Saturday, February 24, 2024
Homeತಾಜಾ ಸುದ್ದಿ'Daali Dhananjaya ' ಹೆಡ್ ಬುಷ್' ಅಡ್ಡಕ್ಕೆ ಎಂಟ್ರಿ ಕೊಟ್ಟ ರವಿಚಂದ್ರನ್‌! ಇಲ್ಲಿ 'ಕ್ರೇಜಿ ಸ್ಟಾರ್'...

‘Daali Dhananjaya ‘ ಹೆಡ್ ಬುಷ್’ ಅಡ್ಡಕ್ಕೆ ಎಂಟ್ರಿ ಕೊಟ್ಟ ರವಿಚಂದ್ರನ್‌! ಇಲ್ಲಿ ‘ಕ್ರೇಜಿ ಸ್ಟಾರ್’ ಪಾತ್ರವೇನು?

‘Daali Dhananjaya’ ಹೆಡ್ ಬುಷ್’ ಅಡ್ಡಕ್ಕೆ ಎಂಟ್ರಿ ಕೊಟ್ಟ ರವಿಚಂದ್ರನ್‌! ಇಲ್ಲಿ ‘ಕ್ರೇಜಿ ಸ್ಟಾರ್’ ಪಾತ್ರವೇನು?

ಡಾಲಿ’ ಧನಂಜಯ Daali Dhananjaya ನಟಿಸಿ, ನಿರ್ಮಿಸುತ್ತಿರುವ ‘ಹೆಡ್‌ ಬುಷ್‌‘ ಸಿನಿಮಾದಲ್ಲಿ ಕಲಾವಿದರ ಸಂಖ್ಯೆ ಹೆಚ್ಚಾಗುತ್ತಿದೆ. ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ಪಾಯಲ್ ರಜಪೂತ್, ಶ್ರುತಿ ಹರಿಹರನ್, ರಘು ಮುಖರ್ಜಿ ಇದೀಗ ಕ್ರೇಜಿ ಸ್ಟಾರ್‌ ರವಿಚಂದ್ರನ್ ‘ಹೆಡ್‌ ಬುಷ್‌’ ಚಿತ್ರ ತಂಡಕ್ಕೆ ಸೇರಿಕೊಂಡಿದ್ದಾರೆ.

ಕ್ರೇಜಿ ಸ್ಟಾರ್‌’ ರವಿಚಂದ್ರನ್ ಇತ್ತೀಚಿನ ದಿನಗಳಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ . ಕೆಲ ದಿನಗಳ ಹಿಂದೆಯಷ್ಟೇ ‘ದೃಶ್ಯ 2’ ಸಿನಿಮಾದ ಚಿತ್ರೀಕರಣ ಮುಗಿಸಿದದರು , ಈಗ ಡಾಲಿ ಧನಂಜಯ ನಾಯಕರಾಗಿರುವ ‘ಹೆಡ್‌ ಬುಷ್‌’ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಶೂನ್ಯ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡುತಿದ್ದಾರೆ ‘ಹೆಡ್‌ ಬುಷ್‌’ ಸಿನಿಮಾದಲ್ಲಿ ಈಗಾಗಲೇ ಲೂಸ್‌ ಮಾದ ಯೋಗಿ, ರಘು ಮುಖರ್ಜಿ, ಪಾಯಲ್‌ ರಜಪೂತ್‌, ಶ್ರುತಿ ಹರಿಹರನ್‌ ನಟಿಸುತ್ತಿದ್ದಾರೆ. ಇದೀಗ ಇವರ ಜತೆ ರವಿಚಂದ್ರನ್‌ ಸಹ ಸೇರಿಕೊಂಡಿರುವುದರಿಂದ ಇದೊಂದು ಬಹು ತಾರಾಗಣದ ಸಿನಿಮಾ ಇದಾಗಲಿದೆ .

‘ಹೆಡ್‌ ಬುಷ್‌’ ಚಿತ್ರ ಬೆಂಗಳೂರಿನ ಭೂಗತ ಜಗತ್ತನ್ನು ಆಳಿದ ಜಯರಾಜ್‌ನ ಬಯೋಪಿಕ್‌ ಆಗಿದೆ. ಈ ಸಿನಿಮಾದಲ್ಲಿ ರವಿಚಂದ್ರನ್‌ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುವ ಕುತೂಹಲ ಎಲ್ಲರಿಗೂ ಇರುತ್ತದೆ. ಅದಕ್ಕುತ್ತರ ಇಲ್ಲಿದೆ. ರವಿಚಂದ್ರನ್ ಇಲ್ಲಿ ಪ್ರೋಫೆಸರ್ ಪಾತ್ರ ಮಾಡಲಿದ್ದಾರೇ ಎಂಬುವ ಮಾಹಿತಿ ಮೂಲಗಳಿಂದ ತಿಳಿದಿದೆ . ಚಿತ್ರದ ಕಥೆಗೂ ರವಿಚಂದ್ರನ್ ಈ ಪಾತ್ರಕ್ಕೂ ಏನು ಸಂಬಂಧ ಅನ್ನೋದನ್ನು ತೆರೆಮೇಲೆ ನೋಡಬೇಕು. ಸದ್ಯ ನೆಲಮಂಗಲ ಬಳಿಯ ಮೋಹನ್‌ ಬಿ. ಕೆರೆ ಸ್ಟುಡಿಯೋದಲ್ಲಿ ಹೆಡ್ ಬುಷ್ ಸೆಟ್‌ ಹಾಕಿದ್ದು, ಅಲ್ಲಿ ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದೆ. ರವಿಚಂದ್ರನ್‌ ಅವರು ಯಾವಾಗ ಚಿತ್ರೀಕರಣಕ್ಕೆ ಬರುತ್ತಾರೆ ಎಂಬ ಮಾಹಿತಿಯನ್ನೂ ಚಿತ್ರತಂಡ ಇನ್ನೂ ನೀಡಿಲ್ಲ.

