ಲಿಕ್ ಆಯಿತು ಪೈಲ್ವಾನ್ ಚಿತ್ರ

ಪೈಲ್ವಾನ್ ಬದಶಾಹ ಕಿಚ್ಚ ಸುದೀಪ್ ನಟಿಸಿರುವ ಚಿತ್ರ  ಗುರುವಾರ ರಿಲೀಸ್ ಅದ ಪೈಲ್ವಾನ್ ಗೆ ಎಲ್ಲಡೇಇಂದ ಉತ್ತಮ ರೇಸ್ಪೋನ್ಸ್ ದೋರಿಕಿದೆ , ಕಿಚ್ಚನ ಖಡಕ್ ಲುಕ್ ಕುಸ್ತಿ ಝಲಕ್ ಮತ್ತು ಬಾಕ್ಸಿಂಗ್ ಪಂಚ್ ಗಳಿಗೆ ಸಿನಿ ಪ್ರಿಯರು ಮನ ಸೋತಿದ್ದಾರೆ ಮತ್ತೊಮ್ಮೆ ಮಗದೊಮ್ಮೆ ಥಿಯೇಟರ್ ಗೆ ಲಗ್ಗೆ ಇಡುತ್ತಿದ್ದರೆ ಸಿನಿಮಾ ಹಾಊಸ್ ಫುಲ್ ಓಡುತ್ತಿದೆ , ಪಂಚಭಾಷೆಗಳಲ್ಲಿ ಭರ್ಜರಿ ಗಳಿಕೆ ಮಾಡುತ್ತಾ ಮೊದಲ ವಾರಾಂತ್ಯಕೆ 50 ಕೋಟಿ ದಾಟುವ  ನಿರೀಕ್ಷೆ ಮೂಡಿಸಿದೆ ಗಾಂಧಿನಗರದ ಮೂಲಗಳ ಪ್ರಕಾರ ಪೈಲ್ವಾನ್ ಮೊದಲ ದಿನದ ಗಳಿಕೆ 10 ಕೋಟಿ ರೂಪಾಯಿ..ಇನ್ನುಳಿದ ಹಿಂದಿ ,ತೆಲಗು ತಮಿಳ್, ಮಲಯಾಳಂ ಭಾಷೆಗಳಿಂದ ಸುಮಾರು 8 ಕೋಟಿ ರೂಪಾಯಿ ಬಂದಿದೆ ,ಆ ಮೂಲಕ ಫಸ್ಟ್  ಡೇ ಪೈಲ್ವಾನನ ಜೇಬಿಗೆ 18 ಕೋಟಿ ರೂಪಾಯಿ ಸೇರಿಕೊಂಡಿದೆ ,ಇನ್ನು ಮೌಥ್ ತೋ ಮೌಥ್ ಪಬ್ಲಿಸಿಟಿಯಿಂದ ಶುಕ್ರವಾರ ಶನಿವಾರ ಹಾಗೂ ಭನವರವು ಪ್ರೇಕ್ಷಕರು ಪೈಲ್ವಾನನ ನೋಡಲು ಮುಗಿಬಿದ್ದಿದ್ದಾರೆ

ಪಂಚಭಾಷೆಗಳಿಂದ ಕೇವಲ ಬರಿ 4 ದಿನಗಳಲ್ಲಿ ಪೈಲ್ವಾನ್ ಬರೋಬ್ಬರಿ 60 ಕೋಟಿ ರೂಪಾಯಿ ಗು ಹೆಚ್ಚು ಕಲೆಕ್ಷನ್ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ

ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ , ಆದರೂ ಸ್ಯಾಂಡಲ್ವುಡ್ ಸಿನಿ ಪಮ್ಡಿತರ ಲೆಕ್ಕಾಚಾರದ ಪ್ರಕಾರ 2 ನೆ ವಾರದ ಹೊತ್ತಿಗೆ ಕಿಚ್ಚ ಪೈಲ್ವಾನ್ 100 ಕೋಟಿ ಕಲ್ಬ್ ಸೇರುವ ಮಾತಿದೆ,

ಪೈಲ್ವಾನ್ ಗು ಪೈರಸಿ ಕಾಟ

ಪೈಲ್ವಾನನ ಸಕ್ಸೆಸ್ ಗೆ ಅದ್ಯಾರ ಕಣ್ಣು ಬಿತ್ತು ಗೊತ್ತಿಲ್ಲ  ಮೊದಲ ವಾರವೇ ಹಾಫ್ ಸೆಂಚುರಿ ಬಾರಿಸಿದ ಕನ್ನಡದ ಪೈಲ್ವಾನನ ಬ್ಯಾಕ್ ಆಫೀಸ್ ಓಟ ನಾಗಾಲೋಟ ಕೆಲವರ ಕಣ್ಣು ಕುಕ್ಕಿದೆ ಅದೇ ಕಾರಣಕ್ಕೆ ಪೈಲ್ವಾನ್ ತೆಲಗು ವರ್ಷನ್ ರಿಲೀಸ್ ಅದ ಮೊದಲ ದಿನ ಗುರುವಾರ ಮಧ್ಯಾನವೇ ಇಂಟರ್ನೆಟ್ ಸೇರಿಕೊಂಡಿದೆ ಹಾಗೆ ಶುಕ್ರವಾರದ ಹೊತ್ತಿಗೆ  ಪೈಲ್ವಾನ್ ಓರಿಜನಲ್ ಕನ್ನಡ ವರ್ಜನ್ ಕೂಡ ಪೈರಸಿಯಾಗಿದೆ ಅಸ್ತುಮಾತ್ರವಲ್ಲ ಶನಿವಾರದ ಹೊತ್ತಿಗೆ ಹಿಂದಿ ಪೈಲ್ವಾನ್ ಕೂಡ ಲೈಕ್ ಆಗಿ ಇಂಟರ್ನೆಟ್ ಸೇರಿದೆ ,ಹೀಗೆಯೇ ಮೂರು ಭಾಷೆಗಳಲ್ಲಿ  ಪೈರಸಿ ಆಗಿರುವ ಪೈಲ್ವಾನ್ ಪೈರೇಟೆಡ್ ವರ್ಷನ್ ನ ಲಿಂಕ್ ಗಳು ಟೊರೆಂಕ್ಸ್ ನಲ್ಲಿ ಅಪ್ಲೋಡ್ ಆಗಿದೆ ಹಾಗೆ ತೇಲಿಗ್ರಾಮ್ ಎಫ್ ನಲ್ಲಿ ಸಾವಿರಾರು ಗ್ರೂಪ್ ಗಳಲ್ಲಿ  ಶೇರ್ ಆಗಿದೆ,

ಪೈರಸಿ ಇಂದ ಪೈಲ್ವಾನ್ ಗೆ ಪೆಟ್ಟು ಲಿಕೇಜ್ ತಡೆಯಲು ಕಿಚ್ಚನ ಪೆಟ್ಟು

ಹೀಗೆ ಟೆಲಿಗ್ರಾಮ್ ಎಫ್ ನಲ್ಲಿ ಪೈಲ್ವಾನ್ ಸಿನಿಮಾ ಶೇರ್ ಅಗತೊಡಗಿದ್ದೆ ತಡ ಕಿಚ್ಚ ಸುದೀಪ್ ಅಭಿಮಾನಿಗಳು ಹಾಗೂ ಪೈಲ್ವಾನ್ ಚಿತ್ರ ತಂಡ ತಕ್ಷಣ ಎಚ್ಚೆತ್ತುಕೊಂಡಿದ್ದಾರೆ ಸೈಬರ್ ಕ್ರೈಮ್ ಗೆ ದೂರು ಕೊಟ್ಟು ಲಿಂಕ್ ಗಳನ್ನ ಬ್ಲಾಕ್ ಮಾಡತೊಡಗಿದೆ ಜೊತೆಗೆ ಪೈರಸಿ ವಿರುಧ್ಧ  ಕನ್ನಡ ಚಿತ್ರರಂಗದ ಹಲವರು ಸಮರ ಸಾರಿದ್ದಾರೆ ನಿರ್ದೇಶಕ ರಘುರಾಮ್ ,ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಸೇರಿದಂತೆ ಹಲವಾರು ಪೈಲ್ವಾನ್ ಹೋರಾಟಕ್ಕೆ ಧ್ವನಿಗೂಡಿಸಿದ್ದಾರೆ ಆದರೆ ಅದಾಗಲೇ ಹಲವು ಬಾರಿ ಶೇರ್ ಆಗಿ ಡೌನ್ಲೋಡ್ ಆಗಿದ ಕಾರಣ ,ಪೈಲ್ವಾನ್ ಚಿತ್ರ ಹಲವರ ಮೊಬೈಲ್ ನಲ್ಲಿ ಶೇರಿಟ್ ಮೂಲಕ ಮತ್ತೊಂಮ್ಮೆ ಮಗದೊಮ್ಮೆ ಮತ್ತಷ್ಟು ಮೊಬೈಲ್ಗಳಲ್ಲಿ ಸೇರುತಿದೆ ,ಮೊಬೈಲ್ ನಲ್ಲೇ ಚಿತ್ರವನ್ನು ನೋಡಲು ಸಿಕ್ಕಿರುವಗ ಥಿಯೇಟರ್ ಗೆ ಸಮಯ ಹಣ ಖರ್ಚು ಮಾಡಿಕೊಂಡು ಯರ್ ತಾನೇ ಹೋಗೋಕೆ ಇಷ್ಟ ಪಡುತ್ತಾರೆ ಹೇಳಿ??
ಈ ಕಾರಣಕ್ಕಾಗಿ ಪೈರಸಿ ಪೆಡಂ ಭೂತ ಪೈಲ್ವಾನ್ ಗೆ ಪೆಟ್ಟು ನೀಡಿದೆ ,

ನಮ್ಮ ಮೂಲಕವು ಹೇಳೋದಕ್ಕೆ ಇಷ್ಟ ಪಡುತ್ತೇವೆ ದಯವಿಟ್ಟು ಯಾರು ಕೂಡ ಈ ಥರ 5_10 ಸವಿರುಪಾಯಿ ಗಳ ಮೊಬೈಲ್ ನಲ್ಲಿ ಕೋಟ್ಯಂತರ ರೂಪಾಯಿಗಳ ಸಿನಿಮಾ ನ ರೆಕಾರ್ಡ್ ಮಾಡಿ  ಈ ಥರ ಚಿತ್ರರಂಗಕೆ ಮೋಸ ಮಾಡಬೇಡಿ ……. 

Arun Kumar: