ಮಾಜಿ ಮುಖ್ಯಮಂತಿ ವಿಪಕ್ಷ ನಾಯಕ ಸಿದ್ಧರಾಮಯ್ಯ (siddaramaiah )ರವರ ರಾಜಕೀಯ ಪಯಣ ಹೇಗಿತ್ತು ? ಮತ್ತು ಅವರ ಲೈಫ್ ಸ್ಟೋರಿ (life story) ಹೇಗಿತ್ತು? ಬನ್ನಿ ನೋಡೋಣ.
ಸಿದ್ದರಾಮಯ್ಯ ರಾಜ್ಯ ರಾಜಕಾರಣದ ಬಲಿಷ್ಠ ನಾಯಕ, ಕಾಂಗ್ರೆಸ್ (congress) ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಸಿದ್ಧರಾಮಯ್ಯ ಎನ್ನುವ ಹೆಸರು ಯಾರಿಗೂ ಮರಿಯೊ ಹಾಗಿಲ್ಲ, ವಿಪಕ್ಷ ಸ್ಥಾನದಲ್ಲಿ ಇದ್ದರೂ ಬೇರೆ ಬೇರೆ ಪಕ್ಷದ ನಾಯಕರೊಂದಿಗೆ ಪರಸ್ಪರ ಒಳ್ಳೆಯ ಸ್ನೇಹ ಸಂಬಂಧವಿದೆ, ರಾಜಕೀಯವೇ ಬೇರೆ ಸ್ನೇಹವೆ ಬೇರೆ ಎನ್ನುತ್ತಾರೆ ಸಿದ್ದು.
ರಾಜಕೀಯಕ್ಕೆ ಬಂದಿದ್ದು ಹೇಗೆ?
ಸಿದ್ಧರಾಮಯ್ಯ (Siddharamaiah) ನವರು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವರು ,ಅವರ ರಾಜಕೀಯ ಕುಟುಂಬದ ಮನೆತನವೇನು ಇರಲಿಲ್ಲ , 1969-1972 ರಲ್ಲಿ ಲಾ ಕಾಲೇಜ್ ನಲ್ಲಿ ಇದ್ದರು ಸಿದ್ಧರಾಮಯ್ಯ ,
ಆಗ ಲಾ ಕಾಲೇಜ್ ನಲ್ಲಿ ನಂಜುಂಡಿ ಸ್ವಾಮಿ ಅವರು ಪ್ರೊಫೆಸರ್ ಆಗಿದ್ದರು .. ಅಲ್ಲಿ ನಂಜುಂಡಿ ಸ್ವಾಮಿ ಮತ್ತು ಸಿದ್ಧರಾಮಯ್ಯ ರವರ ಸಂಪರ್ಕ ಬೆಳದಮೇಲೆ ಸಿದ್ದು ಗೆ ನಂಜುಂಡಿ ಸ್ವಾಮಿಯವರೇ ಪ್ರೇರಣೆಯಾಗ್ಗಿದ್ದರು, ಯಾಕಂದ್ರೆ ನಂಜುಂಡಿ ಸ್ವಾಮಿಯವರು ಪ್ರೊಫೆಸರ್ ಇದ್ದ ಮೇಲೆ ಅನೇಕ ಚಳವಳಿಯಲ್ಲಿ ಸಿದ್ಧರಾಮಯ್ಯನವರಿಗೆ ತೊಡಗಿಸುತಿದ್ದರು , ಅನೇಕ ಹೋರಾಟಗಳಲ್ಲಿ ಭಾಗವಹಿಸುತಿದ್ದರು ಅದೇ ರಾಜಕೀಯಕ್ಕೆ ಬರಲಿಕ್ಕೆ ಸ್ಫೂರ್ತಿಯಾಗಿತ್ತು ..
ಒಂದುವೇಳೆ ನಂಜುಂಡಿ ಸ್ವಾಮಿಯವರ ಸಂಪರ್ಕಕ್ಕೆ ಸಿದ್ದು ಬರದೇ ಹೊಗ್ಗಿದ್ದಾರೆ ಇಂದು ಸಿದ್ದು ರಾಜಕೀಯಕ್ಕೆ ಬರ್ತಾನೆ ಇರಲಿಲ್ಲ ಅಂತಾರೆ ಸಿದ್ದು.
ಸ್ಟುಡಂಟ್ ಲೈಫ್ (Student life) ನಲ್ಲೇ ರಾಜಕಾರಣದ ಬಗ್ಗೆ ಆಸಕ್ತಿ ಪ್ರಾರಂಭವಾಯಿತು ..
ಸಿದ್ದು ಗೆ ಸ್ಟುಡಂಟ್ ಲೈಫ್ ನಲ್ಲೇ ರಾಜಕಾರಣದ ಬಗ್ಗೆ ಆಸಕ್ತಿ ಪ್ರಾರಂಭವಾಯಿತು, ಆ ನಂತರ 1970 ರಲ್ಲಿ ಸಿದ್ದು ಸಮಾಜವಾದಿ (ಸಮಾಜವಾದಿ ಯುವಜನ ಸಭಾ) ಪಾರ್ಟಿಗೆ ಸೇರಿದ್ದರು.. ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಜೆಪಿ ಮೂವಮೆಂಟ್ ನಲ್ಲಿ ಭಾಗವಹಿಸಿ ಎಮರ್ಜೆನ್ಸಿ ಗೆ ವಿರೋಧ ಮಾಡಿದ್ದರು, ಬಳಿಕ ಸಿದ್ದರಾಮಯ್ಯನವರಿಗೆ 2 ದಿವಸ ಪೊಲೀಸ್ ಸ್ಟೇಷನ್ ನಲ್ಲಿಯೇ ಇರಬೇಕಾಯಿತು ,ಜೆಪಿ ಚಳವಳ್ಳಿಯವರೆಗೂ ಸಿದ್ದು ಸಮಾಜವಾದಿ ಪಾರ್ಟಿಯಲ್ಲಿ ಇದ್ದರು ..
ತುರ್ತು ಪರಿಸ್ಥಿತಿ (Emergency) ಬಳಿಕವೇ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಸಿದ್ದು.
ತುರ್ತು ಪರಿಸ್ಥಿತಿಯ (emergency) ನಂತರ ರಾಜಕಾರಣಕ್ಕೆ ಆಕ್ಟಿವ್ ಆಗಿದ್ದರು ಸಿದ್ದರಾಮಯ್ಯ. ನಂತರ ತಾಲೂಕ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ನಿಲ್ಲಬೇಕು ಅಂತ ಅಸೆ ಪಟ್ಟಿದ್ದರು ಸಿದ್ದರಾಮಯ್ಯ, ಬಳಿಕ ಅವರ ತಂದೆಗೆ ಈ ವಿಷಯ ಹೇಳಿದಾಗ ಅವ್ರ ತಂದೆಯಿಂದ ಸಿದ್ದರಾಮಯ್ಯ ಚುನಾವಣೆಯಲ್ಲಿ ನಿಲ್ಲೋದಕ್ಕೆ ವಿರೋಧ ವ್ಯಕ್ತಪಡಿಸಿದ್ದರು,
ಗ್ರಾಮಪಂಚಯತ್ ಚುನಾವಣೆಯಲ್ಲಿ ಸೋತಿದ್ದ ಸಿದ್ದು ತಂದೆ.