ಬೆಂಗಳೂರಿನ ಮೊದಲ ಅಂಡರ್‌ವರ್ಲ್ಡ್‌ ಡಾನ್ ಅಗಿರುವಂತಹ ಎಂ.ಪಿ. ಜಯರಾಜ್ ಬಯೋಪಿಕ್ ಆಗಿರುವ ಈ ಸಿನಿಮಾದ ಮೇಲೆ ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಕೊಂಡಿದೆ. ಈ ಚಿತ್ರಕ್ಕೆ ಸ್ಕ್ರಿಪ್ಟ್ ಬರೆಯುತ್ತಿರುವುದು ಅಗ್ನಿ ಶ್ರೀಧರ್ ಅನ್ನೋದು ವಿಶೇಷ. ‘ಹೆಡ್‌ ಬುಷ್‌’ ಸಿನಿಮಾವು ಪಾತ್ರವರ್ಗದಿಂದಲೇ ಸಾಕಷ್ಟು ಗಮನಸೆಳೆಯುತ್ತಿರುವುದು ವಿಶೇಷ. ಇನ್ನು, ಇತ್ತಿಚೆಗಷ್ಟೇ ಹೆಡ್ ಬುಷ್ ತಂಡ ಸೇರಿಕೊಂಡಿದ್ದ ಶ್ರುತಿ ಹರಿಹರನ್, ‘ಕೆಲವು ದಿನಗಳ ಹಿಂದೆ ಧನಂಜಯ ಕರೆ ಮಾಡಿ ಜಯರಾಜ್‌ ಬಗ್ಗೆ ಸಿನಿಮಾ ಮಾಡುತ್ತಿದ್ದೇವೆ ಕಥೆ ಕೇಳಿ ನೋಡಿ ಎಂದಿದ್ದರು. ಆಮೇಲೆ ಅಗ್ನಿ ಶ್ರೀಧರ್‌ ಅವರು ಕಥೆ ವಿವರಿಸಿದರು. ಅಗ್ನಿ ಶ್ರೀಧರ್‌ ಅವರ ‘ಆ ದಿನಗಳು’, ‘ಎದೆಗಾರಿಕೆ’ ಸಿನಿಮಾಗಳನ್ನು ನೋಡಿ ನಾನು ಅವರ ಫ್ಯಾನ್‌ ಆಗಿದ್ದೆ. ಈಗ ಅವರೇ ನನಗೆ ಕಥೆ ವಿವರಿಸಿದಾಗ ಖುಷಿಯಾಯಿತು. ಅವರ ಕಥೆಯಲ್ಲಿ ನನಗೊಂದು ಪಾತ್ರವಿರುವುದು ನನ್ನ ಸಂತೋಷವನ್ನು ಹೆಚ್ಚಿಸಿತು’ ಎಂದಿದ್ದರು ಶ್ರುತಿ ಹರಿ ಹರನ್ .

ಇನ್ನು, ರವಿಚಂದ್ರನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು . ‘ಕನ್ನಡಿಗ’, ‘ರವಿ ಬೋಪಣ್ಣ’ ಶೂಟಿಂಗ್ ಮುಗಿಸಿಕೊಂಡು ರಿಲೀಸ್‌ಗೆ ರೆಡಿ ಆಗಿವೆ. ‘ಕನ್ನಡಿಗ’ ಸಿನಿಮಾದಲ್ಲಿ ಕನ್ನಡದ ಲಿಪಿಕಾರ ಗುಣಭದ್ರ ಹಾಗೂ ಸಾಮಂತಭದ್ರ ಎಂಬ ಯೋಧನ ಪಾತ್ರಗಳಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ಕ್ರೇಜಿ ಸ್ಟಾರ್ ಕಳೆದ ಮೇ 30 ರಂದು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಮೂರು ಹೊಸ ಸಿನಿಮಾಗಳ ಮಾಹಿತಿ ಇದ್ದ ಟೀಸರ್ ರಿಲೀಸ್ ಮಾಡಿದ್ದರು ರವಿಚಂದ್ರನ್. ಒಂದು ಸಿನಿಮಾಕ್ಕೆ ‘ಗಾಡ್’ ಎಂದು ಹೆಸರಿಡಲಾಗಿದ್ದು, ಮತ್ತೊಂದು ’60’. ವಿಶೇಷವೆಂದರೆ, ಅದರಲ್ಲಿ ನಟಿ ಪಾವನಾ ಗೌಡ ಸಹ ಕಾಣಿಸಿಕೊಂಡಿದ್ದಾರೆ. ಮತ್ತು ಕೊನೆಯದು ‘ಬ್ಯಾಡ್‌ ಬಾಯ್ಸ್’. ಇದರಲ್ಲಿ ರವಿಚಂದ್ರನ್ ಅವರೊಂದಿಗೆ ಅವರ ಪುತ್ರರಾದ ಮನೋರಂಜನ್ ಮತ್ತು ವಿಕ್ರಮ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಮೂರೂ ಸಿನಿಮಾಗಳ ಕೆಲಸಗಳ ಅಪ್‌ಡೇಟ್ ಇನ್ನಷ್ಟೇ ಬಾರಬೇಕಿದೆ .

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments