Saturday, December 14, 2024
HomeHOMEತೆಲಗು ನಟ ವಿಜಯ್ ರಂಗರಾಜು ವಿರುದ್ಧ ಗುಡುಗಿದ, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ...

ತೆಲಗು ನಟ ವಿಜಯ್ ರಂಗರಾಜು ವಿರುದ್ಧ ಗುಡುಗಿದ, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಪುನೀತ್ ರಾಜ್ ಕುಮಾರ್, ಮತ್ತು ಯಶ್ ಖಡಕ್ ವಾರನಿಂಗ್ ಕೊಟ್ಟ ನಮ್ಮ ಸ್ಟಾರ್ಸ್

ತೆಲುಗು ಭಾಷೆಯ ಟಾಲೀವುಡ್ ನ ನಟ ವಿಜಯ್ ರಂಗರಾಜ್ ಯೆನ್ನುವ ವ್ಯಕ್ತಿ ನಮ್ಮ ಕರುಣದಿನ ಮೇರು ನಟ ಡಾ. ವಿಷ್ಣುವರ್ಧನ್ ಬಗ್ಗೆ ಸಂದರ್ಶನವೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿ ಕೋಟ್ಯಾಂತರ ವಿಷ್ಣು ದಾದಾರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ. 

ಈ ಬಗ್ಗೆ ಕನ್ನಡದ ಎಲ್ಲ ನಟರು ತಮ್ಮ ತಮ್ಮ ಅಭಿಪ್ರಾಯವನ್ನು ವಿವಿಧ ಸಾಮಾಜಿಕಾ ಜಾಲತಾನಗಳಲ್ಲಿ ಹಂಚಿಕೊಂಡಿದ್ದಾರೆ ತೆಲುಗು ನಟ ವಿಜಯ್ ರಂಗರಾಜ್ ಬಗ್ಗೆ ಆಕ್ರೋಶವೂ ಹೊರ ಹಾಕಿದ್ದಾರೆ.

ಸಂಪೂರ್ಣ ರಿಪೋರ್ಟ್ ಇಲ್ಲಿದೆ.

ವಿಜಯ್ ರಂಗರಾಜುಗೆ ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್.


ಒಬ್ಬ ಸ್ಟಾರ್ ಸ್ಥಾನದಲ್ಲಲ್ಲದೆ ಒಬ್ಬ ಅಭಿಮಾನಿಯ  ಸ್ಥಾನದಲ್ಲಿ ನಿಂತು ಘರ್ಜಿಸಿದ್ದಾರೆ, ಅಪ್ಪಾಜಿ ಬಗ್ಗೆ ಮಾತಾಡುವ ಮುನ್ನ ಎಚ್ಚರ ನಾವೆಲ್ಲ ಇದ್ದೇವೆ…kiccha sudeep 


ಒಬ್ಬ ಸ್ಟಾರ್ ಸ್ಥಾನದಲ್ಲಲ್ಲದೆ ಒಬ್ಬ ಅಭಿಮಾನಿಯ  ಸ್ಥಾನದಲ್ಲಿ ನಿಂತು ಘರ್ಜಿಸಿದ್ದಾರೆ, ಅಪ್ಪಾಜಿ ಬಗ್ಗೆ ಮಾತಾಡುವ ಮುನ್ನ ಎಚ್ಚರ ನಾವೆಲ್ಲ ಇದ್ದೇವೆ…kiccha sudeep 


ತೆಲುಗು ನಟ ರಂಗರಾಜ ಗೆ ಮೊದಲು ಮಾನವನಾಗು ಎಂದ ಪುನೀತ್ ರಾಜ್ ಕುಮಾರ್ 

ಒಬ್ಬ ಕಲಾವಿದನಾಗಬೇಕಾದರೆ ಅವನಿಗಿರಬೇಕಾದ ಮೊದಲ ಅರ್ಹತೆ ತನ್ನ    ಸಹದ್ಯೋಗಿ  ಕಲಾವಿದರ ಬಗ್ಗೆ ಗೌರವ ಹಾಗು ಪ್ರೀತಿಯನ್ನು ತೋರುವುದು ಯಾವುದೇ ಭಾಷೆಯ ನಟರಾದರು ಗೌರವ ಮೊದಲು.

ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನ ವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು ಭಾರತೀಯ ಚಿತ್ರರಂಗ ನಮ್ಮ ಮನೆ ಎಲ್ಲ ಕಲಾವಿದರು ಒಂದು ಕುಟುಂಬ ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ “ಮೊದಲು ಮಾನವನಾಗು” 

 

    ಮಹಾನ್ ಸಾಧಕರನ್ನ ನಿಂದಿಸುವವನು ಕಾಲವಿಧಾನಲ್ಲ ಎಂದ ರಾಕಿಂಗ್ ಸ್ಟಾರ್ ಯಶ್ 

    ಸರಿದಾರಿಯಲ್ಲಿ ನಡೆಯುವವರು ಬೆವರುಹರಿಸಿ ಹಂತಹಣತವಾಗಿ ಬೆಳೆದು ಹೆಸರು ಮಾಡಿ ಉಳಿಸಿಕೊಳ್ಳುತ್ತಾರೆ ಅಡ್ಡದಾರಿಯಲ್ಲಿ ನಡೆಯುವವರು ಅಂತ ಹೆಸರುಗಳನ್ನು ಬಳಸಿಕೊಳ್ಳಲು ಹೋಗಿ ಬದಿಯಲ್ಲೆ ಉಳಿದುಬಿಡುತ್ತಾರೆ 

    ವಿಷ್ಣು ದಾದಾ ಕನ್ನಡ ನಾಡು ಕಂಡ ಮಹಾನ್ ಸಾಧಕರು ಅವರ ಶ್ರಮ ಪ್ರತಿಮೆ ಹಾಗು ನಟನೆಯ ಜೊತೇಜೊತೆಯಾಗಿ ಅವರ ಬದುಕು ಅವರ ವ್ಯಕ್ತಿತ್ವದಿಂದ ನಮ್ಮ ,ಮನೆ ಮನದಲ್ಲಿ ಅಜರಾಮರವಾಗಿರುವವರು, ಅಂತ ಸಾಧಕರನ್ನ ನಿಂದಿಸಿ ಹೆಸರು ಮಾಡ ಬಯಸುವ ಹಿನಮಟ್ಟಕೆ ಇಳಿಯುವವನು ಕಾಲವಿಧಾನಲ್ಲ. ಕನ್ನಡ ಚಿತ್ರರಂಗ ಎಲ್ಲ ಚಿತ್ರರಂಗಗಳ ಜೊತೆ ಪರಸ್ಪರ ಹೊಂದಾಣಿಕೆ ಹಾಗು ಗೌವವವನ್ನು ಕಾಪಾಡಿಕೊಂಡು ಬಂದಿದೆ ಆದು ಇಂತವರಿಂದ ತಪ್ಪು ದಾರಿಗೆ ಹೋಗಬಾರದು. ಆ ವ್ಯಕ್ತಿ ಕ್ಷಮೆ ಕೇಳಿ ತಮ್ಮ ಅಸಮಂಜಸ ಮಾತುಗಳನ್ನ ಹಿಂಪಡೆಯಬೇಕು.

     

    ದಾದಾರ ನಟನೆ ಹಾಗು ವ್ಯಕ್ತಿತ್ವವನ್ನು ಅಭಿಮಾನಿಸಿ ಆರಾಧಿಸುವ ಪ್ರತಿಯೊಬ್ಬ ಅಭಿಮಾನಿಯ ಮನಸ್ಸಿಗೂ ಘಾಸಿಯುಂಟುಮಾಡಿದೆ ಎಂದ ಗೋಲ್ಡನ್ ಸ್ಟಾರ್ ಗಣೇಶ್ 

    ಸಂದರ್ಶನವೊಂದರಲ್ಲಿ ಕಲಾವಿದರೊಬ್ಬರು ಕನ್ನಡದ ಮೇರುನಟರಲ್ಲೊಬ್ಬರಾದ ನಮ್ಮ ವಿಷ್ಣು ದಾದಾರ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡಿರುವುದು ಅತ್ಯಂತ ಅಕ್ಷಮ್ಯ ಹಾಗು ನಾನದನ್ನು ಖಂಡಿಸುತ್ತೇನೆ .. ಕಲೆ ಮತ್ತು ಕಲಾವಿದನಿಗೆ ಗಡಿ ರೇಖೆಗಳಿಲ್ಲ .. ಯಾವುದೇ ಸಿನಿಮಾ ರಂಗಕ್ಕೆ ಸಂಬಂಧಿಸಿದ ಕಲಾವಿದರಾದರೂ ಮತ್ತೊಂದು ಸಿನಿಮಾ ರಂಗದ ಕಲಾವಿದರೊಡನೆ ಪರಸ್ಪರ ಅಭಿಮಾನ ಗೌರವಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಚಿತ್ರೋದ್ಯಮಗಳ ನಡುವೆ ಸೌಹಾರ್ದತೆಯನ್ನು ಕಾಪಾಡಬೇಕಾಗಿರುವುದು ಆತನ ಕರ್ತವ್ಯ .. ವಿಷ್ಣು ದಾದಾ ಸೇರಿದಂತೆ ನಮ್ಮ ಅನೇಕ ಹಿರಿಯರು ಈ ನೀತಿಯನ್ನು ಹಿಂದಿನಿಂದಲೂ ಪಾಲಿಸಿಕೊಂಡೇ ಬಂದಿದ್ದಾರೆ .. ವಿಷ್ಣು ದಾದಾರಂತಹ ಮೇರು ನಟರ ಬಗ್ಗೆ ಕೀಳು ಅಭಿರುಚಿಯಿಂದ ಮಾತನಾಡಿರುವುದು , ದಾದಾರ ನಟನೆ ಹಾಗು ವ್ಯಕ್ತಿತ್ವವನ್ನು ಅಭಿಮಾನಿಸಿ ಆರಾಧಿಸುವ ಪ್ರತಿಯೊಬ್ಬ ಅಭಿಮಾನಿಯ ಮನಸ್ಸಿಗೂ ಘಾಸಿಯುಂಟುಮಾಡಿದೆ .. ದಾದಾರ ಬಗ್ಗೆ ಈ ರೀತಿಯ ಕೀಳು ಮಟ್ಟದ ಹೇಳಿಕೆಯನ್ನು ಕೊಟ್ಟ ಆತ ಯಾವುದೇ ಚಿತ್ರರಂಗಕ್ಕೆ ಸಂಬಂಧಪಟ್ಟವನಾಗಿದ್ದರೂ , ತನ್ನ ದುರಹಂಕಾರವನ್ನು ಪಕ್ಕಕ್ಕಿಟ್ಟು , ತಕ್ಷಣವೇ ಪತ್ರಿಕಾಗೋಷ್ಠಿಯೊಂದನ್ನು ನಡೆಸಿ , ವಿಷ್ಣು ದಾದಾರ ಅಸಂಖ್ಯ ಅಭಿಮಾನಿಗಳಲ್ಲಿ ಈ ಕೂಡಲೇ ಕ್ಷಮೆ ಯಾಚಿಸಬೇಕೆಂದು ನಾನೂ ಒಬ್ಬ ಅಭಿಮಾನಿಯಾಗಿ ಆಗ್ರಹಿಸುತ್ತೇನೆ ..

     ಜೈ ವಿಷ್ಣು ದಾದಾ ..



    ಆದರೇ ಸಧ್ಯಕ್ಕೆ ತೆಲುಗು ನಟ ವಿಜಯ್ ರಂಗರಾಜು ಇದೀಗ ಒಂದು ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾನೆ ಆದರೆ ಇನ್ನೂ ಕೆಲವರ ಬೇಡಿಕೆ ಯಎನಂದರೆ ವಿಜಯ್ ರಂಗರಾಜು ಯೆಂಬತ ಮಾಧ್ಯಮ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗವಾಗಿ ಕ್ಷಮೆ ಕೆಳಬೇಕೆಂದು ಅಗ್ರಹಿಸುತಿದ್ದಾರೆ

     

    RELATED ARTICLES

    LEAVE A REPLY

    Please enter your comment!
    Please enter your name here

    Most Popular

    Recent Comments