ನ್ಯಾಷನ್ ನ್ಯೂಸ್ ಚಾನಲಾದ zee news ನ ಪತ್ರಕರ್ತೆ ಪೂಜಾ ಮಕ್ಕಡ್ ಅವರು ಕೊರೊನ ವ್ಯಾಕ್ಸಿನ್ ಬಗ್ಗೆ ದೇಶದ ಜನರ ನಂಬಿಕೆ ಹೆಚ್ಚಿಸಲು ಭಾರತದಲ್ಲಿ ತಯಾರಾಗಿರುವ COVAXIN ಕೋ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ.ಆದರೆ ಲಸಿಕೆ ಪಡೆದ ಬಳಿಕ ಅಲ್ಪ ಸ್ವಲ್ಪ ಜ್ವರ ಬರುವುದು ಶುಭ ಸಮಾಚಾರವಂತೆ . ಅರೆ ರೆ ವ್ಯಾಕ್ಸಿನೇಷನ್ ಬಳಿಕ ಜ್ವರ ಬರುವುದು ಒಳ್ಳೆಯ ಸಮಾಚಾರ ಹೀಗಂತ ಪ್ರಶ್ನೆ ಬಿತ್ತ? ಹಾಗಾದ್ರೆ ಇಲ್ಲಿದೆ ಸಂಪೂರ್ಣ ಮಾಹಿತಿ
ನ್ಯೂ ದೇಹಲಿ: ಇವತ್ತಿನ ಅತಿ ದೊಡ್ಡ ಸುದ್ದಿ ಏನೆಂದರೆ ಭಾರತದಲ್ಲಿ ಮುಂದಿನ ವಾರದೊಳಗೆ ವ್ಯಾಕ್ಸಿನೇಷನ್ ಆರಂಭವಾಗುವ ಸಾಧ್ಯತೆ ಇದೆ. ಸ್ವಾಸ್ಥ್ಯ ಮಂತ್ರಾಲಯ ವತಿಯಿಂದ ಈ ಮಾಹಿತಿ ನೀಡಲಾಗಿದೆ. ಮಕರ ಸಂಕ್ರಾಂತಿ ಗು ಮುನ್ನವೇ ದೇಶದಲ್ಲಿ ವ್ಯಾಕ್ಸಿನ್ ಕ್ರಾಂತಿ ಶುರುವಾಗುವ ಸಾಧ್ಯತೆ ಇದೆ.
ವ್ಯಾಕ್ಸಿನ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಮುನ್ನ, ಸ್ವದೇಶಿ ವ್ಯಾಕ್ಸಿನ್ ಜೊತೆ Zee ಸುದ್ದಿವಾಹಿನಿಯ ಪ್ರಯೋಗದ ಬಗ್ಗೆ ಒಂದು ಅಪಡೆಟ್ ಇದೆ ಒಮ್ಮೆ ನೋಡಿ.
Vaccine ಪಡೆದ ಬಳಿಕ ಜ್ವರ ಬರುವುದು ಶುಭ ಸಮಾಚಾರ
ಸ್ವದೇಶಿ ವ್ಯಾಕ್ಸಿನ್ ಮೇಲೆ ಭರವಸೆ ಹೆಚ್ಚಿಸಲು zee ಸುದ್ದಿವಾಹಿಣಿಯ ಪತ್ರಕರ್ತೆ ಪೂಜಾ ಮಕ್ಕಡ್ ಅವರು ಭಾರತದಲ್ಲಿ ತಯಾರಾಗುವ COVAXIN ತೆಗೆದುಕೊಂಡಿದ್ದಾರೆ. ಒಳ್ಳೆಯ ವಿಚಾರ ಏನಪ್ಪಾ ಅಂದ್ರೆ Vaccine ಪಡೆದ ಬಳಿಕ ಪತ್ರಕರ್ತೆ ಪೂಜಾ ಮಕ್ಕಡ್ ಗೆ ಅಲ್ಪ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡಿದೆ . ಈ ತರಹದ ಜ್ವರ ಕಾಣಿಸಿಕೊಂಡಾಗ ಭಯ ಪಡುವ ಅಗತ್ಯವಿಲ್ಲ ಬದಲಿಗೆ ಇದರ ಸಂಕೇತ ಎನ್ ಅಂದ್ರೆ ವ್ಯಾಕ್ಸಿನ್ ತನ್ನ ಕೆಲಸ ಶುರುಮಾಡಿದೆ ಅಂತ ಅರ್ಥ..
ದೇಶದಲ್ಲಿ ಮುಂದಿನ 8 ದಿನಗಳಲ್ಲಿ ವ್ಯಾಕ್ಸಿನೇಷನ್ (Vaccination Drive) ಅಭಿಯಾನ ಶುರುವಾಗುವ ಸಾಧ್ಯತೆ ಇದೆ.
ನೆಮ್ಮದಿಯ ವಿಚಾರ ಏನೆಂದರೆ ಭಾರತದಲ್ಲಿ ಎರೆಡು Corona Vaccines ಗಳಿಗೆ ತುರ್ತು ಬಾಳಿಕೆಗಾಗಿ ಅನುಮತಿ ಸಿಕ್ಕಿದೆ. ಆದರೆ ದೇಶದ ಪೀಪಕ್ಷ ದಳದ ನಾಯಕರು ವ್ಯಾಕ್ಸಿನ್ ನ ಮೊದಲ ದೊಜ್ ನೀಡುವ ಮೊದಲೇ ವ್ಯಾಕ್ಸಿನ್ ನ ನ್ಯೂನತೆಗಳನ್ನು ಹುಡುಕಾಡಲು ಆರಂಭಿಸಿದ್ದು ವಿಪರ್ಯಾಸವೇ ಸರಿ..
ವಿಪಕ್ಷ ನಾಯಕರಿಂದ ವಿದೇಶಿ ನಿರ್ಮಿತ ಲಸಿಕೆಯನ್ನು (Vaccine)ಯಾಕೆ ಉತ್ತಮವೆಂದು ಪರಿಗಣಿಸಲಾಗುತ್ತಿದೆ?
ವಿಪಕ್ಷ ನಾಯಕರು ಯಾವುದೇ ಕಾರಣವಿಲ್ಲದೆ ಸ್ವದೇಶಿ ವ್ಯಾಕ್ಸಿನ್ ಸರಿಯಾಗಿಲ್ಲ , ವಿದೇಶಿ ಲಸಿಕೆಗಳು ಉತ್ತಮ ಎಂದು ಹೇಳೋದ್ರಲ್ಲೇ ಕಾಲ ಹರಣ ಮಾಡುತ್ತಿದ್ದಾರೆ.ಕೊರೊನ ವ್ಯಾಕ್ಸಿನ್ ಗೆ ಮಾರ್ಜಿನ್ ಮತ್ತು ತಮ್ಮ ಓಟ್ ಬ್ಯಾಂಕ್ ನ ಕನ್ನಡಕದಲ್ಲಿ ನೋಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸುತ್ತೆ. ಕೆಲವು ವಿಪಕ್ಷ ನಾಯಕರಂತೂ ಇದನ್ನ ಬಿಜೆಪಿಯ ವ್ಯಾಕ್ಸಿನ್ ಅಂತನು ಹೇಳಿಕೆ ನೀಡಿದ್ದರು, ಆದರೆ ವಿಶ್ವದೆಲ್ಲೆಡೆ ಭಾರತದಲ್ಲಿ ನಿರ್ಮಿಸಿದ ವ್ಯಾಕ್ಸಿನ್ ನಾ ಗುಣಗಾನವಾಗಿತ್ತಿದೆ.
ಜಗತ್ತಿನಾದ್ಯಂತ ಭಾರತದ ಸಂಕಲ್ಪಕ್ಕೆ ಪ್ರಶಂಸೆ
ವಿಶ್ವ ಆರೋಗ್ಯ ಸಂಘಟನೆಯ ನಿರ್ದೇಶಕ ಜನರಲ್ ಟ್ರೆಡೋಸ್ ಆಧಾನೋಮ್ ಘೆಬ್ರೆಯೆಸಸ್ (Tedros Adhanom Ghebreyesus) ಅವರು ಭಾರತದಲ್ಲಿ ಕರೋನಾ ವ್ಯಾಕ್ಸಿನ್ ಅತಿ ಹೆಚ್ಚು ಉತ್ಪಾದನೆ ಮಾಡುವ ಬಗ್ಗೆ ಭಾರತದ ಸಂಕಲ್ಪವನ್ನು ಶ್ಲಾಘಿಸಿದ್ದಾರೆ.
ಪ್ರಸಿದ್ಧ ಉದ್ಯಮಿ ಬಿಲ್ ಗೇಟ್ಸ್ ಸಹ ಈ ವಿಷದಲ್ಲಿ ಭಾರತದ ವಿಜ್ಞಾನಿಗಳನ್ನ ಶ್ಲಾಘಿಸಿದ್ದಾರೆ.
ಆದರೆ ವ್ಯಾಕ್ಸಿನ್ ಮೇಲೆ ಈ ಥರದ ರಾಜಕೀಯ ನಡೆಯುವುದರ ಬಗ್ಗೆ ಕೆಲವು ಜನ ವಿಶ್ವ ಆರೋಗ್ಯ ಸಂಘಟನೆ ಮತ್ತು ಬಿಲ್ ಗೇಟ್ಸ್ ಸಹ ಆಲೋಚನೆ ಮಾಡಬಹುದು. ಅಥವಾ ಹೀಗೂ ಆಗಬಹುದು ಇವರಿಬ್ಬರಿಗೂ ಬಿಜೆಪಿಯ ಬ್ರಾಂಡ್ ಅಂಬಾಸಿಡರ್ ಎಂದು ಹೇಳಲಾಗುವುದು.ಅದು ಏನೇ ಇರಲಿ ಮುಂದಿನ ವಾರದಿಂದ ಕೊರೊನ ಲಸಿಕೆ (Corona Vaccine) ಭಾರತದಲ್ಲಿ ನೀಡಲಿದ್ದಾರೆ ಇದು ಖುಷಿಯ ವಿಚಾರ.