ಸಮಸ್ತ ಪ್ರಪಂಚದಲ್ಲೆ ಭಾರತವು ಪ್ರವಾಸಿ ಆಕರ್ಷಣೆ ಇರುವ ದೇಶಗಳ ಪೈಕಿ ಪ್ರಮುಖ ದೇಶವಾಗಿದೆ. ಪ್ರತಿವರ್ಷ ಲಕ್ಷಾಂತರ ವಿದೇಶಿ ಪ್ರವಾಸಿಗಳು ಭಾರತಕ್ಕೆ ಭೇಟಿನಿಡುತ್ತಾರೆ ಭಾರತದ ಪ್ರವಾಸಿ ತಾಣಗಳ ಸವಿರುಚಿಯನ್ನು ಅನುಭವಿಸುತ್ತಾರೆ.
ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದರೆ ಹೆಚ್ಚಾಗಿ ಭೇಟಿ ನಿಡುವಂತ ಸ್ಥಳಗಳು ಪ್ರವಾಸಿ ತಾಣಗಳು ನಿಮಗೆ ಗೊತ್ತಿರತ್ತೆ.
ಅದರಲ್ಲೂ ಹೆಚ್ಚಾಗಿ ಮೊದಲನೆಯ ಸ್ಥಾನದಲ್ಲಿ ಬರುವುದು ತಾಜ್ ಮಹಲ್ ವಿದೇಶಿ ಪ್ರವಾಸಿಗಳು ಹೆಚ್ಚಾಗಿ ತಾಜ್ ಮಹಲ್ ಗೆ ಭೇಟಿ ಕೊಡ್ತಾರೆ ಅಂತ ನಿಮಗೆ ಗೊತ್ತೇ ಇರಬಹುದು .
ಆದ್ರೆ ತಾಜ್ ಮಹಲ್ ನಂತರ ಅತಿ ಹೆಚ್ಚಾಗಿ ವಿದೇಶಿ ಪ್ರವಾಸಿಗರು ಭೇಟಿ ನಿಡುವಂತ ಸ್ಥಳ / ವಾಸ್ತು ಅಂದ್ರೆ ಅದು ನಮ್ಮ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಸಾಂಸ್ಕೃತಿಕ ನಗರಿ , ಅರಮನೆಗಳ ನಗರ ಎಂದೇ ಗುರುತಿಸಿಕೊಂಡಿರುವ ಮೈಸೂರಿನಲ್ಲಿರುವ ಮೈಸೂರು ಅರಮನೆಯೇ (mysore palace) ತಾಜ್ ಮಹಲ್ ನಂತರ ಅತಿಹೆಚ್ಚಾಗಿ ವಿದೇಶಿಗಳು ಭೇಟಿ ನೀಡುವ ಸ್ಥಳವಾಗಿದೆ.
ಪ್ರತಿವರ್ಷ ಸುಮಾರು 60 ಲಕ್ಷ ದೇಶಿ ವಿದೇಶಿ ಪ್ರವಾಸಿಗರು ಮೈಸೂರಿನ ಈ ಅರಮನೆಗೆ ಭೇಟಿ ನೀಡುತ್ತಾರೆ.
ಮೈಸೂರು ಅರಮನೆಗೆ (mysore palace) ಏಸ್ತೂ ನೋಡಿದರೂ ಸಾಲದಂತಹ ಸೌಂದರ್ಯ ಎಂತೆಂತವರನ್ನು ಮೂಕ ವಿಸ್ಮಿತರನ್ನಾಗುವಂತೆ ಮಾಡುತ್ತದೆ. ಕರ್ನಾಟಕದ ರಾಜ್ಯ ಸಂಸ್ಕೃತಿಯನ್ನು ವಿಶ್ವದಾಧ್ಯಂತ ಗುರುತಿಸುವುದರಲ್ಲಿ ಮೈಸೂರು ಅರಮನೆಯ ದೊಡ್ಡ ಪತ್ರವಿದೆ.
14 ನೆಯ ಶತಮಾನದಲ್ಲಿ ಮೈಸೂರು ಸಂಸ್ಥಾನದ ಯದುರಾಯ ಅರಸರು ಪ್ರಥಮಬಾರಿಗೆ ಈ ಮೈಸೂರು ಅರಮನೆಯ (mysore palace) ನಿರ್ಮಾಣ ಮಾಡಿದ್ದರು. ಆದರೆ ಯಾಕೋ ಏನೋ ಹಲುವಾರು ಬಾರಿಗೆ ಧ್ವಂಸ ಮಾಡಿ ಮತ್ತೆ ಮತ್ತೆ ಪುನಃ ಕಟ್ಟಲಾಯಿತು. ನಂತರ ಮಹಾರಾಣಿ ವಾಣಿ ವಿಲಾಸ ಸನನಿದಾನ ಸನ್ನಿಧನಾ ಮತ್ತು ಆಕೆಯ ಪುತ್ರ ಜೊತೆಗೆ ನಾಲ್ಕನೆಯ ಮಹಾರಾಜರಾದ ಕೃಷ್ಣರಾಜ ಒಡೆಯರ್ ಅವರು ಇಂದು ಕಾಣುವಂತ ಅರಮನೆಯನ್ನು ನಿರ್ಮಿಸಿದ್ದರು.
ಈಗಿನ ಮೈಸೂರು ಅರಮನೆಯನ್ನು (mysore palace) ಬ್ರಿಟೀಷ್ ವಾಸ್ತುಶಿಲ್ಪಿ ಲಾರ್ಡ್ ಹೆನ್ರಿ ಐರ್ವಿನ್ ಎನ್ನುವವರಿಗೆ ಜವಾಬ್ದಾರಿ ವಹಿಸಲಾಯಿತು. ಅರಮನೆ ಕಟ್ಟುವ ಸಮಯದಲ್ಲಿ ರಾಜ ಕುಟುಂಬ ಮತ್ತೊಂದು ಅರಮೈಯಾದ ಜಗನ್ಮೋಹನ ಎನ್ನುವ ಅರಮನೆಯಲ್ಲಿ ವಾಸವಿತ್ತು.
ಈ ಅರಮನೆಯ ನಿರ್ಮಾಣ ಕಾರ್ಯ 1987 ರಲ್ಲಿ ಪ್ರಾರಭಿಸಿದ್ದರು . 1912 ರಲ್ಲಿ ಈಗಿನ ಮೈಸೂರು ಅರಮನೆಯ (mysore palace) ಕಾಮಗಾರಿ ಪೂರ್ಣಗೊಳಿಸಲಾಯಿತು. ಆದರೆ 1940 ರ ವರೆಗೆ ಈ ವಾಸ್ತು ಗೆ ಹೊಸ ಹೊಸ ರಚನೆಗಳು ಸೇರಿಸಾಗುತಿತ್ತು (ಅಪ್ಡೇಟ್ ಮಾಡಲಾಯಿತು)
ಈ ಮೈಸೂರು ಅರಮನೆ (mysore palace) ಇಂಡೋ-ಸಾರ್ಸೆನಿಕ್ (indo-saracenic) ವಾಸ್ತುಶಿಲ್ಪ ಹೊಂದಿದೆ. ಈ ವಾಸ್ತುವಿನಲ್ಲಿ
ಹಿಂದೂ, ಮುಸ್ಲಿಂ, ಗೋಥಿಕ್ ಮತ್ತು ರಜಪುತ್ ಶೈಲಿಯ ಪ್ರಭಾವವಿರುವುದು ಕಂಡುಬರುತ್ತೆ. ಈ ವಾಸ್ತು 3 ಅಂತಸ್ತಿನ ಇದ್ದು ಕಲ್ಲಿನಿಂದ ನಿರ್ಮಾಣಗೊಂಡಿದೆ ಇದರ ಒಟ್ಟು ಎತ್ತರ 145 ಅಡಿ ಇದ್ದು , ಮಧ್ಯದಲ್ಲಿ ಅದ್ಭುತವಾದ ಗೋಪುರವಿದೆ.
ಒಟ್ಟಾರೆಯಾಗಿ ಮೈಸೂರು ಅರಮನೆಯ (mysore palace) ಸುತ್ತಮುತ್ತಲು ಹಸಿರುಮಯ ಸುಂದರವಾದ ಉದ್ಯಾನಗಳಿದ್ದು, ಮನಸೆಳೆಯುವ ಸ್ವಾಗತ ಕಮಾನು ಮತ್ತು ಗೋಡೆಗಳು ಅರಮನೆಯ ವೈಭವಕ್ಕೆ ಮತ್ತಷ್ಟು ಆಲಂಕಾರಿಸಿದ ಹಾಗೆ ಗೋಚರಿಸುತ್ತದೆ.
ಮೈಸೂರು ಆರಅಮನೆಗೆ (mysore palace) ಮೂರು ಪ್ರವೇಶ ದ್ವಾರಗಲಿದ್ದು ಪೂರ್ವ ಪಶ್ಚಿಮ ಮತ್ತು ದಕ್ಷಿಣದಲ್ಲಿದೆ ,ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇರುವ ದ್ವಾರಗಳು ದಸರಾ ಹಬ್ಬದ ಸಮಯದಲ್ಲೇ ತೆರೆಯಲಾಗುತ್ತದೆ. ಉಳಿದಂತೆ ದಕ್ಷಿಣ ದ್ವಾರವು ಸಾರ್ವಜನಿಕರಿಗೆ ಪ್ರವಾಸಿಗರಿಗೆ ಸದಾಕಾಲ ಮುಕ್ತವಾಗಿರುತ್ತದೆ.
ಇನ್ನೂ ಕೇಳುವರು ಹೇಳೋ ಪ್ರಕಾರ ಅರಮನೆಯ ಮಹಡಿಯಿಂದ ಶ್ರೀರಂಗಪಟ್ಟಣ ಮತ್ತು ಇತರೆ ಕೆಲವೊಂದು ಗುಪ್ತವಾದ ರಹಸಮಯ ಸ್ಥಳಗಳಿವೆ ಎನ್ನಲಾಗುತ್ತೆ. ಜೊತೆಗೆ ಅರಮನೆಯ ಪರಿಸರದಲ್ಲಿ ದೇವರ ದೇಗುಲಗಳಿವೆ.
ಈ ನಿರ್ಮಾಣಗಳಲ್ಲಿ ಉತ್ತಮ ಗುಣಮಟ್ಟದ ಅಮೃತಶಿಲೆಗಳಂತಹ ವಸ್ತುಗಳ ಬಳಕೆ ಮಾಡಲಾಗಿದೆ ನೋಡಿದಾಕ್ಷಣ ಮನಸೆಳೆಯುವಂತೆ ಮಾಡುತ್ತವೆ.
ನಿರ್ಮಾಣದ ಪ್ರತಿ ಹಂತ ಆಕರ್ಷಕವಾಗಿದೆ ದುಬಾರಿ ವಸ್ತುಗಳನ್ನು ಬಳಸಿ ನಿರ್ಮಾಣ ಮಾಡಲಾಗಿದೆ . ಸಣ್ಣ ಪುಟ್ಟ ಸೂಕ್ಷ್ಮವಾಗಿರುವ ವಿನ್ಯಾಸಗಳನ್ನು ಸಹ ವಿವರವಾಗಿ ರಚಿಸಲಾಗಿದ್ದು . ದಸರಾ ಮತ್ತು ವಿಜಯದಶಮಿಗೆ ತುಂಬಾನೇ ಸಿಂಗಾರ ಸಿಂಗಾರಗೊಂಡತ್ತೆ ಈ ಅರಮನೆ.
ದಸರಾ ಮತ್ತು ವಿಜಯದಶಮಿ ಸಮಯದಲ್ಲೇ ಈ ಅರಮನೆಯನ್ನು ನೋಡಲು ದೇಶ ವಿದೇಶ ಗಳಿಂದ ಪ್ರವಾಸಿಗರ ಜನಸಗಾರವೆ ಮೈಸೂರು ಮತ್ತು ಆರಮನೆಗೆ ಬಾರತ್ತದೆ.
ದಸರಾ ಸಂದರ್ಭದಲ್ಲಿ ಸಂಜೆ ಹೊತ್ತು ಸಾವಿರಗಟ್ಟಲೆ ಪಣತಿ ಬತ್ತಿಗಳನ್ನು ಬಳಸಿ ಅರಮನೆಯನ್ನು ಅದ್ಭುತವಾಗಿ
ಬೆಳಗಿಸಲಾಗುತ್ತದೆ. ಈ ಸಮಯದಲ್ಲೇ ಪ್ರಕಾಶಗೊಂಡಿರುವ ಅರಮನೆಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿರುತ್ತದೆ.
ನೀವು ಸಹ ಇನ್ನೂ ಮೈಸೂರು ಆರಅಮನೆಗೆ (mysore palace) ಭೇಟಿ ನೀಡಿಲ್ಲ ಅಂದ್ರೆ ಒಮ್ಮೆ ಖಂಡಿತ ಭೇಟಿ ನೀಡಿ ,ಮೈಸೂರು ಅರಮನೆಯ ಸೊಬಗು ಕಣ್ಣುತುಂಬಿ ನೋಡಿ ಅನುಭವಿಸಿ.