ಸಿದ್ಧರಾಮಯ್ಯನವರ ತಂದೆ ಕೂಡ ಒಂದು ಬಾರಿ ಪಂಚಾಯತ್ ಎಲೆಕ್ಷನ್ ಗೆ ನಿಂತಿದ್ದರು ಆಗ ಅವರು ಗ್ರಾಮಪಂಚಾಯತ್ ಚುನಾವಣೆ ಸೋತು ಹೋಗಿದ್ದರು ಅದ್ಕೆ ಜನರನ್ನ ನಂಬಬೇಡ ಸೋಲಿಸಿ ಬಿಡ್ತಾರೆ ಎಂದು ಭಯ ವ್ಯಕ್ತ ಪಡಿಸಿದರು. ಚುನಾವಣೆಗಳಲ್ಲಿ ನಿಲ್ಲಲೇ ಬೇಡ ಲಾಯರ್ ಕೆಲ್ಸನೆ ಮುಂದುವರಿಸು ಎಂದು ಅವರ ತಂದೆ ಹೇಳಿದ್ದರು, ಕೆಲವು ದಿನಗಳ ನಂತರ ಊರಿನ ಜನ ಬಂದು ಸಿದ್ದರಾಮಯ್ಯ ನವರ ತಂದೆಗೆ ಸಿದ್ಧರಾಮಯ್ಯ ನವರು ಚುನಾವಣೆಗೆ ನಿಲ್ಲಲ್ಲಿ ಎಂದು ಹೇಳಿದ್ದಾಗ ಅವರಲ್ಲಿ ಭರವಸೆ ತುಂಬಿದಾಗ ಸಿದ್ದು ತಂದೆ, ಚುನಾವಣೆಯಲ್ಲಿ ನಿಲ್ಲೋದಕ್ಕೆ ಅನುಮತಿ ಕೊಟ್ಟರು.
ಆಮೇಲೆ ಜನತಾ ಪಾರ್ಟಿನಿಂದ ತಾಲೂಕಾಭಿವೃದ್ದಿ ಮಂಡಳಿ ಚುನಾವಣೆಗೆ ನಿಂತರು, ತಾಲೂಕಾಭಿವೃದ್ದಿ ಮಂಡಳಿ ಚುನಾವಣೆ ಸಿದ್ದರಾಮಯ್ಯ ಗೆದ್ದರು, ಮುಂಬರುವ ಎಲ್ಲ ಚುನಾವಣೆಗಳಲ್ಲಿ ಸಿದ್ದರಾಮಯ್ಯ ಗೆ ಅವರ ತಂದೆಯಿಂದ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು. ಆಮೇಲೆ 1979 ಗೆ ಜನತಾ ಪಾರ್ಟಿ ಹೊಡೆದು ಹೋಗಿತ್ತು . ಬಳಿಕ ಸಿದ್ದು ಜಾರ್ಜ್ ಫರ್ನಾಂಡಿಸ್ ಜೊತೆಗೆ ಲೋಕದಳ ಪಾರ್ಟಿಗೆ ಸೇರಿದ್ದರು, ಲೋಕದಳ ಪಾರ್ಟಿಯಿಂದ ಸಿದ್ದು ಲೋಕಸಭಾ ಇಲೆಕ್ಷನ್ ಗೆ ನಿಂತುಕೊಂಡರೂ, ಆದರೆ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆ ಹೀನಾಯವಾಗಿ ಸೋಲು ಕಣಬೇಕಾಯಿತು.
ರಾಜಕೀಯದ ಸಹವಾಸವೇ ಬೇಡ ಎಂದಿದ್ದ ಸಿದ್ದು.
ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ನಂತರ ರಾಜಕಾರವೇ ಬೇಡ ಎಂದು ಮತ್ತೆ ಲಾಯರ್ ಕೆಲ್ಸನೆ ಮುಂದುವರಿಸಿದ್ದರು. ಆ ಮೇಲೆ 1982-83 ಲಾ ಕಾಲೇಜ್ ನಲ್ಲಿ ಪಾರ್ಟ್ ಟೈಮ್ ಲೆಕ್ಚರರ್ ಆಗಿ ಕೆಲಸ ಮಾಡಿದ್ದರು.1982-83 ನಲ್ಲಿ ಎಸ್ಸೆಂಬಲಿ ಚುನಾವಣೆ ಬಂತು ಆದರೆ ಆಗ ಸಿದ್ದರಾಮಯ್ಯ ಲೋಕದಳ ದಲ್ಲೇ ಇದ್ದರು ..
ಸಿದ್ದು ಗೆ ಎಸ್ಸೆಂಬಲಿ ಎಲೆಕ್ಷನ್ ಗೆ ನಿಲ್ಲಲು ಯಾವದೇ ಆಸಕ್ತಿ ಇರಲಿಲ್ಲ , ಕೊನೆಗೆ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಎಸ್ಸೆಂಬಲಿ ಇಲೆಕ್ಷನ್ ಗೆ ನಾಮಿನೇಷನ್ ಹಾಕಿದರು ..
ಸಿದ್ಧರಾಮಯ್ಯ ಲೋಕದಳ ದಲ್ಲಿ ಇದ್ದರು ಕೂಡ ಜನತಾ ಪಕ್ಷದ ಜೊತೆಗೆ ಅಲಯನ್ಸ್ ಮಾಡಿಕೊಂಡು ಟೀಕಿಟ್ ಕೊಡೋದು ಒಪ್ಪಂದವಾಯಿತು ಆದರೆ ಒಪ್ಪಂದದ ಥರ ಏನು ನಡಿಲಿಲ್ಲ (B ಫಾರಂ ಕೊಡಲಿಲ್ಲ), B ಫಾರಂ ಕೊಡದೆ ಇರೋದರಿಂದ ಇಂಡಿಪೆಂಡಾಂತ್ ಅಭ್ಯರ್ಥಿಯಾಗಿ (Independent Candidate) ಘೋಷಣೆ ಮಾಡಿದ್ದರು ಆಗ ಅವರಿಗೆ ತಕಡಿ ಸಿಂಬಲ್ ಸಿಕ್ಕಿತು ಬಳಿಕ ಮೈಸೂರು ಎಸ್ಸೆಂಬಲಿ (Mysore Assembly )ಇಲೆಕ್ಷನ್ ಗೆದ್ದರು..
ಮೈಸೂರು ಎಸ್ಸೆಂಬಲಿ (Mysore Assembly ) ಗೆಲ್ಲುವ ಮೊದಲೇ ರೈತಸಂಘದಲ್ಲಿ ಉನ್ನತ ಸ್ಥಾನದಲ್ಲಿದ್ದ ಸಿದ್ದರಾಮಯ್ಯ.
ಮೈಸೂರು ಎಸ್ಸೆಂಬಲಿ (Mysore Assembly Election) ಚುನಾವಣೆ ಗೆಲ್ಲುವ ಮೊದಲೇ, ಅಂದರೆ ಲೋಕಸಭಾ ಚುನಾವಣೆ (Loksabha Election) ಸೋತಮೇಲೆ 1980 ನಲ್ಲಿ ರೈತ ಸಂಘದಲ್ಲೂ ತನ್ನನ್ನ ತಾನು ತೊಡಗಿಸಿಕೊಂದಿದ್ದರು ಅದರಲ್ಲಿ ಮೈಸೂರು ಜಿಲ್ಲಾ ರೈತ ಸಂಘದ ಜನರಲ್ ಸೆಕ್ರೆಟರಿ ಆಗಿದ್ದರು ಅಲ್ಲಿ ಕೂಡ ತುಂಬಾನೇ ಕೆಲಸ ಮಾಡಿದ್ದರು. ಅನೇಕ ಪ್ರತಿಭಟನೆ ಚಳವಳಿ ಮಾಡುತಿದ್ದರು ವರುಣ ನಾಲೇ ಇಂಪ್ಲಿಮೆಂಟೇನ್ಷನ್ ಗೋಸ್ಕರ ಸುಮಾರು 30 ದಿವಸ ಸ್ಟ್ರೈಕ್ ಮಾಡಿದ್ದರು ಇವೆಲ್ಲ ಘಟನೆ ಗಳು 1983 ರ ಅಸ್ಸೆಂಬಲಿ ಚುನಾವಣೆಗೆ ಸಹಾಯಕವಾಯಿತು.
ಅಸ್ಸೆಂಬಲಿ ಎಲೆಕ್ಷನ್ ನಾಮಿನೇಷನ್ (Assembly Election nomination) ಹಾಕಲಿಕ್ಕೂ ದುಡ್ಡು ಇರಲಿಲ್ಲ .
ಅಸ್ಸೆಂಬಲಿ ಚುನಾವಣೆ ಗೆಲ್ಲೋಕು ಮುಂಚೆ ನಾಮಿನೇಷನ್ ಹಾಕೊಕ್ಕು ಸಿದ್ದು ಹತ್ತಿರ ದುಡ್ಡು ಇರಲಿಲ್ಲ ಅವರು ಕೆಲಸ ಮಾಡುತಿದ್ದ ಆಫೀಸ್ ನಲ್ಲಿ ಕ್ಲರ್ಕ್ ಹತ್ತಿರ 500 ರೂಪಾಯಿ ದುಡ್ಡು ಸಾಲ ತೊಗೊಂಡು ನಾಮಿನೇಷನ್ ಹಾಕಿದ್ದು (ಡಿಪಾಸಿಟ್ ದುಡ್ಡು ಕಟ್ಟಿದು).
ಪ್ರಚಾರ ಮಾಡಲಿಕ್ಕೆ ದುಡ್ಡು ಇರಲಿಲ್ಲ ಆಗ, ಪ್ರಚಾರಕ್ಕಾಗಿ ಜನಗಳಿಂದನೆ ದುಡ್ಡು ಕಲೆಕ್ಟ್ ಮಾಡಿದ್ದರು, ಸುಮಾರು 63000 ಸಾವಿರ ರೂಪಾಯಿ ಗಳು ಜನರಿಂದನೆ ಕಲೆಕ್ಟ್ ಆಯಿತು. ಆ ದುಡ್ಡಲ್ಲೇ 2 ಕಾರು ಮಾಡಿಕೊಂಡು ಪ್ರಚಾರ ಮಾಡಿದ್ದು, ಮೈಸೂರಿನ ಜನ ಸಿದ್ದು ಗೆ ಗೆಲ್ಲಿಸಿ ತಂದರು.
ಕೋರ್ ಸಭೆ ಅಧ್ಯಕ್ಷ ಆಗಿ ಮಂತ್ರಿಯೂ ಆದರೂ ಸಿದ್ದು
ಒಂದು ಸಲ ರಾಮಕೃಷ್ಣ ಹೆಗಡೆ ಸಿದ್ದು ಗೆ ಕರೆದು ನೀನು ಕೋರ್ ಸಭೆ ಅಧ್ಯಕ್ಷ ಆಗು ಅಂತ ಹೇಳಿ ಕೋರ್ ಸಭೆ ಅಧ್ಯಕ್ಷನಾಗಿಯೂ ಮಾಡಿದರು ಒಂದು ವರ್ಷದ ಬಳಿಕ ಸಿದ್ದರಾಮಯ್ಯ ಮಂತ್ರಿ ಕೂಡ ಆದರೂ ಅವರಿಗೆ ರೇಷ್ಮೆ ಇಲಾಖೆ ಬಂದಿತ್ತು .
ಲೋಕಸಭಾ ಚುನಾವಣೆಗೆ ಸೋಲುಂಡ ಸಿದ್ದು ಇದ್ದ ಪಾರ್ಟಿ.
ಮತ್ತೆ ಕೆಲವು ದಿನಗಳ ನಂತರ ಲೋಕಸಭಾ ಇಲೆಕ್ಷನ್ ಬಂತು ಲೋಕಸಭಾ ಚುನಾವಣೆಯಲ್ಲಿ ಸಿದ್ದು ಇದ್ದ ಜನತಾ ಪಾರ್ಟಿ ಸೋತು ಹೋಯಿತು,
ಮತ್ತೆ ಒಂದಾದ ನಾಯಕರು
1999 ನಲ್ಲಿ ಜನತಾ ದಳ ಮತ್ತೆ ಎರೆಡು ಭಾಗವಾಯಿತು ಕೆಲವೊಂದು ನಾಯಕರು ಸೇರಿ JDU ಮಾಡಿದ್ದರು JDU ಮಾಡಿಕೊಂಡು BJP ಜೊತೆ ಅಲಯನ್ಸ್ ಮಾಡಿದ್ರು ಆದರೆ ಇದಕ್ಕೆ ಸಿದ್ದು ವಿರೋಧವಿತ್ತು .
ಅದಕ್ಕೆ ದೇವೇ ಗೌಡ ಇಬ್ರಾಹಿಂ, ಮಹದೇವಪ್ಪ , ಲಕ್ಷ್ಮಿ ಸಾಗರ್ , ಸತೀಶ್ ಜಾರಕಿಹೊಳೆ ಮತ್ತು ಸಿದ್ಧರಾಮಯ್ಯ ಇಷ್ಟೇ ಜನ ರಾಜ್ಯದಲ್ಲಿ ಪ್ರಮುಖವಾಗಿ ಉಳ್ಕೊಂಡಿದರು ..
1999 ರಲ್ಲಿ ಮತ್ತೆ ಎಲೆಕ್ಷನ್ ಬಂತು ಆಗ ಜೆಡಿಎಸ್ ಬರಿ 10 ಸ್ಥಾನಗಳು ಅಷ್ಟೇ ಗೆಲ್ಲಿತ್ತು ಆಗ ಕಾಂಗ್ರೆಸ್ ಪಾರ್ಟಿ ಅಧಿಕಾರಕ್ಕೆ ಬಂತು ಎಸ್ಎಂ. ಕೃಷ್ಣ (SM Krishna)ರಾಜ್ಯದ ಮುಖ್ಯಮಂತ್ರಿಯಾದರು.
ಬಲಿಷ್ಠವಾಯಿತು JDS
2004 ರಲ್ಲಿ ಕೊಂಚ ಮಟ್ಟದಲ್ಲಿ ಬಲಿಷ್ಠವಾಗಿತ್ತು JDS ಆಗ JDS 58 ಸೀಟ್ ಬಂತು ಆಗ ಕುಮಾರಸ್ವಾಮಿ ರಾಜಕೀಯದಲ್ಲಿ ಇವತ್ತಿನಷ್ಟು ಆಕ್ಟಿವ್ ಇರಲಿಲ್ಲ ಸಿದ್ದು ಮತ್ತು ದೇವೇಗೌಡರ ಜೊತೆ ಪ್ರಚಾರಕ್ಕಾಗಿ ಇರುತ್ತಿರಲಿಲ್ಲ jdu ಪಕ್ಷ ಬಿಟ್ಟು ಹೋದ ಕೆಲವು ನಾಯಕರು ಜೆಡಿಎಸ್ ಪಕ್ಷ ಸೇರಿದರು..
ಎರೆಡು ಬಾರಿ ಕೈ ತಪ್ಪಿದ ಸಿ ಎಂ ಸ್ಥಾನ
ಕಾಂಗ್ರೆಸ್ (Congress) ಜೊತೆ ಕೋ ಎಲೆಕ್ಷನ್ ಗವರ್ನ್ಮೆಂಟ್ (Co election Government) ಆಯಿತು ಆಗ ಕೆಲವೊಬ್ಬರ ಕಾರಣದಿಂದ 1996 ಮತ್ತು 2004 ರಲ್ಲಿ ಸಿದ್ದರಾಮಯ್ಯ (Siddaramaiah) ಗೆ ಎರೆಡು ಬಾರಿ ಚೀಫ್ ಮಿನಿಸ್ಟರ್ (Chief Minister) ಸ್ಥಾನ ತಪ್ಪಿ ಹೋಯಿತು ಅವಾಗ ಸಮಿಶ್ರ ಸರ್ಕಾರದಲ್ಲಿ ಧಾರಾಂಸಿಂಗ್ ರವರು ಮುಖ್ಯಮಂತ್ರಿ (Chief Minister) ಆದರೂ ಆಗ ಸಿದ್ದು ಗೆ ಉಪಮುಖ್ಯಮತ್ರಿ ಸ್ಥಾನ ಸಿಕ್ಕಿತ್ತು …
ಉಪಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಪಕ್ಷದಿಂದಾನೆ ಉಚ್ಚಾಟನೆ ಮಾಡಿದ ದೇವೆ ಗೌಡರು
ಸಿದ್ದು , ಮತ್ತು ದ್ವಾರಕಾನಾಥ್ ರವರು ಅಹಿಂದ ಸಂಘಟನೆ ಮಾಡಿದರು ಅದನ್ನ ಸಿದ್ದು ಉಧ್ಘಟನೆ ಮಾಡಿದರು ನಂತರ ಕಾಲ ಕಳೆದಂತೆ ಅಹಿಂದ ಸಂಘ ಅಷ್ಟೊಂದು ಆಕ್ಟಿವ್ ಆಗಿ ಉಳಿದಿರಲಿಲ್ಲ ಅದನ್ನ ಮತ್ತೆ ಆಕ್ಟಿವ್ ಆಗಿ ಮಾಡಬೇಕು ಅಂತ ಹುಬ್ಬಳ್ಳಿಯಲ್ಲಿ ಸಮ್ಮೇಳನ ಮಾಡಬೇಕು ಅಂತ ತೀರ್ಮಾನಿಸಿದ್ದರು. ತೀರ್ಮಾನದ 4-5 ದಿನದ ನಂತರ ದೇವೇಗೌಡರು ಈ ಕಾರ್ಯಕ್ರಮವನ್ನ ನಿಲ್ಲಿಸಿ ಮಾಡಬೇಡಿ ನನಗೆ ವಿರುದ್ಧವಾಗಿರವವರು ಆ ಕಾರ್ಯಕ್ರಮಕ್ಕೆ ಬರುತ್ತಿದ್ದರೆ ಎಂದು ಸಿದ್ದು ಗೆ ಆದೇಶಿಸಿದರು. ಆದಕ್ಕೆ ನೀವು ಸಹ ಬನ್ನಿ ನೀವು ಕಾರ್ಯಕ್ರಮವನ್ನ ಉದ್ಘಾಟಿಸಿ ಎಂದು ಸಿದ್ದರಾಮಯ್ಯ ಹೇಳಿದರು ಅದಕೆ ದೇವೇಗೌಡರು ಈ ಕಾರ್ಯಕ್ರಮವನ್ನ ಮುದುಕೇ ಹಾಕಿ ಎಂದು ಹೇಳಿದರು ಕಾರ್ಯಕ್ರಮ ರದ್ದು ಮಾಡದಿದ್ದರೆ ನಿಮ್ಮ ಉಪಮುಖ್ಯಮಂತ್ರಿ ಸ್ಥಾನ ಹೋಗತ್ತೆ ಎಂದು ಹೇಳಿದರು ದೇವೇಗೌಡರ ಮಾತು ಸಿದ್ಧರಾಮಯ್ಯ ಕೇಳದಿದ್ದಾಗ ಅವರನ್ನ ಉಪಮುಖ್ಯಮಂತ್ರಿ ಸ್ಥಾನದಿಂದ ಡಿಸ್ಮಿಸ್ ಮಾಡಿಬಿಟ್ಟರು ಆಮೇಲೆ ಪಕ್ಷದಿಂದ ಉಚ್ಚಾಟನೆ ಮಾಡಿಬಿಟ್ಟರು.
ಹಾಗಾಗಿ ಅಹಿಂದ ಜೊತೆಗೆ APJD ಅಂತ ಒಂದು ಪಾರ್ಟಿ ಮಾಡಿದರು ಜಿಲ್ಲಾ ಪಂಚಾಯತಿ ತಾಲೂಕ ಪಂಚಾಯತಿ ಚುನಾವಣೆಯಲ್ಲಿ ಅಭ್ಯರ್ತಿನಿಲ್ಲಿಸಿದ್ದರು ಆಗ ರೀಜಲ್ಟ್ ವಿಫಲವಾಯಿತು.
