ಸರಕಾರಿ ಯೋಜನೆ 2023- ರೈತರೇ ಚಿಂತಿಸಬೇಡಿ ನಿಮಗೆ ಬಡ್ಡಿ ಇಲ್ಲದ ಸಾಲ ಸಿಗುತ್ತದೆ : ಏಪ್ರಿಲ್ 1ರಿಂದ ಸರಕಾರಿ ಯೋಜನೆ ಜಾರಿ

government Scheme for farmers

ಸರಕಾರಿ ಯೋಜನೆ 2023ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುವ ಸೌಲಭ್ಯ: ಏಪ್ರಿಲ್ 1ರಿಂದ ಯೋಜನೆ ಜಾರಿ – Loan facility to farmers at zero interest rate: Scheme implementation from April 1

ಸರಕಾರಿ ಯೋಜನೆ 2023 – ಅನ್ನದಾತ ರೈತರಿಗೆ ಇಲ್ಲಿದೆ ಶುಭ ಸುದ್ದಿ. ಅದೇನೆಂದರೆ ಸಂಕಷ್ಟದಲ್ಲಿರುವ ರೈತರಿಗೆ ನಮ್ಮ ರಾಜ್ಯ ಸರ್ಕಾರ ನೂತನ ಯೋಜನೆಯೊಂದನ್ನು ಘೋಷಿಸಿದೆ. ಅದುವೇ ಶೂನ್ಯ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡುವ ಯೋಜನೆ. ಈ ಯೋಜನೆ ಏಪ್ರಿಲ್ 01 ರಿಂದ ಆರಂಭವಾಗಲಿದ್ದು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದ ವರೆಗೆ ಸಾಲ ನೀಡುವ ಯೋಜನೆ ಇದಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸೋಮಶೇಖರ್ 5 ಲಕ್ಷದ ವರೆಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡುವ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿತ್ತು, ಸದ್ಯ ರಾಜ್ಯಪಾಲರ ಅನುಮತಿ ದೊರೆಯಲಿದ್ದು, ಏಪ್ರಿಲ್ 01 ರಿಂದ ಅನ್ವಯವಾಗುವಂತೆ ಯೋಜನೆ ಜಾರಿಯಾಗಲಿದೆ. ಸಧ್ಯ ರೈತರಿಗೆ ಡಿಸಿಸಿ ಬ್ಯಾಂಕಿನಿಂದ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿ ವರೆಗೆ ಸಾಲ ನೀಡುತ್ತಿದ್ದು, ಇದೀಗ ಈ ಸಾಲ ಮಿತಿಯನ್ನು 2023-2024 ನೇ ಸಾಲಿನ ಬಜೆಟ್ ನಲ್ಲಿ 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಯೋಜನೆ ಇದೇ ಏಪ್ರಿಲ್ 01 ರಿಂದ ಯೋಜನೆ ಜಾರಿಯಾಗಲಿದೆ.

ಈ ಯೋಜನೆಯಿಂದ ಸುಮಾರು 33 ಲಕ್ಷ ರೈತರಿಗೆ ಅನುಕೂಲವಾಗಲಿದೆ. ರಾಜ್ಯದ ರೈತರಿಗೆ ಸರ್ಕಾರವು 3 ಶೇಕಡಾದಷ್ಟು ಬಡ್ಡಿದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಾದಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳನ್ನು ವಿತರಿಸುವ ಯೋಜನೆಗಳನ್ನು 2004ರಲ್ಲಿ ಅನುಷ್ಠಾನಗೊಳಿಸಿತ್ತು. ಈ ಯೋಜನೆಯಿಂದ ರಾಜ್ಯದ ಸುಮಾರು 33ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರು ಘೋಷಿಸಿದರು. 2012-2013 ನೇ ಸಾಲಿನಲ್ಲಿ 1 ಲಕ್ಷ ರೂಪಾಯಿವರೆಗಿನ ಅಲ್ಪಾವಧಿ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿತ್ತು. ಈದೀಗ ಈ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಿ ಇದೇ ಏಪ್ರಿಲ್ 1ರಿಂದ ಹೊಸ ಮಿತಿಯ ಶೂನ್ಯ ಬಡ್ಡಿ ಸಾಲ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಸರಕಾರಿ ಯೋಜನೆ 2023

ಯಾವ ಬ್ಯಾಂಕ್ ಇಂದ ಸಿಗಲಿದೆ ಸಾಲ ?

Government Scheme 2023 – ಹಾಗಾದರೆ ಈ ಯೋಜನೆಯ ಸಾಲ ಯಾವ ಬ್ಯಾಂಕುಗಳಿಂದ ಸಿಗಲಿದೆ ಎಂದು ನೋಡುವುದಾದರೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಬ್ಯಾಂಕ್ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಗಳಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುವುದು.

ಸಾಲ ಯೋಜನೆಗೆ ಯಾರೆಲ್ಲ ಅರ್ಹರು

ಈ ಸಾಲ ಯೋಜನೆಗೆ ಯಾರೆಲ್ಲ ಅರ್ಹರು ಎಂದರೆ, ಕೃಷಿ ಪತ್ತಿನ ಸಹಕಾರ ಸಂಘದಿಂದ ಎಲ್ಲ ರೈತರಿಗೆ ಸಾಲ ಸೌಲಭ್ಯ ಸಿಗುವುದಿಲ್ಲ. ಸಹಕಾರ ಕೇಂದ್ರ ಬ್ಯಾಂಕ್ ಗಳಲ್ಲಿ ಸದಸ್ಯತ್ವ ಹೊಂದಿದ್ದರೆ ಮಾತ್ರ ಅವರಿಗೆ ಬ್ಯಾಂಕುಗಳಿಂದ ಸಾಲ ಸೌಲಭ್ಯ ಸಿಗಲಿದೆ. ಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆಯಬೇಕಾದರೆ, ರೈತ ಬಾಂಧವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗಳಲ್ಲಿ ಸದಸ್ಯತ್ವ ಹೊಂದಿರಲೇಬೇಕು. ಸಾಲ ಪಡೆಯಲು ಬೇಕಾದ ದಾಖಲೆಗಳು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್,ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಅತ್ಯಗತ್ಯ.

ಇದನ್ನು ಓದಿ… Holi Festival 2023 ! ಹೋಳಿ ಹಬ್ಬ ಆಚರಣೆ ಮಾಡಲು ಕಾರಣವೇನು..? ಹೋಳಿ ಹಬ್ಬದ ಇತಿಹಾಸವೇನು..? What Is the Reason For Celebrating Holi? What is the history of Holi?

Arun Kumar: