ಪಕ್ಕದ ಮನೆಗಳು ಎಷ್ಟು ಸುರಕ್ಷಿತ ಎನ್ನುವುದು ನೋಡುತ್ತಾರೆ, ರಸ್ತೆ ಬದಿ ಇರುವ ಎಲ್ಲ ಮನೆಗಳ ಮೇಲಿಂದ ಪೊಲೀಸ್ ಭದ್ರತೆ ಒದಗಿಸಲಾಗುತ್ತೆ.. 

ಪ್ರತಿಯೊಬ್ಬರ ಮೇಲೆ ಪೊಲೀಸರ ಹದ್ದಿನ ಕಣ್ಣು ಇರತ್ತೆ..

ಒಟ್ಟಿನಲ್ಲಿ ಪ್ರಧಾನಿ ಕೂದಲಿಗೂ ಧಕ್ಕೆಯಾಗದಂತೆ ನೋಡಿಕೊಳ್ಳುವುದು , SPG ಕೆಲಸವಾಗಿರುತ್ತೆ.. 

ಗಾಂಧಿ ಕುಟುಂಬಕ್ಕೂ SPG Protection ನೀಡುತ್ತಿತ್ತು ಆದ್ರೆ, ಗಾಂಧಿ ಕುಟುಂಬ ಅದನ್ನ ಸರಿಯಾಗಿ ಬಳಸುತ್ತಿರಲಿಲ್ಲ , ಅವರು Private ಕಾರ್ ಗಳ ಮೂಲಕ ಸಂಚರಿಸುತ್ತಿದ್ದರು , ಈ ಕಾರಣಕ್ಕೆ SPG ಭದ್ರತೆ ರದ್ದು ಮಾಡಿತ್ತು.. ಸಾಧ್ಯ ಗಾಂಧಿ ಕುಟುಂಬಕ್ಕೆ CRPF Security ನೀಡುತ್ತೆ..

ಸಾಧ್ಯ ಪಂಜಾಬ್ ನಲ್ಲಿ ಮೋದಿಯವರ ಭದ್ರತೆ ಲೋಪ ಕಂಡ ಬಳಿಕ , ಈ ವಿಷಯ ಎಲ್ಲಡೆ ಸಂಚಲನ ಮೂಡಿಸುತ್ತಿದೆ.. 

ಪ್ರಧಾನಿ ತೆರೆಳುವ ರೋಡಿನಲ್ಲಿ ಪಂಜಾಬ್ ರೈತರು ಪ್ರತಿಭಟನೆ ಮಾಡುತಿದ್ದರು..

ಒಂದು ನೆನಪಿರಲಿ ಪ್ರಧಾನಿಗಳು ಯಾವ ರಸ್ತೆಯಲ್ಲಿ ಸಂಚರಿಸುತ್ತಾರೆ ಎನ್ನುವುದು ಮೇಲಧಿಕಾರಿಗಳಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಬಿಟ್ಟರೆ ಯಾರಿಗೂ ತಿಳಿದಿರಲ್ಲ. 

ಅಷ್ಟೇ ಯಾಕೆ ಈ ರಸ್ತೆಯಲ್ಲಿ ಪ್ರಧಾನಿಗಳು ತೆರೆಳುತ್ತಾರೆ ಎನ್ನುವುದು ರಸ್ತೆಯಲ್ಲಿ ನೇಮಿಸಿದ ಟ್ರಾಫಿಕ್ ಪೊಲೀಸ್ ನವರಿಗೂ ಗೊತ್ತಿರಲ್ಲ, ಅಷ್ಟೊಂದು,ಗೌಪ್ಯವಾಗಿ ಇರತ್ತೆ ಪ್ರಧಾನಿ ರೂಟ್ ಮ್ಯಾಪ್..

ಇಂತಹ ಟೈಟ್ Security ನಲ್ಲೂ , ಪ್ರಧಾನಿಗಳು ಹೋಗುತ್ತಿರುವ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ ಪಂಜಾಬ್ ರೈತರಿಗೆ , ಪ್ರಧಾನಿ ಮೋದಿ ಇದೆ ರಸ್ತೆಯಿಂದ ತೆರೆಳುತ್ತಾರೆ ಎನ್ನುವುದು ಯಾರು ಮಾಹಿತಿ ಕೊಟ್ಟರು ಎನ್ನುವ ಸಧ್ಯದ ಪ್ರಶ್ನೆ… 

ಈಗಾಗಲೇ ಭಾರತ ಇಬ್ಬರು ಪ್ರಧಾನಿಗಳನ್ನ ಇದೆ ಇರಿಯಲ್ಲಿ ಕಳೆದುಕೊಂಡಿದ್ದೇ.

ಮತ್ತೊಮ್ಮೆ ಈ ರೀತಿಯ ಭದ್ರತೆ ಲೋಪವಾಗಬಾರದು ಎನ್ನುವುದು ನಮ್ಮ ಆಶಯ..

ಧನ್ಯವಾದಗಳು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments