Gruha Lakshmi Scheme 2023 – ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಲು ಯಾವೆಲ್ಲ ದಾಖಲೆಗಳು ಅಗತ್ಯ: ಯಾರು ಅರ್ಜಿ ಸಲ್ಲಿಸಬಹುದು?
Gruha Lakshmi Yojane – ಕರ್ನಾಟಕ ಸರ್ಕಾರ 3ನೇ ಗ್ಯಾರಂಟಿಯಾಗಿ ಗೃಹಲಕ್ಷ್ಮಿ (ಮನೆ ಒಡತಿಗೆ ಮಾಸಿಕ 2000 ರೂ. ಹಣ) ಯೋಜನೆ ಜಾರಿಗೊಳಿಸಲಿದೆ. ಇದಕ್ಕೆ ಅರ್ಜಿ ಸಲ್ಲಿಸಲಿ ಈಗಲೇ ಕೆಳಗಿನ ದಾಖಲೆಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ. ಕರ್ನಾಟಕ ಕಾಂಗ್ರೆಸ್ ಸರ್ಕಾರ ತನ್ನ 3ನೇ ಗ್ಯಾರಂಟಿಯಾಗಿ ಗೃಹಲಕ್ಷ್ಮಿ (ಮನೆ ಯಜಮಾನಿಗೆ ತಿಂಗಳಿಗೆ 2000 ರೂ. ಹಣ) ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ . ಇನ್ನು ಗೃಹ ಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಕೆಲವು ಅಗತ್ಯ ದಾಖಲೆಗಳು ಬೇಕಿದ್ದು, ಆದಷ್ಟು ಬೇಗನೆ ಇವುಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಿ . ಮತ್ತು ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಿ.
Table of Contents
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ರೆ ಮನೆ ಒಡತಿಯ ಬ್ಯಾಂಕ್ ಅಕೌಂಟ್ ಗೆ ಮುಂದಿನ ಪ್ರತಿ ತಿಂಗಳು 2 ಸಾವಿರ ಹಣ ಹಾಕಲಾಗುತ್ತದೆ.
Gruha lakshmi yojane ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಫಲಾನುಭವಿ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಆಗಸ್ಟ್ 16 ರಂದು 2 ಸಾವಿರ ರೂ. ಹಣವನ್ನು ಸರ್ಕಾರದಿಂದ ಹಾಕಲಾಗುತ್ತದೆ. ಈ ಮೂಲಕ ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ನೀಡಿದ 5 ಗ್ಯಾರಂಟಿಗಳ ಪೈಕಿ 3ನೇ ಗ್ಯಾರಂಟಿಯನ್ನು ಈಡೇರಿಸಿದ ಹಾಗೆ ಆಗುತ್ತೆ
ಇನ್ನು ಗೃಹಲಕ್ಷ್ಮಿ ಯೋಜನೆಗೆ (Gruha lakshmi Scheme) ಯಾವ ದಾಖಲೆಗಳು ಬೇಕು, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಎಂಬುವುದರ ಕಂಪ್ಲೀಟ್ ಮಾಹಿತಿ ಎಲ್ಲಿದೆ..
Sevasindhu.karnataka.gov.in Gruha Lakshmi Application Form 2023
ಯೋಜನೆ | ಕರ್ನಾಟಕ ಗೃಹ ಲಕ್ಷ್ಮಿ ಯೋಜನೆ 2023 |
ಸರ್ಕಾರ | ಕರ್ನಾಟಕ ಸರ್ಕಾರ |
ಮೂಲಕ ಪ್ರಾರಂಭಿಸಲಾಯಿತು | ಸಿದ್ಧರಾಮಯ್ಯ ಮುಖ್ಯಮಂತ್ರಿ ಕರ್ನಾಟಕ ರಾಜ್ಯ |
Applicable in | Karnataka |
ರಂದು ಪ್ರಾರಂಭಿಸಲಾಯಿತು | 20 july |
ಯೋಜನೆಯ ಉದ್ದೇಶ | ಮಹಿಳೆಯರಿಗೆ ಆರ್ಥಿಕ ನೆರವು ನೀಡಲು |
ಲಾಭ | DBT ಮೋಡ್ ಮೂಲಕ ತಿಂಗಳಿಗೆ ₹2000 |
ಅರ್ಹತೆ | ಮಹಿಳಾ ಕುಟುಂಬದ ಮುಖ್ಯಸ್ಥರು |
Gruha Lakshmi Application Form 2023 | 20 ಜುಲೈ 2023 ನಂತರ |
ನೋಂದಣಿಗೆ ಅಗತ್ಯವಿರುವ ದಾಖಲೆಗಳು | ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಖಾತೆ ಪ್ರತಿ |
ಅಪ್ಲಿಕೇಶನ್ ಮೋಡ್ | Online |
Seva Sindhu Portal | Sevasindhu.karnataka.gov.in |
ಜುಲೈ 20 2023 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬಹುದಾಗಿದೆ. ಗ್ರಾಮ ಓನ್ , ಬೆಂಗಳೂರು ಓನ್, ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಪಡಿತರ ಕಾರ್ಡ್ (BPL Card) ನಲ್ಲಿ ಮನೆಯ ಮುಖ್ಯಸ್ಥೆಯಾಗಿರುವ ಮಹಿಳೆ ಮಾತ್ರ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯದಲ್ಲಿ 1,53,070,32 (1 ಕೋಟಿ 53 ಲಕ್ಷ 7 ಸಾವಿರದ 32) ಜನ ಪರಿತರ ಚೀಟಿ ಹೊಂದಿದ್ದಾರೆ. ರಾಜ್ಯದ ಪಡಿತರ ಚೀಟಿ (Ration Card) ಹೊಂದಿದವರ ಪೈಕಿ 1 ಕೋಟಿ 22 ಲಕ್ಷ ಕಾರ್ಡ್ ಗಳಲ್ಲಿ ಮಹಿಳೆಯರೇ ಮನೆಯ ಮುಖ್ಯಸ್ಥೆ ಎಂದು ನಮೂದಿಸಲಾಗಿದೆ.
ಇನ್ನು 31 ಲಕ್ಷ ರೇಶನ್ ಕಾರ್ಡ್ ಗಳಲ್ಲಿ ಪುರುಷರೇ ಮನೆಯ ಯಜಮಾನನಾಗಿದ್ದಾರೆ . ಮತ್ತು ಯಾರ ರೇಶನ್ ಕಾರ್ಡ್ ಗಳಲ್ಲಿ ಮಹಿಳೆಯನ್ನ ಮನೆಯ ಮುಖ್ಯಸ್ಥೆ ಎಂದು ಮಾಡಿಲ್ವೋ ಇಂಥವರಿಗೆ ಗೃಹಲಕ್ಷ್ಮಿ ಯೋಜನೆಯ ಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಗೃಹಲಕ್ಷ್ಮಿ ಯೋಜನೆಗೆ ಆರ್ಜಿ ಸಲ್ಲಿಸಲು ಅರ್ಹ ಇಲ್ಲದೆ ಇರುವ ರೇಶನ್ ಕಾರ್ಡ್ ಗಳಲ್ಲೀ ಕೆಲವು ಬದಲಾವಣೆಯನ್ನು ಮಾಡಬೇಕಾಗುತ್ತದೆ. ಆಹಾರ ಇಲಾಖೆಗೆ ಮನವಿ ಸಲ್ಲಿಸಿ ಮಹಿಳೆಯನ್ನ ಮನೆಯ ಮುಖ್ಯಸ್ಥೆಯನ್ನಾಗಿ ಕಾರ್ಡ್ನಲ್ಲಿ ನಮೂದಿಸಬೇಕು. ನಂತರ ಗೃಹಲಕ್ಷ್ಮಿ ಯೋಜನೆಗೆ ಅಂತಹ ಮಹಿಳೆಯರು ಅರ್ಜಿ ಸಲ್ಲಿಸಬಹುದು.ಮತ್ತು ಗೃಹ ಲಕ್ಷ್ಮಿ ಯೋಜನೆಯಡಿ ತಿಂಗಳಿಗೇ 2000ರೂ ಪಡೆಯಬಹುದು.
Gruha Lakshmi Scheme 2023 – ಯಾರಿಗಿಲ್ಲ ಗೃಹಲಕ್ಷ್ಮಿ ಭಾಗ್ಯ..?
ಒಂದು ವೇಳೆ ಮಹಿಳೆ ಅಥವಾ ಆಕೆಯ ಗಂಡ GST ನಂಬರ್ ಹೊಂದಿದ್ದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಸಿಗುವುದಿಲ್ಲ. ಅಕಸ್ಮಾತ್ ಇಂಥವರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಅವರ ಅರ್ಜಿಯನ್ನು ವಜಾಗೊಳಿಸಲಾಗುತ್ತೆ.
ಎಲ್ಲೆಲ್ಲಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಮಾಡಬಹುದು.?
ಬೆಂಗಳೂರು ಒನ್ (Bengaluru One), ಬಿಬಿಎಂಪಿ (BBMP) ಕಚೇರಿಗಳು, ಕರ್ನಾಟಕ ಒನ್(Karnataka One), ಗ್ರಾಮ ಒನ್ (Grama One), ಬಾಪೂಜಿ ಕೇಂದ್ರ (Baapuji Kendra), ತಾಲೂಕು ಕಚೇರಿಗಳು (Taluk Offices) ಹಾಗೂ ನಾಡ ಕಚೇರಿಯಲ್ಲೂ (Naada Kacheri) ಕೂಡ ಗೃಹಲಕ್ಷ್ಮಿ ಅರ್ಜಿ ಅಲ್ಲಿಸ ಬಹುದಾಗಿದೆ.
ಇನ್ನು ನೀವೂ ಈ ಕಚೇರಿಗಳಿಗೆ ಹೋಗುವ ಬದಲು, ಆನ್ ಲೈನ್ ಮತ್ತು ಆಫ್ಲೈನ್ ಮೂಲಕವು ಅರ್ಜಿ ಸಲ್ಲಿಕೆಗೆ ಅವಕಾಶ ಇರಲಿದೆ. ಅರ್ಜಿ ಸಲ್ಲಿಕೆಗೆ ರೇಶನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಝೆರಾಕ್ಸ್ ಕಡ್ಡಾಯವಾಗಿ ನೀಡಬೇಕು. ಅಲ್ಲದೇ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ಮೊಬೈಲ್ ನಂಬರನ್ನೇ ಅರ್ಜಿ ಸಲ್ಲಿಸುವ ಸಮಯದಲ್ಲಿ ನಮೋದಿಸಬೇಕು. ಇನ್ನೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ರೂ ಅಂತವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ರಾಜ್ಯ ಸರ್ಕಾರದಿಂದಲೇ ಅರ್ಜಿ ಸಲ್ಲಿಸಲು ಸಮಯ, ದಿನಾಂಕ ನಿಗದಿ ಮಾಡಲಾಗುತ್ತದೆ
ಸರ್ಕಾರಿ ಸೇವಾ ಕೇಂದ್ರಗಳಿಗೆ ಯಾವ ದಿನ, ಯಾವ ಸಮಯಕ್ಕೆ ಹೋಗಿ ಗೃಹ ಲಕ್ಷ್ಮಿ ಯೋಜನೆಗೆ ನೋಂದಾವಣೆ ಮಾಡಿಸಿಕೊಳ್ಳಬೇಕು ಎಂಬ ಮೇಸೆಜ್ ಬರಲಿದೆ. ಆ ಮೆಸೇಜ್ ಜೊತೆ ಅರ್ಜಿ ಸಲ್ಲಿಸಬೇಕು. ಆದ್ರೆ, ಇನ್ನು ಅರ್ಜಿ ಸಲ್ಲಿಕೆಗೆ ಡೆಡ್ ಲೈನ್ನ್ನು ಸರ್ಕಾರ ನೀಡಿಲ್ಲ. ನಿಮಗೇನಾದ್ರೂ ಅರ್ಜಿ ಸಲ್ಲಿಕೆ ಬಗ್ಗೆ ಗೊಂದಲ ಇದ್ರೆ 8147500500 ಹಾಗೂ 1902 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಸಧ್ಯಕ್ಕೆ ಬಿಡುಗಡೆ ಮಾಡಿರುವ ಈ ನಂಬರ್ ಗೆ ಕರೆಗಳು ಮಾಡಿದ್ದರೆ. ನಂಬರ್ busy ಅಥವ ಸ್ವಿಚ್ ಆಫ್ ಎಂದು ಬರುತ್ತಿದೆ.