Site icon V!pಕರ್ನಾtaka.ಕಾಂ

ಮತ್ತೆ ವಿಲನ್ ಆದ ದುನಿಯಾ ವಿಜಯ್, ತೆಲುಗಿಗೆ ‘ಬ್ಲಾಕ್​ ಕೋಬ್ರಾ’ ಎಂಟ್ರಿ

ತೆಲುಗಿನ ಸ್ಟಾರ್ ನಿರ್ದೇಶಕ ಗೋಪಿಚಂದ್ ಮಲ್ಲಿನೇನಿ ನಿರ್ದೇಶನದಲ್ಲಿ ನಂದಮೂರಿ ಬಾಲಕೃಷ್ಣ ಅವರ 107ನೇ ಚಿತ್ರದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗಿದೆ. ಪವರ್ ಫುಲ್ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾದಲ್ಲಿ ನಂದಮೂರಿ…

ತೆಲುಗಿನ ಸ್ಟಾರ್ ನಿರ್ದೇಶಕ ಗೋಪಿಚಂದ್ ಮಲ್ಲಿನೇನಿ ನಿರ್ದೇಶನದಲ್ಲಿ ನಂದಮೂರಿ ಬಾಲಕೃಷ್ಣ ಅವರ 107ನೇ ಚಿತ್ರದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗಿದೆ. ಪವರ್ ಫುಲ್ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರಕ್ಕೆ  ಖಳನಟನಾಗಿ ಕನ್ನಡ ಖ್ಯಾತ ನಟ ದುನಿಯಾ ವಿಜಯ್ ಅವರು ನಟಿಸುತ್ತಿರುವುದು ಮತ್ತೊಂದು ಪ್ರಮುಖ ಅಂಶ. ಇದೆ ವಿಚಾರವಾಗಿ ಚಿತ್ರತಂಡ ದುನಿಯಾ ವಿಜಯ್ ಅವರಿಗೆ ಸ್ವಾಗತಕೋರಿ ಟ್ವಿಟರ್ ನಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಇನ್ನೊಬ್ಬ ಚಂದನವನದ ನಟ ತೆಲುಗಿನಲ್ಲಿ ತಮ್ಮ ಛಾಪು ಮೂಡಿಸಲು ಸಿದ್ದರಾಗುತ್ತಿದ್ದಾರೆ.

ಕನ್ನಡದಲ್ಲಿ ಮೊದಲಿಗೆ ಖಳನಟರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ದುನಿಯಾ ವಿಜಯ್ ಅವರು ನಂತರ ನಾಯಕನಟರಾಗಿ ಮಾಸ್ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ತೆಲುಗಿನಲ್ಲಿ ನಟಿಸಲಿರುವ ಮೊದಲ ಸಿನಿಮಾದಲ್ಲೂ ವಿಲನ್ ಆಗಿ ನಟಿಸುತ್ತಿರುವುದು ವಿಶೇಷ.

ಇತ್ತೀಚೆಗೆ ಬಿಡುಗಡೆಯಾದ ಬಾಲಕೃಷ್ಣ ನಟನೆಯ ಅಖಂಡ ಸಿನಿಮಾ ಪ್ರೇಕ್ಷರನ್ನ ರಂಜಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಎನ್.ಬಿ.ಕೆ ನಟನೆಯ 107 ಸಿನಿಮಾದ ಮೇಲೆ ಭಾರಿ ನಿರೀಕ್ಷೆಯಿದೆ.

Exit mobile version