ಸೋನಿಯಾ ಗಾಂಧಿಯಿಂದ ಬಂತು ಕರೆ
ಅಸ್ಟೊತ್ತಿಗೆ BJP ಪಕ್ಷ ಕರ್ನಾಟಕದಲ್ಲಿ ಬೆಳೀಲಿಕ್ಕೆ ಪ್ರಾರಂಭವಾಯಿತು ಅದಕ್ಕೆ ಕೋಮವಾದಿ ಪಕ್ಷ ಬೆಳೀತಿದೆ ಅನಿಸೋಕ್ಕೆ ಶುರುವಾಯಿತು, ಸಿದ್ದು ಗೆ ಸೋನಿಯಾಗಾಂಧಿ ಕಡೆಯಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಕ್ಕೆ ಆವ್ಹಾನ ಬಂತು ಆಗ ಸಿದ್ಧರಾಮಾಯ್ಯ ಜೊತೆಯಿದ್ದ ನಾಯಕ್ರೊಂದಿಗೆ ಚರ್ಚೆ ನೆಡಿಸಿ ಒಂದು ತೀರ್ಮಾನಕ್ಕೆ ಬಂದರು ಬಳಿಕ ಎಲ್ಲರ ಒಪ್ಪಿಗೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರೂ ..
ಆಗಲೇ ಸಿದ್ದು ವಿರುದ್ಧ ಒಂದಾದ ಎಲ್ಲ ನಾಯಕರು
ಅವಾಗ ಬೈ ಇಲೆಕ್ಷನ್ ನಲ್ಲಿ ಯೆಡಿಯೂರಪ್ಪ ಮತ್ತು ಜೆಡಿಎಸ್ ಇಬ್ಬರು ಸಹ ಇವರೆಲ್ಲರೂ ಸಿದ್ದು ವಿರುದ್ಧ ಒಂದಾದರೂ. ಸಿದ್ದು ವಿರುದ್ಧ ಏನೆ ಸಂಚು ಮಾಡಿದರು ಸಹ ಚಾಮುಂಡೇಶ್ವರಿ ಕ್ಷೇತ್ರದ ಜನ ಸಿದ್ಧರಾಮಯ್ಯರ ಕೈಹಿಡಿದರು.
ಕೊನೆಗೂ ಮುಖ್ಯಮಂತ್ರಿಯಾದ ಸಿದ್ಧರಾಮಯ್ಯ, 22 ನೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಮಾಡಿದ್ದ ಸಿದ್ದು.
May 2013 ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆದರೂ 5 ವರ್ಷ ಯಾವದೇ ಆರೋಪವಿಲ್ಲದಂತೆ ಸರ್ಕಾರವನ್ನು ಚಲಾಯಿಸಿದರು,
2018 ರ ವಿಧಾನಸಭಾ ಚುನಾವಣೆ ಯಲ್ಲಿ (VidhanSabha Election) ಸೋಲುಂಡ ಕಾಂಗ್ರೆಸ್ ಪಕ್ಷ.
2018 ರ ಚುನಾವಣೆಯಲ್ಲಿ ಕೊಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿಲ್ಲ ಆಗ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ಮಾಡಿದರು ಆಗ ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಮಾಡಬೇಕಾಯಿತು. ಒಂದು ವರ್ಷದ ಬಳಿಕ ಮೈತ್ರಿ ಸರ್ಕಾರದ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಆವಾಗ ಮೈತ್ರಿ ಸರ್ಕಾರ ಬಹುಮತವಿಲ್ಲದೆ ಪತನವಾಯಿತು.
ಡಿಸೇಂಬರ್ 2019 ರಲ್ಲಿ ಉಪಚುನಾವಣೆ ನಡೆತು ಆಗ ಕಾಂಗ್ರೆಸ್ (Congress) 15 ಸ್ಥಾನದ ಪೈಕಿ ಕೇವಲ 2 ಸ್ಥಾನಗಳು ಅಷ್ಟೇ ಕಾಂಗ್ರೆಸ್ ಪಾಲಾಯಿತು ಬಿಜೆಪಿ ಗೆ 12 ಸ್ಥಾನ ಗೆದ್ದರೆ ಇತರರಿಗೆ 1 ಬಂದವು ಹಾಗಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಸಂಪೂರ್ಣವಾಗಿ ಪತನವಾಯಿತು, ಆಮೇಲೆ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ..