ಬೆಂಗಳೂರಿನಿಂದ ಸುಮಾರು 360 ಕಿಮೀ ಅಂತರದಲ್ಲಿರುವ ಹಂಪೆಯು ತುಂಗಭದ್ರಾ ನದಿದಂಡೆಯ ಮೇಲಿರುವ ಒಂದು ಸಣ್ಣ ಹಳ್ಳಿ…
ಬೆಂಗಳೂರಿನಿಂದ ಸುಮಾರು 360 ಕಿ.ಮೀ. ದೂರದಲ್ಲಿರುವ ಹಂಪೆಯು ತುಂಗಭದ್ರಾ ನದಿಯ ದಂಡೆಯ ಮೇಲಿರುವ ಒಂದು ಸಣ್ಣ ಹಳ್ಳಿ. ಪ್ರಾಚೀನ ದಂತಕಥೆಗಳ ಪ್ರಕಾರ ಈ ಸ್ಥಳ ರಾಮಾಯಣದ ಪ್ರಮುಖ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿತ್ತು ಎಂದು ಮಾತಿದೆ. ಇದು ರಾಮಾಯಣದ ಕಿಷ್ಕಿಂದೆಯೆಂದು ಪರಿಗಣಿಸಿದ್ದು, 8ನೇ ಶತಮಾನದಲ್ಲಿ ಒಂದು ಶಾಸನದಲ್ಲಿ ಪಂಪಾ (pampaa) ಕ್ಷೇತ್ರವೆಂದು ಕರೆಯಲ್ಪಟ್ಟಿದೆ. ಇಲ್ಲಿರುವ ಪಂಪಾ ವಿರೂಪಾಕ್ಷ ದೇವಾಲಯ ಕಲ್ಯಾಣಿ ಚಾಲುಕ್ಯರ ಕಾಲದ್ದು ಇದ್ದು , ವಿಜಯನಗರದ ಅವಶೇಷಗಳಲ್ಲಿ ಬಹಳಷ್ಟು ಕಮಲಾಪುರದಿಂದ ಹಂಪಿಗೆ ಹೋಗುವ ರಸ್ತೆಯಲ್ಲಿ ನೋಡಲಿಕ್ಕೆ ಸಿಗುತ್ತವೆ. ಕಂಪ್ಲಿ ರಸ್ತೆಯಲ್ಲಿ ಇರುವ ಇರುಗುಪ್ಪನೆಂಬ ಜೈನ ದಂಡನಾಯಕನು ಕ್ರಿ.ಶ. 1335ರಲ್ಲಿ ನಿರ್ಮಿಸಿದ ಗಾಣಗಿತ್ತಿ ಜಿನಾಲಯವಿದೆ. ಕಮಲಾಪುರ – ಹಂಪಿ ರಸ್ತೆಯ ಎಡ ಭಾಗಕ್ಕಿರುವ ರಾಣಿಯರ ಸ್ನಾನಗೃಹ 15.2 ಮೀಟರ್ . ಉದ್ದವಿದ್ದು, 1.5 ಮೀಟರ್. ಆಳವಿದ್ದು . ಇದು ಇಂಡೋಸಾರ್ಸೆನಿಕ್ (Indosarcenic) ಶೈಲಿಯಲ್ಲಿದೆ. ಎರಡು ಮಹಡಿಗಳ ಗಾರೆಯ ಲೇಪವಿರುವ ಕಮಲಮಹಲ್ ಕಟ್ಟಡ (kamalmahal structure), ಟಂಕಶಾಲೆಗಳಿವೆ. ಹಜಾರಾ ರಾಮಸ್ವಾಮಿ ದೇವಾಲಯದ (hajara ramaswamy temple) ಗೋಡೆಗಳು ಹಲವಾರು ಸುಂದರವಾದ ಕೆತ್ತನೆಯ ಚಿತ್ರಗಳಿಂದ ತುಂಬಿದೆ. ದೇವಾಲಯದ ಒಳಾಂಗಣದಲ್ಲಿ ಗೋಡೆಗಳ ಮೇಲೆ ರಾಮಾಯಣದ ದೃಶ್ಯಗಳನ್ನು ಇಲ್ಲಿ ಕೆತ್ತಲಾಗಿದೆ.
ಗಜಶಾಲೆಯ ಪೂರ್ವ ಭಾಗದಲ್ಲಿ ಎರಡು ಶಿಥಿಲವಾಗಿರುವ ಜೈನ ಬಸದಿಗಳಿವೆ (Jain Basadi). ಪಟ್ಟದ ಎಲ್ಲಮ್ಮ ದೇವಾಲಯಗಳು,ವ ರಂಗನಾಥ ಸ್ವಾಮಿ, ಮಹಾಸತಿ ಕಲ್ಲುಗಳು, ಉದ್ಭವ ವೀರಸ್ವಾಮಿ ದೇವಾಲಯ, ಕೃಷ್ಣ ದೇವರಾಯನು 1528 ರಲ್ಲಿ ನಿರ್ಮಿಸಿಲಾಗಿದ್ದು 6.7 ಮೀಟರ್. ಎತ್ತರದ ಬೃಹತ್ ಏಕಶಿಲಾ ನರಸಿಂಹಮೂರ್ತಿ, ಬಡವಿಲಿಂಗ ಎನ್ನುವ ದೊಡ್ಡ ಶಿವಲಿಂಗ, ಸಮೀಪದ ಕಲ್ಲು ಕಟ್ಟಡಗಳಲ್ಲಿ ಸಾಸಿವೆ ಕಾಳು ಗಣೇಶ, ಕಡೆಲೆ ಕಾಳು ಶ್ರೀ ಗಣೇಶನ ವಿಗ್ರಹಗಳಿವೆ. ರಸ್ತೆಯ ಎರಡು ಭಾಗಗಳಲ್ಲಿ ಹಳೆಯ ಕಲ್ಲಿನ ಮಂಟಪಗಲಳಿದ್ದು . ಬೀದಿಯ ಪೂರ್ವ ತುದಿಯಲ್ಲಿ ಒಂದು ದೊಡ್ಡ ನಂದಿ ವಿಗ್ರಹವಿದೆ, ಅದರ ಹತ್ತಿರವೇ ಚಾಲುಕ್ಯ ಶೈಲಿಯಲ್ಲಿ ಕಪ್ಪು ಕಲ್ಲಿನ ಕಂಬಗಳ ಮೇಲೆ ಸುಂದರವಾಗಿ ನಿರ್ಮಿಸಿದ ಒಂದು ಮಂಟಪವಿದೆ. ಬೀದಿಯ ಪಶ್ಚಿಮ ತುದಿಯಲ್ಲಿ ವಿರೂಪಾಕ್ಷ ದೇವಾಲಯ ಇದ್ದು , ದಂಡನಾಯಕ ಬಿಪ್ಪಯ್ಯ ಹೆಸರಿನಲ್ಲಿ ಕೆತ್ತಲಾದ ಬಹು ಎತ್ತರದ ಗೋಪುರವಿದೆ ಮತ್ತು ಹಲವು ಪುರಾತನ ದೇವಾಲಯಗಳು ಇಲ್ಲಿನ ಆಕರ್ಷಣೀಯ ಸ್ಥಳಗಳಾಗಿವೆ ಮತ್ತು ಆಕರ್ಷಣೆಗೆ ಕಾರಣವಾಗಿದ್ದೇ.
corona, lockdown ಮುಗಿದಮೇಲೆ ಖಂಡಿತ ಒಂದುಬಾರಿಯಾದ್ರೂ ಈ ಸ್ಥಳಕ್ಕೆ ಭೇಟಿ ನೀಡಿ.
ಸಧ್ಯಕ್ಕೆ ಮನೆಯಲ್ಲೇ ಇರಿ ಸುರಕ್ಷಿತವಾಗಿರಿ , ವ್ಯಾಕಸಿನೇಶನ ಮಾಡಿಸಿಕೊಳ್ಳಿ ಕೋರೋನಾ ಗೆ ಒದ್ದು ಓಡಿಸೋಣ ಧನ್ಯವಾದಗಳು
vipkarnataka.com