ಪತ್ನಿಗೆ ಅಶ್ಲೀಲ ಮೆಸೇಜ್: ಕಾಮುಕನಿಗೆ ಬುದ್ಧಿ ಕಲಿಸಿದ ‘ಕಾಮಿಡಿ ಕಿಲಾಡಿ’ ಖ್ಯಾತಿಯ ಸಂಜು ಬಸಯ್ಯ sanju basayya online harassment case

ಬೆಂಗಳೂರು: ಇಂದಿನ ನಮ್ಮ ವಿಶೇಷ ವರದಿ: ಡಿಜಿಟಲ್ ಯುಗದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ಕಿರುಕುಳ ಮತ್ತು ವೈಯಕ್ತಿಕ ದಾಳಿಗಳ ಬಗ್ಗೆ. ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದ ಸಂಜು ಬಸಯ್ಯ ಅವರ ಕುಟುಂಬ ಇಂತಹ ಒಂದು ಘಟನೆಗೆ ಬಲಿಯಾಗಿದೆ. ಇತ್ತೀಚೆಗೆ, ಸಂಜು ಬಸಯ್ಯ ಅವರ ಪತ್ನಿ ಪಲ್ಲವಿಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶಗಳು ಮತ್ತು ಕಾಮೆಂಟ್‌ಗಳ ಮೂಲಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ತಕ್ಷಣ ಕ್ರಮ ಕೈಗೊಂಡ ಪೊಲೀಸರು, ಓರ್ವ ವಿದ್ಯಾರ್ಥಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏನಿದು ಪ್ರಕರಣ? ಸಂಜು ಬಸಯ್ಯ ಏಕೆ ಈ ದಿಟ್ಟ ಕ್ರಮ ಕೈಗೊಂಡರು? ಬನ್ನಿ, ವಿವರವಾಗಿ ತಿಳಿಯೋಣ.

ಸಂಜು ಬಸಯ್ಯ ಪತ್ನಿಗೆ ಡೈರೆಕ್ಟ್ ಟ್ಯಾಗ್ ಮಾಡಿದ ಅಶ್ಲೀಲ ಫೋಟೋಗಳು

sanju basayya wife
sanju basayya wife

sanju basayya online harassment case: ಸಂಜು ಬಸಯ್ಯ ಅವರು ಮದ್ಯಮ ಒಂದರ ಜೊತೆ ಮಾತನಾಡುವಾಗ ಈ ಘಟನೆಯ ಬಗ್ಗೆ ಮಹಿತಿಯನ್ನ ನೀಡಿದ್ದಾರೆ. ಕೆಲ ದಿನಗಳ ಹಿಂದೆ, ಒಬ್ಬ ವ್ಯಕ್ತಿ ತಮ್ಮ ಪತ್ನಿಯ ಇನ್‌ಸ್ಟಾಗ್ರಾಮ್ ಐಡಿಯನ್ನು ನೇರವಾಗಿ ಗುರಿಯಾಗಿಸಿಕೊಂಡು, ಆಕ್ಷೇಪಾರ್ಹ ಸ್ಟೋರಿಗಳನ್ನು ಪೋಸ್ಟ್ ಮಾಡಿ, ಅವಹೇಳನಕಾರಿ ಕಾಮೆಂಟ್‌ಗಳನ್ನು ಬರೆದಿದ್ದ ಎಂದು ಅವರು ಹೇಳಿದ್ದಾರೆ. ಸಾರ್ವಜನಿಕ ವಿಭಾಗದಲ್ಲಿ ಬರುವ ಸಾಮಾನ್ಯ ನಕಾರಾತ್ಮಕ ಕಾಮೆಂಟ್‌ಗಳನ್ನು ತಾವು ನಿರ್ಲಕ್ಷಿಸಬಹುದಿತ್ತು. ಆದರೆ, ಈ ದಾಳಿಗಳು ತಮ್ಮ ಪತ್ನಿಯ ಖಾಸಗಿ ಐಡಿಗೆ ನೇರವಾಗಿ ಬಂದಿದ್ದರಿಂದ ತೀವ್ರ ಕಳವಳ ಉಂಟಾಯಿತು ಎಂದು ಬಸಯ್ಯ ಒತ್ತಿ ಹೇಳಿದ್ದಾರೆ. ಇದು ಕೇವಲ ಕಾಮೆಂಟ್ ಆಗಿರದೆ, ವೈಯಕ್ತಿಕ ಹಲ್ಲೆಯಾಗಿತ್ತು ಎಂದು ಅವರು ಭಾವಿಸಿದ್ದಾರೆ.

ಪೊಲೀಸರ ತ್ವರಿತ ಕ್ರಮ

ತಮ್ಮ ಕುಟುಂಬದ ಗೌರವ ಮತ್ತು ಸುರಕ್ಷತೆಯನ್ನು ಕಾಪಾಡುವುದು ತಮ್ಮ ಜವಾಬ್ದಾರಿ ಎಂದು ಅರಿತ ಸಂಜು ಬಸಯ್ಯ ಅವರು ತಕ್ಷಣ ಪೊಲೀಸರನ್ನು ಸಂಪರ್ಕಿಸಿದರು. ತಮ್ಮ ಪತ್ನಿಗೆ ಬರುತ್ತಿದ್ದ ಅಶ್ಲೀಲ ಸಂದೇಶಗಳು ಮತ್ತು ಕಾಮೆಂಟ್‌ಗಳ ಬಗ್ಗೆ ಸ್ಥಳೀಯ ಪೊಲೀಸ್ ಸ್ಟೇಷನ್ ಗೆ ದೂರು ನೀಡಿದರು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಕ್ರಮ ಕೈಗೊಂಡು, ಸಂಜು ಬಸಯ್ಯ formal ದೂರು ದಾಖಲಿಸಲು ನೆರವಾದರು. ಅಚ್ಚರಿ ಎಂದರೆ, ಈ ಕೃತ್ಯದ ಆರೋಪಿ ಒಬ್ಬ ವಿದ್ಯಾರ್ಥಿಯಾಗಿದ್ದ. ಆತನನ್ನು ಪೊಲೀಸರು ಕರೆತರುವವರೆಗೂ ಬಸಯ್ಯ ಅವರಿಗೆ ಆತನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

ಅವಳಿ ಮಕ್ಕಳ ತಾಯಿ ಆಗುತ್ತಿರುವ ಭಾವನಾ ರಾಮಣ್ಣ – ಮದುವೆ ಇಲ್ಲದೇ ಪ್ರೇಗ್ನೆಂಟ್!?

ಯಾರನ್ನಾದರೂ ಶಿಕ್ಷಿಸುವುದು ತಮ್ಮ ಗುರಿಯಾಗಿರಲಿಲ್ಲ. ಬದಲಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯಲು ನಕಾರಾತ್ಮಕ ಮತ್ತು ಅನುಚಿತ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವ ಪ್ರವೃತ್ತಿಯನ್ನು ನಿಲ್ಲಿಸುವುದು ತಮ್ಮ ಮುಖ್ಯ ಗುರಿಯಾಗಿತ್ತು ಎಂದಿದ್ದಾರೆ. ತಮ್ಮ ವಿವಾಹದ ಎರಡು ವರ್ಷಗಳಲ್ಲಿ, 90% ಜನರು ತಮ್ಮ ಸಂಬಂಧಕ್ಕೆ ಬೆಂಬಲ ನೀಡಿದ್ದಾರೆ. ಆದರೆ, ದುರದೃಷ್ಟವಶಾತ್,10% ಜನರು ತಮ್ಮ ಸಂಬಂಧದ ಬಗ್ಗೆ ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಎರಡು ವರ್ಷಗಳಿಂದ ಇಂತಹ ನಕಾರಾತ್ಮಕತೆಯನ್ನು ಸಹಿಸಿಕೊಂಡ ನಂತರವೇ, ಇಂತಹ ಕಿರುಕುಳಕ್ಕೆ ಅಂತ್ಯ ಹಾಡಲು ತಾವು ಅಂತಿಮವಾಗಿ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ಅವರು ವಿವರಿಸಿದ್ದಾರೆ.

ನಕಲಿ ಐಡಿ ಇಂದ ಮೆಸೇಜ್

comedy kiladi sanju basayya wife online harassment case

ಹೆಚ್ಚಿನ ತನಿಖೆಯಿಂದ, ಆರೋಪಿ ವಿದ್ಯಾರ್ಥಿ ವಿಜಯನಗರ ಜಿಲ್ಲೆಯ ಕಾಂಚಿಕೆರೆ ಗ್ರಾಮದವನಾಗಿದ್ದು, ಬಸಯ್ಯ ಅಥವಾ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ಪರಿಚಯವಿರಲಿಲ್ಲ ಎಂದು ತಿಳಿದುಬಂದಿದೆ. ವಿದ್ಯಾರ್ಥಿಯು ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಮಹಿಳಾ ಐಡಿ ಸೃಷ್ಟಿಸಿ, ಸಂಜು ಬಸಯ್ಯ ಅವರ ಪತ್ನಿಯನ್ನು ಫಾಲೋ ಮಾಡುತ್ತಿದ್ದ ಮತ್ತು ನಂತರ ಅಶ್ಲೀಲ ಸ್ಟೋರಿಯಲ್ಲಿ ಅವರ ಫೋಟೋದೊಂದಿಗೆ ಟ್ಯಾಗ್ ಮಾಡಿದ್ದ. ತಮ್ಮ ಪತ್ನಿಯನ್ನು ಟ್ಯಾಗ್ ಮಾಡಿದ ನಂತರವೇ ಬಸಯ್ಯ ಅವರಿಗೆ ಪರಿಸ್ಥಿತಿಯ ಅರಿವಾಯಿತು. ಪೊಲೀಸರು ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದ ನಂತರ, ಆತ ತನ್ನ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ. ಸಂಜು ಬಸಯ್ಯ ಅವರ ಈ ದಿಟ್ಟ ಕ್ರಮವು ಆನ್‌ಲೈನ್ ಕಿರುಕುಳವನ್ನು ಯಾವತ್ತೂ ಸಹಿಸಬಾರದು, ವಿಶೇಷವಾಗಿ ಅದು ಕುಟುಂಬ ಸದಸ್ಯರನ್ನು ಗುರಿಯಾಗಿಸಿದಾಗ, ಎಂಬುದನ್ನು ಎತ್ತಿ ತೋರಿಸಿದೆ. ಇದು ಸೈಬರ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಪರಿಹಾರಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತದೆ.

ಇದನ್ನು ಓದಿ…

ಮಗ ಎಷ್ಟೇ ಕರೆದರು KGF ಶೂಟಿಂಗ್‌ಗೆ ಹೋಗದ ಯಶ್ ತಾಯಿ Yash Mother ಪುಷ್ಪಾ: ಅವರ ಬ್ಯುಸಿ ಲೈಫ್‌ಸ್ಟೈಲ್‌ ಹೇಗಿದೆ ಗೊತ್ತ ?

“ರಾಮಾಯಣ”: ಆದಿಪುರುಷದ ಕಹಿಯನ್ನು ಅಳಿಸಿ, ನಿರೀಕ್ಷೆ ಮೂಡಿಸಿದ ನಿತೇಶ್ ತಿವಾರಿ !

Leave a Comment