ಗೋಕರ್ಣ, ಜುಲೈ 15: ಉತ್ತರ ಕನ್ನಡದ ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಅರಣ್ಯದಲ್ಲಿರುವ ಒಂದು ಗುಹೆಯಲ್ಲಿ, ಕೆಲವು ದಿನಗಳಿಂದ ವಾಸವಿದ್ದ ರಷ್ಯಾ ದೇಶದ ಮಹಿಳೆ ಮತ್ತು ಅವರ ಇಬ್ಬರು ಮಕ್ಕಳನ್ನು ಅರಣ್ಯ ಇಲಾಖೆ ಹಾಗೂ ಪೊಲೀಸರು ರಕ್ಷಿಸಿದ್ದಾರೆ.
ನೀನಾ ಕುಟಿನಾ ಎಂಬ ಹೆಸರಿನ ಈ ರಷ್ಯಾ ಮಹಿಳೆ, ತಮ್ಮ ಇಬ್ಬರು ಪುಟ್ಟ ಹೆಣ್ಣುಮಕ್ಕಳ ಜೊತೆ ಗೋವಾ ಮೂಲಕ ಭಾರತಕ್ಕೆ ಬಂದಿದ್ದರು. ಆ ನಂತರ ಗೋಕರ್ಣದ ಬೆಟ್ಟದ ಕಾಡಿನಲ್ಲಿರುವ ಒಂದು ಗುಹೆಯಲ್ಲಿ ವಾಸಿಸಲು ಆರಂಭಿಸಿದ್ದರು. ಅವರು ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೆ, ಯಾವುದೇ ಮೊಬೈಲ್, ಇಂಟರ್‌ನೆಟ್ ಅಥವಾ ಟಿವಿ ಇಲ್ಲದೆ, ಕೇವಲ ಕಾಡಿನ ಸಂಪನ್ಮೂಲಗಳನ್ನು ಬಳಸಿಕೊಂಡು ಬದುಕುತ್ತಿದ್ದರು.
ಸ್ಥಳೀಯ ಜನರು ಇದನ್ನು ಗಮನಿಸಿ, ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಅವರನ್ನು ರಕ್ಷಿಸಿದ್ದಾರೆ. ಮಹಿಳೆ ಮತ್ತು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಲಾಗಿದ್ದು, ಅವರ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ನೀನಾ, “ಇಲ್ಲಿ ನಮಗೆ ಎಲ್ಲವೂ ಇದೆ – ನೀರು, ಹಣ್ಣು, ಮತ್ತು ಮನಸ್ಸಿಗೆ ಶಾಂತಿ. ಸಮಾಜದಲ್ಲಿ ಬದುಕುವುದಕ್ಕಿಂತ ಇಲ್ಲಿಯ ಜೀವನವೇ ಉತ್ತಮವಾಗಿದೆ” ಎಂದು ಹೇಳಿದ್ದಾರೆ.

ಅವರು ಸ್ವಇಚ್ಛೆಯಿಂದಲೇ ಗುಹೆಯಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ. ಅವರ ವೀಸಾ ಬಗ್ಗೆ ಮತ್ತು ಭಾರತಕ್ಕೆ ಹೇಗೆ ಬಂದರು ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯಲಿದೆ. ಭಾರತೀಯ ಅಧಿಕಾರಿಗಳು ಮಾನವೀಯತೆಯ ದೃಷ್ಟಿಯಿಂದ ಅವರಿಗೆ ಸಹಾಯ ಮಾಡಿದ್ದಾರೆ.
ಈ ಘಟನೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬ ಚರ್ಚೆಯಲ್ಲಿದೆ. ತಂತ್ರಜ್ಞಾನದ ಯುಗದಲ್ಲಿ, ಪ್ರಕೃತಿಯಲ್ಲೇ ಶಾಂತಿ ಸಿಗುತ್ತದಾ ಎಂಬ ಪ್ರಶ್ನೆಗೆ ಈ ಘಟನೆ ಚಿಂತನೆಗೆ ಹಚ್ಚಿದೆ.
ಇದನ್ನು ಓದಿ…
ಜುಲೈ 15, 2025: ರಾಶಿ ಭವಿಷ್ಯ ! ಈ 5 ರಾಶಿಗಳು ಅದೃಷ್ಟವಂತರು, ಉಳಿದವರು ಎಚ್ಚರ!