Saturday, December 14, 2024
HomeHOMEಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಿಮಗೆಷ್ಟು ಗೊತ್ತು ? How much do you...

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಿಮಗೆಷ್ಟು ಗೊತ್ತು ? How much do you know about Narendra Modi, the Prime Minister of India?

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಿಮಗೆಷ್ಟು ಗೊತ್ತು ? How much do you know about Narendra Modi, the Prime Minister of India?


ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ದಮೊದರದಾಸ್ ಮೋದಿ (PM Narendra Modi) ಅವರ ಬಗ್ಗೆ ಸಣ್ಣ ಪುಟ್ಟ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಕುತೂಹಲ ಇರತ್ತೆ . ನರೇಂದ್ರ ಮೋದಿಯವರ ಬಗ್ಗೆ ದೇಶ ವಿದೇಶಗಳಲ್ಲೂ ಚರ್ಚೆಗಳು ನಡಿಯುತ್ತವೆ. ಹಾಗಾದ್ರೆ ಬನ್ನಿ ನರೇಂದ್ರ ಮೋದಿಯವರ ಬಗ್ಗೆ ತಿಳಿದುಕೊಳ್ಳೋಣ.

ನರೇಂದ್ರ ಮೋದಿವರ ಸಪ್ಟೆಂಬರ್ 17- 1950 ರಂದು ಗುಜರಾತ್ ನಾ ವಡನಗರ ದಲ್ಲಿ ಜನನವಾಯಿತು , ನರೇಂದ್ರ ಮೋದಿಯವರ ತಂದೆ ಹೆಸರು ಮೂಲಚಂದ ಮತ್ತು ಟಿ ಹೆಸರು ಹೀರಬೇನ್. 

ನರೇಂದ್ರ ಮೋಡಿಯವರಿಗೆ 4 ಜನ ಸಹೋದರರು ಇದ್ದು ತಂದೆ ತಾಯಿಗೆ ನರೇಂದ್ರ ಮೋದಿ 2ನೇ ನಂಬರ್ ನಾ ಮಗ. 

ನರೇಂದ್ರ ಮೋದಿಯವರ ತಂದೆ ತಾಯಿ ರೈಲ್ವೆ ನಿಲ್ದಾಣದಲ್ಲಿ ಟಿ ಹೋಟಲ್ ಒಂದು ಇಟ್ಟುಕೊಂಡಿದ್ರು. 


1965 ರ ಇಂಡಿಯಾ ಪಾಕಿಸ್ತಾನ ಉಧದ ಸಮಯದಲ್ಲಿ ರೈಲ್ವೆ ನಿಲ್ದಾಣದಲ್ಲಿ ಇಳಿದು ಬಂದಿರುವ ಸೈನಿಕರನ್ನು ಟಿ ಕುಡಿಸಿದರಂತೆ.

ಬಾಲ್ಯದಿಂದ ನರೇಂದ್ರ ಮೋದಿ ಅನ್ಯ ಮಕ್ಕಳಂತೆ ಇರಲಿಲ್ಲ ಅವರಿಗಿಂತ ವಿಭಿನ್ನವಾಗಿ ಇದ್ದರು. ಅವರ ವಿಚಾರಗಳು ಸಹ ಮಕ್ಕಳಂತೆ ಇರಲಿಲ್ಲ. 

Vadanagar ದ ಭಟ್ಟಾಚಾರ್ಯ ನಾರಯಂಚಾರ್ಯ ಸ್ಕೂಲ್ ನಲ್ಲಿ ಓದುತ್ತಿದ್ದರು. ಶಾಲೆಯಲ್ಲಿ ಒಂದ್ ಒಳ್ಳೆ ವಿದ್ಯಾಭ್ಯಾಸ ಮಾಡುತ್ತಿದ್ದರು ಓದಿನಲ್ಲಿ ತುಂಬಾನೇ ಬುದ್ಧಿವಂತರಾಗಿದ್ದರು. 

ಬಾಲ್ಯದಲ್ಲಿ ನರೇಂದ್ರ ಮೋದಿಯವರಿಗೆ ಆಕ್ಟಿಂಗ್ ನಾ ಹುಚ್ಚು ಇತ್ತು.

ಮೋದಿಯವರು ಬಾಲ್ಯದಲ್ಲಿ ಶಾಲೆಯಲ್ಲಿ ಆಕ್ಟಿಂಗ್ , ವಾದ ವಿವಾದ, ನಾಟಕಗಳಲ್ಲಿ, ಮತ್ತು NCC ಯಲ್ಲೂ  ಭಾಗವಹಿಸುತ್ತಿದ್ದರು ಜೊತೆಗೆ ಬಹುಮಾನಗಳನ್ನು ಸಹ ಮೋದಿಯವರು ಪಡೆದಿದ್ದಾರೆ. 

ನರೇಂದ್ರ ಮೋದಿ ಬಾಲ್ಯದಲ್ಲಿಯೇ ಸಾಧು ಸಂತರಿಂದ ಪ್ರಭಾವಗೊಂಡಿದ್ದರು , ಅವರು ಬಾಲ್ಯದಲ್ಲೇ ಸನ್ಯಾಸಿ ಆಗಬೇಕೆಂದು ಭಾವಿಸಿದ್ದರು.

ಶಾಲೆಯ ವಿದ್ಯಾಭ್ಯಾಸ ಗಳು ಮುಗಿದ ಮೇಲೆ ಸನ್ಯಾಸಿ ಆಗುವುದಕಂತೆಯೇ ನರೇಂದ್ರ ಮೋದಿಯವರು ಮನೆಯಿಂದ ಯಾರಿಗೂ ಹೇಳದೆ ಕೇಳದೆ ಓಡಿ ಹೋಗಿದ್ದರು, ಮನೆಯಿಂದ ಓಡಿ ಹೋದ ಮೇಲೆ ಮೋದಿಯವರು ಪಚ್ಚಿಮ ಬಂಗಾಳದ ರಾಮಕೃಷ್ಣ ಆಶ್ರಮದಲ್ಲಿ ವಾಸವಿದ್ದರು ಜೊತೆಗೆ ಅನೇಕ ಕಡೆ ಸುತ್ತಾಡುತ್ತಿದ್ದರು.

ನರೇಂದ್ರ ಮೋದಿಯವರು ಬಾಲ್ಯದಿಂದಲೇ ಆರ್ ಎಸ್ ಎಸ್  ನಂಟು ಹೊಂದಿದ್ದರು. ಅದು ದೀಪಾವಳಿ ಸಮಯ 1958 ರಲ್ಲಿ ಗುಜರಾತ್ ನ ಮೊದಲನೇ ಪ್ರಾಂತ್ಯ ಪ್ರಚಾರಕ ಲಕ್ಷ್ಮಣ್ ರಾವ್ ಇನಾಮದಾರ್ ಅವರು ನರೇಂದ್ರ ಮೋದಿಯವರು ಆರ್ ಎಸ್ ಎಸ್ ನಾ ಬಾಲ ಸ್ವಯಂಸೇವಕನ ಶಪಥವಿಧಿ ಮಾಡಿಸಿದ್ದರು.

ಆರ್ ಎಸ್ ಎಸ್ ಪಕ್ಷದಲ್ಲಿ ನರೇಂದ್ರ ಮೋದಿಯವರು ತುಂಬಾ ಕಷ್ಟಪಟ್ಟು ತಮ್ಮ ಕಾರ್ಯನಿವಾಹಿಸುತ್ತಿದ್ದರು , ಆರ್ ಎಸ್ ಎಸ್ ನ ಎಲ್ಲ ಕಾರ್ಯಕ್ರಮಗಳ ಮ್ಯಾನೇಜ್ಮೆಂಟ್ ಮೋದಿಯವರೆ ನೋಡಿಕೊಳ್ಳುತ್ತಿದ್ದರು, ಜೊತೆ ಗೆ ಪಕ್ಷದ ನಾಯಕರ ಬಸ್ ಮತ್ತು ಟ್ರೆನ್ ನಾ ರಿಜರ್ವೇಷನ್ ನಾ ಜವಾಬ್ದಾರಿಯೂ ಮೋದಿಯವರ ಬಳಿಯೇ ಇರ್ತಿತ್ತು.

ನರೇಂದ್ರ ಮೋದಿಯವರು ಹಿಮಾಲಯದಲ್ಲಿ ಅನೇಕ ತಿಂಗಳ ಸಾಧು ಸಂತರ ಜೊತೆಗೆ ಇದ್ದರು. ಎರೆಡು ವರ್ಷಗಳ ನಂತರ ಮೋದಿಯವರು ಹಿಮಲಯದಿಂದ ವಾಪಸ್ ಆದಾಗ ಸನ್ಯಾಸಿ ಜೀವನವನ್ನು ತ್ಯಾಗ ಮಾಡುವ ತೀರ್ಮಾನ ತೆಗೆದುಕೊಂಡರು. 

ಹಿಮಲಯದಿಂದ ಮರಳಿ ಬಂದಾಗ ಸಹೋದರರ ಜೊತೆ ಸೇರಿ ಅಹಮದಾಬಾದ್ ನ ಅನೇಕ ರೇಲ್ವೆ ನಿಲ್ದಾಣದಲ್ಲಿ ಟಿ ಹೋಟಲ್ ಇಟ್ಟುಕೊಂಡಿದ್ದರು.

18 ನೆ ವಾಸಿನಲ್ಲೇ ನರೇಂದ್ರ ಮೋದಿಯವರ ಮದುವೆಯಾಯಿತು. 

ಮದುವೆಯಾದ ಬಳಿಕ ಮೋದಿಯವರು ಸಂಘದ ಪ್ರಚಾರಕ್ಕಾಗಿ ಮನೆ ಬಿಟ್ಟು ಬಂದರು. 

ನರೇಂದ್ರ ಮೋದಿಯವರು ಯಾವದೇ ಹೊಸ ಶುಭ ಕಾರ್ಯವನ್ನು ಆರಂಭಿಸುವ ಮುನ್ನ ತಾಯಿ ಹಿರಾಬೆನ್ ಅವರ ಆಶೀರ್ವಾದ ಪಡೆಯುತ್ತಾರೆ. 2014 ಮತ್ತು 2019 ರ ಚುನಾವಣೆಯಲ್ಲಿ ಗೆದ್ದ ಬಳಿಕವೂ ಮೋದಿಯವರು ಅವರ ತಾಯಿಯ ಆಶೀರ್ವಾದ ಪಡೆದಿದ್ದರು.

ಯಾವಾಗ ಮೋದಿಯವರು ಸಂಘದ ಪ್ರಚಾರಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು ಆಗ ಅವರಿಗೆ ಯಾವದೇ ವಾಹನ ಚಲಾಯಿಸುವುದಕ್ಕೆ ಬರುತ್ತಿರಲಿಲ್ಲ, ಅವರ ಸಹ ಕಾರ್ಯದರ್ಶಿ ಶಂಕರ್ ಸಿಂಗ್ ವಾಘೇಲಾ ಅವರು ಮೋದಿಯವರಿಗೆ ಸ್ಕೂಟರ್ ಮೇಲಿಂದ ಸುತ್ತಾಡಿಸುತ್ತಿದ್ದರು.

ನರೇಂದ್ರ ಮೋದಿಯವರು ಹಾಕುತ್ತಿರುವ ಕುರ್ತಾದ ತೋಳು ಹೆಚ್ಚು ಗಲಿಜಾಗಬಾರದೆಂದು ಸಣ್ಣದಾಗಿ ಮಾಡಿಸಿಕೊಳ್ಳುತ್ತಿದ್ದರು, ಅದೇ ಕುರ್ತಾ ಇದೀಗ ದೇಶಾದ್ಯಂತ, ಜಗತ್ತಿನಾದ್ಯಂತ ಮೋದಿ ಕುರ್ತಾ ಎಂದು ಪ್ರಸಿದ್ದಿ ಪಡೆದಿದೆ.

ಮೋದಿಯವರು ಸಂಘದ ಇತರೆ ಪ್ರಚಾರಕರ ಗಡ್ಡ ಮೀಸೆ ಬೆಳೆಸುತ್ತಿದ್ದರಂತೆ , ಹಾಗೆಯೇ ಅವುಗಳನ್ನ ಟ್ರಿಮ್ ಸಹ ಮಾಡಿಸುತ್ತಿದ್ದರು.

1975 ರ ತುರ್ತು ಪರಿಸ್ಥಿತಿಯಲ್ಲಿ ಮಾರುವೇಶದಲ್ಲಿ ಇದ್ದು ಸುಮಾರು ಎರೆಡುವರೆ ವರ್ಷಗಳ ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು.  

ನರೇಂದ್ರ ಮೋದಿಯವರು ತಮಗೆ ಒಬ್ಬ ಕವಿ ಮತ್ತು ಲೇಖಕನಾಗಿ ನೋಡುತ್ತಾರೆ. 

ಮೋದಿಯವರು ಗುಜರಾತಿ ಭಾಷೆಯಲ್ಲಿ ಹಿಂದುತ್ವಕ್ಕೆ ಸಂಬಂಧಿಸಿದ ಅನೇಕ ಲೇಖನ ಮಾಡಿದ್ದರು.

ನರೇಂದ್ರ ಮೋದಿಯವರು ಸ್ವಾಮಿ ವಿವೇಕಾನಂದರ ವಿಚಾರಗಳಿಂದ ತುಂಬಾನೇ ಪ್ರಭಾವಿತರಾಗಿದ್ದರು. ಗುಜರಾತ್ ನಲ್ಲಿ ವಿವೇಕಾನಂದ ಯುವ ವಿಕಾಸ್ ಯಾತ್ರೆಯು ಹೊರಡಿಸಿದ್ದರು.

ನರೇಂದ್ರ ಮೋದಿ ಸಸ್ಯಾಹಾರಿ ಇದ್ದು , ಅವರು ಯಾವತ್ತೂ ಸಹ ಸಿಗರೇಟ್ ಸಾರಾಯಿ ಅಂತಹ ನಶೆ ಮಾಡಿಲ್ಲ.

ನರೇಂದ್ರ ಮೋದಿಯವರು ಸಮಯಕ್ಕೆ ಬದ್ಧನಾಗಿ ಇರ್ತಾರೆ. ಅವರು ಕೇವಲ ಮೂರುವರೆ ಗಂಟೆ ಗಳ ಕಾಲ ನಿದ್ದೆ ಮಾಡುತ್ತಾರೆ. ಬೆಳಗಿನ ಜಾವ 5:30 ಕ್ಕೆ ಏಳುತ್ತಾರೆ

ನರೇಂದ್ರ ಮೋದಿಯವರ ಗುರು ಯಾರೆಂದು ಕೇಳಿದಾಗ ಲಾಲ್ ಕೃಷ್ಣ ಅಡ್ವಾಣಿ LK Advani ಅವರು ಎನ್ನುತ್ತಾರೆ.

1990 ರ ದಶಕದಲ್ಲಿ ಎಲ್ ಕೆ ಅಡ್ವಾನಿಯಾ ಸೋಮನಾಥ ಇಂದ ಅಯೋಧ್ಯಾ ರಥ ಯಾತ್ರೆಯಲ್ಲಿ ನರೇಂದ್ರ ಮೋದಿಯವರ ದೊಡ್ಡ ಪಾತ್ರವಿತ್ತು.

ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಇದ್ದಾಗ ಅನೇಕ ವಿದೇಶಿ ಯಾತ್ರೆಗಳನ್ನ ನಡೆಸಿದ್ದಾರೆ. ಅದರಲ್ಲೂ ಚೀನಾ ದೇಶದ ಅಭಿವೃದ್ಧಿಯನ್ನು ತುಂಬಾ ಹತ್ತಿರದಿಂದ ನೋಡಿದ್ದಾರೆ ನರೇಂದ್ರ ಮೋದಿ.

ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಮೋದಿಯವರು ವೈಬ್ರೇನ್ಟ್ ಗುಜರಾತ್ ಶೃಂಗಸಭೆಯನ್ನು ಆಯೋಜಿಸಿ ದೇಶ ವಿದೇಶದ ಉದ್ಯೋಗಪತಿಗಳನ್ನು ಹೂಡಿಕೆ ಮಾಡಲು ಅಮತ್ರಿಸಿದ್ದರು.

ದೇಶ ವಿದೇಶದ ಪರ್ಯಟಕರಿಗೆ ಆಕರ್ಷಿಸಲು ಮೋದಿಯವರು ಬಾಲಿವುಡ್ ನ ಮಹನಯಕ ಅಮಿತಾಬ್ ಬಚ್ಚನ್ ಅವರನ್ನ ಗುಜರಾತ್ ರಾಜ್ಯದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದ್ದರು.

ಬಚ್ಚನ್ ಅವರು ಗುಜರಾತ್ ಬ್ರಾಂಡ್ ಅಂಬಾಸಿಡರ್ ಆಗಲು ಯಾವದೇ ಹಣವನ್ನು ತೆಗೆದುಕೊಂಡಿಲ್ಲ ಇದು ವಿಶೇಷ.

ಬಂಗಾಳದ ಸಿಂಗೂರ್ ನಲ್ಲಿ ಟಾಟಾ ನ್ಯಾನೋ ಕಾರ್ ಗಳ ಪ್ಲಾಂಟ್ ಗೆ ವಿರೋಧ ಮಾಡಿದಾಗ , ನರೇಂದ್ರ ಮೋದಿಯವರು ಟಾಟಾ ಕಂಪನಿಗೆ ವೇಲ್ಕಮ್ ಟು ಗುಜರಾತ್ ಎನ್ನುವ ಆಮಂತ್ರಣ ಮೆಸೇಜ್ ಕೊಟ್ಟರು.

ನರೇಂದ್ರ ಮೋದಿಯವರಿಗೆ ಗಾಳಿ ಪಟ ಹಾರಿಸಲು ತುಂಬಾ ಇಷ್ಟವಂತೆ.

ಗುಜರಾತ್ ಗಲಭೆಯ ಕಳಂಕ ಇರುವ ಕರಣಕಾಗಿಯೇ 2005 ರಲ್ಲಿ ಅಮೆರಿಕ ಮೋದಿಯವರಿಗೆ ವಿಜಾ ಕೊಡಲು ನಿರಕರಿಸಿತ್ತು.

ನರೇಂದ್ರ ಮೋದಿಯವರು ಸಹ ಸೋಶಿಯಲ್ ಮೀಡಿಯಾ ಗಳ ಮೇಲೆ ಸಾಕಷ್ಟು ಆಕ್ಟಿವ್ ಆಗಿ ಇರ್ತಾರೆ. ಟ್ವಿಟರ್ , ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಮೇಲೆ ಲಕ್ಷಾಂತರ ಫಾಲೋವರ್ಸ್ ಇದ್ದಾರೆ.

ನರೇಂದ್ರ ಮೋದಿಯವರು 2012 ರ ಆಗಸ್ಟ್ 31 ರಂದು ವೆಬ್ ಕ್ಯಾಮ್ ಮೂಲಕ ಅನೇಕ ಜನರ ಪ್ರಶ್ನೆಗಳಿಗೆ ಉತ್ತರಿಸಿದರು, ಈ ಸಮಯದಲ್ಲಿ ಕೇವಲ ಭಾರತನದಿಂದ ಅಷ್ಟೇ ಅಲ್ಲ ವಿದೇಶಗಳಿಂದಲು ಪ್ರಶ್ನೆಗಳ ಸುರಿಮಳೆ ಹರಿದು ಬಂದಿತ್ತು.

2014 ರ ಲೋಕಸಭಾ ಚುನಾವಣೆಯಲ್ಲಿ, ಚುನಾವಣಾ ಪ್ರಚಾರಕ್ಕಾಗಿ ಸೋಶಿಯಲ್ ಮೀಡಿಯಾಗಳನ್ನು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಿದ್ದರು.

 ಮೋದಿಯವರ ಪ್ರಚಾರದ ಸಂಪೂರ್ಣ ಉಸ್ತುವಾರಿ ವಹಿಸಲು. ಸೆಂಟರ್ ಆಫ್ ಅಕೌಂಟೆಬಲ್ ಎನ್ನುವ ಸಮಿತಿ ರೂಪಿಸಿದ್ದರು.

ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿ ಆಗಿ ಲೋಕಸಭಾ ಜವಾಬ್ದಾರಿ ತೆಗೆದುಕೊಂಡಾಗ ದೇಶದ ಜನತೆಯಲ್ಲಿ ಮೋದಿಯವ ಬಗ್ಗೆ ಕುತೂಹಲ ಹೆಚ್ಚಾಯಿತು , ಅಧಿಕಾರಕ್ಕೆ ಬಂದ ಕೇವಲ 2 ತಿಂಗಳಗಳಲ್ಲಿ 40 ಕ್ಕೂ ಅಧಿಕ ಮೋದಿಯವರ ಜೀವನಚರಿತ್ರೆ ಬಗ್ಗೆ ಲೇಖನಗಳು ಪುಸ್ತಕಗಳು ಹೊರ ಬಂದವು. 

ಬಾಲಿವುಡ್ ನಲ್ಲೂ ಅನೇಕ ದೊಡ್ಡ ದೊಡ್ಡ ಸ್ಟಾರ್ ನಟರು ನರೇಂದ್ರ ಮೋದಿಯವರ ಅಭಿಮಾನಿಗಳು ಇದ್ದರೆ .


ನರೇಂದ್ರ ಮೋದಿಯವರು ಇವತ್ತಿಗೂ ತನ್ನ ಸಹೋದರದಿಂದ ಬೇರೆ ಮನೆ ಮಾಡಿಕೊಂಡು ಇದ್ದಾರೆ.

ಇವತ್ತಿಗೂ ಮೋದಿಯವರ ಸಹೋದರರು ಮತ್ತು ಅವರ ಕುಟುಂಬಸ್ಥರು ಸಾಮಾನ್ಯ ಜೀವನವನ್ನು ಬದುಕುತ್ತಿದ್ದಾರೆ. 

ಕುಟುಂಬದ ಅನೇಕ ಜನರಸ್ ಈಗಲೂ ಸಹ ಆಟೋ ಕ್ಯಾಬ್ ನಂತಹ ವಾಹನಗಳಿಂದ ಪ್ರಯಾಣ ಮಾಡುತ್ತಿದ್ದಾರೆ.

 

 ನರೇಂದ್ರ ಮೋದಿಯವರ ಕುಟುಂಬವು ಯಾವದೇ ಸರ್ಕಾರಿ ಸೌಲಭ್ಯಗಳನ್ನು ಅನುಭವಿಸಲು ಮೋದಿಯವರ ಕಡೆ ಹೋಗಿಲ್ಲ. 

ಮೋದಿಯವರ ಕುಟುಂಬದ ಅನೇಕ ಸದಸ್ಯರು ವಿಮಾನ ಪ್ರವಾಸ ಮಾಡೇ ಇಲ್ಲ .

ಸ್ವಂತ ನರೇಂದ್ರ ಮೋದಿಯವರ ತಾಯಿಯೇ ಆಟೋ ಇಂದ ಸಂಚರಿಸುತ್ತಿರುವ ಫೋಟೋ ವಿಡಿಯೋ ಸೋಶಿಯಲ್ ಮಿಡಿಯಗಳಲ್ಲಿ viral ಆಗಿದ್ದವು.

2016 ರಲ್ಲಿ ನೋಟ್ ಬ್ಯಾನ್ ಆದಾಗ ಮೋದಿಯವರ ತಾಯಿ ಹಿರಾಬೆನ್ ಅವರು ಸ್ವತಃ ಆಟೋ ಇಂದ ಪ್ರಯಾಣಿಸಿ ಬ್ಯಾಂಕ್ ಮುಂದೆ ಕ್ಯೂ ನಲ್ಲಿ , ಬಿಸಿಲಿನಲ್ಲಿ ನಿಂತಿರುವ ಸುದ್ದಿಗಳು ಸಹ ಸಾಕಷ್ಟು ಚರ್ಚೆಯಾಗಿತ್ತು ಆಗ ಮೋದಿಯವರು ಸಹ , ತನ್ನ ತಾಯಿ ಸಹ ಬ್ಯಾಂಕ್ ಮುಂದೆ ಕ್ಯೂ ನಿಂತು ಬಿಸಿಲಿನಲ್ಲಿ ನಿಂತು ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು.


ನರೇಂದ್ರ ಮೋದಿಯವರು ಮನಸು ಮಾಡಿದ್ದಾರೆ ಅವರ ಸಂಪೂರ್ಣ ಕುಟುಂಬಕ್ಕೆ ತಾನು ಅನುಭವಿಸುತ್ತಿರುವ ಸಂಪೂರ್ಣ ಸೌಕರ್ಯಗಳನ್ನು ಕೊಟ್ಟು ಕಾಪಾಡಬಹುದು. ಸಂಪೂರ್ಣ ಕುಟುಂಬಕ್ಕೆ Z+ ಸಿಕ್ಯೂರಿಟಿ ಕೊಟ್ಟು ಓಡಾಡೋಕೆ ಕಾರು , ಇರೋಕೆ ಬಂಗಲೆ ಮುಂತಾದ ಐಷಾರಾಮಿ ಜೀವನವನ್ನು ಅವರ ಕುಟುಂಬವು ಅನುಭವಿಸಬಹುದಾಗಿತ್ತು , ಆದರೆ ಇದೆಲ್ಲ ಯಾವುದು ಬೇಡ ಎಂದು ದೇಶ ಸೇವೆಯೇ ನನ್ನ ಗುರಿ ಎಂದು ಮುಂದು ವರಿತಿದ್ದರೆ ನರೇಂದ್ರ ಮೋದಿ ಮತ್ತು ಅವರ ಕುಟುಂಬ .

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments