Saturday, December 14, 2024
HomeHOMECoronavirus Vaccine : ಈ ಸಮಸ್ಯೆ ಇರುವ ಜನರು / ವ್ಯಕ್ತಿಗಳು ತುಂಬಾ ಯೋಚನೆ ಮಾಡಿ...

Coronavirus Vaccine : ಈ ಸಮಸ್ಯೆ ಇರುವ ಜನರು / ವ್ಯಕ್ತಿಗಳು ತುಂಬಾ ಯೋಚನೆ ಮಾಡಿ ಕೊರೊನ ಲಸಿಕೆ (Corona Vaccine) ಹಾಕಿಸಬೇಕು.

ಜಗತ್ತಿನಾದ್ಯಂತ ಕೊರೊನ ಸೋಂಕಿತರು ಇದೀಗ ಸಣ್ಣ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದಾರೆ. ಇನ್ನೊಂದೆಡೆ ಕೆಲವು ದೇಶಗಳು ತಮ್ಮ ಪ್ರಜೆಗಳಿಗೆ ಕೊರೊನ ಲಸಿಕೆಯನ್ನು (Coronavirus Vaccine) ಕೊಡುವ ಪ್ರಕ್ರಿಯೆ ಶುರುಮಾಡಿದೆ.

ಪ್ರಯೋಗದಲ್ಲಿ ಯಶಸ್ವಿಯಾಗಿವೆ ಈ ಲಸಿಕೆಗಳು ?

ಫೈಜರ್​-ಬಯೋಎಂಟೆಕ್, ಮಾಡರ್ನಾ, ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ, (Pfizer-Biontech, Moderna, Oxford-AstraZeneca) ಈ ಥರದ ಲಸಿಕೆಗಳು ಪ್ರಯೋಗದಲ್ಲಿ ಯಶಸ್ವಿಯಾಗಿದೆ, ಈ ಲಸಿಕೆ ಗಳು ಯಶಸ್ವಿಯಾದರು ಸಹ ಇದರ ಸ್ವಲ್ಪ ಮಟ್ಟಿಗೆ ಅಡ್ಡ ಪರಿಣಾಮಗಳು ಕಂಡು ಬಂದಿದೆ, ಹಾಗಾಗಿ ಭಯ ಪಡುವ ಅವಶ್ಯಕತೆಯಿಲ್ಲ. ಭಾರತದಲ್ಲಿಯೂ ಕ್ಯಾವಿಶಿಲ್ಡ್ (Covishield)ಮತ್ತು ಕೋವ್ಯಾಕ್ಸಿನ್ (Covaxin) ಪ್ರಯೋಗಗಳಲ್ಲಿ ಉತ್ತಮ ರಿಸಲ್ಟ್ ನೀಡಿದ ನಂತರ ತುರ್ತು ಬಳಿಕೆಗಾಗಿ ಅನುಮತಿಯನ್ನು ನೀಡಲಾಗಿದೆ.

ಅಂದಹಾಗೆ, ಕರೋನ ವೈರಸ್‌ನ ಲಸಿಕೆ ಹೆಚ್ಚಿನ ಜನಸಂಖ್ಯೆಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ, ಆದರೂ ಸಹ ಕೆಲವು ಜನರಿಗೆ ಲಸಿಕೆಯನ್ನು ಯೋಚನೆ ಮಾಡಿ ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತಿದೆ.

ಯಾವ ಥರದ ವ್ಯಕ್ತಿಗಳು ಕೊರೊನ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮುನ್ನ ಡಾಕ್ಟರ್ ಸಲಹೆ ಪಡೆದುಕೊಳ್ಳಬೇಕು.?

ಹಾಗಾದ್ರೆ ಬನ್ನಿ ಯಾವ ಯಾವ ಸಮಸ್ಯೇ ಇರುವವವರು ಲಸಿಕೆ ಹಾಕಿಸಿಕೊಳ್ಳುವ ಮುನ್ನ ಡಾಕ್ಟರ್ ಸಲಹೆ ಪಡೆದುಕೊಳಬೇಕಾಗಿದೆ ಅಂತ ನೋಡೋಣ

  ಆಲರ್ಜಿ (allergy)  ನಂತಹ ಸಮಸ್ಯೆಗಳು ಇರುವ ವ್ಯಕ್ತಿಗಳು – ಅಮೆರಿಕದ ಸಿಡಿಸಿ C D C (Centers for Disease Control and Prevention) ಅನುಸಾರ, ಫೈಜರ್​ ಮತ್ತು ಮಾಡರ್ನಾ (Pfizer Moderna) ದ ವ್ಯಾಕ್ಸಿನ್ ಗಳಿಂದ ಹಲುವಾರು ಜನರಿಗೆ ಗಂಭೀರ ಅಲರ್ಜಿ ಉಂಟಾಗಿದೆ. ಆದರೆ ಎಕ್ಸ್ಪರ್ಟ್ ಗಳು ಹೇಳುವುದೇನಂದ್ರೆ ವ್ಯಾಕ್ಸಿನ್ ತೆಗೆದುಕೊಂಡ ನಂತರ ಈ ದೇಹದಲ್ಲಿ ಈ ಥರದ  ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗುವುದು ಮಾಮೂಲಿ ಲ್. ಆದರೆ ಏನಾಫಿಲೆಕ್ಸಿಸ್ ನಂತಹ ಅಲರ್ಜಿ ಅಪಾಯ ಉಂಟುಮಾಡುವ ಸಾಧ್ಯತೆ ಇದೆ.CDC ಸಲಹೆಯಂತೆ ವ್ಯಾಕ್ಸಿನ್ ನಲ್ಲಿ ಬಳಸಿದಂತ ಯಾವದೇ ತರಹದ ಇಂಗ್ರೇಡಿಯೆಂಟ್ ಇಂದ ಅಲರ್ಜಿ ಇದ್ದರೆ ಆ ವ್ಯಕ್ತಿ ವ್ಯಾಕ್ಸಿನ್ ತೆಗೆದುಕೊಳ್ಳಬಾರದು.ಅಥವಾ ಯಾವದೇ ಸಾಮಾನ್ಯ ಇಂಜೆಕ್ಷನ್ ತೆಗೆದುಕೊಂಡ ನಂತರವೂ ಕೆಲವರಿಗೆ ಅಲರ್ಜಿ ನಂತಹ ಸಮಸ್ಯೆ ಆಗುತ್ತಿದ್ದರೆ ವ್ಯಾಕ್ಸಿನ್ ಪಡೆಯುವ ಮುನ್ನ ಡಾಕ್ಟರ್ ಸಲಹೆ ಪಡೆಯಬೇಕು.ಅಥವಾ ಯಾವದೇ ವ್ಯಕ್ತಿಗೆ COVID-19 ವ್ಯಾಕ್ಸಿನ್ ಮೊದಲನೇ ದೋಸ್ ಕೊಟ್ಟ ಬಳಿಕ ಗಂಭೀರವಾಗಿ ಅಲರ್ಜಿ ಆಗುತ್ತಿದ್ದರೆ ಅಂಥವರಿಗೂ ಸಹ ವ್ಯಾಕ್ಸಿನ್ ನಾ ಎರಡನೇ ದೋಸ್ ತೆಗೆದುಕೊಳ್ಳಬಾರದೆಂದು CDC ಸಲಹೆ ನೀಡುತ್ತೆ.

ಹೇಗಿರಲಿದೆ ವ್ಯಾಕ್ಸಿನೇಷನ್ (Vaccination) ಪ್ರಕ್ರಿಯೆ ?

ಯಾವ ಯಾವ ವ್ಯಕ್ತಿಗಳಿಗೆ ಮೊದಲಿಂದನೆ ಯಾವದೇ ತರಹದ ಅಲರ್ಜಿ (allergy) ಇಲ್ಲದೆ ಇರುವವರಿಗೆ ವ್ಯಾಕ್ಸಿನ್ ಇಂಜೆಕ್ಷನ್ ಕೊಟ್ಟ ನಂತರ 15 ನಿಮಿಷ ಅವರ ಮೇಲೆ ತೀವ್ರ ನಿಗಾವಹಿಸಲಾಗುತ್ತೆ . ಆದರೆ ಅಲರ್ಜಿ ಇರುವ ವ್ಯಕ್ತಿಗಳಿಗೆ 30 ನಿಮಿಷ ತೀವ್ರ ನಿಗಾವಹಿಸಲಾಗುತ್ತದೆ. 

ಯಾವ ತರಹದ ವ್ಯಕ್ತಿಗಳು ವಿಚಾರ ಪೂರ್ವಕ ಡಾಕ್ಟರ್ ಸಲಹೆಯಂತೆ  ವ್ಯಕ್ಸಿನ್ ಪಡೆಯಬೇಕು ?

ಗರ್ಭಿಣಿಯರು ಮತ್ತು ಬ್ರೆಸ್ಟ್ ಫೀಡಿಂಗ್ ಮಾಡುವ ಮಹಿಳೆಯರು –  ಗರ್ಭಿಣಿಯರು ಮತ್ತು ಬ್ರೆಸ್ಟ್ ಫೀಡಿಂಗ್ ಮಾಡುವ ಮಹಿಳೆಯರು ಕೊರೊನ ವ್ಯಾಕ್ಸಿನನ್ನು ಪಡೆಯುವ ಮುನ್ನ ಡಾಕ್ಟರ್ ಗಳ ಸಲಹೆ ಪಡೆಯಬೇಕು. ಗರ್ಭಿಣಿಯಾಗಿರುವ ಮಹಿಳೆಯರಲ್ಲಿ COVID-19 ವ್ಯಾಕ್ಸಿನ್ ನ ಸುರಕ್ಷತೆ ಕುರಿತು ಯಾವುದೇ ಡೇಟಾ ಇಲ್ಲ , ಯಾಕಂದರೆ  ಅವರಿಗೆ ಕ್ಲಿನಿಕಲ್ ಟ್ರಯಲ್ ಇಂದ ಹೊರಗಡೆ ಇಡಲಾಗಿತ್ತು. ಅಂದರೆ ಅವರ ಮೇಲೆ ಯಾವುದೇ ಕೊರೊನ ವ್ಯಾಕ್ಸಿನ್ ಕುರಿತು ಪ್ರಯೋಗ ನಡೆದಿಲ್ಲ ಈ ಗರ್ಭಿಣಿಯರು ವ್ಯಾಕ್ಸಿನ್ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆ ಇಂದ ಇರಬೇಕು.

ಅಮೆರಿಕದ Helth Expert ಗಳು ವ್ಯಕ್ಸಿನ್ Vaccine ಬಗ್ಗೆ ಹೇಳೋದೇನು ?

ಅಮೆರಿಕದ ಕೆಲವೊಂದು Helth Expert ಗಳ ವಾದವೇನಂದರೆ ಗರ್ಭಿಣಿ ಮಹಿಳೆಯರಲ್ಲಿ ಕೊರೊನ ವಾಯರಸ್ Corona Virus ಸೋಂಕು ತಗಲುವ ಭೀತಿ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ಪ್ರೆಗ್ನೆನಟ್ ಮಹಿಳೆಯರ ಬಗ್ಗೆ ಯಾವದೇ ಡೇಟಾ ಇಲ್ಲದಿದ್ದರೂ ಸಹ ಅವರಿಗೂ ಕೊರೊನ ವ್ಯಾಕ್ಸಿನ್ ಸುರಕ್ಷತೆ ನೀಡುತ್ತದೆ. ಮತ್ತು ಕೊರೊನ ಸೋಂಕಿನ ದುಷ್ಪ್ರಭಾವಗಳಿಂದ ಸಹ ಕಾಪಾಡಬಹುದು. ಅದಕ್ಕಾಗಿಯೇ ಡಾಕ್ಟರ್ ಸಲಹೆಯಂತೆ ಗರ್ಭಿಣಿಯರು ವ್ಯಾಕ್ಸಿನ್ ಪಡೆದುಕೊಳ್ಳಬಹುದು. ಜೊತೆಗೆ ಬ್ರೆಸ್ಟ್ ಫೀಡ್ ಮಾಡುವ ಮಕ್ಕಳಲ್ಲಿ ಸಧ್ಯಕ್ಕೆ ಯಾವುದೇ ಪ್ರಭಾವ ಬಿದ್ದಂತೆ ಕಾಣುತ್ತಿಲ್ಲ ಎಂದು CDC ಹೇಳಿದೆ.

ಸುರಕ್ಷಿತವಾಗಿದೆ ವ್ಯಕ್ಸಿನ್ ?

ಮೊದಲಿಂದನೆ COVID-19 ಕೊರೊನ ಪಾಜಿಟಿವ್ ಇದ್ದರವರ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಿದಾಗ ವ್ಯಾಕ್ಸಿನ್ ಸುರಕ್ಷಿತವಾಗಿದೇ ಎಂದು ಕಂಡುಬಂದಿದೆ. ಐಸೋಲೇಟ್ ಮತ್ತು ಈ ಮಹಾಮಾರಿ ಇಂದ ಸಂಪೂರ್ಣ ಹೊರಬರುವವರೆಗೆ ಕೊರೊನ ಸಂಕ್ರಮಿತ ವ್ಯಕಿಗಳಿಗೆ ವ್ಯಾಕ್ಸಿನ್ ನೀಡಬಾರದೆಂದು CDC ಹೇಳಿದೆ. ಅದೇರೀತಿ antibodies ಥೆರಪಿ ತೆಗೆದುಕೊಳ್ಳುವವರಿಗೆ 3 ತಿಂಗಳ ನಂತರವೇ ವ್ಯಾಕ್ಸಿನ್ ನೀಡಬೇಕಾಗಿದೆ.

ಮೆಡಿಕಲ್ ಕಂಡೀಷನ್- ವೈದ್ಯಕೀಯ ಪರಿಸ್ಥಿತಿಗಳಿರುವವರು – ಕೊರೊನ ಲಸಿಕೆ ಆರೋಗ್ಯವಂತ ಜನರಂತೆಯೇ ವೈದ್ಯಕೀಯ ಸ್ಥಿತಿಯಲ್ಲಿ ಇರುವ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಕ್ಲಿನಿಕಲ್ ಪ್ರಯೋಗದ ಹೇಳಲಾಗುತ್ತಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಾಂಕ್ರಾಮಿಕ ರೋಗಗಳ expart ಡಾಕ್ಟರ್ ಡೀನ್ ಬಾಂಬರ್ಗ್ ಅವರು Heathline ಗೆ ತಿಳಿಸಿದ ಪ್ರಕಾರ, Immuno compromised ಮತ್ತು HIV ರೋಗಿಗಳ ಯಾವದೇ ಡೇಟಾವಿಲ್ಲ , ಆದರೂ ಸಹ ಈ ಜನರಿಗೆ ಕೊರೊನ ಸೋಂಕು ತಗಲುವ ಭೀತಿ ಜಾಸ್ತಿಯೇ ಗಂಭೀರವಾಗಿ ಇರುವ ಸಾಧ್ಯತೆ ಇರತ್ತೆ . ಹಾಗಾಗಿಯೇ ಈ ತರಹದ ರೋಗಗಳು ಇರುವ ವ್ಯಕ್ತಿಗಳಿಗೂ ಕೊರೊನ ವ್ಯಾಕ್ಸಿನ್ ಪಡೆಯಬಹುದಾಗಿದೆ. ಆದರೆ ಇದು ಅವರ ವೈಯಕ್ತಿಕ ನಿರ್ಣಯ. ವ್ಯಾಕ್ಸಿನ್ ಪಡೆಯುವ ಮುನ್ನ ಡಾಕ್ಟರ್ ಸಲಹೆ ಪಡೆಯಬೇಕು.

ಯಾವ ವ್ಯಯಸ್ಸಿನವರು ಪಡೆಯಬಹುದು ವ್ಯಕ್ಸಿನ್ ?

  ಮಕ್ಕಳು – 18 ವರ್ಷ ಮೇಲ್ಪಟ್ಟವರು ಪಡೆಯಬಹುದಾಗಿದೆ ಮಾಡರ್ನಾ ಲಸಿಕೆ. ಅದೇ ರೀತಿ ಫೈಜರ್ ಲಸಿಕೆಯೂ 16 ವರ್ಷ ಮೇಲ್ಪಟ್ಟವರಿಗೆ ಅಧಿಕೃತ ಮಾಡಲಾಗಿದೆ.

12 ವರ್ಷ ಮೇಲ್ಪಟ್ಟವರು ಪಡೆಯಬಹುದಾಗಿದೆ ಸ್ವದೇಶಿ ಭಾರತ್ ಬಾಯೊಟೆಕ್ ವ್ಯಾಕ್ಸಿನ್ 

12 ವರ್ಷ ಮೇಲ್ಪಟ್ಟವರು ಪಡೆಯಬಹುದಾಗಿದೆ ಭಾರತ್ ಬಾಯೊಟೆಕ್ ವ್ಯಾಕ್ಸಿನ್. ಆದರೆ  ಕೋವಿಶೀಲ್ಡ್  ವ್ಯಾಕ್ಸಿನನ್ನು 18 ವರ್ಷ ಮೇಲ್ಪಟ್ಟವರಿಗೆ ಬಳಿಕೆ ಮಾಡಬಹುದಾಗಿದೆ. ಸಧ್ಯಕ್ಕೆ ಮಕ್ಕಳಲ್ಲಿ COVID-19 ವ್ಯಾಕ್ಸಿನ್ ನ ಸ್ಟಡಿ ನಡೆದಿಲ್ಲ ಈ ಕಾರಣಕ್ಕಾಗಿ ಮಕ್ಕಳಿಗೆ ವ್ಯಾಕ್ಸಿನ್ ನೀಡಲು ಅಧಿಕೃತ ಮಾಡಲಾಗಿಲ್ಲ.

ವ್ಯಕ್ಸಿನ್ ಪಡೆಯುವರಲ್ಲಿ ಮೊದಲನೇ ಸ್ಥಾನ ಯಾರಿಗಿದೆ ?

ಈ ಜನರಿಗೆ ಮೊದಲೇ ಕೊಡಲಾಗುತ್ತೆ ವ್ಯಾಕ್ಸಿನ್ – ಜನವರಿ 16 ರಿಂದ ಭಾರತದಾದ್ಯಂತ ವ್ಯಾಕ್ಸಿನೇಷನ್ ಅಭಿಯಾನ ಶುರು ಮಾಡಲಾಗುತ್ತಿದೆ. ಈ ವ್ಯಾಕ್ಸಿನೇಷನ್  ಡ್ರೈವ್ ನಲ್ಲಿ  ಮೊಟ್ಟ ಮೊದಲಿಗೆ ಡಾಕ್ಟರ್ , ಹೆಲ್ತ್ ಕೆಯರ್ ವರ್ಕರ್ಸ್ , ಸ್ವಚ್ ಗೊಳಿಸುವ ಸಿಬ್ಬಂದಿಗಳು ಸೇರಿದಂತೆ ಎಲ್ಲ ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಈ ಬಳಿಕ 50 ವರ್ಷ ಮೇಲ್ಪಟ್ಟವರಿಗೆ ಮತ್ತು ಗಂಭೀರ ರೋಗಗಳಿಂದ ಬಳಗುತ್ತಿರುವ ಕೊರೊನ ಸೋಂಕಿತರಿಗೆ ವ್ಯಾಕ್ಸಿನ್ ನೀಡಲಾಗುವುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments