Tuesday, November 19, 2024
HomeHOMEYuva Raj Kumar Biography , Yuva Rajkumar School College, Marriage , Film...

Yuva Raj Kumar Biography , Yuva Rajkumar School College, Marriage , Film industry Career, Personal life

ಯುವ ರಾಜ್ ಕುಮಾರ್ ಜೀವನಚರಿತ್ರೆ Yuva Raj Kumar Biography

Yuva Rajkumar – ಯುವ ರಾಜಕುಮಾರ್ ಎಂದು ಕರೆಯಲ್ಪಡುವ ಗುರು ರಾಜಕುಮಾರ್ ಕನ್ನಡ ಚಲನಚಿತ್ರರಂಗದ ದಿಗ್ಗಜ ಡಾ.ರಾಜಕುಮಾರ್ ಅವರ ಮೊಮ್ಮಗ. ರಾಘವೇಂದ್ರ ರಾಜಕುಮಾರ್ ಮಗನಾದ ಯುವ ರಾಜ್ ಕುಮಾರ್, 23 ಏಪ್ರಿಲ್ 1993 ರಂದು ಬೆಂಗಳೂರಿನಲ್ಲಿ ಜನಿಸಿದರು. ಸಧ್ಯ ಇವರು ಡಾ. ರಾಜಕುಮಾರ್ ಅವರ ಹೆಸರಿನಲ್ಲಿ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾರೆ. 2016 ರಲ್ಲಿ ತೆರೆಕಂಡ, ಅಣ್ಣ ವಿನಯ್ ರಾಜಕುಮಾರ್ ಅಭಿನಯದ ‘ರನ್ ಆಂಟನಿ’ ಚಿತ್ರವನ್ನು ಯುವ ನಿರ್ಮಿಸಿದ್ದಾರೆ.

ಯುವ ರಾಜ್ ಕುಮಾರ್ (Yuva Rajkumar), 23 ಏಪ್ರಿಲ್ 1993 ರಂದು ಬೆಂಗಳೂರಿನಲ್ಲಿ ಜನಿಸಿದರು.

ಯುವ ರಾಜ್ ಕುಮಾರ್ ವೈವಾಹಿಕ ಜೀವನ: Yuva Raj Kumar Marriage

ಯುವ ರಾಜ್ ಕುಮಾರ್ (Yuva Raj Kumar) 2019 ರ ಮೇ ತಿಂಗಳಿನಲ್ಲಿ ಶ್ರೀದೇವಿ ಯೊಂದಿಗೆ ವಿವಾಹವಾದರು.
ಯುವ ರಾಜ್ ಕುಮಾರ್ ಮದುವೆ ಸಮಾರಂಭದಲ್ಲಿ ದಿಗ್ಗಜರ ಜೊತೆ ಫೋಟೋ

ಯುವ ರಾಜ್ ಕುಮಾರ್ (Yuva Raj Kumar) 2019 ರ ಮೇ ತಿಂಗಳಿನಲ್ಲಿ ವಿವಾಹವಾದರು . ಇವರ ಪತ್ನಿ ಶ್ರೀದೇವಿ ಭೈರಪ್ಪ ಮೂಲತಃ ಮೈಸೂರಿನವರು,  ಸಾಂಸ್ಕೃತಿಕ ನಗರದಲ್ಲಿಯೇ ಹುಟ್ಟಿ ಬೆಳೆದು, ಉನ್ನತ ಶಿಕ್ಷಣ ಮುಗಿಸಿದ್ದಾರೆ ಶ್ರೀದೇವಿ ಭೈರಪ್ಪ. ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಸುಮಾರು ಏಳು ವರ್ಷಗಳಿಂದ ಸ್ನೇಹಿತರು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ಯುವರಾಜ್ ಕುಮಾರ್-ಶ್ರೀದೇವಿ ಭೈರಪ್ಪ ಮದುವೆಯಾದರು. ಸಧ್ಯ ಡಾ. ರಾಜಕುಮಾರ್ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರದ ಉಸ್ತುವಾರಿಯನ್ನು ಶ್ರೀದೇವಿ ನೋಡಿಕೊಳ್ಳುತ್ತಿದ್ದಾರೆ.

ಯುವ ರಾಜ್ ಕುಮಾರ್ ಚೊಚ್ಚಲ ಸಿನಿಮಾ: Yuvaraj Kumar Film Industry Career

ಪವರ್ ಸ್ಟಾರ್ ಅಗಲಿಕೆ ನಂತರ ಪುನೀತ್ ರಾಜಕುಮಾರ್ (Puneeth Rajkumar) ಫ್ಯಾನ್ಸ್ ಗಳು ಯುವರಾಜ್ ಅವರಲ್ಲಿ ಅಪ್ಪುವನ್ನು ಕಾಣುತ್ತಿದ್ದಾರೆ. ಪುನೀತ್  ನಟಿಸಬೇಕಿದ್ದ ಕತೆಯಲ್ಲಿ ಯುವ ಹೀರೋ ಆಗಿ ನಟಿಸಲಿದ್ದು, ಮಾರ್ಚ್ 3 ರಂದು ಯುವ ಅಭಿನಯದ ಚಿತ್ರದ ಟೈಟಲ್ ಟೀಸರ್ ರಿವೀಲ್ ಆಗಿದೆ‌.

ಪವರ್ ಸ್ಟಾರ್ ಅಗಲಿಕೆ ನಂತರ ಪುನೀತ್ ರಾಜಕುಮಾರ್ (Puneeth Rajkumar) ಫ್ಯಾನ್ಸ್ ಗಳು ಯುವರಾಜ್ ಅವರಲ್ಲಿ ಅಪ್ಪುವನ್ನು ಕಾಣುತ್ತಿದ್ದಾರೆ. ಪುನೀತ್  ನಟಿಸಬೇಕಿದ್ದ ಕತೆಯಲ್ಲಿ ಯುವ ಹೀರೋ ಆಗಿ ನಟಿಸಲಿದ್ದು, ಮಾರ್ಚ್ 3 ರಂದು ಯುವ ಅಭಿನಯದ ಚಿತ್ರದ ಟೈಟಲ್ ಟೀಸರ್ ರಿವೀಲ್ ಆಗಿದೆ‌.

ಯುವ ರಾಜ್​ಕುಮಾರ್ ಚೊಚ್ಚಲ ಸಿನಿಮಾಕ್ಕೆ ‘ಯುವ’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮವು ಬೆಂಗಳೂರಿನ ಅಶೋಕ ಹೋಟಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು. ಹಾಗೇ, ಬೆಂಗಳೂರಿನ ಕುರುಬರಹಳ್ಳಿಯ ಅಣ್ಣಾವ್ರ ಪ್ರತಿಮೆ ಬಳಿ LED ಸ್ಕ್ರೀನ್ ನಲ್ಲಿ ಪ್ರದರ್ಶನ ಮಾಡಿಲಾಯಿತು, ಜೊತೆಗೆ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಕೂಡ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಲಾಯಿತು.

ಟೈಟಲ್ ಟೀಸರ್ ನ್ನು ಗಮನಿಸಿದರೆ, ಯುವ ಭರ್ಜರಿ ಆಕ್ಷನ್ ಸಿನಿಮಾವಾಗಿದೆ ಎನ್ನುವ ಸುಳಿವು ಸಿಗುತ್ತದೆ. ಟೈಟಲ್ ಟೀಸರ್​ನಲ್ಲಿಯೇ ಸುತ್ತಿಗೆ, ಬ್ಯಾಟು, ಕತ್ತಿಗಳು ರಾರಾಜಿಸಿದ್ದು, ಖಡಕ್ ಧ್ವನಿಯಲ್ಲಿ ಡೈಲಾಗ್ ಹೊಡೆದಿರುವ ಯುವ ರಾಜ್​ಕುಮಾರ್, “ನೀನು ದಾಟಿರುವುದು ಬ್ಲಡ್​ಲೈನ್, ರಕ್ತ ಹರಿದೇ ಹರಿಯುತ್ತೆ” ಅಂತ ವಿಲನ್​ಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಸಿನಿಮಾವು ಗ್ಯಾಂಗ್​ವಾರ್​ಗೆ ಸಂಬಂಧಿಸಿದ ಕತೆಯ ಎಳೆಯನ್ನು ಹೊಂದಿರುವ ಸುಳಿವೂ ಸಹ ಟೀಸರ್​ನಲ್ಲಿ ಸಿಕ್ಕಿದೆ.

ಸಿನಿಮಾದ ಟೈಟಲ್ ಬಿಡುಗಡೆಯಾದ ದಿನವೇ ಸಿನಿಮಾ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿದ್ದು, ಯುವ ರಾಜ್​ಕುಮಾರ್ ಚೊಚ್ಚಲ ಸಿನಿಮಾ ಯುವ, ಇದೇ ವರ್ಷಾಂತ್ಯ ಡಿಸೆಂಬರ್ 22 ಕ್ಕೆ ಬಿಡುಗಡೆಯಾಗಲಿದೆ. ಅಪ್ಪು ನಿಧನದ ಬಳಿಕ ಅವರ ಸ್ಥಾನವನ್ನು ಯುವ ರಾಜ್​ಕುಮಾರ್ ತುಂಬಬೇಕು ಎಂದು ದೊಡ್ಮನೆ ಕುಟುಂಬದ ಅಭಿಮಾನಿಗಳು ಆಶಿಸಿದ್ದರು. ಅಭಿಮಾನಿಗಳ ಆಸೆಯಂತೆ ಅಪ್ಪು ಗಾಗಿ ಮಾಡಿದ್ದ ಕತೆಯನ್ನು ಕೊಂಚ ಬದಲಾಯಿಸಿ ನಿರ್ದೇಶಕ ಸಂತೋಶ್ ಆನಂದ್ ರಾಮ್ ಯುವ ರಾಜ್​ಕುಮಾರ್​ಗಾಗಿ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

ಇದನ್ನು ಓದಿ… ಮಹೇಂದ್ರ ಸಿಂಗ್ ಧೋನಿ ಜೀವನಚರಿತ್ರೆ ಮತ್ತು ಕ್ರೀಡಾ ವೃತ್ತಿ ಜೀವನ , Mahendra Singh Dhoni Biography, in kannada

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments