ನಿರೂಪಕಿ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬೆನ್ನಲೆ : ವೈರಲ್ ಆದ ಸುದ್ದಿ anchor anushree marriage with roshan
ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅವರ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಹಲವು ವರ್ಷಗಳಿಂದ ಅನುಶ್ರೀ ಅವರ ಮದುವೆಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ, ಕೊನೆಗೂ ಈ ಶುಭ ಸುದ್ದಿ ಸಿಕ್ಕಿದೆ. ಇದೇ ಆಗಸ್ಟ್ 28ರಂದು ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆದಿದೆ.
ರೋಷನ್ ಅವರೊಂದಿಗೆ ಅನುಶ್ರೀ ಹೊಸ ಬಾಳು Anushree weds Roshan
ಅನುಶ್ರೀ ಅವರು ಕೊಡಗು ಮೂಲದ ರೋಷನ್ ಅವರನ್ನು ಕೈ ಹಿಡಿದಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ, ಅಭಿಮಾನಿಗಳು ಮತ್ತು ಸಿನಿರಂಗದ ಸ್ನೇಹಿತರು ಹೊಸ ದಂಪತಿಗೆ ಶುಭ ಹಾರೈಸುತ್ತಿದ್ದಾರೆ. (ಆಗಸ್ಟ್ 28ರಂದು) ಬೆಳಗ್ಗೆ 10:56 ರ ಶುಭ ಮುಹೂರ್ತದಲ್ಲಿ ಈ ವಿವಾಹ ಮಹೋತ್ಸವ ಜರುಗಿದೆ. ಅನುಶ್ರೀ ತಮ್ಮ ಆಮಂತ್ರಣ ಪತ್ರಿಕೆಯಲ್ಲಿ “ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ” ಎಂದು ಬರೆದುಕೊಂಡಿದ್ದು, ಅಭಿಮಾನಿಗಳ ಹೃದಯ ಗೆದ್ದಿದೆ.
ಅವಳಿ ಮಕ್ಕಳ ತಾಯಿ ಆಗುತ್ತಿರುವ ಭಾವನಾ ರಾಮಣ್ಣ – ಮದುವೆ ಇಲ್ಲದೇ ಪ್ರೇಗ್ನೆಂಟ್!?
ಮುಸ್ಲಿಂ ಹುಡುಗನನ್ನ ಮದುವೆಯಾದರಾ ಅನುಶ್ರೇ ?

ಇದೇ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅನುಶ್ರೀ ಅವರ ಮದುವೆ ಕುರಿತು ಕೆಲವು ಪೋಸ್ಟ್ ಗಳು ವೈರಲ್ ಆಗುತ್ತಿವೆ . ಅದರಲ್ಲಿ, ಅನುಶ್ರೀ ಮುಸ್ಲಿಂ ಧರ್ಮದ ಹುಡುಗನ ಜೊತೆ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತನಗಳಲ್ಲಿ ಕೆಲವರು ಅನುಶ್ರೀ ಮತ್ತು ಅವರ ಭಾವಿ ಪತಿಯ ಫೋಟೊವನ್ನು ಹಂಚಿಕೊಂಡು, “ಈ ನಮ್ಮ ಹಿಂದೂ ಹೆಣ್ಣುಮಕ್ಕಳಿಗೆ ಹಿಂದೂ ಉಡುಗೊರೆ ಸಿಗಲ್ವಾ.. ಯಾಕೆ ಈ ತರ ಲವ್ ಜಿಹಾದ್‌ಗೆ ಬಲಿ ಹಾಕ್ತಾರೋ ಗೊತ್ತಿಲ್ಲ” ಎಂದು ಬರೆದಿದ್ದರು. ಆದರೆ, ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ಇದು ಸಂಪೂರ್ಣ ಸುಳ್ಳು ಎಂದು ದೃಢಪಟ್ಟಿದೆ.
ಅನುಶ್ರೀ ಅವರ ಪತಿಯ ಹೆಸರು ರೋಷನ್ ರಾಮಮೂರ್ತಿ ಆಗಿದ್ದು, ಅವರು ಹಿಂದೂ ಧರ್ಮಕ್ಕೆ ಸೇರಿದವರು. ಕೊಡಗು ಮೂಲದ ರೋಷನ್ ಅವರೊಂದಿಗೆ ಅನುಶ್ರೀ ಅವರ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡುವುದರಿಂದ ಸಮಾಜದಲ್ಲಿ ಅನಗತ್ಯ ಗೊಂದಲಗಳು ಉಂಟಾಗಬಹುದು.
ಕೆಲವರು ರೋಷನ್ ಹೆಸರಿನಿಂದ ಕನ್ಫ್ಯೂಸ್ ಆಗಿ ಈ ಮಾತನ್ನ ಹೇಳತಿರಬಹುದು ಅದಕ್ಕಾಗಿ ನಾವು ಸರ್ಚ್ ಮಾಡಿದಾಗ ರೋಷನ್ ಎಂಬ ಹೆಸರು ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲ ಎಂಬುವುದು ಧೃಢಪಟ್ಟಿದೆ.
“ರೋಷನ್” ಎಂಬ ಹೆಸರು ಯಾವ ಒಂದು ಧರ್ಮಕ್ಕೆ ಮಾತ್ರ ಸೀಮಿತವಲ್ಲ. ಇದು ಮೂಲತಃ ಫಾರ್ಸಿ ಭಾಷೆಯಿಂದ ಬಂದ ಪದವಾಗಿದ್ದು, ಅರ್ಥ “ಬೆಳಕು”, “ಪ್ರಕಾಶ”, “ಉಜ್ವಲತೆ” ಎನ್ನುವುದಾಗಿದೆ. ಭಾರತದಲ್ಲಿ ಈ ಹೆಸರನ್ನು ಹಲವಾರು ಸಮುದಾಯದವರು ಬಳಸುತ್ತಾರೆ. ಮುಸ್ಲಿಂ ಕುಟುಂಬಗಳಲ್ಲಿ ಸಾಮಾನ್ಯವಾಗಿ “ರೋಷನ್” ಹೆಸರು ಕೇಳಲು ಸಿಗುತ್ತದೆ. ಅದೇ ಸಮಯದಲ್ಲಿ ಹಿಂದೂ ಕುಟುಂಬಗಳಲ್ಲಿಯೂ, ವಿಶೇಷವಾಗಿ ಕರ್ನಾಟಕ, ಕೊಡಗು ಮತ್ತು ಉತ್ತರ ಭಾರತದ ಹಲವೆಡೆ ಈ ಹೆಸರು ಕಾಣಬಹುದು. ಪಾರ್ಸಿ ಸಮುದಾಯದಲ್ಲಿಯೂ ಸಹ ಈ ಹೆಸರು ಇದೆ.
ವಿವಾಹಪೂರ್ವ ಹಳದಿ ಶಾಸ್ತ್ರದ ಸಂಭ್ರಮ

ಆಗಸ್ಟ್ 27ರಂದು ಅನುಶ್ರೀ ಅವರ ಹಳದಿ ಶಾಸ್ತ್ರದ ಸಂಭ್ರಮ ಜೋರಾಗಿ ನಡೆದಿತ್ತು. ಈ ಶಾಸ್ತ್ರದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನುಶ್ರೀ ಅವರು ತಮ್ಮ ಹೊಸ ಜೀವನಕ್ಕೆ ಕಾಲಿಡುತ್ತಿರುವ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ತಮ್ಮ ಬಹುದಿನಗಳ ಗೆಳೆಯ ರೋಷನ್ ಅವರನ್ನು ಮದುವೆಯಾಗಿರುವ ಅನುಶ್ರೀ, ಮುಂದಿನ ಜೀವನದಲ್ಲಿ ಸುಖವಾಗಿರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ಅನುಶ್ರೀ ಅವರು ತಮ್ಮ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದೇ ಮದುವೆಯಾಗಬಹುದೆಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಮದುವೆಯು ಆಗಸ್ಟ್ 28ರಂದು ನಡೆದಿದ್ದು, ಇದು ಅನುಶ್ರೀ ಅವರ ಜೀವನದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ..
ಇದನ್ನು ಓದಿ..